Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನ ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

ಗುಜರಾತ್ ನ ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

ಗುಜರಾತ್ ನ ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

ಗುಜರಾತ್ ನ ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರ ಪುಣ್ಯ ತಿಥಿಯ ದಿನವಾದ ಇಂದು ಗುಜರಾತ್ ನ ನವಸಾರಿ ಜಿಲ್ಲೆಯ ದಂಡಿಯಲ್ಲಿ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದರು.

ಸ್ಮಾರಕ ಸ್ಥಳದಲ್ಲಿ, ಅವರು ಮಹಾತ್ಮಾಗಾಂಧಿ ಮತ್ತು ಬ್ರಿಟಿಷರ ಕಾನೂನು ಭಂಗ ಮಾಡಲು, ಸಮುದ್ರದ ನೀರಿನಿಂದ ಉಪ್ಪು ತಯಾರಿಸುವ ಸಲುವಾಗಿ 1930ರಲ್ಲಿ ಗಾಂಧಿ ಅವರೊಂದಿಗೆ ಐತಿಹಾಸಿಕ ದಂಡಿಯಾತ್ರೆಯಲ್ಲಿ ಪಾಲ್ಗೊಂಡ 80 ಸತ್ಯಾಗ್ರಹಿಗಳ ಪ್ರತಿಮೆಗಳನ್ನು ಅನಾವರಣ ಮಾಡಿದರು. ಈ ಸ್ಮಾರಕವು 1930ರ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದ ಗಾಥೆಗಳನ್ನು ಮತ್ತು ಘಟನೆಗಳನ್ನು ಸಾರುವ 24 ವಿವರಣಾತ್ಮಕ ಭಿತ್ತಿಚಿತ್ರಗಳನ್ನು ಒಳಗೊಂಡಿದೆ. ಸ್ಮಾರಕ ಸಮುಚ್ಚಯದ ವಿದ್ಯುತ್ ಅಗತ್ಯವನ್ನು ಪೂರೈಸಲು ಸೌರ ವೃಕ್ಷಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿಯವರು ಸ್ಮಾರಕದಲ್ಲಿ ಒಂದು ಸುತ್ತು ಹಾಕಿದರು.

ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸ್ಮಾರಕಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. “ಈ ಸ್ಮಾರಕವು ಸ್ವಾತಂತ್ರ್ಯಕ್ಕಾಗಿ ನಮ್ಮ ದೇಶದ ಜನರು ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸುವಂತೆ ಮಾಡುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು. ದಂಡಿ ಸ್ಮಾರಕವು ಮಹಾತ್ಮಾಗಾಂಧಿ ಅವರ ಸ್ವದೇಶೀಗಾಗಿ ಆಗ್ರಹ, ಸ್ವಚ್ಛಾಗ್ರಹ ಮತ್ತು ಸತ್ಯಾಗ್ರಹಗಳ ಆದರ್ಶಗಳನ್ನು ಒಳಗೊಂಡಿದೆ ಮತ್ತು ಇದು ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.

“ಗಾಂಧೀ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನವಾಗಿ ನಮ್ಮ ಸರ್ಕಾರ ಖಾದಿಗೆ ಸಂಬಂಧಿಸಿದ 2000 ಸಂಸ್ಥೆಗಳನ್ನು ಆಧುನೀಕರಿಸಿದೆ” ಎಂದರು. ಇದರಿಂದ ಲಕ್ಷಾಂತರ ಕುಶಲಕರ್ಮಿಗಳಿಗೆ ಮತ್ತು ಕಾರ್ಮಿಕರಿಗೆ ಉಪಯೋಗವಾಗಿದೆ. ಖಾದಿ ಇಂದು ಕೇವಲ ಫ್ಯಾಷನ್ ಹೇಳಿಕೆಯಾಗಿಲ್ಲ ಬದಲಾಗಿ ಮಹಿಳಾ ಸಬಲೀಕರಣದ ಸಂಕೇತವಾಗಿದೆ” ಎಂದರು. ಸ್ವದೇಶೀ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು. ಅದೇ ರೀತಿ ಕೈಮಗ್ಗ ಬಡತನದಿಂದ ಹೊರಬರಲು ಸಾಧನವಾಯಿತು. ಕೈಮಗ್ಗ ಪ್ರೋತ್ಸಾಹಿಸಲು, ಸರ್ಕಾರ ಪ್ರತಿವರ್ಷ ಆಗಸ್ಟ್ 7ನ್ನು ಕೈಮಗ್ಗದ ದಿನವೆಂದು ಆಚರಿಸುವಂತೆ ಘೋಷಣೆ ಮಾಡಿದೆ ಎಂದು ಪ್ರಧಾನಿ ತಿಳಿಸಿದರು.

ಸ್ವಚ್ಛತೆಗೆ ಗಾಂಧೀಜಿ ಅವರು ಹಾಕಿಕೊಟ್ಟ ಮುಂದಾಳತ್ವದ ಮಹತ್ವ ಒತ್ತಿ ಹೇಳಿದ ಪ್ರಧಾನಮಂತ್ರಿ, ಸ್ವಚ್ಛ ಭಾರತಕ್ಕಾಗಿ ನಾವು ಆ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಸ್ವಚ್ಛಭಾರತ ಅಭಿಯಾನದ ಪರಿಣಾಮವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಹೆಚ್ಚಿದೆ. 2014ರಲ್ಲಿ ಕೇವಲ ಶೇಕಡ 38ರಷ್ಟಿದ್ದ ಪ್ರಮಾಣ ಎನ್.ಡಿ.ಎ. ಸರ್ಕಾರದ ಆಡಳಿತದಲ್ಲಿ ಶೇ.98 ಆಗಿದೆ ಎಂದರು.

ಸ್ವಚ್ಛ ಅಡುಗೆ ಇಂಧನದಿಂದ ವಿದ್ಯುತ್ವರೆಗೆ ಮತ್ತು ಆರೋಗ್ಯ ಆರೈಕೆಯಿಂದ ಹಣಕಾಸು ಸೇವೆಗಳವರೆಗೆ ಗ್ರಾಮಗಳಿಗೆ ಮೂಲಭೂತ ಸೌಕರ್ಯ ತರುವ ತಮ್ಮ ಪ್ರಯತ್ನವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಗಳು, ಇದು ನಮ್ಮ ಅಭಿಯಾನದ ಮತ್ತು ಗ್ರಾಮೋದಯದಿಂದ ಭಾರತದ ಉದಯದವರೆಗಿನ ಕಲ್ಪನೆಯ ದಾರಿಯಲ್ಲಿದೆ ಎಂದರು.

ಪ್ರಧಾನಮಂತ್ರಿಯವರು ದಿನವಿಡೀ ಗುಜರಾತ್ ಭೇಟಿಯಲ್ಲಿದ್ದಾರೆ. ಇಂದು ಬೆಳಗ್ಗೆ ಪ್ರಧಾನಮಂತ್ರಿಯವರು ಸೂರತ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ವಿಸ್ತರಣೆಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಸೂರತ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಅವರು ಸೂರತ್ ನ ಸುಸಜ್ಜಿತ ರಸೀಲಾಬೆನ್ ಸೇವಂತಿಲಾಲ್ ವೀನಸ್ ಆಸ್ಪತ್ರೆಯನ್ನು ದೇಶಕ್ಕೆ ಸಮರ್ಪಿಸಿದರು. ಸೂರತ್ ನಲ್ಲಿ ಪ್ರಧಾನಮಂತ್ರಿಯವರು ನವ ಭಾರತ ಯುವ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದರು.