Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್‌ನ ಭರೂಚ್‌ನ ಅಮೋದ್‌ನಲ್ಲಿ 8,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

ಗುಜರಾತ್‌ನ ಭರೂಚ್‌ನ ಅಮೋದ್‌ನಲ್ಲಿ 8,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಭರೂಚ್‌ನ ಅಮೋದ್‌ನಲ್ಲಿ8,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಜಂಬುಸಾರ್‌ನಲ್ಲಿ ಬೃಹತ್‌ ಔಷಧ ಪಾರ್ಕ್‌, ದಹೇಜ್‌ನಲ್ಲಿಆಳ ಸಮುದ್ರ ಕೊಳವೆ ಮಾರ್ಗ ಯೋಜನೆ, ಅಂಕಲೇಶ್ವರ ವಿಮಾನ ನಿಲ್ದಾಣದ 1ನೇ ಹಂತ ಮತ್ತು ಅಂಕಲೇಶ್ವರ ಮತ್ತು ಪನೋಲಿಯಲ್ಲಿ ಬಹುಹಂತದ ಕೈಗಾರಿಕಾ ಶೆಡ್‌ಗಳ ಅಭಿವೃದ್ಧಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಜಿಎಸಿಎಲ್‌ ಘಟಕ, ಭರೂಚ್‌ ಒಳಚರಂಡಿ ಮತ್ತು ಐಒಸಿಎಲ್‌ ದಹೇಜ್‌ ಕೊಯಾಲಿ ಕೊಳವೆ ಮಾರ್ಗ ಸೇರಿದಂತೆ ಗುಜರಾತ್‌ನ ರಾಸಾಯನಿಕ ವಲಯಕ್ಕೆ ಉತ್ತೇಜನ ನೀಡುವ ಹಲವಾರು ಯೋಜನೆಗಳನ್ನು ಪ್ರಧಾನಮಂತ್ರಿ ಅವರು ದೇಶಕ್ಕೆ ಸಮರ್ಪಿಸಿದರು.

ಆರಂಭದಲ್ಲಿ ಪ್ರಧಾನಮಂತ್ರಿ ಅವರು ಶ್ರೀ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಗೌರವ ನಮನ ಸಲ್ಲಿಸಿದರು. ‘‘ ಮುಲಾಯಂ ಸಿಂಗ್‌ ಅವರೊಂದಿಗಿನ ನನ್ನ ಸಂಬಂಧವು ತುಂಬಾ ವಿಶೇಷವಾಗಿದೆ. ಮುಖ್ಯಮಂತ್ರಿಗಳಾಗಿ, ನಾವು ಭೇಟಿಯಾದಾಗ, ಪರಸ್ಪರ ಗೌರವ ಮತ್ತು ನಿಕಟತೆಯ ಭಾವನೆ ಇತ್ತು,’’ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಅಭ್ಯರ್ಥಿಯಾದ ನಂತರ ಶ್ರೀ ನರೇಂದ್ರ ಮೋದಿ ಅವರು ವಿವಿಧ ಪಕ್ಷ ಗಳ ನಾಯಕರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿದರು, ಮುಲಾಯಂ ಸಿಂಗ್‌ ಜೀ ಅವರ ಆಶೀರ್ವಾದ ಮತ್ತು ಸಲಹೆಯ ಮಾತುಗಳು ನನಗೆ ಈಗಲೂ ಬಹಳ ಮುಖ್ಯ ಎಂದು ಹೇಳಿದರು. ಕಾಲಮಾನ ಬದಲಾಗಿ ಜಮಾನದ ರೀತಿ ನೀತಿ ರೂಪಾಂತರವಾದರೂ ಅದನ್ನು  ಲೆಕ್ಕಿಸದೆ ಮುಲಾಯಂ ಸಿಂಗ್‌ ಅವರು 2013 ರಲ್ಲಿ ತಮ್ಮ ಆಶೀರ್ವಾದವನ್ನು ಉಳಿಸಿಕೊಂಡರು. ಕಳೆದ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಮುಲಾಯಂ ಸಿಂಗ್‌ ಜೀ ಅವರ ಆಶೀರ್ವಾದವನ್ನು ನರೇಂದ್ರ ಮೋದಿ ಸ್ಮರಿಸಿದರು, ಅಲ್ಲಿ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿಲ್ಲದೆ, 2019 ರಲ್ಲಿಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಂತಿರುಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು, ಮುಲಾಯಂ ಸಿಂಗ್‌ ಜಿ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಾಯಕರಾಗಿದ್ದಾರೆ ಎಂದು ಅವರು ಹೇಳಿದರು   ‘‘ ಇಂದು, ಗುಜರಾತಿನ ಈ ನೆಲದಿಂದ ಮತ್ತು ನರ್ಮದಾ ಮಾತೆಯ ದಡದಿಂದ ಗೌರವಾನ್ವಿತ ಮುಲಾಯಂ ಸಿಂಗ್‌ ಜೀ ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಈ ಅಸಹನೀಯ ನಷ್ಟವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೀಡಲಿ,’’ ಎಂದು ನಾನು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ, ಎಂದು ಪ್ರಧಾನಿ ಹೇಳಿದರು.

ಆಜಾದಿ ಕಾ ಅಮೃತ್‌ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭರೂಚ್‌ಗೆ ಆಗಮಿಸಿದ್ದಾರೆ ಎಂದು ಹೇಳಿದ ಅವರು, ಈ ಸ್ಥಳದ ಮಣ್ಣು ದೇಶದ ಹೆಸರನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿರುವ ರಾಷ್ಟ್ರದ ಅನೇಕ ಮಕ್ಕಳಿಗೆ ಜನ್ಮ ನೀಡಿದೆ ಎಂದರು. ಸಂವಿಧಾನ ರಚನಾ ಸಭೆಯ ಸದಸ್ಯ ಮತ್ತು ಸೋಮನಾಥ ಚಳವಳಿಯಲ್ಲಿ ಸರ್ದಾರ್‌ ಪಟೇಲರ ಪ್ರಮುಖ ಒಡನಾಡಿ, ಕನೈಯಾಲಾಲ್‌ ಮಾಣೆಕ್‌ ಲಾಲ್‌ ಮುನ್ಷಿ ಮತ್ತು ಭಾರತೀಯ ಸಂಗೀತ ದಿಗ್ಗಜ ಪಂ.ಓಂಕಾರನಾಥ ಠಾಕೂರ್‌ ಅವರನ್ನು ಅವರು ಸ್ಮರಿಸಿದರು. ‘‘ಗುಜರಾತ್‌ ಮತ್ತು ಭಾರತದ ಅಭಿವೃದ್ಧಿಯಲ್ಲಿ ಭರೂಚ್‌ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ,’’ ಎಂದು ಹೇಳಿದ ಶ್ರೀ ನರೇಂದ್ರ ಮೋದಿ ಅವರು  , ‘‘ ನಾವು ಭಾರತದ ಇತಿಹಾಸವನ್ನು ಓದಿದಾಗಲೆಲ್ಲಾ ಮತ್ತು ಭವಿಷ್ಯದ ಬಗ್ಗೆ ಮಾತನಾಡಿದಾಗಲೆಲ್ಲಾ, ಭರೂಚ್‌ಅನ್ನು ಯಾವಾಗಲೂ ಹೆಮ್ಮೆಯಿಂದ ಚರ್ಚಿಸಲಾಗುತ್ತದೆ,’’ ಎಂದು ಹೇಳಿದರು. ಭರೂಚ್‌ ಜಿಲ್ಲೆಯ ಉದಯೋನ್ಮುಖ ಕಾಸ್ಮೋಪಾಲಿಟನ್‌ ಸ್ವಭಾವವನ್ನು ಅವರು ಗಮನಿಸಿದರು.

