Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಂದ್ರಯಾನ -2 ಉಡಾವಣೆ, ಪ್ರಧಾನ ಮಂತ್ರಿ ಸಂದೇಶ.


ಚಂದ್ರಯಾನ 2ರ ಯಶಸ್ವೀ ಉಡ್ಡಯನಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಸಂದೇಶದ ಪೂರ್ಣ ಪಾಠ ಇಂತಿದೆ:

“ ನಮ್ಮ ವೈಭವದ ಚರಿತ್ರೆಯಲ್ಲಿ . ಚಂದ್ರಯಾನ-2 ರ ಆರಂಭ ಹೊಸ ಮೈಲಿಗಲ್ಲು . ನಮ್ಮ ವಿಜ್ಞಾನಿಗಳ ಪರಾಕ್ರಮ ಮತ್ತು 130 ಕೋಟಿ ಭಾರತೀಯರ ದೃಢ ಸಂಕಲ್ಪದ ಸಾಕ್ಷಾತ್ಕಾರ. ಇಂದು ಪ್ರತಿಯೊಬ್ಬ ಭಾರತೀಯರೂ ಅತ್ಯಂತ ಹೆಮ್ಮೆ ಪಡುತ್ತಿದ್ದಾರೆ !.

ಹೃದಯದಲ್ಲಿ ಭಾರತೀಯ , ಸ್ಪೂರ್ತಿಯಲ್ಲಿಯೂ ಭಾರತೀಯ !. ಚಂದ್ರಯಾನ 2 ಪ್ರತಿಯೊಬ್ಬ ಭಾರತೀಯನಿಗೂ ಯಾಕಿಷ್ಟು ಸಂತಸ , ಹೆಮ್ಮೆ ತಂದಿದೆ ಎಂದರೆ ಅದು ಸಂಪೂರ್ಣವಾಗಿ ದೇಶೀಯ ಯೋಜನೆ. ಅದು ಚಂದ್ರನ ದೂರ ಸಂವೇದಿಯಾಗಿ ಕಕ್ಷಾವರ್ತಿಯಾಗಿದೆ ಮತ್ತು ಅದು ಚಂದ್ರನ ಭೂಪ್ರದೇಶದ ವಿಶ್ಲೇಷಣೆಗಾಗಿ ಲ್ಯಾಂಡರ್ ರೋವರ್ ಮಾದರಿಯನ್ನು ಒಳಗೊಂಡಿದೆ.

ಚಂದ್ರಯಾನ 2 ವಿಶಿಷ್ಟವಾಗಿದೆ, ಯಾಕೆಂದರೆ ಅದು ಈ ಹಿಂದಿನ ಯಾವ ಯಾನಗಳೂ ಶೋಧಿಸದ ಮತ್ತು ಚಂದ್ರನ ಭೂ ಪ್ರದೇಶದ ದಕ್ಷಿಣ ದ್ರುವ ವಲಯದ ಮಾದರಿಯ ಬಗ್ಗೆ ಶೋಧ ನಡೆಸಲಿದೆ ಹಾಗು ಅಧ್ಯಯನ ಕೈಗೊಳ್ಳಲಿದೆ. ಈ ಯೋಜನೆ ಚಂದ್ರನ ಬಗ್ಗೆ ಹೊಸ ಜ್ಞಾನವನ್ನು ಕೊಡಲಿದೆ.

“ ಚಂದ್ರಯಾನ 2 ರಂತಹ ಪ್ರಯತ್ನಗಳು ನಮ್ಮ ಪ್ರತಿಭಾವಂತ ಯುವ ತಲೆಮಾರನ್ನು ವಿಜ್ಞಾನದತ್ತ, ಉತ್ತಮ ಗುಣಮಟ್ಟದ ಸಂಶೋಧನೆಯತ್ತ ಮತ್ತು ಅನ್ವೇಷಣೆಯತ್ತ ಸಾಗಲು ಇನ್ನಷ್ಟು ಪ್ರೋತ್ಸಾಹ ನೀಡುತ್ತವೆ. ಚಂದ್ರಯಾನಕ್ಕೆ ಧನ್ಯವಾದ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಇದರಿಂದ ಹೆಚ್ಚಿನ ಉತ್ತೇಜನ ಸಿಗಲಿದೆ. ಚಂದ್ರನ ಕುರಿತ ನಮ್ಮ ಜ್ಞಾನ ಗಮನಾರ್ಹವಾಗಿ ಹೆಚ್ಚಲಿದೆ “.

ನಮ್ಮ ದೇದೀಪ್ಯಮಾನ ಚರಿತ್ರೆಯಲ್ಲಿ ಮೈಲಿಗಲ್ಲಾಗಿ ದಾಖಲಾಗಲಿವರುವ ವಿಶೇಷ ಸಂದರ್ಭಗಳು !

