Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಿತ್ರರಂಗದ ದಂತಕಥೆ ರಾಜ್ ಕಪೂರ್ ಅವರ 100 ವರ್ಷಗಳ ವೃತ್ತಿ-ಬದುಕು ಕುರಿತು ಕಪೂರ್ ಕುಟುಂಬದ ಜತೆ ಪ್ರಧಾನಮಂತ್ರಿ ಸಂಭಾಷಣೆ

ಚಿತ್ರರಂಗದ ದಂತಕಥೆ ರಾಜ್ ಕಪೂರ್ ಅವರ 100 ವರ್ಷಗಳ ವೃತ್ತಿ-ಬದುಕು ಕುರಿತು ಕಪೂರ್ ಕುಟುಂಬದ ಜತೆ ಪ್ರಧಾನಮಂತ್ರಿ ಸಂಭಾಷಣೆ


ರಣಬೀರ್ ಕಪೂರ್: ಕಳೆದ ವಾರದಿಂದ, ನಮ್ಮ ವಾಟ್ಸ್ಆಪ್ ಫ್ಯಾಮಿಲಿ ಗ್ರೂಪ್, ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂದು ಸಕ್ರಿಯವಾಗಿ ಚರ್ಚಿಸುತ್ತಿದೆ – ಪ್ರಧಾನಿ ಜೀ ಅಥವಾ ಪ್ರಧಾನ ಮಂತ್ರಿ ಜೀ! ರೀಮಾ ಬುವಾ(ರಾಜ್ ಕಪೂರ್ ಪುತ್ರಿ) ಪ್ರತಿದಿನ ನನಗೆ ಕರೆ ಮಾಡುತ್ತಾರೆ, ಏನು ಹೇಳಬೇಕು ಮತ್ತು ಹೇಗೆ ಮಾತನಾಡಿಸಬೇಕು ಎಂದು ಕೇಳುತ್ತಿದ್ದರು..

ಪ್ರಧಾನಮಂತ್ರಿ: ಬ್ರದರ್, ನಾನು ಸಹ ನಿಮ್ಮ ಕುಟುಂಬದ ಭಾಗವಾಗಿದ್ದೇನೆ. ನಿಮಗೆ ಅನಿಸಿದ್ದನ್ನು ಹೇಳಿ.

ಮಹಿಳೆ: ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ! ನೀವು ಇಂದು ನಮ್ಮನ್ನು ಇಲ್ಲಿಗೆ ಕರೆದಿದ್ದೀರಿ, ನಿಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದೀರಿ. ರಾಜ್ ಕಪೂರ್ ಅವರ 100ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ನನಗೆ ಅಪ್ಪಾ ಅವರ ಚಿತ್ರವೊಂದರ ಕೆಲವು ಸಾಲುಗಳು ನೆನಪಾದವು: ಮೈ ನಾ ರಾಹುಂಗಿ, ತುಮ್ ನಾ ರಾಹೋಗೆ, ಲೇಕಿನ್ ರಹೇಂಗಿ ನಿಶಾನಿಯನ್!

ಪ್ರಧಾನಮಂತ್ರಿ: ವಾವ್!

ಮಹಿಳೆ: ನೀವು ನಮಗೆ ತೋರಿದ ಗೌರವ ಮತ್ತು ಪ್ರೀತಿ ಅಪಾರ. ಇಂದು, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರು ಕಪೂರ್ ಕುಟುಂಬಕ್ಕೆ ಸಲ್ಲಿಸಿದ ಗೌರವಕ್ಕೆ ಇಡೀ ರಾಷ್ಟ್ರವೇ ಸಾಕ್ಷಿಯಾಗಲಿದೆ.

