Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗೌರವಾನ್ವಿತ ಸುಲ್ತಾನ್ ಖಾಬೂಸ್ ಬಿನ್ ಸೈಯದ್ ಅಲ್ ಸೈಯದ್ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗೌರವಾನ್ವಿತ ಸುಲ್ತಾನ್ ಖಾಬೂಸ್ ಬಿನ್ ಸೈಯದ್ ಅಲ್ ಸೈಯದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ದೊರೆ ಸುಲ್ತಾನ್ ಖಾಬೂಸ್ ಬಿನ್ ಸೈಯದ್ ಅಲ್ ಸೈಯದ್, ಅವರ ನಿಧನದ ಸುದ್ದಿ ಕೇಳಿ ನನಗೆ ತೀವ್ರ ದುಃಖವಾಗಿದೆ, ಅವರು ದೂರದೃಷ್ಟಿಯಿದ್ದ ಒಬ್ಬ ನಾಯಕರಾಗಿದ್ದರು ಮತ್ತು ಒಮನ್ ರಾಷ್ಟ್ರವನ್ನು ಆಧುನಿಕ ಮತ್ತು ಶ್ರೀಮಂತ ರಾಷ್ಟ್ರವನ್ನಾಗಿ ಪರಿವರ್ತಿಸಿದ ದಿಗ್ಗಜರು. ಅವರು ನಮ್ಮ ಪ್ರಾಂತ್ಯದಲ್ಲಿ ಮತ್ತು ಜಗತ್ತಿನಲ್ಲಿ ಶಾಂತಿಯ ಧ್ಯೋತಕವಾಗಿದ್ದರು”.

“ಸುಲ್ತಾನ್ ಖಾಬೂಸ್ ಅವರು ಭಾರತದ ನಿಜವಾದ ಸ್ನೇಹಿತರಾಗಿದ್ದರು, ಭಾರತ ಮತ್ತು ಒಮನ್ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಬೆಳವಣಿಗೆಗೆ ಬಲಿಷ್ಠ ನಾಯಕತ್ವ ಒದಗಿಸಿದ್ದರು. ಅವರಿಂದ ನಾನು ಪಡೆದ ಆತ್ಮೀಯತೆ ಮತ್ತು ಪ್ರೀತಿಯನ್ನು ನಾನು ಸದಾ ಸ್ಮರಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ” ಎಂದು ಪ್ರಧಾನಮಂತ್ರಿ ಹೇಳಿದರು.