ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಅದಾಲಾಜ್‌ನ ತ್ರಿಮಂದಿರದಲ್ಲಿಂದು ಶ್ರೇಷ್ಠತಾ ಮಿಷನ್ ಶಾಲೆಗಳಿಗೆ(ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್)ಗೆ ಚಾಲನೆ ನೀಡಿದರು. ಒಟ್ಟು 10,000 ಕೋಟಿ ರೂ. ವೆಚ್ಚದಲ್ಲಿ ಮಿಷನ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ತ್ರಿಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಸುಮಾರು 4,260 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ವಿಧ್ಯುಕ್ತ ಚಾಲನೆ ನೀಡಿದರು. ಮಿಷನ್ ಗುಜರಾತ್‌ನಲ್ಲಿ ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ತರಗತಿಗಳು, ಕಂಪ್ಯೂಟರ್ ಪ್ರಯೋಗಾಲಯಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಮೂಲಸೌಕರ್ಯ ಬಲಪಡಿಸಲು ಸಹಾಯ ಮಾಡುತ್ತದೆ. ರಾಜ್ಯದ ಶಾಲೆಗಳ ಒಟ್ಟಾರೆ ಮೂಲಸೌಕರ್ಯಗಳ ಉನ್ನತೀಕರಣ ಮಾಡುತ್ತದೆ.
ನಂತರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಇಂದು ಗುಜರಾತ್ ಅಮೃತ ಕಾಲಘಟ್ಟದಲ್ಲಿ ಅಮೃತ ಪೀಳಿಗೆಯನ್ನು ಸೃಜಿಸುವ ನಿಟ್ಟಿನಲ್ಲಿ ಸ್ಮರಣೀಯ ಹೆಜ್ಜೆ ಇಡುತ್ತಿದೆ. “ಈ ಸಂದರ್ಭವು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮತ್ತು ಅಭಿವೃದ್ಧಿ ಹೊಂದಿದ ಗುಜರಾತಿಗೆ ಮೈಲಿಗಲ್ಲು ಆಗಲಿದೆ”. ಎಂದ ಪ್ರಧಾನಿ, ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್‌ಗಾಗಿ ಗುಜರಾತಿನ ಎಲ್ಲಾ ನಾಗರಿಕರು, ಶಿಕ್ಷಕರು, ಯುವಕರು ಮತ್ತು ಹೊಸ ಪೀಳಿಗೆಯನ್ನು ಅಭಿನಂದಿಸುತ್ತೇನೆ ಎಂದರು.
5ಜಿ ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆ ಕುರಿತು ಬೆಳಕು ಚೆಲ್ಲುವ ಪ್ರಧಾನಿ, ನಾವು 1ರಿಂದ 4ನೇ ತಲೆಮಾರಿನವರೆಗೆ ಅಂತರ್ಜಾಲ ಬಳಸಿದ್ದರೂ ಸಹ, 5ಜಿ ತಂತ್ರಜ್ಞಾನ ಭಾರತದಾದ್ಯಂತ ಪರಿವರ್ತನೆ ತರುತ್ತದೆ. ಪ್ರತಿಯೊಂದು ಪೀಳಿಗೆಯೊಂದಿಗೆ ತಂತ್ರಜ್ಞಾನವು ಜೀವನದ ಪ್ರತಿಯೊಂದು ಆಯಾಮಕ್ಕೂ ನಮ್ಮನ್ನು ಸಂಪರ್ಕಿಸಿದೆ. “ಅಂತೆಯೇ ನಾವು ವಿವಿಧ ಪೀಳಿಗೆಯ ಶಾಲೆಗಳನ್ನು ನೋಡಿದ್ದೇವೆ. 5ಜಿ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ, ಇದು ಶಿಕ್ಷಣ ವ್ಯವಸ್ಥೆಯನ್ನು ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನು ಮೀರಿ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. “ನಮ್ಮ ಕಿರಿಯ ವಿದ್ಯಾರ್ಥಿಗಳು ಈಗ ಶಾಲೆಗಳಲ್ಲಿ ವರ್ಚುವಲ್ ರಿಯಾಲಿಟಿ ಮತ್ತು ಇಂಟರ್ನೆಟ್ ವಿಷಯಗಳನ್ನು ಅನುಭವಿಸಬಹುದು. ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಮೂಲಕ ಗುಜರಾತ್ ಇಡೀ ದೇಶದಲ್ಲೇ ಮೊದಲ ಮತ್ತು ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿದ. ಈ ಮಹತ್ವದ ಸಾಧನೆಗಾಗಿ ನಾನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ ಎಂದರು.
