Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಂದ್ರಶೇಖರ ಆಜಾ಼ದ್ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂದ್ರಶೇಖರ ಆಜಾ಼ದ್ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, “ಭಾರತಮಾತೆಯ ಧೀರ ಪುತ್ರ ಚಂದ್ರಶೇಖರ ಆಜಾ಼ದ್ ರನ್ನು ಅವರ ಜಯಂತಿಯಂದು ಸ್ಮರಿಸುತ್ತೇನೆ. ತಮ್ಮ ಯೌವನದ ಮಹತ್ವದ ಕಾಲವನ್ನು ಅವರು ಭಾರತವನ್ನು ಸಾಮ್ರಾಜ್ಯಶಾಹಿಯ ಹಿಡಿತದಿಂದ ಮುಕ್ತಗೊಳಿಸಲು ಸಮರ್ಪಿಸಿದರು. ಅವರು ಭವಿಷ್ಯದ ಚಿಂತಕರಾಗಿದ್ದರು ಮತ್ತು ಬಲಿಷ್ಠ ಮತ್ತು ಭವ್ಯ ಭಾರತದ ಕನಸು ಕಂಡಿದ್ದರು.” ಎಂದು ತಿಳಿಸಿದ್ದಾರೆ.

***