Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನ ಲಖ್ಪತ್ ಸಾಹೀಬ್ ನಲ್ಲಿ ಗುರು ನಾನಕ್ ದೇವ್ ಜಿ ಅವರ ಗುರುಪುರಬ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಗುಜರಾತ್  ನ ಲಖ್ಪತ್ ಸಾಹೀಬ್ ನಲ್ಲಿ ಗುರು ನಾನಕ್ ದೇವ್ ಜಿ ಅವರ ಗುರುಪುರಬ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಗುಜರಾತ್ ನ ಲಖ್ಪತ್ ಸಾಹಿಬ್ ಅವರ ಗುರುದ್ವಾರದಲ್ಲಿ ಇಂದು ಗುರು ನಾನಕ್ ದೇವ್ ಜಿ ಅವರ ಗುರುಪುರಬ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು.

ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುರುದ್ವಾರ ಲಖ್ಪತ್ ಸಾಹಿಬ್ ಕಾಲದ ಚಲನೆಗೆ ಸಾಕ್ಷಿಯಾಗಿದೆ. ಲಖ್ಪತ್ ನ ಸಾಹಿಬ್ ಅವರು ಈ ಹಿಂದೆ ಹೇಗೆ ಏರುಪೇರುಗಳನ್ನು ಕಂಡಿದ್ದರು ಎಂಬುದನ್ನು ಸ್ಮರಿಸಿಕೊಳ್ಳಬೇಕಾಗಿದೆ. ಒಂದು ಕಾಲದಲ್ಲಿ ಇದು ಬೇರೆ ದೇಶಗಳಿಗೆ ತೆರಳಲು ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. 2001 ರಲ್ಲಿ ಭೂಕಂಪನವಾದಾಗ ಗುರುಗಳ ಅನುಗ್ರಹದಿಂದ ಈ ಪವಿತ್ರ ಸ್ಥಳದಲ್ಲಿ ಕೆಲಸ ಮಾಡುವ ಅವಕಾಶ ತಮಗೆ ದೊರೆತಿತ್ತು ಎಂದು ಹೇಳಿದ ಪ್ರಧಾನಮಂತ್ರಿಯವರು ಆಗ ದೇಶದ ಪ್ರಮುಖ ಕುಶಲಕರ್ಮಿಗಳು ಈ ಸ್ಥಳದ ಮೂಲ ವೈಭವವನ್ನು ಮರು ಸ್ಥಾಪಿಸಿದ್ದನ್ನು ಸ್ಮರಿಸಿಕೊಂಡರು. ಪ್ರಾಚೀನ ಬರವಣಿಗೆಯ ಶೈಲಿಯ ಮೂಲಕ ಇಲ್ಲಿನ ಗೋಡೆಗಳ ಮೇಲೆ ಗುರುವಾಣಿಯನ್ನು ಕೆತ್ತಲಾಗಿದೆ. ಈ ಯೋಜನೆ ಯುನೆಸ್ಕೋದಿಂದ ಗೌರವಕ್ಕೆ ಪಾತ್ರವಾಗಿದೆ ಎಂದರು.

ಮಹಾನ್ ಗುರು ಸಾಹಿಬ್ ಅವರ ಕೃಪೆಯಿಂದ ಸರ್ಕಾರ ಗುರು ಗೋವಿಂದ್ ಸಿಂಗ್ ಅವರ 350 ನೇ ವರ್ಷಾಚರಣೆ ಮತ್ತು ಗುರುನಾನಕ್ ದೇವ್ ಅವರ 550 ವರ್ಷದ ಪ್ರಕಾಶ್ ಪುರಬ್ ಹಾಗೂ ಗುರು ತೇಜ್ ಬಹಾದ್ದೂರ್ ಜಿ ಅವರ 400 ವರ್ಷದ ಪ್ರಕಾಶ್ ಉತ್ಸವದಂತಹ ಶುಭ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಿತಿಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಗುರು ನಾನಕ್ ದೇವ್ ಜಿ ಅವರ ಸಂದೇಶ ಹೊಸ ಶಕ್ತಿಯೊಂದಿಗೆ ಇಡೀ ಜಗತ್ತನ್ನು ತಲುಪಲು ಸರ್ಕಾರ ಪ್ರತಿ ಹಂತದಲ್ಲೂ ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದಶಕಗಳ ಕಾಲದಿಂದ ಕಾಯುತ್ತಿದ್ದ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಅನ್ನು 2019 ರಲ್ಲಿ ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಪ್ರಸ್ತುತ 400 ವರ್ಷಗಳ ಗುರು ತೇಜ್ ಬಹಾದ್ದೂರ್ ಜಿ ಅವರ ಪ್ರಕಾಶ್ ಉತ್ಸವ್ ಆಚರಿಸಲಾಗುತ್ತಿದೆ ಎಂದರು.

