Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

 ಗೂಗಲ್ ಸಿಇಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಶ್ರೀ ಸುಂದರ್ ಪಿಚೈ ಅವರನ್ನು ಪ್ರಧಾನಿಗಳು‌ ಭೇಟಿ ಮಾಡಿದರು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೂಗಲ್ ಸಿಇಒ ಶ್ರೀ ಸುಂದರ್ ಪಿಚೈ ಅವರನ್ನು ಭೇಟಿ ಮಾಡಿ  ಇತರ ವಿಷಯಗಳ ಜೊತೆಗೆ ನಾವೀನ್ಯತೆ ಮತ್ತು ತಂತ್ರಜ್ಞಾನದ ಕುರಿತು ಅವರೊಂದಿಗೆ ಚರ್ಚಿಸಿದರು.

ಸುಂದರ್ ಪಿಚೈ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಿಗಳು ಟ್ವೀಟ್ ಮಾಡಿದ್ದು‌ ಹೀಗೆ: 

“ಸುಂದರ್ ಪಿಚೈ ಅವರನ್ನು ಭೇಟಿ ಮಾಡಿ ಮತ್ತು ಅವರೊಂದಿಗೆ  ನಾವೀನ್ಯತೆ, ತಂತ್ರಜ್ಞಾನ ಮತ್ತು ಹೆಚ್ಚಿನದನ್ನು ಚರ್ಚಿಸಿದ್ದು  ಸಂತೋಷವಾಯಿತು. ಮಾನವನ ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ತಂತ್ರಜ್ಞಾನವನ್ನು ಹತೋಟಿಗೆ ತರಲು ಜಗತ್ತು ಒಗ್ಗಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದು ಮುಖ್ಯವಾಗಿದೆ.

*****