ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ ಪೋ ಸೆಂಟರ್ ಮತ್ತು ಮಾರ್ಟ್ ನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಡೈರಿ ಒಕ್ಕೂಟದ ವಿಶ್ವ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯೂಡಿಎಸ್) 2022 ಕ್ಕ ಚಾಲನೆ ನೀಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೈನುಗಾರಿಕೆಯ ಪ್ರಪಂಚದ ಎಲ್ಲ ಗಣ್ಯರು ಇಂದು ಭಾರತದಲ್ಲಿ ಸೇರಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ವಿಶ್ವ ಡೈರಿ ಶೃಂಗಸಭೆಯು ವಿಚಾರಗಳ ವಿನಿಮಯಕ್ಕೆ ಉತ್ತಮ ಮಾಧ್ಯಮವಾಗಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಹೈನುಗಾರಿಕೆ ಕ್ಷೇತ್ರದ ಸಾಮರ್ಥ್ಯವು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವುದಲ್ಲದೆ, ವಿಶ್ವದಾದ್ಯಂತದ ಕೋಟ್ಯಂತರ ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ” ಎಂದು ಅವರು ಹೇಳಿದರು.
ಭಾರತದ ಸಾಂಸ್ಕೃತಿಕ ಭೂರಮೆಯಲ್ಲಿ ‘ಪಶು ಧನ್’ ಮತ್ತು ಕ್ಷೀರ ಸಂಬಂಧಿತ ವ್ಯವಹಾರದ ಕೇಂದ್ರ ಬಿಂದುವಾಗಿರುವುದನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಇದು ಭಾರತದ ಹೈನುಗಾರಿಕೆ ವಲಯಕ್ಕೆ ಅನೇಕ ವಿಶಿಷ್ಟ ಗುಣಲಕ್ಷಣಗಳನ್ನು ನೀಡಿದೆ. ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಹೈನುಗಾರಿಕೆ ಕ್ಷೇತ್ರದ ಪ್ರೇರಕ ಶಕ್ತಿ ಸಣ್ಣ ರೈತರು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಭಾರತದ ಹೈನುಗಾರಿಕೆ ವಲಯವು “ಸಾಮೂಹಿಕ ಉತ್ಪಾದನೆ”ಗಿಂತ ಹೆಚ್ಚಾಗಿ “ಜನಸಮೂಹದ ಉತ್ಪಾದನೆ” ಯಿಂದ ವಿಶಿಷ್ಟವೇನಿಸಿದೆ. ಒಂದು, ಎರಡು ಅಥವಾ ಮೂರು ಜಾನುವಾರುಗಳನ್ನು ಹೊಂದಿರುವ ಈ ಸಣ್ಣ ರೈತರ ಪ್ರಯತ್ನದ ಆಧಾರದ ಮೇಲೆ ಭಾರತವು ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದೆ. ಈ ವಲಯವು ದೇಶದ 8 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಉದ್ಯೋಗವನ್ನು ಒದಗಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತೀಯ ಹೈನುಗಾರಿಕೆ ವ್ಯವಸ್ಥೆಯ ಎರಡನೇ ವಿಶಿಷ್ಟ ಗುಣಲಕ್ಷಣವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಭಾರತದಲ್ಲಿ ಹೈನುಗಾರಿಕೆ ಸಹಕಾರಿ ರಂಗದ ಇಷ್ಟು ದೊಡ್ಡ ಜಾಲವಿದೆ ಮತ್ತು ಇಡೀ ವಿಶ್ವದಲ್ಲಿ ಅಂತಹ ಉದಾಹರಣೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು. ಈ ಡೈರಿ ಸಹಕಾರ ಸಂಸ್ಥೆಗಳು