ರಾಸಾಯನಿಕ ವಲಯಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳೊಂದಿಗೆ ಮೊದಲ ಬೃಹತ್‌ ಔಷಧ ಪಾರ್ಕ್‌ಅನ್ನು ಭರೂಚ್‌ಗೆ ಪ್ರಸ್ತುತಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ‘‘ ಸಂಪರ್ಕಕ್ಕೆ ಸಂಬಂಧಿಸಿದ ಎರಡು ಪ್ರಮುಖ ಯೋಜನೆಗಳನ್ನು ಸಹ ಇಂದು ಪ್ರಾರಂಭಿಸಲಾಗಿದೆ ,’’ ಎಂದು ಹೇಳಿದ  ಅವರು, ಭರೂಚ್‌ನ ಜನರು ಬರೋಡಾ ಅಥವಾ ಸೂರತ್‌ ಮೇಲೆ ಅವಲಂಬಿತರಾಗಬೇಕಾಗಿಲ್ಲ. ಅಂಕಲೇಶ್ವರದಲ್ಲಿ ಭರೂಚ್‌ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು  ಮಾಹಿತಿ ನೀಡಿದರು. ಭರೂಚ್‌ ದೇಶದ ಇತರ ಸಣ್ಣ ರಾಜ್ಯಗಳಿಗಿಂತ ಹೆಚ್ಚಿನ ಕೈಗಾರಿಕೆಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ಹೊಸ ವಿಮಾನ ನಿಲ್ದಾಣ ಯೋಜನೆಯೊಂದಿಗೆ, ಈ ಪ್ರದೇಶವು ಅಭಿವೃದ್ಧಿಯ ದೃಷ್ಟಿಯಿಂದ ಉನ್ನತ ರಸ್ತೆಯನ್ನು ತೆಗೆದುಕೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಗಮನ ಸೆಳೆದರು. ‘‘ ನರೇಂದ್ರ-ಭೂಪೇಂದ್ರ ಅವರ ಡಬಲ್‌ ಇಂಜಿನ್‌ ಸರ್ಕಾರದ ಫಲಿತಾಂಶವೇ ಈ ಕಾರ್ಯಗಳನ್ನು ಉಲ್ಕಾಪಾತದ ವೇಗದಲ್ಲಿ ಪೂರ್ಣಗೊಳಿಸಲು ಶ್ರಮಿಸುತ್ತಿದೆ,’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

‘‘ಇದು ಗುಜರಾತ್‌ ನ ಹೊಸ ಮುಖ,’’ ಕಳೆದ ಎರಡು ದಶಕಗಳಲ್ಲಿಗುಜರಾತ್‌ ಪ್ರತಿಯೊಂದು ಕ್ಷೇತ್ರದಲ್ಲಿ ಹಿಂದುಳಿದ ರಾಜ್ಯದಿಂದ ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕಾ ಮತ್ತು ಕೃಷಿ ರಾಜ್ಯವಾಗಿ ಮಾರ್ಪಟ್ಟಿದೆ. ಕಾರ್ಯನಿರತ ಬಂದರುಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಕರಾವಳಿಯಿಂದಾಗಿ, ಬುಡಕಟ್ಟು ಮತ್ತು ಮೀನುಗಾರ ಸಮುದಾಯದ ಜೀವನವು ಬದಲಾಯಿತು. ಗುಜರಾತ್‌ ಜನತೆಯ ಕಠಿಣ ಪರಿಶ್ರಮದಿಂದಾಗಿ ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ರಾಜ್ಯದ ಯುವಕರಿಗೆ ಸುವರ್ಣಯುಗ ಆರಂಭವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಡೆತಡೆಗಳಿಂದ ಮುಕ್ತವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು. ಈ ಕನಸುಗಳನ್ನು ಸಾಕಾರಗೊಳಿಸಲು ನೀತಿ ಮತ್ತು ಉದ್ದೇಶ (ನೀತಿ ಮತ್ತು ನಿಯತ್‌) ಎರಡೂ ಅಗತ್ಯವಿದೆ ಎಂದು ಅವರು ಹೇಳಿದರು. ಭರೂಚ್‌ ಪ್ರದೇಶದಲ್ಲಿನ ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಅವರು ಮಾತನಾಡಿದರು. ಕೃಷಿ, ಆರೋಗ್ಯ ಮತ್ತು ಕುಡಿಯುವ ನೀರಿನ ಪರಿಸ್ಥಿತಿಗಳು ವರ್ಷಗಳಲ್ಲಿ ಹೇಗೆ ಸುಧಾರಿಸಿದವು ಎಂಬುದನ್ನು ಅವರು ನೆನಪಿಸಿಕೊಂಡರು. ತಾವು ಮುಖ್ಯಮಂತ್ರಿಯಾಗಿ ಒಂದು ಸಮಯದಲ್ಲಿಒಂದು ಸಮಸ್ಯೆಯನ್ನು ಹೇಗೆ ಎದುರಿಸಿ ಅವುಗಳನ್ನು ಪರಿಹರಿಸಿಕೊಂಡೆವು ಎಂಬುದನ್ನು ಅವರು ನೆನಪಿಸಿಕೊಂಡರು. ‘‘ ಇಂದು, ಮಕ್ಕಳಿಗೆ ಈ ಹಿಂದೆ ಸಾಮಾನ್ಯವಾಗಿದ್ದ ಕರ್ಫ್ಯೂ ಎಂಬ ಪದ ತಿಳಿದಿಲ್ಲ. ಇಂದು, ನಮ್ಮ ಹೆಣ್ಣು ಮಕ್ಕಳು ಘನತೆಯಿಂದ ಬದುಕುತ್ತಿದ್ದಾರೆ ಮತ್ತು ತಡವಾಗಿ ಕೆಲಸ ಮಾಡುತ್ತಿದ್ದಾರೆ ಮಾತ್ರವಲ್ಲದೆ, ಸಮುದಾಯಗಳ ಜೀವನವನ್ನು ಮುನ್ನಡೆಸುತ್ತಿದ್ದಾರೆ,’’ ಎಂದು ಅವರು ಹೇಳಿದರು. ಅಂತೆಯೇ, ಭರೂಚ್‌ನಲ್ಲಿ ಶಿಕ್ಷಣ ಸೌಲಭ್ಯಗಳು ಬಂದಿವೆ, ಇದು ಯುವಕರಿಗೆ ಹೊಸ ಅವಕಾಶಗಳನ್ನು ನೀಡಿದೆ. ದೀರ್ಘಕಾಲೀನ ಯೋಜನೆ ಮತ್ತು ಕಡಿಮೆ ಬಳಕೆಯ ಸಂಪನ್ಮೂಲಗಳ ಬಳಕೆಯಿಂದಾಗಿ, ಗುಜರಾತ್‌ ಉತ್ಪಾದನಾ, ಕೈಗಾರಿಕಾ ಮತ್ತು ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಿದೆ ಮತ್ತು ಇಲ್ಲಿಅನೇಕ ವಿಶ್ವದರ್ಜೆಯ ಸೌಲಭ್ಯಗಳು ಹೊರಹೊಮ್ಮಿವೆ. ಡಬಲ್‌ ಇಂಜಿನ್‌ ಸರ್ಕಾರವು ದುಪ್ಪಟ್ಟು ಪ್ರಯೋಜನಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು.

