Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುರುದ್ವಾರ ಬೆರ್ ಸಾಹಿಬ್ ನಲ್ಲಿ ಪ್ರಧಾನ ಮಂತ್ರಿ ಪ್ರಾರ್ಥನೆ ಸಲ್ಲಿಸಿದರು


ಪ್ರಧಾನಿ ನರೇಂದ್ರ ಮೋದಿ ಅವರು ಸುಲ್ತಾನಪುರ ಲೋಧಿಯ ಗುರುದ್ವಾರ ಬೆರ್ ಸಾಹಿಬ್ ನಲ್ಲಿ ಇಂದು ನಮಸ್ಕರಿಸಿದರು. ಪ್ರಧಾನಮಂತ್ರಿಯವರೊಂದಿಗೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾದ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ಯ, ಪಂಜಾಬ್ ರಾಜ್ಯಪಾಲರಾದ ವಿ.ಪಿ. ಸಿಂಗ್ ಬದ್ನೋರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರವರು ಇದ್ದರು

ಗುರುದ್ವಾರದ ಮುಖ್ಯ ಆವರಣದೊಳಗೆ ಪ್ರಧಾನ ಮಂತ್ರಿಯವರು ಪ್ರಾರ್ಥನೆ ಸಲ್ಲಿಸಿದರು ಮತ್ತು ಅರ್ಚಕರು ಶಾಲು ನೀಡಿದರು. ಮೋದಿಯವರನ್ನು ಆವರಣದ ವೀಕ್ಷಣೆಗೆ ಕರೆದೊಯ್ಯಲಾಯಿತು ಮತ್ತು ಅವರು ಬೆರ್ ಮರಕ್ಕೆ ಭೇಟಿ ನೀಡಿದರು, ಅದರ ಅಡಿಯಲ್ಲಿ ಶ್ರೀ ಗುರುನಾನಕ್ ದೇವ್ ಜಿ 14 ವರ್ಷಗಳಿಂದ ಧ್ಯಾನ ಮಡಿರುವರು ಎಂದು ಹೇಳಲಾಗುತ್ತದೆ.

ಭೇಟಿಯನಂತರ ಪ್ರಧಾನ ಮಂತ್ರಿಯವರು ಡೇರಾ ಬಾಬಾ ನಾನಕ್‌ಗೆ ತೆರಳಿದರು, ಅಲ್ಲಿ ಅವರು ಪ್ರಯಾಣಿಕರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸುತ್ತಾರೆ ಮತ್ತು ಕರ್ತಾರ್‌ಪುರಕ್ಕೆ ಭಕ್ತರ ಮೊದಲ ಜಾಥಾದ ಪ್ರಾರಂಭಕ್ಕೆ ಚಾಲನೆ ನೀಡುತ್ತಾರೆ