ದೇಶದ ಎರಡು ಲಕ್ಷಕ್ಕೂ ಹೆಚ್ಚು ಹಳ್ಳಿಗಳ ಸುಮಾರು ಎರಡು ಕೋಟಿ ರೈತರಿಂದ ದಿನಕ್ಕೆ ಎರಡು ಬಾರಿ ಹಾಲನ್ನು ಸಂಗ್ರಹಿಸಿ ಗ್ರಾಹಕರಿಗೆ ತಲುಪಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದರು. ಇಡೀ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಲ್ಲ ಮತ್ತು ಗ್ರಾಹಕರಿಂದ ಪಡೆಯುವ ಹಣದ ಶೇಕಡಾ 70ಕ್ಕಿಂತ ಹೆಚ್ಚು ನೇರವಾಗಿ ರೈತರ ಜೇಬಿಗೆ ಹೋಗುತ್ತದೆ ಎಂಬ ಅಂಶದ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು. “ಇಡೀ ವಿಶ್ವದಲ್ಲಿ ಬೇರೆ ಯಾವುದೇ ದೇಶವು ಈ ಅನುಪಾತವನ್ನು ಹೊಂದಿಲ್ಲ” ಎಂದು ಪ್ರಧಾನಮಂತ್ರಿ ಹೇಳಿದರು. ಡೈರಿ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ದಕ್ಷತೆಯನ್ನು ಅವರು ಒತ್ತಿ ಹೇಳಿದರು ಮತ್ತು ಇದು ಇತರ ದೇಶಗಳಿಗೆ ಬಹುವಿಧಧ ಪಾಠವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಯವರ ಪ್ರಕಾರ, ಮತ್ತೊಂದು ವಿಶಿಷ್ಟ ಲಕ್ಷಣ, ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲ ದೇಶೀಯ ತಳಿಗಳದ್ದು. ಗುಜರಾತಿನ ಗಟ್ಟಿಮುಟ್ಟಾದ ಎಮ್ಮೆ ತಳಿಯಾದ ಕಚ್ ಪ್ರದೇಶದ ಬನ್ನಿ ಬಫಲೋ ತಳಿಯ ಉದಾಹರಣೆಯನ್ನು ಅವರು ನೀಡಿದರು. ಮುರ್ರಾ, ಮೆಹ್ಸಾನಾ, ಜಫ್ರಾಬಾದಿ, ನೀಲಿ ರವಿ ಮತ್ತು ಪಂಢರಪುರಿಯಂತಹ ಇತರ ಎಮ್ಮೆ ತಳಿಗಳ ಬಗ್ಗೆಯೂ ಅವರು ಮಾತನಾಡಿದರು; ಗೋವಿನ ತಳಿಗಳಲ್ಲಿ, ಅವರು ಗಿರ್, ಸಾಹಿವಾಲ್, ರಾಥಿ, ಕಂಕ್ರೇಜ್, ಥಾರ್ಪಾರ್ಕರ್ ಮತ್ತು ಹರಿಯಾಣವನ್ನು ಉಲ್ಲೇಖಿಸಿದರು.
ಹೈನುಗಾರಿಕೆ ಕ್ಷೇತ್ರದಲ್ಲಿ ಪ್ರಧಾನಮಂತ್ರಿಯವರು ಒತ್ತಿ ಹೇಳಿದ ಮತ್ತೊಂದು ವಿಶಿಷ್ಟ ಲಕ್ಷಣ ಮಹಿಳೆಯರ ಶಕ್ತಿ. ಭಾರತದ ಹೈನುಗಾರಿಕೆ ಕ್ಷೇತ್ರದಲ್ಲಿನ ಕಾರ್ಯಪಡೆಯಲ್ಲಿ ಮಹಿಳೆಯರಿಗೆ ಶೇ.70ರಷ್ಟು ಪ್ರಾತಿನಿಧ್ಯವಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. “ಮಹಿಳೆಯರೇ ಭಾರತದ ಡೈರಿ ಕ್ಷೇತ್ರದ ನಿಜವಾದ ನಾಯಕರು” ಎಂದು ಅವರು ಹೇಳಿದರು, “ಇಷ್ಟು ಮಾತ್ರವಲ್ಲ, ಭಾರತದಲ್ಲಿ ಡೈರಿ ಸಹಕಾರ ಸಂಸ್ಥೆಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸದಸ್ಯರು ಮಹಿಳೆಯರೇ ಆಗಿದ್ದಾರೆ” ಎಂದು ಅವರು ಹೇಳಿದರು. ಎಂಟೂವರೆ ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹೈನುಗಾರಿಕೆಯು ಗೋಧಿ ಮತ್ತು ಅಕ್ಕಿಯ ಒಟ್ಟು ಮೌಲ್ಯಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು. ಇದೆಲ್ಲವೂ ಭಾರತದ ಮಹಿಳಾ ಶಕ್ತಿಯಿಂದ ಪ್ರೇರಿತವಾಗಿದೆ ಎಂದರು.