ಪ್ರಧಾನಮಂತ್ರಿ ಅವರು ಸ್ಥಳೀಯರಿಗೆ ಧ್ವನಿ ನೀಡುವ ತಮ್ಮ ಕರೆಯನ್ನು ಪುನರುಚ್ಚರಿಸಿದರು. ಸ್ಥಳೀಯ ಉತ್ಪನ್ನಗಳನ್ನು ಆಶ್ರಯಿಸುವ ಮೂಲಕ ಮತ್ತು ಆಮದು ಮಾಡಿದ ಉತ್ಪನ್ನಗಳನ್ನು ತ್ಯಜಿಸುವ ಮೂಲಕ, ಪ್ರತಿಯೊಬ್ಬ ನಾಗರಿಕನು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಬಹುದು ಎಂದು ಅವರು ಪ್ರತಿಪಾದಿಸಿದರು. ದೀಪಾವಳಿಯ ಸಮಯದಲ್ಲಿ ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಬಳಸುವಂತೆ ಅವರು ಮನವಿ ಮಾಡಿದರು, ಏಕೆಂದರೆ ಅವು ಸ್ಥಳೀಯ ವ್ಯವಹಾರಗಳಿಗೆ ಮತ್ತು ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತವೆ. ಭಾರತದ ಆರ್ಥಿಕತೆಯು 2014 ರಲ್ಲಿ10ನೇ ಸ್ಥಾನದಿಂದ ಐದನೇ ಸ್ಥಾನವನ್ನು ತಲುಪಿದೆ ಎಂದು ಅವರು ಹೇಳಿದರು. ಭಾರತವು ತನ್ನ ಹಿಂದಿನ ವಸಾಹತುಶಾಹಿ ಗುರುಗಳನ್ನು ಮೀರಿಸಿದ್ದರಿಂದ ಈ ಸಾಧನೆಯನ್ನು ಹೆಚ್ಚು ಮಹತ್ವಪೂರ್ಣಗೊಳಿಸಲಾಯಿತು. ಇದಕ್ಕಾಗಿ ಯುವಕರು, ರೈತರು, ಕಾರ್ಮಿಕರು, ಸಣ್ಣ ಮತ್ತು ದೊಡ್ಡ ಉದ್ಯಮಗಳು ಮತ್ತು ಕೈಗಾರಿಕೋದ್ಯಮಿಗಳು ಶ್ರೇಯಸ್ಸಿಗೆ ಅರ್ಹರಾಗಿದ್ದಾರೆ ಎಂದು ಅವರು ಹೇಳಿದರು. ಔಷಧಗಳನ್ನು ತಯಾರಿಸುವ ಮೂಲಕ ಜೀವಗಳನ್ನು ಉಳಿಸುವ ಉದಾತ್ತ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಭರೂಚ್‌ನ ಜನರನ್ನು ಅವರು ಅಭಿನಂದಿಸಿದರು. ಸಾಂಕ್ರಾಮಿಕ ರೋಗವು ಫಾರ್ಮಾ(ಔಷಧ) ವಲಯದ ಪ್ರಾಮುಖ್ಯತೆಯನ್ನು ಬಹಳ ಸ್ಪಷ್ಟವಾಗಿಸಿದೆ ಎಂದು ಅವರು ಹೇಳಿದರು. ‘‘ ಕೊರೊನಾ ವಿರುದ್ಧದ ಹೋರಾಟದಲ್ಲಿ ಗುಜರಾತ್‌ ದೇಶಕ್ಕೆ ಸಾಕಷ್ಟು ಸಹಾಯ ಮಾಡಿದೆ. ದೇಶದ ಫಾರ್ಮಾ(ಔಷದ) ರಫ್ತಿನಲ್ಲಿ ಗುಜರಾತ್‌ ಪಾಲು ಶೇ.25ರಷ್ಟಿದೆ,’’ ಎಂದು ಪ್ರಧಾನಮಂತ್ರಿ ಹೇಳಿದರು.

