ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ (ಜಾಗತಿಕ ಹಣಕಾಸು ಕೇಂದ್ರ) ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2023ರಲ್ಲಿ ‘ಎ+’ ರೇಟಿಂಗ್ ಪಡೆದ ಆರ್ ಬಿಐ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರನ್ನು ಅಭಿನಂದಿಸಿದ್ದಾರೆ. ಎ+ ರೇಟಿಂಗ್ ಪಡೆದ ಮೂವರು ಕೇಂದ್ರ ಬ್ಯಾಂಕ್ ಗವರ್ನರ್ ಗಳ ಪಟ್ಟಿಯಲ್ಲಿ ಶ್ರೀ ದಾಸ್ ಅಗ್ರಸ್ಥಾನದಲ್ಲಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಟ್ವೀಟ್ ಗೆ ಉತ್ತರವಾಗಿ, ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಈ ಕುರಿತು ಹಂಚಿಕೊಂಡಿದ್ದಾರೆ.
“ಆರ್ ಬಿಐ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರಿಗೆ ಅಭಿನಂದನೆಗಳು. ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಜಾಗತಿಕ ವೇದಿಕೆಯಲ್ಲಿ ನಮ್ಮ ಆರ್ಥಿಕ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ಅವರ ಸಮರ್ಪಣೆ ಮತ್ತು ದೃಷ್ಟಿಕೋನವು ನಮ್ಮ ರಾಷ್ಟ್ರದ ಬೆಳವಣಿಗೆಯ ಪಥವನ್ನು ಬಲಪಡಿಸುತ್ತದೆ,’’ಎಂದಿದ್ದಾರೆ.
***
Congratulations to RBI Governor Shri Shaktikanta Das. This is a proud moment for India, reflecting our financial leadership on the global stage. His dedication and vision continue to strengthen our nation's growth trajectory. https://t.co/MtdmI8La1T
— Narendra Modi (@narendramodi) September 1, 2023