Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘‘ ಗುಜರಾತ್‌ನ ಏಕ್ತಾ ನಗರದಲ್ಲಿ ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಮಾವೇಶದ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಪ್ರಧಾನಮಂತ್ರಿ ಭಾಷಣ’’

‘‘ ಗುಜರಾತ್‌ನ ಏಕ್ತಾ ನಗರದಲ್ಲಿ ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಮಾವೇಶದ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಪ್ರಧಾನಮಂತ್ರಿ ಭಾಷಣ’’


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕಾನೂನು ಸಚಿವರು ಮತ್ತು ಕಾನೂನು ಕಾರ್ಯದರ್ಶಿಗಳ ಅಖಿಲ ಭಾರತ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು.

ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ದೇಶದ ಎಲ್ಲರಾಜ್ಯಗಳ ಕಾನೂನು ಸಚಿವರು ಮತ್ತು ಕಾರ್ಯದರ್ಶಿಗಳ ನಿರ್ಣಾಯಕ ಸಭೆ ಏಕತಾ ಪ್ರತಿಮೆಯ ಭವ್ಯತೆಯಡಿಯಲ್ಲಿ ನಡೆಯುತ್ತಿದೆ ಮತ್ತು ಸರ್ದಾರ್‌ ಪಟೇಲರ ಸೂಧಿರ್ತಿಯೇ ಆಜಾದಿ ಕಾ ಅಮೃತ ಮಹೋತ್ಸವದ ಈ ಹಂತದಲ್ಲಿನಮ್ಮನ್ನು ಸರಿಯಾದ ದಿಕ್ಕಿನಲ್ಲಿ ತೋರಿಸುವ ಮೂಲಕ ನಮ್ಮ ಗುರಿಗಳನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿಆರೋಗ್ಯಕರ ಮತ್ತು ಆತ್ಮವಿಶ್ವಾಸದ ಸಮಾಜಕ್ಕಾಗಿ ವಿಶ್ವಾಸಾರ್ಹ ಮತ್ತು ತ್ವರಿತ ನ್ಯಾಯ ವ್ಯವಸ್ಥೆಯ ಅಗತ್ಯವನ್ನು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರತಿಯೊಂದು ಸಮಾಜದಲ್ಲಿನ ವಿವಿಧ ಕಾರ್ಯವಿಧಾನಗಳು ಮತ್ತು ಸಂಪ್ರದಾಯಗಳು ಕಾಲಾವಧಿ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು, ‘‘ ನ್ಯಾಯವನ್ನು ನೀಡುವುದನ್ನು ನೋಡಿದಾಗ, ಸಾಂವಿಧಾನಿಕ ಸಂಸ್ಥೆಗಳಲ್ಲಿ ದೇಶವಾಸಿಗಳ ನಂಬಿಕೆ ಬಲಗೊಳ್ಳುತ್ತದೆ. ಮತ್ತು ನ್ಯಾಯವನ್ನು ನೀಡಿದಾಗ, ಸಾಮಾನ್ಯ ಜನರ ವಿಶ್ವಾಸ ಹೆಚ್ಚಾಗುತ್ತದೆ,’’  ಎಂದರು. ದೇಶದ ಕಾನೂನು ಮತ್ತು ಸುವ್ಯವಸ್ಥೆಯ ನಿರಂತರ ಸುಧಾರಣೆಗೆ ಇಂತಹ ಘಟನೆಗಳು ಬಹಳ ಮುಖ್ಯ ಎಂದು ಅವರು ಹೇಳಿದರು.

