Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಗುಜರಾತ್ ನ ಅಹಮದಾಬಾದ್ನಲ್ಲಿರುವ ಸೈನ್ಸ್ ಸಿಟಿಗೆ ಪ್ರಧಾನಮಂತ್ರಿ ಭೇಟಿ ನೀಡಿದರು

​​​​​​​ಗುಜರಾತ್ ನ ಅಹಮದಾಬಾದ್ನಲ್ಲಿರುವ ಸೈನ್ಸ್ ಸಿಟಿಗೆ ಪ್ರಧಾನಮಂತ್ರಿ ಭೇಟಿ ನೀಡಿದರು

​​​​​​​ಗುಜರಾತ್ ನ ಅಹಮದಾಬಾದ್ನಲ್ಲಿರುವ ಸೈನ್ಸ್ ಸಿಟಿಗೆ ಪ್ರಧಾನಮಂತ್ರಿ ಭೇಟಿ ನೀಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ನ ಅಹಮದಾಬಾದ್ನಲ್ಲಿರುವ ಸೈನ್ಸ್ ಸಿಟಿಗೆ ಭೇಟಿ ನೀಡಿದರು. ಅವರು ರೋಬೋಟಿಕ್ಸ್ ಗ್ಯಾಲರಿ, ನೇಚರ್ ಪಾರ್ಕ್, ಅಕ್ವಾಟಿಕ್ ಗ್ಯಾಲರಿ ಮತ್ತು ಶಾರ್ಕ್ ಟನಲ್ ಅನ್ನು ವೀಕ್ಷಿಸಿದರು ಮತ್ತು ಈ ಸಂದರ್ಭದಲ್ಲಿ ಪ್ರದರ್ಶನ ಕೂಡ ವೀಕ್ಷಿಸಿದರು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಧಾನ ಮಂತ್ರಿ ಸರಣಿ ಪೋಸ್ಟ್ ಮಾಡಿದ್ದಾರೆ..

“ಗುಜರಾತ್ ಸೈನ್ಸ್ ಸಿಟಿಯಲ್ಲಿನ ಆಕರ್ಷಕ ಆಕರ್ಷಣೆಗಳನ್ನು ಅನ್ವೇಷಿಸಲು ಬೆಳಿಗ್ಗೆ ಒಂದು ಘಳಿಗೆಯನ್ನು ಅಲ್ಲಿ ಕಳೆಯಲಾಯಿತು. ರೊಬೊಟಿಕ್ಸ್ ಗ್ಯಾಲರಿಯೊಂದಿಗೆ ನನ್ನ ದರ್ಶನ ಪ್ರಾರಂಭವಾಯಿತು, ಅಲ್ಲಿ ರೊಬೊಟಿಕ್ಸ್ ನ ಅಪಾರ ಸಾಮರ್ಥ್ಯವನ್ನು ಅದ್ಭುತವಾಗಿ ಪ್ರದರ್ಶಿಸಲಾಗುತ್ತದೆ. ಈ ತಂತ್ರಜ್ಞಾನಗಳು ಯುವಕರಲ್ಲಿ ಹೇಗೆ ಕುತೂಹಲವನ್ನು ಹುಟ್ಟುಹಾಕುತ್ತವೆ ಎಂಬುದನ್ನು ವೀಕ್ಷಿಸಲು ಸಂತೋಷವಾಗಿದೆ.

“ರೊಬೊಟಿಕ್ಸ್ ಗ್ಯಾಲರಿಯು DRDO ರೋಬೋಟ್ಗಳು, ಮೈಕ್ರೋ ರೋಬೋಟ್ಗಳು, ಕೃಷಿ ರೋಬೋಟ್, ವೈದ್ಯಕೀಯ ರೋಬೋಟ್ಗಳು, ಸ್ಪೇಸ್ ರೋಬೋಟ್ ಮತ್ತು ಹೆಚ್ಚಿನದನ್ನು ಪ್ರದರ್ಶಿಸುತ್ತದೆ. ಈ ಆಕರ್ಷಕ ಪ್ರದರ್ಶನಗಳ ಮೂಲಕ, ಆರೋಗ್ಯ ರಕ್ಷಣೆ, ಉತ್ಪಾದನೆ ಮತ್ತು ದೈನಂದಿನ ಜೀವನದಲ್ಲಿ ರೋಬೋಟಿಕ್ಸ್ ನ ಪರಿವರ್ತಕ ಶಕ್ತಿಯು ಸ್ಪಷ್ಟವಾಗಿ ಗೋಚರಿಸುತ್ತದೆ.