2014ರಿಂದೀಚೆಗೆ ಭಾರತದ ಹೈನುಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಅವಿರತವಾಗಿ ಶ್ರಮಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ, ಇದರಿಂದಾಗಿ ರೈತರ ಆದಾಯದಲ್ಲಿ ಹೆಚ್ಚಳವೂ ಆಗುತ್ತಿದೆ. “ಭಾರತವು 2014 ರಲ್ಲಿ 146 ದಶಲಕ್ಷ ಟನ್ ಹಾಲನ್ನು ಉತ್ಪಾದಿಸಿತ್ತು. ಇದು ಈಗ 210 ದಶಲಕ್ಷ ಟನ್ ಗಳಿಗೆ ಏರಿದೆ. ಅಂದರೆ, ಸುಮಾರು 44 ಪ್ರತಿಶತದಷ್ಟು ಹೆಚ್ಚಳವಾಗಿದೆ”, ಎಂದು ಪ್ರಧಾನಮಂತ್ರಿ ಗಮನಸೆಳೆದರು. ಜಾಗತಿಕ ಮಟ್ಟದಲ್ಲಿ ಶೇಕಡಾ 2 ರಷ್ಟು ಕ್ಷೀರ ಉತ್ಪಾದನಾ ವೃದ್ಧಿ ದರಕ್ಕೆ ಹೋಲಿಸಿದರೆ, ಭಾರತದಲ್ಲಿ ಹಾಲು ಉತ್ಪಾದನೆಯ ವೃದ್ಧಿ ದರ ಶೇಕಡಾ 6 ಕ್ಕಿಂತ ಹೆಚ್ಚು ವೇಗದಲ್ಲಿ ಸಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.
ಉತ್ಪಾದನೆಯನ್ನು ಹೆಚ್ಚಿಸುವತ್ತ ಗಮನ ಹರಿಸುವುದರ ಜೊತೆಗೆ ವಲಯಗಳ ಸವಾಲುಗಳನ್ನು ಎದುರಿಸುತ್ತಿರುವ ಬ್ಲಾಂಚ್ಡ್ (blanched) ಡೈರಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರೈತರಿಗೆ ಹೆಚ್ಚುವರಿ ಆದಾಯ, ಬಡವರ ಸಬಲೀಕರಣ, ಸ್ವಚ್ಛತೆ, ರಾಸಾಯನಿಕ ಮುಕ್ತ ಕೃಷಿ, ಶುದ್ಧ ಇಂಧನ ಮತ್ತು ಜಾನುವಾರುಗಳ ಆರೈಕೆ ಈ ಪರಿಸರ ವ್ಯವಸ್ಥೆಯಲ್ಲಿ ಪರಸ್ಪರ ಸಂಬಂಧ ಹೊಂದಿದೆ. ಪಶು ಸಂಗೋಪನೆ ಮತ್ತು ಹೈನುಗಾರಿಕೆಯನ್ನು ಹಳ್ಳಿಗಳಲ್ಲಿ ಹಸಿರು ಮತ್ತು ಸುಸ್ಥಿರ ಬೆಳವಣಿಗೆಯ ಪ್ರಬಲ ಮಾಧ್ಯಮವಾಗಿ ಉತ್ತೇಜಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ರಾಷ್ಟ್ರೀಯ ಗೋಕುಲ್ ಅಭಿಯಾನ, ಗೋಬರ್ಧನ್ ಯೋಜನೆ, ಹೈನುಗಾರಿಕೆ ಕ್ಷೇತ್ರದ ಡಿಜಿಟಲೀಕರಣ ಮತ್ತು ಜಾನುವಾರುಗಳಿಗೆ ಸಾರ್ವತ್ರಿಕ ಲಸಿಕೀಕರಣ ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವಂತಹ ಕ್ರಮಗಳಂತಹ ಯೋಜನೆಗಳು ಆ ದಿಕ್ಕಿನಲ್ಲಿ ಇಟ್ಟ ಹೆಜ್ಜೆಗಳಾಗಿವೆ ಎಂದರು.
ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಹೈನುಗಾರಿಕೆಯ ಪ್ರಾಣಿಗಳ ಅತಿದೊಡ್ಡ ಡೇಟಾಬೇಸ್ ಅನ್ನು ರೂಪಿಸುತ್ತಿದೆ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಾಣಿಯನ್ನು ತಲುಪಲಾಗುತ್ತಿದೆ ಎಂದು ಹೇಳಿದರು. “ನಾವು ಪ್ರಾಣಿಗಳ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಮಾಡುತ್ತಿದ್ದೇವೆ. ನಾವು ಅದಕ್ಕೆ ಪಶು ಆಧಾರ್ ಎಂದು ಹೆಸರಿಟ್ಟಿದ್ದೇವೆ” ಎಂದು ಅವರು ಹೇಳಿದರು.
ಎಫ್.ಪಿಎಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ನವೋದ್ಯಮಗಳಂತಹ ಬೆಳೆಯುತ್ತಿರುವ ಉದ್ಯಮಶೀಲ ಸ್ವರೂಪಗಳ ಬಗ್ಗೆ ಶ್ರೀ ಮೋದಿ ಒತ್ತಿ ಹೇಳಿದರು. ಈ ವಲಯವು ಇತ್ತೀಚಿನ ದಿನಗಳಲ್ಲಿ 1೦೦೦ ಕ್ಕೂ ಹೆಚ್ಚು ನವೋದ್ಯಮಗಳನ್ನು ಕಂಡಿದೆ ಎಂದು ಅವರು ಹೇಳಿದರು. ಅವರು ಗೋಬರ್ಧನ್ ಯೋಜನೆಯ ಪ್ರಗತಿಯ ಬಗ್ಗೆಯೂ ಮಾತನಾಡಿ, ಸಗಣಿಯಿಂದ (ಗೋಬರ್) ಡೈರಿ ಘಟಕಗಳು ತಮ್ಮದೇ ಆದ ವಿದ್ಯುತ್ ಉತ್ಪಾದಿಸುವ ಸ್ಥಿತಿಯನ್ನು ತಲುಪುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ ಲಭಿಸುವ ಗೊಬ್ಬರದಿಂದ ರೈತರಿಗೂ ಸಹಾಯವಾಗುತ್ತದೆ ಎಂದರು.
ಕೃಷಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಪಶುಸಂಗೋಪನೆ ಮತ್ತು ವ್ಯವಸಾಯಕ್ಕೆ ವೈವಿಧ್ಯತೆಯ ಅಗತ್ಯವಿದೆ ಮತ್ತು ಏಕ ಸಂಸ್ಕೃತಿಯೊಂದೇ ಪರಿಹಾರವಾಗದಿರಬಹುದು ಎಂದು ಹೇಳಿದರು. ಇಂದು, ಭಾರತವು ದೇಶೀಯ ತಳಿಗಳು ಮತ್ತು ಹೈಬ್ರಿಡ್ ತಳಿಗಳೆರಡಕ್ಕೂ ಸಮಾನ ಗಮನ ಹರಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಹವಾಮಾನ ಬದಲಾವಣೆಯಿಂದ ಉಂಟಾಗುವ ಹಾನಿಯ ಅಪಾಯವನ್ನು ಸಹ ತಗ್ಗಿಸುತ್ತದೆ ಎಂದು ಅವರು ವಿವರಿಸಿದರು.
ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆಯಾದ ಪ್ರಾಣಿಗಳಿಗೆ ಬರುವ ರೋಗಗಳ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. “ಪ್ರಾಣಿ ಅನಾರೋಗ್ಯಕ್ಕೆ ಒಳಗಾದಾಗ ಅದು ರೈತನ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಇದು ಅವನ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಾಣಿಗಳ ದಕ್ಷತೆ, ಅದರ ಹಾಲಿನ ಗುಣಮಟ್ಟ ಮತ್ತು ಇತರ ಸಂಬಂಧಿತ ಉತ್ಪನ್ನಗಳ ಮೇಲೂ ಪರಿಣಾಮ ಬೀರುತ್ತದೆ”, ಎಂದು ಅವರು ಹೇಳಿದರು. ಈ ದಿಸೆಯಲ್ಲಿ, ಭಾರತವು ಪ್ರಾಣಿಗಳಿಗೆ ಸಾರ್ವತ್ರಿಕ ಲಸಿಕೆ ನೀಡುವತ್ತ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. “2025ರ ವೇಳೆಗೆ, ನಾವು ಶೇ.100 ಪ್ರಾಣಿಗಳಿಗೆ ಕಾಲು ಮತ್ತು ಬಾಯಿ ರೋಗ ಹಾಗೂ ಬ್ರುಸೆಲ್ಲೋಸಿಸ್ ವಿರುದ್ಧ ಲಸಿಕೆ ನೀಡಲು ನಿರ್ಧರಿಸಿದ್ದೇವೆ. ಈ ದಶಕದ ಅಂತ್ಯದ ವೇಳೆಗೆ ಈ ರೋಗಗಳಿಂದ ಸಂಪೂರ್ಣವಾಗಿ ಮುಕ್ತರಾಗುವ ಗುರಿಯನ್ನು ನಾವು ಹೊಂದಿದ್ದೇವೆ”, ಎಂದು ಪ್ರಧಾನಮಂತ್ರಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಲಂಪಿ ಎಂಬ ರೋಗದಿಂದಾಗಿ ಭಾರತದ ಅನೇಕ ರಾಜ್ಯಗಳಲ್ಲಿ ಜಾನುವಾರುಗಳ ನಷ್ಟವಾಗುತ್ತಿರುವ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕೇಂದ್ರ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಸೇರಿ, ಅದರ ಮೇಲೆ ನಿಗಾ ಇಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ಎಲ್ಲರಿಗೂ ಭರವಸೆ ನೀಡಿದರು. “ನಮ್ಮ ವಿಜ್ಞಾನಿಗಳು ಲಂಪಿ ಚರ್ಮ ರೋಗಕ್ಕೆ ದೇಶೀಯ ಲಸಿಕೆಯನ್ನು ಸಹ ಸಿದ್ಧಪಡಿಸಿದ್ದಾರೆ” ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕ ರೋಗವನ್ನು ನಿಯಂತ್ರಣದಲ್ಲಿಡಲು ಪ್ರಾಣಿಗಳ ಚಲನವಲನಗಳನ್ನು ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅದು ಪ್ರಾಣಿಗಳಿಗೆ ಲಸಿಕೆ ಹಾಕಿಸುವುದಾಗಿರಲಿ ಅಥವಾ ಇನ್ನಾವುದೇ ಆಧುನಿಕ ತಂತ್ರಜ್ಞಾನವಾಗಿರಲಿ, ಭಾರತವು ತನ್ನ ಪಾಲುದಾರ ರಾಷ್ಟ್ರಗಳಿಂದ ಕಲಿಯಲು ಪ್ರಯತ್ನಿಸುತ್ತಿರುವಾಗ ಹೈನುಗಾರಿಕೆ ಕ್ಷೇತ್ರಕ್ಕೆ ಕೊಡುಗೆ ನೀಡಲು ಸದಾ ಉತ್ಸುಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತವು ತನ್ನ ಆಹಾರ ಸುರಕ್ಷತಾ ಮಾನದಂಡಗಳ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸಿದೆ” ಎಂದು ಶ್ರೀ ಮೋದಿ ಹೇಳಿದರು.