ಭಾರತೀಯ ಸಮಾಜದ ಅಭಿವೃದ್ಧಿಯ ಪಯಣವು ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದು, ನಿರ್ಣಾಯಕ ಸವಾಲುಗಳನ್ನು ಎದುರಿಸುತ್ತಿದ್ದರೂ ನಾವು ಸ್ಥಿರವಾದ ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ‘‘ ನಮ್ಮ ಸಮಾಜದ ಅತಿದೊಡ್ಡ ಅಂಶವೆಂದರೆ ಪ್ರಗತಿಯ ಪಥದಲ್ಲಿ ಮುಂದುವರಿಯುವಾಗ ಆಂತರಿಕವಾಗಿ ತನ್ನನ್ನು ತಾನು ಸುಧಾರಿಸಿಕೊಳ್ಳುವ ಪ್ರವೃತ್ತಿ,’’ ಎಂದು ಪ್ರಧಾನಮಂತ್ರಿ ಹೇಳಿದರು. ನಿರಂತರ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಪ್ರತಿಯೊಂದು ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಇದು ಅತ್ಯಗತ್ಯ ಅಗತ್ಯ ಎಂದರು. ‘‘ ನಮ್ಮ ಸಮಾಜವು ಅಪ್ರಸ್ತುತ ಕಾನೂನುಗಳು ಮತ್ತು ತಪ್ಪು ಪದ್ಧತಿಗಳನ್ನು ಕಳೆಗುಂದಿಸುತ್ತಲೇ ಇರುತ್ತದೆ. ಇಲ್ಲದಿದ್ದರೆ, ಯಾವುದೇ ಸಂಪ್ರದಾಯವು ಸಾಂಪ್ರದಾಯಿಕತೆಗೆ ತಿರುಗಿದಾಗ, ಅದು ಸಮಾಜಕ್ಕೆ ಹೊರೆಯಾಗುತ್ತದೆ,’’ ಎಂದು ಹೇಳಿದ ಅವರು,‘‘ ದೇಶದ ಜನರು ಸರ್ಕಾರದ ಅನುಪಸ್ಥಿತಿಯನ್ನು ಅಥವಾ ಸರ್ಕಾರದ ಒತ್ತಡವನ್ನು ಅನುಭವಿಸಬಾರದು,’’ ಎಂದು ಅವರು ಹೇಳಿದರು.

ಭಾರತದ ನಾಗರಿಕರಿಂದ ಸರ್ಕಾರದ ಒತ್ತಡವನ್ನು ತೆಗೆದುಹಾಕಲು ವಿಶೇಷ ಒತ್ತು ನೀಡುವುದರ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಕಳೆದ 8 ವರ್ಷಗಳಲ್ಲಿ, ಭಾರತವು ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರಾಚೀನ ಕಾನೂನುಗಳನ್ನು ರದ್ದುಗೊಳಿಸಿದೆ ಮತ್ತು ನಾವಿನ್ಯತೆ ಮತ್ತು ಸುಲಭ ಜೀವನ ಮಾರ್ಗಕ್ಕೆ ಅಡ್ಡಿಯಾಗುವ ಕಾನೂನು ಅಡೆತಡೆಗಳನ್ನು ಕೊನೆಗಾಣಿಸಲು 32 ಸಾವಿರಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡಿದೆ ಎಂದು ಮಾಹಿತಿ ನೀಡಿದರು. ‘‘ ಅನೇಕ ಕಾನೂನುಗಳು ಗುಲಾಮಗಿರಿಯ ಕಾಲದಿಂದಲೂ ಮುಂದುವರಿಯುತ್ತಿವೆ,’’ ಎಂದು ಅವರು ಹೇಳಿದರು. ಗುಲಾಮಗಿರಿಯ ಕಾಲದಿಂದಲೂ ಅನೇಕ ಹಳೆಯ ಕಾನೂನುಗಳು ರಾಜ್ಯಗಳಲ್ಲಿಇನ್ನೂ ಚಾಲ್ತಿಯಲ್ಲಿವೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಈ ಸಮ್ಮೇಳನದಲ್ಲಿಅಂತಹ ಕಾನೂನುಗಳನ್ನು ರದ್ದುಗೊಳಿಸಲು ದಾರಿ ಮಾಡಿಕೊಡುವಂತೆ ಈ ಸಂದರ್ಭಗಳಲ್ಲಿ ಹಾಜರಿದ್ದ ಗಣ್ಯರಿಗೆ ಮನವಿ ಮಾಡಿದರು. ‘‘ಈ ಆಜಾದಿ ಕಾ ಅಮೃತ್‌ ಕಾಲ್‌ನಲ್ಲಿ, ಗುಲಾಮಗಿರಿಯ ಸಮಯದಿಂದ ನಡೆಯುತ್ತಿರುವ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಹೊಸ ಕಾನೂನುಗಳನ್ನು ರಚಿಸಬೇಕು,’’ ಎಂದು ನರೇಂದ್ರ ಮೋದಿ ಅವರು ಹೇಳಿದರು. ಜನರಿಗೆ ಸುಲಭ ಜೀವನ ಮತ್ತು ಸುಗಮ ನ್ಯಾಯದ ಬಗ್ಗೆ ಗಮನ ಹರಿಸುವಾಗ ರಾಜ್ಯಗಳ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಪರಾಮರ್ಶಿಸುವ ಬಗ್ಗೆಯೂ ಪ್ರಧಾನಮಂತ್ರಿ ಗಮನಸೆಳೆದರು.

ನ್ಯಾಯದಾನದಲ್ಲಿ ವಿಳಂಬವಾಗುತ್ತಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಮತ್ತು ಈ ದಿಸೆಯಲ್ಲಿ ನ್ಯಾಯಾಂಗವು ಅತ್ಯಂತ ಗಂಭೀರತೆಯಿಂದ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ನುಡಿದರು. ಪರ್ಯಾಯ ವಿವಾದ ಪರಿಹಾರದ ಕಾರ್ಯವಿಧಾನದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಇದನ್ನು ದೀರ್ಘಕಾಲದಿಂದ ಭಾರತದ ಹಳ್ಳಿಗಳಲ್ಲಿ ಸದ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ಈಗ ರಾಜ್ಯ ಮಟ್ಟಕ್ಕೆ ಬಡ್ತಿ ಪಡೆಯಬಹುದು ಎಂದು ಸಲಹೆ ನೀಡಿದರು. ‘‘ ರಾಜ್ಯಗಳ ಸ್ಥಳೀಯ ಮಟ್ಟದಲ್ಲಿ ಕಾನೂನು ವ್ಯವಸ್ಥೆಯ ಭಾಗವಾಗಿಸುವುದು ಹೇಗೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು,’’ ಎಂದು ನರೇಂದ್ರ ಮೋದಿ ಅವರು ಹೇಳಿದರು.

ತಾವು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಮಯವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಅಂದಿನ ಸರ್ಕಾರವು ಸಂಜೆ ನ್ಯಾಯಾಲಯಗಳ ಪರಿಕಲ್ಪನೆಯನ್ನು ಪರಿಚಯಿಸಿತ್ತು ಎಂದು ಹೇಳಿದರು. ವಿಭಾಗಗಳ ವಿಷಯದಲ್ಲಿಕಡಿಮೆ ಗಂಭೀರವಾಗಿರುವ ಪ್ರಕರಣಗಳನ್ನು ಸಂಜೆ ನ್ಯಾಯಾಲಯಗಳು ಕೈಗೆತ್ತಿಕೊಂಡವು, ಇದು ಇತ್ತೀಚಿನ ವರ್ಷಗಳಲ್ಲಿಗುಜರಾತ್‌ನಲ್ಲಿ9 ಲಕ್ಷ ಕ್ಕೂ ಹೆಚ್ಚು ಪ್ರಕರಣಗಳನ್ನು ಪರಿಹರಿಸಲು ಕಾರಣವಾಯಿತು ಎಂದು ಅವರು ವಿವರಿಸಿದರು. ಲೋಕ ಅದಾಲತ್‌ಗಳ ಉಗಮದ ಬಗ್ಗೆಯೂ ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು, ಇದು ವಿವಿಧ ರಾಜ್ಯಗಳಲ್ಲಿಲಕ್ಷಾಂತರ ಪ್ರಕರಣಗಳ ವಿಲೇವಾರಿಗೆ ಕಾರಣವಾಗಿದೆ ಮತ್ತು ನ್ಯಾಯಾಲಯಗಳ ಹೊರೆಯನ್ನು ಕಡಿಮೆ ಮಾಡಿದೆ. ‘‘ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಇದರಿಂದ ಅಪಾರ ಪ್ರಯೋಜನ ಪಡೆದಿದ್ದಾರೆ,’’ ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಕಾನೂನುಗಳನ್ನು ರೂಪಿಸುವಲ್ಲಿ ಮಂತ್ರಿಗಳ ಜವಾಬ್ದಾರಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಕಾನೂನಿನಲ್ಲಿಯೇ ಗೊಂದಲವಿದ್ದರೆ, ಉದ್ದೇಶಗಳು ಏನೇ ಇರಲಿ, ಭವಿಷ್ಯದಲ್ಲಿಸಾಮಾನ್ಯ ನಾಗರಿಕರೇ ಅದರ ಭಾರವನ್ನು ಹೊರಬೇಕಾಗುತ್ತದೆ ಎಂದು ಹೇಳಿದರು. ನ್ಯಾಯವನ್ನು ಪಡೆಯಲು ಸಾಮಾನ್ಯ ನಾಗರಿಕರು ಸಾಕಷ್ಟು ಹಣವನ್ನು ಖರ್ಚು ಮಾಡಬೇಕು ಮತ್ತು ಪೋಸ್ಟ್‌ನಿಂದ ಕಂಬಕ್ಕೆ ಓಡಬೇಕು ಎಂದು ಹೇಳಿದ ಅವರು, ‘‘ಕಾನೂನು ಸಾಮಾನ್ಯ ಮನುಷ್ಯನ ತಿಳುವಳಿಕೆಗೆ ಬಂದಾಗ, ಅದರ ಪರಿಣಾಮವು ಬೇರೆಯೇ ಆಗಿರುತ್ತದೆ,’’ ಎಂದರು.

