ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರು ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರಗಿದ ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ನೇ ಸ್ಮರಣಾರ್ಥ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ವೀಕ್ಷಿಸಿದರು.
ಆಸ್ಟ್ರೇಲಿಯಾ ದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯವರು ಈ ರೀತಿ ಟ್ವೀಟ್ ಮಾಡಿದ್ದಾರೆ:
“ಕ್ರಿಕೆಟ್, ಭಾರತ ಮತ್ತು ಆಸ್ಟ್ರೇಲಿಯಾದ ಜನತೆಯ ಸಾಮಾನ್ಯ ಉತ್ಸಾಹವಾಗಿದೆ! ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ಕೆಲವು ಕ್ಷಣಗಳನ್ನು ವೀಕ್ಷಿಸಲು ನನ್ನ ಉತ್ತಮ ಸ್ನೇಹಿತ, ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರೊಂದಿಗೆ ಅಹಮದಾಬಾದ್ ನಲ್ಲಿರುವುದಕ್ಕೆ ಸಂತೋಷವಾಗಿದೆ. ಇದು ಒಂದು ರೋಮಾಂಚಕಾರಿ ಆಟ ಎಂದು ನನಗೆ ಖಾತ್ರಿಯಿದೆ! ”
ಅಹಮದಾಬಾದ್ ನಿಂದ ಟೆಸ್ಟ್ ಪಂದ್ಯದ ಝಲಕ್ ಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು , ಈ ರೀತಿ ಟ್ವೀಟ್ ಮಾಡಿದ್ದಾರೆ:
“ಅಹಮದಾಬಾದ್ ನಿಂದ ಕ್ರಿಕೆಟ್ ಆಟದ ಇನ್ನೂ ಕೆಲವು ನೋಟಗಳು ಇಲ್ಲಿವೆ! ”
ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಟ್ವೀಟ್ ಮಾಡಿದೆ:
“ಕ್ರಿಕೆಟ್ ಮೂಲಕ ಸ್ನೇಹವನ್ನು ಆಚರಿಸಲಾಗುತ್ತಿದೆ!
ಅಹಮದಾಬಾದ್ ನಲ್ಲಿ ನಡೆದ #INDvsAUS ಪಂದ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಆಂಥೋನಿ ಅಲ್ಬನೀಸ್ ವೀಕ್ಷಿಸಿದ್ದಾರೆ.
ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರು ಆಗಮಿಸಿದ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಶ್ರೀ ಜಯ್ ಶಾ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಶ್ರೀ ರೋಜರ್ ಬಿನ್ನಿ, ಕ್ರಮವಾಗಿ ಅವರನ್ನು ಸನ್ಮಾನಿಸಿದರು. ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರು ಗಾಯಕಿ ಶ್ರೀಮತಿ ಫಾಲ್ಗುಯಿ ಶಾ ಅವರ ಯೂನಿಟಿ ಆಫ್ ಸಿಂಫನಿ ಸಾಂಸ್ಕೃತಿಕ ಪ್ರದರ್ಶನ ವೀಕ್ಷಿಸಿದರು.
ಪ್ರಧಾನಮಂತ್ರಿಯವರು ಟೀಂ ಇಂಡಿಯಾದ ನಾಯಕ ಶ್ರೀ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ಕ್ಯಾಪ್ ಅನ್ನು ಹಸ್ತಾಂತರಿಸಿದರೆ, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರು ಆಸ್ಟ್ರೇಲಿಯಾದ ನಾಯಕ ಶ್ರೀ ಸ್ಟೀವ್ ಸ್ಮಿತ್ ಅವರಿಗೆ ಟೆಸ್ಟ್ ಕ್ಯಾಪ್ ಅನ್ನು ಹಸ್ತಾಂತರಿಸಿದರು. ತದನಂತರ, ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಮುಂದೆ ಗಾಲ್ಫ್ ಕೋರ್ಟ್ ನಲ್ಲಿ ಗೌರವ ರಕ್ಷೆ ಸ್ವೀಕರಿಸಿದರು.
ಎರಡು ತಂಡದ ನಾಯಕರು ಟಾಸ್ ಗಾಗಿ ಪಿಚ್ಗೆ ತೆರಳಿದರು, ಹಾಗೂ ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರು “ಫ್ರೆಂಡ್ಶಿಪ್ ಹಾಲ್ ಆಫ್ ಫೇಮ್” ವೀಕ್ಷಿಸಲು ತೆರಳಿದರು. ಭಾರತ ತಂಡದ ಮಾಜಿ ಕೋಚ್ ಮತ್ತು ಆಟಗಾರ ಶ್ರೀ ರವಿಶಾಸ್ತ್ರಿ ಅವರು ಎರಡೂ ರಾಷ್ಟ್ರಗಳ ಪ್ರಧಾನಮಂತ್ರಿಗಳಿಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ತದನಂತರ ತಂಡದ ನಾಯಕರು ಎರಡೂ ರಾಷ್ಟ್ರಗಳ ಪ್ರಧಾನಮಂತ್ರಿಗಳೊಂದಿಗೆ ಆಟದ ಮೈದಾನಕ್ಕೆ ಬಂದರು. ಇಬ್ಬರು ನಾಯಕರು ಆಯಾ ಪ್ರಧಾನಮಂತ್ರಿಗಳಿಗೆ ತಂಡವನ್ನು ಪರಿಚಯಿಸಿದರು ಮತ್ತು ನಂತರ ಭಾರತ ಹಾಗೂ ಆಸ್ಟ್ರೇಲಿಯಾದ ರಾಷ್ಟ್ರಗೀತೆಯನ್ನು ಹಾಡಲಾಯಿತು. ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಇಬ್ಬರು ಕ್ರಿಕೆಟ್ ದಿಗ್ಗಜರ ನಡುವಿನ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ತೆರಳಿದರು.
****
Cricket, a common passion in India and Australia! Glad to be in Ahmedabad with my good friend, PM @AlboMP to witness parts of the India-Australia Test Match. I am sure it will be an exciting game! https://t.co/XvwU0XCbJf pic.twitter.com/JwJecwUkHi
— Narendra Modi (@narendramodi) March 9, 2023
Some more glimpses from Ahmedabad. It is cricket all over! pic.twitter.com/K8YCx0Iaz7
— Narendra Modi (@narendramodi) March 9, 2023
A memorable morning in Ahmedabad! More power to the India-Australia friendship. pic.twitter.com/xdT0j8o1qm
— Narendra Modi (@narendramodi) March 9, 2023
Celebrating friendship through cricket!
— PMO India (@PMOIndia) March 9, 2023
Prime Ministers @narendramodi and @AlboMP watch parts of #INDvsAUS match in Ahmedabad. pic.twitter.com/EmIy4ifC82