ತಡವಾಗಿಯಾದರೂ ಪೂಜ್ಯ ಗುರು ಸಾಹಿಬ್ ರ ಗ್ರಂಥ “ಸ್ವರೂಪ”ವನ್ನು ಅಪ್ಘಾನಿಸ್ತಾನದಿಂದ ಭಾರತಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಗುರುಕೃಪೆಯ ಅನುಭವ ಇದಕ್ಕಿಂತ ದೊಡ್ಡದು. ಕೆಲವು ತಿಂಗಳ ಹಿಂದೆ ಅಮೆರಿಕಾಗೆ ತೆರಳಿದ್ದಾಗ ಅಲ್ಲಿನ 150ಕ್ಕೂ ಹೆಚ್ಚು ಐತಿಹಾಸಿಕ ವಸ್ತುಗಳನ್ನು ಅಮೆರಿಕ ಭಾರತಕ್ಕೆ ಹಿಂದಿರುಗಿಸಿತ್ತು. ಅದರಲ್ಲಿ ಪೇಷ್ಕಾಬ್ಜ್ ಅಥವಾ ಸಣ್ಣ ಕತ್ತಿಯೂ ಇದೆ. ಅದರ ಮೇಲೆ ಹರಗೋವಿಂದ್ ಜಿ ಅವರ ಹೆಸರನ್ನು ಪರ್ಷಿಯನ್ ಭಾಷೆಯಲ್ಲಿ ಬರೆಯಲಾಗಿದೆ ಎಂದು ಹೇಳಿದರು.

ಖಾಲ್ಸಾ ಪಂಥ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಂಚ ಪ್ಯಾರೆಯವರ ನಾಲ್ಕನೇ ಗುರ್ಸೀಖ್ ಭಾಯಿ ಮೋಖಮ್ ಸಿಂಗ್ ಜಿ ಅವರು ಗುಜರಾತ್ ನವರು ಎಂಬುದು ಗುಜರಾತ್ ಗೆ ಯಾವಾಗಲೂ ಹೆಮ್ಮೆಯ ವಿಷಯವಾಗಿದೆ. ಅವರ ನೆನಪಿಗಾಗಿ ದೇವಭೂಮಿ ದ್ವಾರಕಾದಲ್ಲಿ ಗುರುದ್ವಾರ ಬೆಟ್ ದ್ವಾರಕ ಭಾಯಿ ಮೋಹ್ಕಮ್ ಸಿಂಗ್ ಕೇಂದ್ರವನ್ಉ ಅವರು ನಿರ್ಮಾಣ ಮಾಡಲಾಗಿದೆ ಎಂದರು.

ಆಕ್ರಮಣಕಾರರ ದಾಳಿಯ ಸಮಯದಲ್ಲಿ ಭಾರತೀಯ ಸಮಾಜಕ್ಕೆ ಶ್ರೇಷ್ಠ ಗುರು ಸಂಪ್ರದಾಯದ ಕೊಡುಗೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಸಮಾಜ ಅಸ್ಪಷ್ಟತೆ ಮತ್ತು ಒಡಕುಗಳಿಂದ ತುಂಬಿರುವಾಗ ಗುರು ನಾನಕ್ ದೇವ್ ಜಿ ಬ್ರಾತೃತ್ವದ ಸಂದೇಶದೊಂದಿಗೆ ಆಗಮಿಸಿದರು. ಅಂತೆಯೇ ಗುರು ಅರ್ಜುನ್ ದೇವ್ ಜಿ ಅವರು ಇಡೀ ದೇಶದ ಸಂತರ ಧ್ವನಿಯನ್ನು ಸಂಯೋಜಿಸುವ ಮೂಲಕ ದೇಶದಲ್ಲಿ ಏಕತೆಯ ಭಾವವನ್ನು ತುಂಬಿದರು. ಗುರು ಹರ್ಕಿಶನ್ ಜಿ ಅವರು ಮಾನವೀಯತೆಯ ಸೇವಾ ಮಾರ್ಗ ತೋರಿದರು. ಸಿಖ್ಖರು ಮತ್ತು ಮಾನವೀಯತೆಗೆ ಇದು ಮಾರ್ಗದರ್ಶನ ತೋರುತ್ತದೆ. ಗುರುನಾನಕ್ ದೇವ್ ಜಿ ಮತ್ತು ಅವರ ನಂತರ ನಮ್ಮ ವಿಭಿನ್ನ ಗುರುಗಳು ಭಾರತದ ಪ್ರಜ್ಞೆಯನ್ನು ಹೊತ್ತಿಸಿದ್ದು, ಭಾರತವನ್ನು ಸುರಕ್ಷಿತವಾಗಿಡಲು ದಾರಿ ತೋರಿಸಿದ್ದಾರೆ. ನಮ್ಮ ಗುರುಗಳ ಕೊಡುಗೆ ಸಮಾಜ ಮತ್ತು ಆಧ್ಮಾತಿಕತೆಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ರಾಷ್ಟ್ರ ಮತ್ತು ರಾಷ್ಟ್ರದ ಚಿಂತನೆ, ದೇಶದ ನಂಬಿಕೆ ಮತ್ತು ಸಮಗ್ರತೆ ಇಂದು ಸುರಕ್ಷಿತವಾಗಿದ್ದರೆ ಅದಕ್ಕೆ ಮೂಲ ಕಾರಣ ಸಿಖ್ ಗುರುಗಳ ಮಹಾನ್ ತಪಸ್ಸು ಎಂದು ಹೇಳಿದರು. ಗುರು ತೇಜ್ ಬಹಾದ್ದೂರ್ ಅವರ ಸಂಪೂರ್ಣ ಜೀವನ ರಾಷ್ಟ್ರ ಮೊದಲು ಎನ್ನುವ ಪರಿಲ್ಪನೆಗೆ ನಿದರ್ಶನವಾಗಿದೆ ಎಂದರು.  