ಇತರ ದೇಶಗಳ ಉದಾಹರಣೆಗಳನ್ನು ನೀಡುತ್ತಾ, ಸಂಸತ್ತು ಅಥವಾ ಶಾಸನಸಭೆಯಲ್ಲಿಒಂದು ಕಾನೂನನ್ನು ರೂಪಿಸಿದಾಗ, ಅದನ್ನು ಕಾನೂನಿನ ವ್ಯಾಖ್ಯೆಯೊಳಗೆ ವಿವರವಾಗಿ ವಿವರಿಸಲು ಸಿದ್ಧತೆಯಾಗಿದೆ ಮತ್ತು ಎರಡನೆಯದಾಗಿ ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿಕಾನೂನನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಾನೂನನ್ನು ಕಾರ್ಯಗತಗೊಳಿಸುವ ಕಾಲಮಿತಿಯನ್ನು ಸಹ ನಿರ್ಧರಿಸಲಾಗುತ್ತದೆ ಮತ್ತು ಹೊಸ ಸಂದರ್ಭಗಳಲ್ಲಿಕಾನೂನನ್ನು ಮತ್ತೆ ಪರಿಶೀಲಿಸಲಾಗುತ್ತದೆ. ‘‘ ನ್ಯಾಯವನ್ನು ಸುಲಭಗೊಳಿಸಲು ಕಾನೂನು ವ್ಯವಸ್ಥೆಯಲ್ಲಿಸ್ಥಳೀಯ ಭಾಷೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ಮಾತೃಭಾಷೆಯಲ್ಲಿ ಯುವಕರಿಗಾಗಿ ಶೈಕ್ಷ ಣಿಕ ಪರಿಸರ ವ್ಯವಸ್ಥೆಯನ್ನು ಸಹ ರಚಿಸಬೇಕಾಗುತ್ತದೆ. ಕಾನೂನು ಕೋರ್ಸ್‌ಗಳು ಮಾತೃಭಾಷೆಯಲ್ಲಿರಬೇಕು, ನಮ್ಮ ಕಾನೂನುಗಳನ್ನು ಸರಳ ಭಾಷೆಯಲ್ಲಿಬರೆಯಬೇಕು, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಪ್ರಮುಖ ಪ್ರಕರಣಗಳ ಡಿಜಿಟಲ್‌ ಗ್ರಂಥಾಲಯಗಳು ಸ್ಥಳೀಯ ಭಾಷೆಯಲ್ಲಿರಬೇಕು,’’ ಎಂದು ಅವರು ಹೇಳಿದರು.