ಪ್ರಧಾನಮಂತ್ರಿ: ಕಪೂರ್ ಸಾಹಬ್ ಅಪಾರ ಕೊಡುಗೆ ನೀಡಿದ್ದಾರೆ! ನಿಮ್ಮೆಲ್ಲರನ್ನೂ ಇಲ್ಲಿಗೆ ಸ್ವಾಗತಿಸುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ರಾಜ್ ಸಾಹಬ್ ಅವರ 100ನೇ ಜನ್ಮದಿನವು ಭಾರತೀಯ ಚಿತ್ರರಂಗದ ಪಯಣದಲ್ಲಿ ಒಂದು ಸುವರ್ಣ ಮೈಲಿಗಲ್ಲನ್ನು ಗುರುತಿಸುತ್ತದೆ. 1947ರಲ್ಲಿ ನೀಲ್ ಕಮಲ್ ನಿಂದ 2047ರ ವರೆಗೆ, ಈ ಶತಮಾನದ ಸುದೀರ್ಘ ಪ್ರಯಾಣವು ರಾಷ್ಟ್ರಕ್ಕೆ ಅಸಾಧಾರಣ ಕೊಡುಗೆಯನ್ನು ಸೂಚಿಸುತ್ತದೆ. ಇಂದಿನ ರಾಜತಾಂತ್ರಿಕ ವಲಯಗಳಲ್ಲಿ ಸಾಫ್ಟ್ ಪವರ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ‘ಸಾಫ್ಟ್ ಪವರ್’ ಎಂಬ ಪದವನ್ನು ಸೃಷ್ಟಿಸದ ಯುಗದಲ್ಲಿ, ರಾಜ್ ಕಪೂರ್ ಸಾಹಬ್ ತಮ್ಮ ಕೆಲಸದ ಮೂಲಕ ಜಾಗತಿಕ ವೇದಿಕೆಯಲ್ಲಿ ಭಾರತದ  ಪ್ರಭಾವವನ್ನು ಆಗಲೇ ಸ್ಥಾಪಿಸಿದ್ದರು. ಇದು ದೇಶಕ್ಕೆ ಗೌರವಾನ್ವಿತ ಸೇವೆಯಾಗಿತ್ತು.

ಮಹಿಳೆ: ರಣಬೀರ್ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಅವನು ಕಾರಿನಲ್ಲಿ ಕುಳಿತಿದ್ದಾಗ ರಷ್ಯಾದ ಟ್ಯಾಕ್ಸಿ ಡ್ರೈವರ್ ಕೇಳಿದನಂತೆ, ನೀವು ಭಾರತದವರೇ ಎಂದು ಕೇಳಿ ನಂತರ ಆತ ಹಾಡು ಹಾಡಲು ಪ್ರಾರಂಭಿಸಿದನಂತೆ. ಆಗ ರಣಬೀರ್, ನಾನು ರಾಜ್ ಕಪೂರ್ ಅವರ ಮೊಮ್ಮಗ ಎಂದನಂತೆ!

ರಣಬೀರ್ ಕಪೂರ್: ನಾನು ಅವರ ಮೊಮ್ಮಗ ಎಂದು ಹೇಳಿದ್ದೇ ಆಯಿತು, ಅದಕ್ಕಾಗಿಯೇ ನಾನು ಯಾವಾಗಲೂ ಉಚಿತ ಟ್ಯಾಕ್ಸಿ ಸವಾರಿ ಮಾಡುತ್ತೇನೆ.

ಪ್ರಧಾನಮಂತ್ರಿ: ಮಧ್ಯ ಏಷ್ಯಾದಲ್ಲಿ ವಿಶೇಷವಾಗಿ ಬಹುಶಃ ಏನಾದರೂ ಮಾಡಬಹುದು, ಅಲ್ಲಿನ ಜನರ ಮನಸ್ಸು ಮತ್ತು ಹೃದಯವನ್ನು ಆಳವಾಗಿ ಅನುರಣಿಸುವ ಚಿತ್ರ ಮಾಡಬೇಕು. ರಾಜ್ ಸಾಹಬ್, ಹಲವು ವರ್ಷಗಳ ನಂತರವೂ ಅವರೊಂದಿಗೆ ಬಲವಾದ ಭಾವನಾತ್ಮಕ ಸಂಬಂಧ ಹೊಂದಿದ್ದರು, ಅದು ಗಮನಾರ್ಹ ಸಂಗತಿ.

ಮಹಿಳೆ: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೂ ವಿವಿಧ ಹಾಡುಗಳನ್ನು ಕಲಿಸಲಾಗುತ್ತಿದೆ!

ಪ್ರಧಾನಮಂತ್ರಿ: ಇದು ಅವರ ಜೀವನದ ಮೇಲೆ ಶಾಶ್ವತವಾದ ಪರಿಣಾಮ ಉಂಟು ಮಾಡುತ್ತದೆ. ಮಧ್ಯ ಏಷ್ಯಾದಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ನಾನು ನಂಬುತ್ತೇನೆ. ಈ ಸಂಪರ್ಕವನ್ನು ಪುನರುಜ್ಜೀವನಗೊಳಿಸಲು ನಾವು ಕೆಲಸ ಮಾಡಬೇಕು, ಅದನ್ನು ಹೊಸ ಪೀಳಿಗೆಗೆ ಜೋಡಿಸಿ, ಬಾಂಧವ್ಯವನ್ನು ಬಲಪಡಿಸಬೇಕು. ಅಂತಹ ಸೃಜನಶೀಲ ಪ್ರಯತ್ನಗಳನ್ನು ಪ್ರಾರಂಭಿಸಬೇಕು ಮತ್ತು ಅವುಗಳನ್ನು ಖಂಡಿತವಾಗಿಯೂ ಸಾಧಿಸಬಹುದು.

ಮಹಿಳೆ: ಅವನು ಜನರಿಂದ ತುಂಬಾ ಪ್ರೀತಿ ಪಡೆದ, ಅವನ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿತು. ನೀವು ಅವನನ್ನು ಒಂದು ರೀತಿಯಲ್ಲಿ ಸಾಂಸ್ಕೃತಿಕ ರಾಯಭಾರಿ ಎಂದು ಕರೆಯಬಹುದು. ಆದರೆ ಇಂದು, ನಾನು ಇದನ್ನು ಹೇಳಲೇಬೇಕು: ಅವನಿ ಸಣ್ಣ ಸಾಂಸ್ಕೃತಿಕ ರಾಯಭಾರಿಯಾಗಿದ್ದರೂ, ನಮ್ಮ ಪ್ರಧಾನ ಮಂತ್ರಿ ಭಾರತವನ್ನು ಜಾಗತಿಕ ವೇದಿಕೆಗೆ ಏರಿಸಿದ್ದಾರೆ, ಇದಕ್ಕಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ. ಈ ಕುಟುಂಬದ ಪ್ರತಿಯೊಬ್ಬ ಸದಸ್ಯರು ತುಂಬಾ ಹೆಮ್ಮೆಪಡುತ್ತಾರೆ.

ಪ್ರಧಾನಮಂತ್ರಿ: ವಾಸ್ತವವಾಗಿ, ದೇಶದ ಜಾಗತಿಕ ಸ್ಥಾನಮಾನವು ಗಮನಾರ್ಹವಾಗಿ ಹೆಚ್ಚಾಗಿದೆ. ಉದಾಹರಣೆಗೆ ಯೋಗವನ್ನೇ ತೆಗೆದುಕೊಳ್ಳಿ. ಇಂದು, ನೀವು ಜಗತ್ತಿನಲ್ಲಿ ಎಲ್ಲಿಗೆ ಹೋದರೂ, ನೀವು ಯೋಗದ ಬಗ್ಗೆ ಅಪಾರ ಮೆಚ್ಚುಗೆ ಕಾಣುತ್ತೀರಿ.

ಮಹಿಳೆ: ನನ್ನ ತಾಯಿ ಮತ್ತು ನಾನು, ಬೆಬೋ, ಲೊಲೊ ಮತ್ತು ನಮ್ಮೆಲ್ಲರೊಂದಿಗೆ ಯೋಗದಲ್ಲಿ ಆಳವಾದ ಆಸಕ್ತಿ ಹೊಂದಿದ್ದೇವೆ.

ಪ್ರಧಾನಮಂತ್ರಿ: ನಾನು ವಿಶ್ವ ನಾಯಕರನ್ನು ಭೇಟಿಯಾದಾಗಲೆಲ್ಲಾ, ಊಟದ ಸಮಯದಲ್ಲಿ ಅಥವಾ ರಾತ್ರಿ ಊಟದ ಸಮಯದಲ್ಲಿ, ನನ್ನ ಸಂಭಾಷಣೆಯು ಕೇವಲ ಯೋಗದ ಸುತ್ತ ಸುತ್ತುತ್ತದೆ.

ವ್ಯಕ್ತಿ: ಈ ಚಿತ್ರವನ್ನು ನನ್ನ ಅಜ್ಜನಿಗೆ ಸಮರ್ಪಿಸುತ್ತೇನೆ. ಇದು ವಾಸ್ತವವಾಗಿ ನಿರ್ಮಾಪಕನಾಗಿ ನನ್ನ ಮೊದಲ ಚಿತ್ರ, ನಾನು ಯಾವಾಗಲೂ ನನ್ನ ಕುಟುಂಬದೊಂದಿಗೆ ಏನನ್ನಾದರೂ ನಿರ್ಮಿಸುವ ಕನಸು ಕಂಡಿದ್ದೇನೆ. ಈ ಯೋಜನೆಯು ನಮಗೆ ಪ್ರಿಯವಾದ ಎಲ್ಲವನ್ನೂ ಒಳಗೊಂಡಿದೆ.

ಮಹಿಳೆ: ನಾನು ಏನನ್ನಾದರೂ ಹಂಚಿಕೊಳ್ಳಬಹುದೇ? ಇವರು ನನ್ನ ಮೊಮ್ಮಕ್ಕಳು, ನನ್ನ ಮಕ್ಕಳು. ಅವರು ತಮ್ಮ ಅಜ್ಜನನ್ನು ಭೇಟಿಯಾಗುವ ಅವಕಾಶ ಹೊಂದಿರಲಿಲ್ಲ, ಆದರೂ ಅವರು ಅವರನ್ನು ಗೌರವಿಸಲು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅರ್ಮಾನ್ ಅವರು ವ್ಯಾಪಕವಾದ ಸಂಶೋಧನೆಗಳನ್ನು ಮಾಡಿದ್ದಾರೆ, ಈ ಕೆಲಸವು ಭಾಗಶಃ ಅವರಿಗೆ ಗೌರವವಾಗಿದೆ.

ವ್ಯಕ್ತಿ: ನಾವು ಕಲಿತದ್ದೆಲ್ಲವೂ ಚಲನಚಿತ್ರಗಳಿಂದಲೇ ಬಂದಿದೆ, ಅದರಲ್ಲಿ ಹೆಚ್ಚಿನದನ್ನು ನಮ್ಮ ತಾಯಿ ನಮಗೆ ಕಲಿಸಿದ್ದಾರೆ.