ಗುರು ತೇಜ್ ಬಹಾದ್ದೂರ್ ಅವರು ಸದಾ ಕಾಲ ಮಾನವೀಯ ಕಳಕಳಿಯ ಪರ ನಿಂತಿದ್ದು, ಭಾರತದ ಆತ್ಮಕ್ಕೆ ತಮ್ಮ ದೃಷ್ಟಿಕೋನವನ್ನು ನೀಡಿದ್ದಾರೆ. ದೇಶ ಅವರಿಗೆ “ ಹಿಂದ್ ಕಿ ಚಾದರ್ “ ಎಂಬ ಬಿರುದು ನೀಡಿದ್ದು, ಇದು ಪ್ರತಿಯೊಬ್ಬ ಭಾರತೀಯರು ಅವರೊಂದಿಗೆ ಹೊಂದಿರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಗುರು ತೇಜ್ ಬಹಾದ್ದೂರ್ ಅವರ ಶೌರ್ಯ ಮತ್ತು ಔರಂಗಜೇಬ್ ವಿರುದ್ಧ ಅವರ ತ್ಯಾಗ ಭಯೋತ್ಪಾದನೆ ಮತ್ತು ಧಾರ್ಮಿಕ ಮತಾಂಧತೆ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದನ್ನು ನಮಗೆ ಕಲಿಸುತ್ತದೆ. ಹತ್ತನೇ ಗುರು ಗುರು ಗೋವಿಂದ್ ಸಿಂಗ್ ಸಾಹಿಬ್ ಅವರ ಜೀವನವೂ ಸಹ ಪ್ರತಿ ಹೆಜ್ಜೆಯಲ್ಲಿ ದೃಢತೆ ಮತ್ತು ತ್ಯಾಗದ ಜೀವಂತ ಉದಾಹರಣೆಯಾಗಿದೆ ಎಂದರು.  

ಬ್ರಿಟಿಷರ ಆಳ್ವಿಕೆ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಸಿಖ್ ಸಹೋದರರು ಮತ್ತು ಸಹೋದರಿಯರು ಹೋರಾಡಿದ ಶೌರ್ಯ, ನಮ್ಮ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಜಲಿಯನ್ ವಾಲಾಭಾಗ್ ನಂತರ ತ್ಯಾಗಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಈ ಸಂಪ್ರಾದಾಯ ಇನ್ನೂ ಜೀವಂತವಾಗಿದೆ. ನಾವು ಹಿಂದಿನದನ್ನು ನೆನಪಿಸಿಕೊಳ್ಳುತ್ತಿರುವಾಗ ಮತ್ತು ಸ್ಪೂರ್ತಿ ಪಡೆಯುತ್ತಿದ್ದು, “ಅಮೃತ ಮಹೋತ್ಸವ”ದ ಈ ಸಮಯದಲ್ಲಿ ಇದು ಹೆಚ್ಚು ಮಹತ್ವದ್ದಾಗಿದೆ ಎಂದು ಹೇಳಿದರು.  