‘‘ನ್ಯಾಯಾಂಗ ವ್ಯವಸ್ಥೆಯು ಸಮಾಜದೊಂದಿಗೆ ಬೆಳೆದಾಗ, ಅದು ಆಧುನಿಕತೆಯನ್ನು ಅಳವಡಿಸಿಕೊಳ್ಳುವ ಸ್ವಾಭಾವಿಕ ಪ್ರವೃತ್ತಿಯನ್ನು ಹೊಂದಿರುತ್ತದೆ. ಇದರ ಪರಿಣಾಮವಾಗಿ, ಸಮಾಜದಲ್ಲಿಉಂಟಾಗುವ ಬದಲಾವಣೆಗಳು ಸಹ ನ್ಯಾಯಾಂಗ ವ್ಯವಸ್ಥೆಯ ಮೂಲಕ ಗೋಚರಿಸುತ್ತವೆ,’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಏಕೀಕರಣದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಇ-ನ್ಯಾಯಾಲಯಗಳು ಮತ್ತು ವರ್ಚುವಲ್‌ ವಿಚಾರಣೆಗಳ ಹೊರಹೊಮ್ಮುವಿಕೆ ಮತ್ತು ಇ-ಫೈಲಿಂಗ್‌ಗಳ ಉತ್ತೇಜನದ ಬಗ್ಗೆ ಗಮನಸೆಳೆದರು. ದೇಶದಲ್ಲಿ5 ಜಿ ಆಗಮನದೊಂದಿಗೆ ಈ ವ್ಯವಸ್ಥೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ನರೇಂದ್ರ ಮೋದಿ ಹೇಳಿದರು. ‘‘ ಪ್ರತಿಯೊಂದು ರಾಜ್ಯವು ತನ್ನ ವ್ಯವಸ್ಥೆಯನ್ನು ನವೀಕರಿಸಬೇಕು ಮತ್ತು ತಂತ್ರಜ್ಞಾನಕ್ಕೆ ಅನುಗುಣವಾಗಿ ಅದನ್ನು ಸಿದ್ಧಪಡಿಸುವುದು ನಮ್ಮ ಕಾನೂನು ಶಿಕ್ಷಣದ ಪ್ರಮುಖ ಗುರಿಯಾಗಿರಬೇಕು,’’ ಎಂದು ಅವರು ಹೇಳಿದರು.

ವಿಚಾರಣಾಧೀನ ಖೈದಿಗಳ ಸಮಸ್ಯೆಯನ್ನು ಪ್ರಧಾನ ಮಂತ್ರಿಯವರು ಪ್ರಸ್ತಾಪಿಸಿದ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಭೆಯನ್ನು ಸ್ಮರಿಸಿದ ಅವರು, ಇಂತಹ ಪ್ರಕರಣಗಳ ಇತ್ಯರ್ಥಕ್ಕಾಗಿ ತ್ವರಿತ ವಿಚಾರಣೆಗೆ ಶ್ರಮಿಸುವಂತೆ ಗಣ್ಯರನ್ನು ಒತ್ತಾಯಿಸಿದರು. ವಿಚಾರಣಾಧೀನ ಕೈದಿಗಳ ಬಗ್ಗೆ ರಾಜ್ಯ ಸರ್ಕಾರಗಳು ಮಾನವೀಯ ದೃಷ್ಟಿಕೋನದಿಂದ ಕೆಲಸ ಮಾಡಬೇಕು, ಇದರಿಂದ ನ್ಯಾಯಾಂಗ ವ್ಯವಸ್ಥೆಯು ಮಾನವೀಯ ಆದರ್ಶಗಳೊಂದಿಗೆ ಮುಂದುವರಿಯುತ್ತದೆ ಎಂದು ಪ್ರಧಾನಿ ಹೇಳಿದರು. ‘‘ ಸಮರ್ಥ ರಾಷ್ಟ್ರ ಮತ್ತು ಸಾಮರಸ್ಯದ ಸಮಾಜಕ್ಕೆ ಸೂಕ್ಷ್ಮ ನ್ಯಾಯ ವ್ಯವಸ್ಥೆ ಅತ್ಯಗತ್ಯ,’’ ಎಂದು ನರೇಂದ್ರ ಮೋದಿ ಅವರು ಹೇಳಿದರು.

