ಪ್ರಧಾನಿ ನರೇಂದ್ರ ಮೋದಿ ಅವರು ಗೌರವಾನ್ವಿತ ನ್ಯೂಜಿಲ್ಯಾಂಡ್ ಪ್ರಧಾನಿ ಕುಮಾರಿ ಜಸಿಂಡಾ ಅರ್ಡೆರ್ನ್ ಅವರನ್ನು ಸೆಪ್ಟೆಂಬರ್ 25, 2019 ರಂದು ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಭೇಟಿಯಾದರು.
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು ಮತ್ತು ರಾಜಕೀಯ, ಆರ್ಥಿಕ, ರಕ್ಷಣೆ, ಭದ್ರತೆ ಮತ್ತು ಜನರ ನಡುವಿನ ಸಂಬಂಧಗಳನ್ನು ತೀವ್ರಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು. ನವೆಂಬರ್ 2017 ರಲ್ಲಿ ಮನಿಲಾದಲ್ಲಿ ತಮ್ಮ ಹಿಂದಿನ ಭೇಟಿಯನ್ನು ಅವರು ನೆನಪಿಸಿಕೊಂಡರು ಮತ್ತು 2016 ರ ಅಕ್ಟೋಬರ್ನಲ್ಲಿ ನ್ಯೂಜಿಲ್ಯಾಂಡ್ ನ ಮಾಜಿ ಪ್ರಧಾನ ಮಂತ್ರಿ ಭಾರತಕ್ಕೆ ಭೇಟಿ ನೀಡಿದ ನಂತರ, ಹೊಸ ಸಾಂಸ್ಥಿಕ ಕಾರ್ಯವಿಧಾನಗಳನ್ನು ಸ್ಥಾಪಿಸಲಾಗಿದೆ, ಇದು ದ್ವಿಪಕ್ಷೀಯ ಸಂಬಂಧಗಳನ್ನು ಗಣನೀಯವಾಗಿ ಹೆಚ್ಚಿಸಿದೆ. 24 ಸೆಪ್ಟೆಂಬರ್ 2019 ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಸಂದರ್ಭದಲ್ಲಿ ನಡೆದ “ಸಮಕಾಲೀನ ಸಂದರ್ಭದಲ್ಲಿ ಗಾಂಧಿಯವರ ಪ್ರಸ್ತುತತೆ”.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಪ್ರಧಾನಿ ಅರ್ಡೆರ್ನ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು.
ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿಯವರು ಪ್ರಧಾನಿ ಮೋದಿಯವರಿಗೆ ತಮ್ಮ “ಇಂಡಿಯಾ 2022- ಸಂಬಂಧದಲ್ಲಿ ಹೂಡಿಕೆ” ಹೊಸ ಕಾರ್ಯತಂತ್ರದ ಬಗ್ಗೆ ಮಾಹಿತಿ ನೀಡಿದರು, ಇದು ನ್ಯೂಜಿಲ್ಯಾಂಡ್ ಇಂಕ್ ಇಂಡಿಯಾ ಸ್ಟ್ರಾಟಜಿ 2011 ರ ಮುಂದುವರಿಕೆಯಾಗಿದೆ. ನ್ಯೂಜಿಲ್ಯಾಂಡ್ ನಲ್ಲಿರುವ ಭಾರತೀಯ ವಲಸೆಗಾರರು ಮತ್ತು ವಿದ್ಯಾರ್ಥಿಗಳು ಎರಡೂ ದೇಶಗಳ ನಡುವಿನ ಪ್ರಮುಖ ಸೇತುವೆ ಮತ್ತು ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧಗಳಿಗೆ ಕೊಡುಗೆ ನೀಡುತ್ತವೆ.ಎಂದು ಪ್ರಧಾನಿ ಅರ್ಡೆರ್ನ್ ಹೇಳಿದರು.
ಅಂತರರಾಷ್ಟ್ರೀಯ ಭಯೋತ್ಪಾದನೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದರು. ಈ ವಿಷಯದ ಬಗ್ಗೆ ಉಭಯ ದೇಶಗಳ ನಡುವಿನ ಅಭಿಪ್ರಾಯಗಳ ಒಮ್ಮತವನ್ನು ಶ್ಲಾಘಿಸಿದರು. ಪುಲ್ವಾಮಾ ಮತ್ತು ಕ್ರೈಸ್ಟ್ ಚರ್ಚ್ ಭಯೋತ್ಪಾದಕ ದಾಳಿಯನ್ನು ಉಭಯ ದೇಶಗಳು ತೀವ್ರವಾಗಿ ಖಂಡಿಸಿವೆ ಮತ್ತು ಪರಸ್ಪರ ಬೆಂಬಲ ನೀಡಿವೆ. ಕ್ರೈಸ್ಟ್ ಚರ್ಚ್ ಕಾಲ್ ಆಫ್ ಆಕ್ಷನ್ ಕುರಿತು ನ್ಯೂಜಿಲೆಂಡ್ ಫ್ರೆಂಚ್ ಜಂಟಿ ಉಪಕ್ರಮವನ್ನು ಭಾರತ ಬೆಂಬಲಿಸಿತ್ತು.
Prime Ministers @narendramodi and @jacindaardern held talks in New York. Both leaders discussed key sectors of India-New Zealand cooperation, particularly ways to boost business ties. pic.twitter.com/fJVwbXwoY1
— PMO India (@PMOIndia) September 26, 2019
Had an excellent meeting with PM @jacindaardern. Her presence at the event hosted by India at the @UN was a great gesture too.
— Narendra Modi (@narendramodi) September 26, 2019
During our talks today we reviewed the full range of ties between India and New Zealand, which would benefit our citizens. pic.twitter.com/zCcSYCTund