ಭಾಷಣದ ಕೊನೆಯಲ್ಲಿ, ಭಾರತವು ಜಾನುವಾರು ವಲಯದ ಎಂಡ್-ಟು-ಎಂಡ್ ಚಟುವಟಿಕೆಗಳನ್ನು ಸೆರೆಹಿಡಿಯುವ ಡಿಜಿಟಲ್ ವ್ಯವಸ್ಥೆಯ ಮೇಲೆ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಇದು ಈ ವಲಯವನ್ನು ಸುಧಾರಿಸಲು ಅಗತ್ಯವಿರುವ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಶೃಂಗಸಭೆಯು ಇಂತಹ ಅನೇಕ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ವಿಶ್ವದಾದ್ಯಂತ ನಡೆಯುತ್ತಿರುವ ಕಾರ್ಯಗಳನ್ನು ಮುಂದಿಡಲಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತಿಯನ್ನು ಹಂಚಿಕೊಳ್ಳುವ ಮಾರ್ಗಗಳನ್ನು ಸೂಚಿಸುವಂತೆಯೂ ಪ್ರಧಾನಮಂತ್ರಿಯವರು ಉಪಸ್ಥಿತರಿದ್ದ ಪ್ರತಿಯೊಬ್ಬರಿಗೂ ಮನವಿ ಮಾಡಿದರು. “ಭಾರತದಲ್ಲಿ ಹೈನುಗಾರಿಕೆ ಕ್ಷೇತ್ರವನ್ನು ಸಶಕ್ತಗೊಳಿಸುವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾನು ಡೈರಿ ಉದ್ಯಮದ ಜಾಗತಿಕ ನಾಯಕರನ್ನು ಆಹ್ವಾನಿಸುತ್ತೇನೆ. ಅಂತಾರಾಷ್ಟ್ರೀಯ ಡೈರಿ ಒಕ್ಕೂಟ ಅತ್ಯುತ್ತಮ ಕಾರ್ಯ ಮತ್ತು ಕೊಡುಗೆಗಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ”, ಎಂದು ಪ್ರಧಾನಮಂತ್ರಿ ಅವರು ಭಾಷಣ ಮುಕ್ತಾಯಗೊಳಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ್ ರೂಪಾಲಾ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ಕೇಂದ್ರ ಕೃಷಿ ಮತ್ತು ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವ ಶ್ರೀ ಸಂಜೀವ್ ಕುಮಾರ್ ಬಲ್ಯಾನ್, ಸಂಸತ್ ಸದಸ್ಯರಾದ ಶ್ರೀ ಸುರೇಂದ್ರ ಸಿಂಗ್ ನಗರ್ ಮತ್ತು ಡಾ. ಮಹೇಶ್ ಶರ್ಮಾ, ಅಂತಾರಾಷ್ಟ್ರೀಯ ಡೈರಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಪಿ.ಬ್ರಾಝಾಲೆ ಮತ್ತು ಅಂತಾರಾಷ್ಟ್ರೀಯ ಡೈರಿ ಒಕ್ಕೂಟದ ಮಹಾನಿರ್ದೇಶಕರಾದ ಶ್ರೀಮತಿ ಕ್ಯಾರೋಲಿನ್ ಎಮಂಡ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 75 ಲಕ್ಷ ರೈತರು ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮದಲ್ಲಿ ಸಂಪರ್ಕಿತರಾಗಿದ್ದರು.
ಹಿನ್ನೆಲೆ
ಸೆಪ್ಟೆಂಬರ್ 12 ರಿಂದ 15 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ‘ಪೌಷ್ಟಿಕತೆ ಮತ್ತು ಜೀವನೋಪಾಯಕ್ಕೆ ಹೈನುಗಾರಿಕೆ’ ವಿಷಯದ ಸುತ್ತ ಕೇಂದ್ರೀಕೃತವಾಗಿರುವ ಐಡಿಎಫ್ ಡಬ್ಲ್ಯುಡಿಎಸ್ 2022ನಲ್ಲಿ ಉದ್ಯಮದ ನಾಯಕರು, ತಜ್ಞರು, ರೈತರು ಮತ್ತು ನೀತಿ ಯೋಜಕರು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಡೈರಿ ಬಾಧ್ಯಸ್ಥರು ಸಭೆ ಸೇರಿದ್ದಾರೆ. ಐಡಿಎಫ್ ಡಬ್ಲ್ಯೂಡಿಎಸ್ 2022 ರಲ್ಲಿ 50 ದೇಶಗಳಿಂದ ಸುಮಾರು 1500 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂತಹ ಕೊನೆಯ ಶೃಂಗಸಭೆಯು ಸುಮಾರು ಅರ್ಧ ಶತಮಾನದ ಹಿಂದೆ 1974 ರಲ್ಲಿ ಭಾರತದಲ್ಲಿ ನಡೆದಿತ್ತು.