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಕಛ್ ನಿಂದ ಕೊಹಿಮಾದವರೆಗೆ ಇಡೀ ದೇಶ ಒಟ್ಟಾಗಿ ಕನಸು ಕಾಣುತ್ತಿದೆ. ಅವುಗಳ ಸಾಧನೆಗಾಗಿ ಒಟ್ಟಾಗಿ ಶ್ರಮಿಸುತ್ತಿದೆ. ಇಂದು ದೇಶದ ಮಂತ್ರ ಎಂದರೆ – ಏಕ್ ಭಾರತ್ ಶ್ರೇಷ್ಠ ಭಾರತ್. ಇಂದು ರಾಷ್ಟ್ರದ ಗುರಿ ಎಂದರೆ ಸಮರ್ಥ ಭಾರತದ ನವ ಪುನರುತ್ಥಾನ, ರಾಷ್ಟ್ರದ ಇಂದಿನ ನೀತಿ ಎಂದರೆ ಪ್ರತಿಯೊಬ್ಬ ಬಡವರಿಗೆ ಸೇವೆ, ಪ್ರತಿಯೊಬ್ಬ ವಂಚಿತರಿಗೆ ಆದ್ಯತೆಯಾಗಿದೆ ಎಂದು ಹೇಳಿದರು.

ಕಛ್ ನ ರಾನ್ ಉತ್ಸವಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಭಕ್ತರನ್ನು ವಿನಂತಿಸಿದರು. ಕಛ್ ನಲ್ಲಿನ ಪರಿವರ್ತನೆ ಕಚ್ ಜನರ ದೂರದೃಷ್ಟಿ ಮತ್ತು ಅವರ ಕಠಿಣ ಪರಿಶ್ರಮಕ್ಕೆ ಕಾರಣವಾಗಿದೆ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿಯವರು, ಶ್ರೀ ವಾಜಪೇಯಿ ಅವರಿಗೆ ಕಛ್ ಮೇಲಿರುವ ಪ್ರೀತಿಯನ್ನು ಸ್ಮರಿಸಿದರು. “ಭೂಕಂಪನದ ನಂತರ ಇಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ನಿಂತಿತು ಎಂದು ಸ್ಮರಿಸಿಕೊಂಡರು.

ಗುಜರಾತ್ ನ ಲಖ್ಪತ್ ಸಾಹಿಬ್ ಗುರುದ್ವಾರದಲ್ಲಿ ಪ್ರತಿ ವರ್ಷ ಡಿಸೆಂಬರ್ 23 ರಿಂದ 25 ರ ವರೆಗೆ ಗುರುಪುರಬ್ ಆಚರಿಸಲಾಗುತ್ತದೆ. ತಮ್ಮ ಪ್ರವಾಸ ಸಂದರ್ಭದಲ್ಲಿ ಗುರು ನಾನಕ್ ದೇವ್ ಜಿ ಅವರು ಲಖ್ಪತ್ ಸಾಹಿಬ್ ಗುರುದ್ವಾರದಲ್ಲಿ ನೆಲಸುತ್ತಿದ್ದರು. ಲಖ್ಪತ್ ಸಾಹಿಬ್ ನ ಗುರುದ್ವಾರದಲ್ಲಿ ಮರದ ಪಾದರಕ್ಷೆಗಳು ಮತ್ತು ಪಾಲ್ಕಿ [ತೊಟ್ಟಿಲು] ಜತೆಗೆ ಗುರುಮುಖಿ ಹಸ್ತ ಪ್ರತಿಗಳು, ಲಿಪಿಗಳ ಗುರುತುಗಳ ಅವಶೇಷಗಳನ್ನು ಒಳಗೊಂಡಿದೆ.  

2001 ರಲ್ಲಿ ಭೂಕಂಪನವಾದಾಗ ಗುರುದ್ವಾರ ಹಾನಿಗೊಳಗಾಗಿತ್ತು. ಆಗಿನ ಮುಖ್ಯಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಹಾನಿಯನ್ನು ತ್ವರಿತವಾಗಿ ದುರಸ್ತಿ ಮಾಡಿದರು. ಗುರು ನಾನಕ್ ದೇವ್ ಜಿ ಅವರ 550 ನೇ ಪ್ರಕಾಶ್ ಪುರಬ್, ಗುರು ಗೋವಿಂದ್ ಸಿಂಗ್ ಜಿ ಅವರ 350 ನೇ ಪ್ರಕಾಶ್ ಪುರಬ್ ಮತ್ತು ಗುರು ತೇಜ್ ಬಹಾದ್ದೂರ್ ಸಿಂಗ್ ಜಿ ಅವರ 400 ನೇ ಪ್ರಕಾಶ್ ಪುರಬ್ ಕುರಿತ ನಂಬಿಕೆಯು ಬಗ್ಗೆ ಪ್ರಧಾನಮಂತ್ರಿಯವರಿಗೆ ಇವರ ಬಗ್ಗೆ ಇರುವ ಆಳವಾದ ಗೌರವವನ್ನು ತೋರುತ್ತದೆ.

***