Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೀನಾಕ್ಕೆ ತೆರಳುವ ಮುನ್ನ ಪ್ರಧಾನಿ ಅವರ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ವುಹಾನ್‍ಗೆ ಏಪ್ರಿಲ್ 27, 28, 2018 ರಂದು ಭೇಟಿ ನೀಡಲಿದ್ದಾರೆ. ಚೀನಾಕ್ಕೆ ತೆರಳುವ ಮುನ್ನ ಅವರು ನೀಡಿದ ಹೇಳಿಕೆ:

“ನಾನು ಚೀನಾದ ವುಹಾನ್‍ಗೆ ಅನೌಪಚಾರಿಕ ಶೃಂಗವೊಂದಕ್ಕೆ ಪ್ರಧಾನಿ ಶ್ರೀ ಕ್ಸಿ ಜಿನ್‍ಪಿಂಗ್ ಅವರ ಆಹ್ವಾನದ ಹಿನ್ನೆಲೆಯಲ್ಲಿ ತೆರಳುತ್ತಿದ್ದೇನೆ. ನಾನು ಹಾಗೂ ಕ್ಸಿ ಪಿಂಗ್ ನಾನಾ ದ್ವಿಪಕ್ಷೀಯ ವಿಷಯಗಳು ಹಾಗೂ ಜಾಗತಿಕವಾಗಿ ಪ್ರಮುಖವಾದ ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದೇವೆ. ರಾಷ್ಟ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಪರಸ್ಪರರ ವಿಚಾರಗಳು ಹಾಗೂ ಆದ್ಯತೆ ಕುರಿತು, ಅದರಲ್ಲೂ ಮುಖ್ಯವಾಗಿ, ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಿದ್ದೇವೆ. ದೀರ್ಘಕಾಲೀನ ಪರಿಪ್ರೇಕ್ಷ ಹಾಗೂ ಆಯಕಟ್ಟಿನ ದೃಷ್ಟಿಕೋನದಲ್ಲಿ ಭಾರತ – ಚೀನಾದ ಸಂಬಂಧದಲ್ಲಿ ಬೆಳವಣಿಗೆಗಳ ಕುರಿತು ಪರಿಶಿಲನೆ ನಡೆಸಲಿದ್ದೇವೆ’.

****