ಭಾರತೀಯ ಹೈನುಗಾರಿಕೆ ಉದ್ಯಮವು ವಿಶಿಷ್ಟವಾಗಿದೆ ಏಕೆಂದರೆ ಇದು ಸಣ್ಣ ಮತ್ತು ಅತಿಸಣ್ಣ ಹೈನುಗಾರರನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಹಕಾರಿ ಮಾದರಿಯನ್ನು ಆಧರಿಸಿದೆ. ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಪ್ರೇರಿತವಾದ ಸರ್ಕಾರವು ಹೈನುಗಾರಿಕೆ ಕ್ಷೇತ್ರದ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದರ ಪರಿಣಾಮವಾಗಿ ಕಳೆದ ಎಂಟು ವರ್ಷಗಳಲ್ಲಿ ಹಾಲು ಉತ್ಪಾದನೆಯಲ್ಲಿ ಶೇ.44ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ಭಾರತೀಯ ಡೈರಿ ಉದ್ಯಮದ ಯಶೋಗಾಥೆ, ಜಾಗತಿಕ ಹಾಲಿನ ಸುಮಾರು ಶೇ.23 ರಷ್ಟಿದ್ದು, ವಾರ್ಷಿಕವಾಗಿ ಸುಮಾರು 210 ದಶಲಕ್ಷ ಟನ್ ಗಳಷ್ಟು ಉತ್ಪಾದಿಸುತ್ತದೆ ಮತ್ತು 8 ಕೋಟಿಗೂ ಹೆಚ್ಚು ಹೈನುಗಾರರನ್ನು ಸಬಲೀಕರಣಗೊಳಿಸುತ್ತಿದೆ, ಇದನ್ನು ಐಡಿಎಫ್ ಡಬ್ಲ್ಯೂಡಿಎಸ್ 2022 ರಲ್ಲಿ ಪ್ರದರ್ಶಿಸಲಾಗುವುದು. ಈ ಶೃಂಗಸಭೆಯು ಭಾರತೀಯ ಹೈನುಗಾರರಿಗೆ ಜಾಗತಿಕ ಉತ್ತಮ ರೂಢಿಗಳಿಗೆ ತೆರೆದುಕೊಳ್ಳಲು ನೆರವಾಗುತ್ತದೆ.
*****
Speaking at inauguration of International Dairy Federation World Dairy Summit 2022 in Greater Noida. https://t.co/yGqQ2HNMU4
— Narendra Modi (@narendramodi) September 12, 2022
डेयरी सेक्टर का सामर्थ्य ना सिर्फ ग्रामीण अर्थव्यवस्था को गति देता है बल्कि ये दुनिया भर में करोड़ों लोगों की आजीविका का भी प्रमुख साधन है: PM @narendramodi
— PMO India (@PMOIndia) September 12, 2022
विश्व के अन्य विकसित देशों से अलग, भारत में डेयरी सेक्टर की असली ताकत छोटे किसान हैं।
— PMO India (@PMOIndia) September 12, 2022
भारत के डेयरी सेक्टर की पहचान “mass production” से ज्यादा “production by masses” की है: PM @narendramodi
आज भारत में Dairy Cooperative का एक ऐसा विशाल नेटवर्क है जिसकी मिसाल पूरी दुनिया में मिलना मुश्किल है।
— PMO India (@PMOIndia) September 12, 2022
ये डेयरी कॉपरेटिव्स देश के दो लाख से ज्यादा गांवों में, करीब-करीब दो करोड़ किसानों से दिन में दो बार दूध जमा करती हैं और उसे ग्राहकों तक पहुंचाती हैं: PM @narendramodi
इस पूरी प्रकिया में बीच में कोई मिडिल मैन नहीं होता, और ग्राहकों से जो पैसा मिलता है, उसका 70 प्रतिशत से ज्यादा किसानों की जेब में ही जाता है।
— PMO India (@PMOIndia) September 12, 2022
पूरे विश्व में इतना ज्यादा Ratio किसी और देश में नहीं है: PM @narendramodi
भारत के डेयरी सेक्टर में Women Power 70% workforce का प्रतिनिधित्व करती है।
— PMO India (@PMOIndia) September 12, 2022
भारत के डेयरी सेक्टर की असली कर्णधार Women हैं, महिलाएं हैं।
इतना ही नहीं, भारत के डेयरी कॉपरेटिव्स में भी एक तिहाई से ज्यादा सदस्य महिलाएं ही हैं: PM @narendramodi
2014 के बाद से हमारी सरकार ने भारत के डेयरी सेक्टर के सामर्थ्य को बढ़ाने के लिए निरंतर काम किया है।
— PMO India (@PMOIndia) September 12, 2022
आज इसका परिणाम Milk Production से लेकर किसानों की बढ़ी आय में भी नजर आ रहा है: PM @narendramodi
2014 में भारत में 146 मिलियन टन दूध का उत्पादन होता था।
— PMO India (@PMOIndia) September 12, 2022