ಪ್ರಧಾನಮಂತ್ರಿ: ನೀವು ಸಂಶೋಧನೆ ನಡೆಸಿದಾಗ, ಒಂದು ರೀತಿಯಲ್ಲಿ, ನೀವು ಆ ಜಗತ್ತಿನಲ್ಲಿ ಮುಳುಗುತ್ತೀರಿ-ನೀವು ಅದನ್ನು ಬದುಕುತ್ತೀರಿ. ನೀವು ನಿಜವಾಗಿಯೂ ಅದೃಷ್ಟವಂತರು ಏಕೆಂದರೆ, ನಿಮ್ಮ ನಾನಾಜಿಯನ್ನು ನೀವು ಎಂದಿಗೂ ಭೇಟಿಯಾಗದಿದ್ದರೂ ಸಹ, ಈ ಕೆಲಸದ ಮೂಲಕ ಅವರ ಜೀವನವನ್ನು ಅನುಭವಿಸಲು ನಿಮಗೆ ಅವಕಾಶವಿದೆ.

ವ್ಯಕ್ತಿ: ಹೌದು, ಸಂಪೂರ್ಣವಾಗಿ. ಇದು ನನ್ನ ದೊಡ್ಡ ಕನಸಾಗಿದೆ, ನನ್ನ ಇಡೀ ಕುಟುಂಬ ಈ ಯೋಜನೆಯ ಭಾಗವಾಗಿರುವುದಕ್ಕೆ ನಾನು ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ.

ಪ್ರಧಾನಮಂತ್ರಿ: ಅವರ ಚಲನಚಿತ್ರಗಳ ಪ್ರಭಾವವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಜನಸಂಘದ ಕಾಲದಲ್ಲಿ ದೆಹಲಿಯಲ್ಲಿ ಚುನಾವಣೆ ನಡೆದು ಜನಸಂಘ ಸೋತಿತು. ಸೋಲು ಎದುರಿಸಿದ ಅಡ್ವಾಣಿ ಮತ್ತು ಅಟಲ್ ಜಿ, “ನಾವು ಈಗ ಏನು ಮಾಡಬೇಕು?” ಅವರು ತಮ್ಮ ಬೇಸರ ಕಳೆದು ಉತ್ಸಾಹದಿಂದಿರಲು ಚಲನಚಿತ್ರ ವೀಕ್ಷಿಸಲು ನಿರ್ಧರಿಸಿದರು. ರಾಜ್ ಕಪೂರ್ ಸಿನಿಮಾ ನೋಡಲು ಹೋಗಿದ್ದರು. ರಾತ್ರಿ ಕಳೆದುಹೋಯಿತು, ಮತ್ತು ಬೆಳಗ್ಗೆ, ಅವರು ಹೊಸ ಭರವಸೆ ಕಂಡುಕೊಂಡರು. ಚುನಾವಣೆಯ ನಷ್ಟದ ಹೊರತಾಗಿಯೂ, ಹೊಸ ಉದಯ ಅವರಿಗೆ ಕಾದಿತ್ತು.

ನನಗೂ ಚೈನಾದಲ್ಲಿದ್ದು ನೆನಪಿದೆ, ನಿಮ್ಮ ತಂದೆಯ ಒಂದು ಹಾಡು ಪ್ಲೇ ಆಗುತ್ತಿತ್ತು. ನಾನು ಅದನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಲು ಸಹೋದ್ಯೋಗಿಯನ್ನು ಕೇಳಿದೆ, ನಾನು ಅದನ್ನು ರಿಷಿ ಸಾಹಬ್‌ಗೆ ಕಳುಹಿಸಿದೆ. ಅವರಿಗೆ ಅತೀವ ಆನಂದವಾಯಿತು.