ಭರೂಚ್‌ ನಲ್ಲಿ ಕೆಲವು ಕಿಡಿಗೇಡಿಗಳು ಅಭಿವೃದ್ಧಿಯ ಪಥಕ್ಕೆ ಅಡ್ಡಿಪಡಿಸಿದ ಸಮಯವನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ‘‘ 2014 ರಲ್ಲಿನಾವು ಅಧಿಕಾರಕ್ಕೆ ಬಂದಾಗ ಮತ್ತು ನರೇಂದ್ರ ಮತ್ತು ಭೂಪೇಂದ್ರ ಅವರ ಡಬಲ್‌ ಎಂಜಿನ್‌ ಶಕ್ತಿಯನ್ನು ಗುಜರಾತ್‌ ಅನುಭವಿಸಿದಾಗ, ಎಲ್ಲಾ ಅಡೆತಡೆಗಳನ್ನು ಬುಡಸಮೇತ ಕಿತ್ತುಹಾಕಲಾಯಿತು,’’ ಎಂದು ಅವರು ಹೇಳಿದರು. ಸರ್ದಾರ್‌ ಸರೋವರ ಅಣೆಕಟ್ಟಿನ ಅಭಿವೃದ್ಧಿಯ ಸಂದರ್ಭದಲ್ಲಿ ನಗರ ನಕ್ಸಲರು ಸೃಷ್ಟಿಸಿದ ಅಡೆತಡೆಗಳನ್ನು ಪ್ರಧಾನಮಂತ್ರಿ ತಿಳಿಸಿದರು. ಜಾರ್ಖಂಡ್‌, ಬಿಹಾರ, ಒಡಿಶಾ, ಛತ್ತೀಸಗಡ ಮತ್ತು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿನಕ್ಸಲೀಯರ ಹಾವಳಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ನಕ್ಸಲೀಯರು ಗುಜರಾತ್‌ ರಾಜ್ಯವನ್ನು ವ್ಯಾಪಿಸಲು ಮತ್ತು ರಾಜ್ಯದ ಜನರ ಜೀವಗಳನ್ನು ಉಳಿಸಲು ಅವಕಾಶ ನೀಡದ ಗುಜರಾತ್‌ ನ ಬುಡಕಟ್ಟು ಸಮುದಾಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಗರ-ನಕ್ಸಲರು ಯಾವುದೇ ನೆಲೆಯೂರಲು ಅವಕಾಶ ನೀಡಬಾರದು ಎಂದು ಪ್ರಧಾನಮಂತ್ರಿ ಎಚ್ಚರಿಕೆ ನೀಡಿದರು. ವಿಜ್ಞಾನ ಮತ್ತು ಗಣಿತದಲ್ಲಿ ಉತ್ತಮ ಶಿಕ್ಷಣವನ್ನು ಖಚಿತಪಡಿಸಿಕೊಳ್ಳದೆ, ಸರ್ಕಾರದ ಪ್ರಯತ್ನಗಳಿಂದಾಗಿ ಸಕಾರಾತ್ಮಕ ಕ್ರಮ ಮತ್ತು ಇತರ ಯೋಜನೆಗಳ ಸರಿಯಾದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲಎಂದು ಅವರು ಹೇಳಿದರು. ಇಂದು, ಬುಡಕಟ್ಟು ಯುವಕರು ಪ್ರಾಯೋಗಿಕ ತರಬೇತಿಯನ್ನು ಪಡೆಯುತ್ತಿದ್ದಾರೆ ಮತ್ತು ವೈದ್ಯರು, ವಿಜ್ಞಾನಿಗಳು ಮತ್ತು ವಕೀಲರಾಗುತ್ತಿದ್ದಾರೆ. ಆದಿವಾಸಿ ಸಮುದಾಯವು ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಪ್ರಯಾಣಕ್ಕೆ ಅಪಾರ ಕೊಡುಗೆ ನೀಡಿದೆ ಮತ್ತು ಅವರ ಕೊಡುಗೆಯನ್ನು ಗೌರವಿಸಲು ಸರ್ಕಾರವು ಭಗವಾನ್‌ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಧೈರ್ಯಶಾಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಸಮರ್ಪಿತವಾದ ಜನಜಾತಿಯ ಗೌರವ್‌ ದಿವಸ್‌ ಅನ್ನು ಘೋಷಿಸಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ಭಾಷಣದ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಹಮದಾಬಾದ್‌ ಮತ್ತು ಗಾಂಧಿನಗರದಂತೆಯೇ ಭರೂಚ್‌ ಮತ್ತು ಅಂಕಲೇಶ್ವರಗಳ ಅಭಿವೃದ್ಧಿಯನ್ನು ಅವಳಿ ನಗರದ ಅಭಿವೃದ್ಧಿಯ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು. ಜನರು ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿಯ ಬಗ್ಗೆ ಮಾತನಾಡುವ ಹಾಗೆ ಭರೂಚ್‌ ಮತ್ತು ಅಂಕಲೇಶ್ವರರ ಬಗ್ಗೆ ಮಾತನಾಡಲಿದ್ದಾರೆ ಎಂದು ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಗುಜರಾತ್‌ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್‌, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಮನ್ಸುಖ್‌ ಮಾಂಡವೀಯ ಮತ್ತು ಸಂಸತ್‌ ಸದಸ್ಯರಾದ ಶ್ರೀ ಸಿ.ಆರ್‌. ಪಾಟೀಲ್‌ ಮತ್ತು ಶ್ರೀ ಮನ್ಸುಖ್‌ ವಾಸವ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಔಷಧ (ಫಾರ್ಮಾಸ್ಯುಟಿಕಲ್‌) ವಲಯದಲ್ಲಿ ಭಾರತವನ್ನು ಆತ್ಮನಿರ್ಭರ ಮಾಡುವ ಮತ್ತೊಂದು ಹೆಜ್ಜೆಯಾಗಿ, ಪ್ರಧಾನಮಂತ್ರಿ ಅವರು ಜಂಬುಸರ್‌ನಲ್ಲಿ ಬೃಹತ್‌ ಔಷಧ ಪಾರ್ಕ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. 2021-22ರಲ್ಲಿ, ಒಟ್ಟು ಔಷಧೀಯ ಆಮದುಗಳಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಔಷಧಗಳ ಪಾಲನ್ನು ಹೊಂದಿವೆ. ಈ ಯೋಜನೆಯು ಆಮದು ಬದಲಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೃಹತ್‌ ಔಷಧಗಳಿಗಾಗಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಧಾನಮಂತ್ರಿ ಅವರು ದಹೇಜ್‌ನಲ್ಲಿ ಆಳ ಸಮುದ್ರ ಕೊಳವೆ ಮಾರ್ಗ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು, ಇದು ಕೈಗಾರಿಕಾ ಎಸ್ಟೇಟ್‌ಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಲು ಸಹಾಯ ಮಾಡುತ್ತದೆ. ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದ ಇತರ ಯೋಜನೆಗಳಲ್ಲಿಅಂಕಲೇಶ್ವರ ವಿಮಾನ ನಿಲ್ದಾಣದ ಹಂತ 1 ಮತ್ತು ಅಂಕಲೇಶ್ವರ ಮತ್ತು ಪನೋಲಿಯಲ್ಲಿ ಬಹುಹಂತದ ಕೈಗಾರಿಕಾ ಶೆಡ್‌ಗಳ ಅಭಿವೃದ್ಧಿ ಸೇರಿವೆ, ಇದು ಎಂಎಸ್‌ಎಂಇ ವಲಯಕ್ಕೆ ಉತ್ತೇಜನ ನೀಡಲಿದೆ.

ಪ್ರಧಾನಮಂತ್ರಿ ಅವರು ಅನೇಕ ಕೈಗಾರಿಕಾ ಉದ್ಯಾನವನಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿನಾಲ್ಕು ಬುಡಕಟ್ಟು ಕೈಗಾರಿಕಾ ಉದ್ಯಾನಗಳು ಸೇರಿವೆ, ಅವು ವಾಲಿಯಾ (ಭರೂಚ್‌), ಅಮೀರ್‌ಗಢ (ಬನಸ್ಕಾಂತ), ಚಕಾಲಿಯಾ (ದಾಹೋಡ್‌) ಮತ್ತು ವಾರ್ನಾ (ಛೋಟಾ ಉದಯಪುರ); ಮುದೇತಾ (ಬನಸ್ಕಾಂತ)ದಲ್ಲಿಆಗ್ರೋ ಫುಡ್‌ ಪಾರ್ಕ್‌; ಕಕ್ವಾಡಿ ದಂತಿ (ವಲ್ಸಾದ್‌) ನಲ್ಲಿಸೀ ಫುಡ್‌ (ಸಮುದ್ರ ಆಹಾರ) ಪಾರ್ಕ್‌; ಮತ್ತು ಖಾಂಡಿವಾವ್‌ (ಮಹಿಸಾಗರ್‌) ನಲ್ಲಿರುವ ಎಂಎಸ್‌ಎಂಇ ಪಾರ್ಕ್‌ ಸೇರಿವೆ.