“ರೋಬೋಟಿಕ್ಸ್ ಗ್ಯಾಲರಿಯಲ್ಲಿರುವ ಕೆಫೆಯಲ್ಲಿ ರೋಬೋಟ್ಗಳು ನೀಡುವ ಒಂದು ಕಪ್ ಚಹಾವನ್ನು ಸಹ ಸವಿದು ಆನಂದಿಸಿದೆ”

“ನೇಚರ್ ಪಾರ್ಕ್ ಗುಜರಾತ್ ಸೈನ್ಸ್ ಸಿಟಿಯಲ್ಲಿ ಪ್ರಶಾಂತ ಮತ್ತು ಅದ್ಭುತ ಸ್ಥಳವಾಗಿದೆ. ಇದು ಪ್ರಕೃತಿ ಆಸಕ್ತರು ಮತ್ತು ಸಸ್ಯಶಾಸ್ತ್ರಜ್ಞರು ಭೇಟಿ ನೀಡಲೇಬೇಕಾದ ಸ್ಥಳ. ಉದ್ಯಾನವನವು ಜೀವವೈವಿಧ್ಯವನ್ನು ಉತ್ತೇಜಿಸುತ್ತದೆ ಮಾತ್ರವಲ್ಲದೆ ಜನರಿಗೆ ಶೈಕ್ಷಣಿಕ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ”

“ಸೂಕ್ಷ್ಮವಾದ ವಾಕಿಂಗ್ ಟ್ರೇಲ್ಸ್ ದಾರಿಯಲ್ಲಿ ವೈವಿಧ್ಯಮಯ ಅನುಭವಗಳನ್ನು ನೀಡುತ್ತದೆ. ಇದು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಬಗ್ಗೆ ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ. ಕ್ಯಾಕ್ಟಸ್ ಗಾರ್ಡನ್, ಬ್ಲಾಕ್ ಪ್ಲಾಂಟೇಶನ್, ಆಕ್ಸಿಜನ್ ಪಾರ್ಕ್ ಮತ್ತು ಹೆಚ್ಚಿನ ಇತರ ಆಕರ್ಷಣೆಗಳಿಗೆ ಭೇಟಿ ನೀಡಲಾಯಿತು”

“ಸೈನ್ಸ್ ಸಿಟಿಯಲ್ಲಿರುವ ಅಕ್ವಾಟಿಕ್ ಗ್ಯಾಲರಿಯು ಜಲವಾಸಿ ಜೀವ ವೈವಿಧ್ಯ ಮತ್ತು ಸಮುದ್ರದ ಅದ್ಭುತಗಳ ಸಂಗಮವಾಗಿದೆ. ಇದು ನಮ್ಮ ಜಲವಾಸಿ ಪರಿಸರ ವ್ಯವಸ್ಥೆಗಳ ಸೂಕ್ಷ್ಮ ಮತ್ತು ಕ್ರಿಯಾತ್ಮಕ ಸಮತೋಲನವನ್ನು ಎತ್ತಿ ತೋರಿಸುತ್ತದೆ. ಇದು ಶಿಕ್ಷಣದ ಅನುಭವ ಮಾತ್ರವಲ್ಲ, ಅಲೆಗಳ ಪ್ರಪಂಚದ ಸಂರಕ್ಷಣೆ ಮತ್ತು ಅಲೆಗಳ ಮೇಲಿನ ಆಸಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

“ಶಾರ್ಕ್ ಸುರಂಗವು ಶಾರ್ಕ್ ಜಾತಿಗಳ ವೈವಿಧ್ಯಮಯ ಶ್ರೇಣಿಯನ್ನು ಪ್ರದರ್ಶಿಸುವ ಆಹ್ಲಾದಕರ ಅನುಭವವಾಗಿದೆ. ನೀವು ಸುರಂಗದ ಮೂಲಕ ನಡೆಯುವಾಗ, ಸಮುದ್ರದ ವೈವಿಧ್ಯತೆಯ ಬಗ್ಗೆ ನೀವು ಬಹಳ ಆಶ್ಚರ್ಯ ಚಕಿತರಾಗುತ್ತೀರಿ. ಇದು ನಿಜವಾಗಿಯೂ ಆಕರ್ಷಕವಾಗಿದೆ ”

“ಇದು ಅತ್ಯಂತ ಸುಂದರವಾಗಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದಾರೆ.

ಪ್ರಧಾನಮಂತ್ರಿಯವರೊಂದಿಗೆ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು.

 

 

 

*****