ಅಲಿಯಾ: ನೀವು ಇತ್ತೀಚೆಗೆ ಆಫ್ರಿಕಾಕ್ಕೆ ಭೇಟಿ ನೀಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ನನ್ನ ಹಾಡುಗಳಲ್ಲಿ ಒಂದನ್ನು ಹಾಡುತ್ತಿರುವ ಸೈನಿಕನೊಂದಿಗೆ ನೀವು ನಿಂತಿರುವ ಕ್ಲಿಪ್ ಅನ್ನು ನಾನು ನೋಡಿದೆ. ಆ ಕ್ಲಿಪ್ ವೈರಲ್ ಆಗಿತ್ತು, ಅನೇಕ ಜನರು ಅದನ್ನು ನನಗೆ ಕಳುಹಿಸಿದ್ದಾರೆ. ಅದನ್ನು ನೋಡಿ ಎಲ್ಲರಿಗೂ ತುಂಬಾ ಖುಷಿಯಾಯಿತು. ಹಾಡುಗಳಿಗೆ ಜಗತ್ತನ್ನು ಒಂದುಗೂಡಿಸುವ ವಿಶಿಷ್ಟ ಸಾಮರ್ಥ್ಯವಿದೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಹಿಂದಿ ಹಾಡುಗಳು, ನಿರ್ದಿಷ್ಟವಾಗಿ  ವಿಶೇಷ ಸ್ಥಾನ ಹೊಂದಿವೆ. ಅವು ಭಾಷಾ ಅಡೆತಡೆಗಳನ್ನು ಮೀರಿವೆ. ಜನರು ಯಾವಾಗಲೂ ಪದಗಳನ್ನು ಅರ್ಥ ಮಾಡಿಕೊಳ್ಳದಿರಬಹುದು, ಆದರೆ ಅವರು ಲೆಕ್ಕಿಸದೆ ಹಾಡುತ್ತಾರೆ. ನನ್ನ ಪ್ರಯಾಣ ಸಮಯದಲ್ಲಿ, ವಿಶೇಷವಾಗಿ ರಾಜ್ ಕಪೂರ್ ಅವರ ಹಾಡುಗಳೊಂದಿಗೆ ನಾನು ಇದನ್ನು ಆಗಾಗ್ಗೆ ಗಮನಿಸಿದ್ದೇನೆ. ಇಂದಿಗೂ ಸಹ, ನಮ್ಮ ಸಂಗೀತದ ಬಗ್ಗೆ ಆಳವಾದ ಭಾವನಾತ್ಮಕ ಮತ್ತು ಸಾರ್ವತ್ರಿಕವಾದ ಏನಾದರೂ ತ್ವರಿತ ಸಂಪರ್ಕವನ್ನು ಸೃಷ್ಟಿಸುತ್ತದೆ. ಅದರ ಬಗ್ಗೆ ಮಾತನಾಡುತ್ತಾ, ನನ್ನಲ್ಲಿ ಒಂದು ಪ್ರಶ್ನೆ ಇತ್ತು – ಹಾಡುಗಳನ್ನು ಕೇಳಲು ನಿಮಗೆ ಇನ್ನೂ ಸಮಯಾವಕಾಶವಿದೆಯೇ?

ಪ್ರಧಾನಮಂತ್ರಿ: ಹೌದು, ನಾನು ಸಂಗೀತ ಆನಂದಿಸುತ್ತೇನೆ, ನನಗೆ ಅವಕಾಶ ಸಿಕ್ಕಾಗಲೆಲ್ಲಾ ಕೇಳುತ್ತೇನೆ.

ಸೈಫ್ ಅಲಿ ಖಾನ್: ನಾನು ಭೇಟಿಯಾಗುವ ಗೌರವ ಪಡೆದ ಮೊದಲ ಪ್ರಧಾನಿ ನೀವು, ನೀವು ನಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೀರಿ – ಒಂದಲ್ಲ, ಎರಡು ಬಾರಿ. ನೀವು ಅಂತಹ ಸಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತೀರಿ, ನಿಮ್ಮ ಕೆಲಸಕ್ಕೆ ನಿಮ್ಮ ಸಮರ್ಪಣೆ ನಿಜವಾಗಿಯೂ ಪ್ರಶಂಸನೀಯವಾಗಿದೆ. ನೀವು ಮಾಡುವ ಎಲ್ಲದಕ್ಕೂ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ನಿಮ್ಮ ಬಾಗಿಲು ತೆರೆದಿದ್ದಕ್ಕಾಗಿ, ನಮ್ಮೊಂದಿಗೆ ಭೇಟಿಯಾಗಿದ್ದಕ್ಕಾಗಿ ಮತ್ತು ತುಂಬಾ ಹತ್ತಿರವಾಗಿದ್ದಕ್ಕಾಗಿ ಧನ್ಯವಾದಗಳು. ತುಂಬು ಧನ್ಯವಾದಗಳು.