ಸಂವಿಧಾನದ ಪರಮಾಧಿಕಾರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಸಂವಿಧಾನವು ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಮೂಲವಾಗಿದೆ ಎಂದು ಹೇಳಿದರು. ‘‘ಅದು ಸರ್ಕಾರವಾಗಿರಲಿ, ಸಂಸತ್‌ ಆಗಿರಲಿ, ನಮ್ಮ ನ್ಯಾಯಾಲಯಗಳಾಗಿರಲಿ, ಈ ಮೂರೂ ಒಂದು ರೀತಿಯಲ್ಲಿಒಂದೇ ತಾಯಿಯ ಮಕ್ಕಳು. ಆದ್ದರಿಂದ ಕಾರ್ಯಗಳು ವಿಭಿನ್ನವಾಗಿದ್ದರೂ, ನಾವು ಸಂವಿಧಾನದ ಸ್ಫೂರ್ತಿಯನ್ನು ನೋಡಿದರೆ, ವಾದ ಅಥವಾ ಸ್ಪರ್ಧೆಗೆ ಯಾವುದೇ ಅವಕಾಶವಿಲ್ಲ. ತಾಯಿಯ ಮಕ್ಕಳಂತೆ, ಈ ಮೂವರೂ ಸಹ ಮಾ ಭಾರತಿಯ ಸೇವೆ ಮಾಡಬೇಕು, ಅವರು ಒಟ್ಟಾಗಿ 21 ನೇ ಶತಮಾನದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ,’’ ಎಂದು ಪ್ರಧಾನ ಮಂತ್ರಿ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರಣ್‌ ರಿಜಿಜು ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಶ್ರೀ ಎಸ್‌.ಪಿ.ಸಿಂಗ್‌ ಬಘೇಲ್‌ ಅವರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಹಿನ್ನೆಲೆ

ಗುಜರಾತ್‌ನ ಏಕ್ತಾ ನಗರದಲ್ಲಿಕಾನೂನು ಮತ್ತು ನ್ಯಾಯ ಸಚಿವಾಲಯವು ಎರಡು ದಿನಗಳ ಸಮ್ಮೇಳನವನ್ನು ಆಯೋಜಿಸಿದೆ. ಭಾರತೀಯ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ನೀತಿ ನಿರೂಪಕರಿಗೆ ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಈ ಸಮಾವೇಶದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅತ್ಯುತ್ತಮ ಕ್ರಮಗಳನ್ನು ಹಂಚಿಕೊಳ್ಳಲು, ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ತಮ್ಮ ಪರಸ್ಪರ ಸಹಕಾರವನ್ನು ಸುಧಾರಿಸಲು ಸಾಧ್ಯವಾಗುತ್ತದೆ.

ತ್ವರಿತ ಮತ್ತು ಕೈಗೆಟುಕುವ ನ್ಯಾಯಕ್ಕಾಗಿ ಮಧ್ಯಸ್ಥಿಕೆ , ಒಟ್ಟಾರೆ ಕಾನೂನು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು, ಹಳೆಯ ಕಾನೂನುಗಳನ್ನು ತೆಗೆದುಹಾಕುವುದು, ನ್ಯಾಯದ ಲಭ್ಯತೆಯನ್ನು ಸುಧಾರಿಸುವುದು, ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವುದು ಮತ್ತು ತ್ವರಿತ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳುವುದು, ಉತ್ತಮ ಕೇಂದ್ರ-ರಾಜ್ಯ ಸಮನ್ವಯಕ್ಕಾಗಿ ರಾಜ್ಯ ಮಸೂದೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳಲ್ಲಿಏಕರೂಪತೆಯನ್ನು ತರುವುದು ಮತ್ತು ರಾಜ್ಯ ಕಾನೂನು ವ್ಯವಸ್ಥೆಗಳನ್ನು ಬಲಪಡಿಸುವುದು ಮುಂತಾದ ವಿಷಯಗಳ ಬಗ್ಗೆ ಈ ಸಮ್ಮೇಳನವು ಚರ್ಚೆಗಳಿಗೆ ಸಾಕ್ಷಿಯಾಗಲಿದೆ.

 

*****