ಕಾರ್ಯಕ್ರಮದ ವೇಳೆ, ಪ್ರಧಾನಮಂತ್ರಿ ಅವರ ರಾಸಾಯನಿಕ ವಲಯಕ್ಕೆ ಉತ್ತೇಜನ ನೀಡುವ ಹಲವಾರು ಯೋಜನೆಗಳನ್ನು ಸಮರ್ಪಿಸಿದರು. ಅವರು ದಹೇಜ್‌ನಲ್ಲಿ130 ಮೆಗಾವ್ಯಾಟ್‌ ಸಾಮರ್ಥ್ಯ‌ದ ವಿದ್ಯುತ್‌ ಸ್ಥಾವರದೊಂದಿಗೆ ಸಂಯೋಜಿಸಲಾದ 800 ಟಿಪಿಡಿ ಕಾಸ್ಟಿಕ್‌ ಸೋಡಾ ಘಟಕವನ್ನು ಲೋಕಾರ್ಪಣೆ ಮಾಡಿದರು. ಇದರೊಂದಿಗೆ, ಅವರು ದಹೇಜ್‌ನಲ್ಲಿ ಅಸ್ತಿತ್ವದಲ್ಲಿರುವ ಕಾಸ್ಟಿಕ್‌ ಸೋಡಾ ಸ್ಥಾವರದ ವಿಸ್ತರಣೆಯನ್ನು ದೇಶಕ್ಕೆ   ಸಮರ್ಪಿಸಿದರು. ಅದರ ಸಾಮರ್ಥ್ಯ‌ವನ್ನು ದಿನಕ್ಕೆ 785 ಮೆಟ್ರಿಕ್‌ ಟನ್‌ನಿಂದ ದಿನಕ್ಕೆ 1310 ಮೆಟ್ರಿಕ್‌ ಟನ್‌ಗೆ  ಹೆಚ್ಚಿಸಲಾಗಿದೆ. ದಹೇಜ್‌ನಲ್ಲಿ ವರ್ಷಕ್ಕೆ ಒಂದು ಲಕ್ಷ  ಮೆಟ್ರಿಕ್‌ ಟನ್‌ ಗಿಂತಲೂ ಹೆಚ್ಚು ಕ್ಲೋರೋಮೆಥೇನ್‌ಗಳನ್ನು ಉತ್ಪಾದಿಸುವ ಯೋಜನೆಯನ್ನು ಪ್ರಧಾನಮಂತ್ರಿ ಅವರು ಸಮರ್ಪಿಸಿದರು. ಪ್ರಧಾನಮಂತ್ರಿ, ಸಮರ್ಪಿಸಿದ ಇತರ ಯೋಜನೆಗಳಲ್ಲಿ ದಹೇಜ್‌ನಲ್ಲಿರುವ ಹೈಡ್ರಾಜನ್‌ ಹೈಡ್ರೇಟ್‌ ಘಟಕ, ಐಒಸಿಎಲ್‌ ದಹೇಜ್‌-ಕೊಯಾಲಿ ಕೊಳವೆ ಮಾರ್ಗ ಯೋಜನೆ, ಭರೂಚ್‌ ನೆಲದಡಿಯ ಒಳಚರಂಡಿ ಮತ್ತು ಎಸ್‌ಟಿಪಿ ಕಾಮಗಾರಿ ಮತ್ತು ಉಮ್ಲಾಆಸಾ ಪನೇತಾ ರಸ್ತೆಯ ಅಗಲೀಕರಣ ಮತ್ತು ಬಲಪಡಿಸುವಿಕೆ ಸೇರಿವೆ.

*****