अब ये बढ़कर 210 मिलियन टन तक पहुंच गया है। यानि करीब-करीब 44 प्रतिशत की वृद्धि: PM @narendramodi
भारत, डेयरी पशुओं का सबसे बड़ा डेटाबेस तैयार कर रहा है। डेयरी सेक्टर से जुड़े हर पशु की टैगिंग हो रही है।
— PMO India (@PMOIndia) September 12, 2022
आधुनिक टेक्नोल़ॉजी की मदद से हम पशुओं की बायोमीट्रिक पहचान कर रहे हैं। हमने इसे नाम दिया है- पशु आधार: PM @narendramodi
खेती में मोनोकल्चर ही समाधान नहीं है, बल्कि विविधता बहुत आवश्यकता है।
— PMO India (@PMOIndia) September 12, 2022
ये पशुपालन पर भी लागू होता है।
इसलिए आज भारत में देसी नस्लों और हाइब्रिड नस्लों, दोनों पर ध्यान दिया जा रहा है: PM @narendramodi
भारत में हम पशुओं के यूनिवर्सल वैक्सीनेशन पर भी बल दे रहे हैं।
— PMO India (@PMOIndia) September 12, 2022
हमने संकल्प लिया है कि 2025 तक हम शत प्रतिशत पशुओं को फुट एंड माउथ डिजीज़ और ब्रुसलॉसिस की वैक्सीन लगाएंगे।
हम इस दशक के अंत तक इन बीमारियों से पूरी तरह से मुक्ति का लक्ष्य लेकर चल रहे हैं: PM @narendramodi
पिछले कुछ समय में भारत के अनेक राज्यों में Lumpy नाम की बीमारी से पशुधन की क्षति हुई है।
— PMO India (@PMOIndia) September 12, 2022
विभिन्न राज्य सरकारों के साथ मिलकर केंद्र सरकार इसे कंट्रोल करने की कोशिश कर रही है।
हमारे वैज्ञानिकों ने Lumpy Skin Disease की स्वदेशी vaccine भी तैयार कर ली है: PM @narendramodi
The strength of India’s dairy sector are the small farmers. pic.twitter.com/1yD04xoNKA
— Narendra Modi (@narendramodi) September 12, 2022
A vibrant cooperatives sector has contributed to India’s strides in the dairy sector. pic.twitter.com/qlqKznOjqo
— Narendra Modi (@narendramodi) September 12, 2022
When the dairy sector flourishes, women empowerment is furthered. pic.twitter.com/RveQA19kny
— Narendra Modi (@narendramodi) September 12, 2022
भारत के पास गाय और भैंस की जो स्थानीय नस्लें हैं, वो कठिन से कठिन मौसम में भी Survive करने के लिए जानी जाती हैं। गुजरात की बन्नी भैंस इसका एक बेहतरीन उदाहरण है। pic.twitter.com/Rhi12A0cCW
— Narendra Modi (@narendramodi) September 12, 2022
हमारी सरकार ने देश के डेयरी सेक्टर के सामर्थ्य को बढ़ाने के लिए निरंतर काम किया है। सिंगल यूज प्लास्टिक बंद करने का जो अभियान चलाया गया है, उसमें पशुधन का कल्याण भी निहित है। pic.twitter.com/SnmJrjhoPr
— Narendra Modi (@narendramodi) September 12, 2022
विभिन्न राज्य सरकारों के साथ मिलकर केंद्र सरकार पशुधन को नुकसान पहुंचाने वाली लंपी बीमारी को कंट्रोल करने की कोशिश कर रही है। pic.twitter.com/4y5dw6i4i7
— Narendra Modi (@narendramodi) September 12, 2022
The Government of India is working with the states to control Lumpy Skin Disease among cattle. Our efforts also include developing a vaccine for it. pic.twitter.com/Vr309mARwy
— Narendra Modi (@narendramodi) September 12, 2022