ಚಂದ್ರಯಾನ 2 ಉಡಾವಣೆ ವಿಜ್ಞಾನದ ಹೊಸ ಗಡಿಗಳನ್ನು ದಾಟುವ ನಮ್ಮ ವಿಜ್ಞಾನಿಗಳ ಪರಾಕ್ರಮ ಮತ್ತು 130 ಕೋಟಿ ಭಾರತೀಯರ ದೃಢ ನಿಶ್ಚಯವನ್ನು ಸಾಕ್ಷೀಕರಿಸುತ್ತದೆ.

ಇಂದು ಪ್ರತಿಯೊಬ್ಬ ಭಾರತೀಯರೂ ಭಾರೀ ಹೆಮ್ಮೆಯನ್ನು ಅನುಭವಿಸುತ್ತಿದ್ದಾರೆ. (pic.twitter.com/v1ETFneij0)

-ನರೇಂದ್ರ ಮೋದಿ (@narendramodi) , ಜುಲೈ 22,2019

ಹೃದಯದಲ್ಲಿ ಭಾರತೀಯ , ಸ್ಪೂರ್ತಿಯಲ್ಲಿಯೂ ಭಾರತೀಯ !. ಚಂದ್ರಯಾನ 2 ಪ್ರತಿಯೊಬ್ಬ ಭಾರತೀಯನಿಗೂ ಯಾಕಿಷ್ಟು ಸಂತಸ , ಹೆಮ್ಮೆ ತಂದಿದೆ ಎಂದರೆ ಅದು ಸಂಪೂರ್ಣವಾಗಿ ದೇಶೀಯ ಯೋಜನೆ. ಅದು ಚಂದ್ರನ ದೂರ ಸಂವೇದನೆಗಾಗಿ ಕಕ್ಷಾವರ್ತಿಯಾಗಿದೆ ಮತ್ತು ಅದು ಚಂದ್ರನ ಭೂಪ್ರದೇಶದ ವಿಶ್ಲೇಷಣೆಗಾಗಿ ಲ್ಯಾಂಡರ್ ರೋವರ್ ಮಾದರಿಯನ್ನು ಒಳಗೊಂಡಿದೆ.

-ನರೇಂದ್ರ ಮೋದಿ (@narendramodi) , ಜುಲೈ 22,2019

ಚಂದ್ರಯಾನ 2 ವಿಶಿಷ್ಟವಾಗಿದೆ, ಯಾಕೆಂದರೆ ಅದು ಈ ಹಿಂದಿನ ಯಾವ ಯಾನಗಳೂ ಶೋಧಿಸದ ಮತ್ತು ಚಂದ್ರನ ಭೂ ಪ್ರದೇಶದ ದಕ್ಷಿಣ ದ್ರುವ ವಲಯದ ಮಾದರಿಯ ಬಗ್ಗೆ ಶೋಧ ನಡೆಸಲಿದೆ ಮತ್ತು ಅಧ್ಯಯನ ಕೈಗೊಳ್ಳಲಿದೆ. ಈ ಯೋಜನೆ ಚಂದ್ರನ ಬಗ್ಗೆ ಹೊಸ ಜ್ಞಾನವನ್ನು ಕೊಡಲಿದೆ.

-ನರೇಂದ್ರ ಮೋದಿ (@narendramodi) , ಜುಲೈ 22,2019

ಚಂದ್ರಯಾನ 2 ( #Chandrayaan2 )ರಂತಹ ಪ್ರಯತ್ನಗಳು ನಮ್ಮ ಪ್ರತಿಭಾವಂತ ಯುವ ತಲೆಮಾರನ್ನು ವಿಜ್ಞಾನದತ್ತ, ಉತ್ತಮ ಗುಣಮಟ್ಟದ ಸಂಶೋಧನೆಯತ್ತ ಮತ್ತು ಅನ್ವೇಷಣೆಯತ್ತ ಸಾಗಲು ಇನ್ನಷ್ಟು ಪ್ರೋತ್ಸಾಹ ನೀಡುತ್ತವೆ.

ಚಂದ್ರಯಾನಕ್ಕೆ ಧನ್ಯವಾದ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಇದರಿಂದ ಹೆಚ್ಚಿನ ಉತ್ತೇಜನ ಸಿಗಲಿದೆ. ಚಂದ್ರನ ಕುರಿತ ನಮ್ಮ ಜ್ಞಾನ ಗಮನಾರ್ಹವಾಗಿ ಹೆಚ್ಚಲಿದೆ “.

-ನರೇಂದ್ರ ಮೋದಿ (@narendramodi) , ಜುಲೈ 22,2019