ಪ್ರಧಾನಮಂತ್ರಿ: ನಿಮ್ಮ ತಂದೆಯನ್ನು ಭೇಟಿ ಮಾಡಿದ್ದು ನನಗೆ ನೆನಪಿದೆ, ನಿಮ್ಮ ಕುಟುಂಬದ 3 ತಲೆಮಾರುಗಳನ್ನು ಭೇಟಿ ಮಾಡುವ ಅವಕಾಶ ಇಂದು ನನಗೆ ಸಿಗುತ್ತದೆ ಎಂದು ನಾನು ಆಶಿಸಿದ್ದೆ. ಆದರೆ ನೀವು 3ನೇ ಪೀಳಿಗೆಯನ್ನು ಕರೆತಂದಿಲ್ಲ.

ಕರಿಷ್ಮಾ ಕಪೂರ್: ನಾವು ನಿಜವಾಗಿಯೂ ಅವರನ್ನು ಕರೆತರಲು ಬಯಸಿದ್ದೇವೆ.

ಮಹಿಳೆ: ಅವರೆಲ್ಲ ದೊಡ್ಡ ನಟರು, ನಾವು ದೊಡ್ಡ ಕ್ಷೇತ್ರದಲ್ಲಿಲ್ಲ, ನನ್ನ ಮಕ್ಕಳು ತಮ್ಮ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿಯವರು ನಮ್ಮನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು, ಪಾಪಾ!

ರಣಬೀರ್ ಕಪೂರ್: ನಾವು ರಾಜ್ ಕಪೂರ್ ಅವರ ಕೆಲಸದ ಹಿನ್ನೋಟವನ್ನು ಡಿಸೆಂಬರ್ 13, 14 ಮತ್ತು 15 ರಂದು ಆಯೋಜಿಸುತ್ತಿದ್ದೇವೆ. ಭಾರತ ಸರ್ಕಾರ, ಎನ್ಎಫ್ ಡಿಸಿ ಮತ್ತು ಎನ್ಎಫ್ಎಐ ನಂಬಲಾಗದಷ್ಟು ಬೆಂಬಲ ನೀಡಿವೆ. ನಾವು ಅವರ 10 ಚಲನಚಿತ್ರಗಳ ಆಡಿಯೋ ಮತ್ತು ದೃಶ್ಯಗಳನ್ನು ಮರುಸ್ಥಾಪಿಸಿದ್ದೇವೆ. ಅವುಗಳನ್ನು ಭಾರತದ 40 ನಗರಗಳಲ್ಲಿ 160 ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗುವುದು. 13ರಂದು ಮುಂಬೈನಲ್ಲಿ ಪ್ರೀಮಿಯರ್ ಅನ್ನು ಆಯೋಜಿಸುತ್ತಿದ್ದು, ನಮ್ಮೊಂದಿಗೆ ಸೇರಲು ಇಡೀ ಚಿತ್ರರಂಗಕ್ಕೆ ಆಹ್ವಾನ ನೀಡಿದ್ದೇವೆ.

ಹಕ್ಕು ನಿರಾಕರಣೆ: ಕಪೂರ್ ಕುಟುಂಬದೊಂದಿಗಿನ ಪ್ರಧಾನಮಂತ್ರಿ ಅವರ ಸಂವಾದದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲ ಸಂವಾದ ಹಿಂದಿ ಭಾಷೆಯಲ್ಲಿ ನಡೆದಿದೆ.

 

*****