ಕಳೆದ 2 ದಶಕಗಳಲ್ಲಿ ಗುಜರಾತಿನ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳಿಗೆ ಪ್ರಧಾನ ಮಂತ್ರಿ ಸಂತಸ ವ್ಯಕ್ತಪಡಿಸಿದರು. ಗುಜರಾತಿನಲ್ಲಿ ಹಿಂದಿನ ಶಿಕ್ಷಣ ಕ್ಷೇತ್ರದ ಹದಗೆಟ್ಟ ಸ್ಥಿತಿಯನ್ನು ನೆನಪಿಸಿಕೊಂಡ ಪ್ರಧಾನಿ, 100ರಲ್ಲಿ 20 ಮಕ್ಕಳು ಎಂದಿಗೂ ಶಾಲೆಗೆ ಹೋಗುತ್ತಿರಲಿಲ್ಲ. ಶಾಲೆಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳು 8ನೇ ತರಗತಿಯ ನಂತರ ಬಿಡುತ್ತಾರೆ. ಶಾಲೆಗೆ ಹೋಗುವುದನ್ನು ನಿಲ್ಲಿಸಿದ ಹೆಣ್ಣು ಮಕ್ಕಳ ಸ್ಥಿತಿ ಉಳಿದವರಿಗಿಂತ ಇನ್ನೂ ಕೆಟ್ಟದಾಗಿತ್ತು. ಬುಡಕಟ್ಟು ಪ್ರದೇಶಗಳಲ್ಲಿ ಇರುವ ಶೈಕ್ಷಣಿಕ ಕೇಂದ್ರಗಳ ಕೊರತೆ ಕುರಿತು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ವಿಜ್ಞಾನ ಶಿಕ್ಷಣಕ್ಕಾಗಿ ಯಾವುದೇ ಯೋಜನೆಗಳಿರಲಿಲ್ಲ. ಆದರೆ ಈ 2 ದಶಕಗಳಲ್ಲಿ ಗುಜರಾತಿನ ಜನರು ತಮ್ಮ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯ ಪರಿವರ್ತನೆ ತೋರಿದ್ದಾರೆ. ಈ 2 ದಶಕಗಳಲ್ಲಿ ಗುಜರಾತ್‌ನಲ್ಲಿ 1.25 ಲಕ್ಷಕ್ಕೂ ಹೆಚ್ಚು ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ, 2 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. “ಶಾಲಾ ಪ್ರವೇಶೋತ್ಸವ ಮತ್ತು ಕನ್ಯಾ ಕೆಳವಾಣಿ ಮಹೋತ್ಸವದಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ ದಿನ ನನಗೆ ಇನ್ನೂ ನೆನಪಿದೆ. ಮಗ ಮತ್ತು ಮಗಳು ಮೊದಲ ಬಾರಿಗೆ ಶಾಲೆಗೆ ಹೋದಾಗ ಅದನ್ನು ಹಬ್ಬದ ರೀತಿ ಆಚರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಶಿಕ್ಷಣದ ಗುಣಮಟ್ಟ ಕೇಂದ್ರೀಕರಿಸುವ ಹಬ್ಬವಾದ ‘ಗುಣೋತ್ಸವ’ವನ್ನೂ ಸಹ ಪ್ರಧಾನಿ ನೆನಪಿಸಿಕೊಂಡರು. ಈ ಮೌಲ್ಯಮಾಪನದಲ್ಲಿ, ವಿದ್ಯಾರ್ಥಿಗಳ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಅಳೆಯಲಾಗುತ್ತದೆ ಮತ್ತು ಸಮರ್ಪಕ ಪರಿಹಾರಗಳನ್ನು ಸೂಚಿಸಲಾಗುತ್ತದೆ. ಗುಜರಾತಿನ ವಿದ್ಯಾ ಸಮೀಕ್ಷಾ ಕೇಂದ್ರದಲ್ಲಿ ‘ಗುಣೋತ್ಸವ’ದ ಹೆಚ್ಚು ಸುಧಾರಿತ ತಂತ್ರಜ್ಞಾನ ಆಧಾರಿತ ಆವೃತ್ತಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. “ಗುಜರಾತ್ ಯಾವಾಗಲೂ ಶಿಕ್ಷಣ ಕ್ಷೇತ್ರದಲ್ಲಿ ಕೆಲವು ವಿಶಿಷ್ಟ ಮತ್ತು ದೊಡ್ಡ ಪ್ರಯೋಗಗಳ ಭಾಗವಾಗಿದೆ. ನಾವು ಇನ್‌ಸ್ಟಿಟ್ಯೂಟ್ ಆಫ್ ಟೀಚರ್ಸ್ ಎಜುಕೇಶನ್ ಅನ್ನು ಸ್ಥಾಪಿಸಿದ್ದೇವೆ, ಇದು ಗುಜರಾತ್‌ನಲ್ಲಿ ಮೊದಲ ಶಿಕ್ಷಕರ ತರಬೇತಿ ವಿಶ್ವವಿದ್ಯಾಲಯವಾಗಿದೆ” ಎಂದು ಅವರು ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಮಯವನ್ನು ಸ್ಮರಿಸಿದ ಪ್ರಧಾನಿ, ಅವರು ಒಂದು ಹಳ್ಳಿಯಿಂದ ಮತ್ತೊಂದು ಗ್ರಾಮಕ್ಕೆ ಪ್ರಯಾಣಿಸಿದಾಗ, ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಎಲ್ಲಾ ಜನರಿಗೆ ವಿನಂತಿ ಮಾಡುತ್ತಿದ್ದೆ. ಆದರೆ ಇದೀಗ ಗುಜರಾತ್‌ನಲ್ಲಿ ಬಹುತೇಕ ಪ್ರತಿಯೊಬ್ಬ ಮಗ ಮತ್ತು ಮಗಳು ಶಾಲೆಗೆ ಹೋಗುತ್ತಿದ್ದಾರೆ, ಶಾಲೆಯ ನಂತರ ಕಾಲೇಜಿಗೆ ಹೋಗುತ್ತಿದ್ದಾರೆ ಎಂಬುದು ಇದರ ಫಲಿತಾಂಶವಾಗಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ತಾವು ಮಾಡಿದ ಮನವಿಗೆ ಕಿವಿಗೊಟ್ಟ ಪೋಷಕರಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ದಶಕದ ಹಿಂದೆಯೇ ಗುಜರಾತಿನಲ್ಲಿ 20 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಕಂಪ್ಯೂಟರ್ ನೆರವಿನ ಕಲಿಕಾ ಲ್ಯಾಬ್‌ಗಳನ್ನು ಹೊರತುಪಡಿಸಿ, 15,000 ಶಾಲೆಗಳಿಗೆ ಟಿವಿ ಒದಗಿಸಲಾಗಿತ್ತು. ಅಂತಹ ಹಲವು ವ್ಯವಸ್ಥೆಗಳು ಹಲವು ವರ್ಷಗಳ ಹಿಂದೆ ಗುಜರಾತ್‌ನ ಶಾಲೆಗಳ ಅವಿಭಾಜ್ಯ ಅಂಗವಾಗಿದ್ದವು ಎಂದರು. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ಇಂದು ಗುಜರಾತ್‌ನಲ್ಲಿ 1 ಕೋಟಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ಮತ್ತು 4 ಲಕ್ಷಕ್ಕೂ ಹೆಚ್ಚಿನ ಶಿಕ್ಷಕರು ಆನ್‌ಲೈನ್ ಹಾಜರಾತಿ ನೋಂದಾಯಿಸಿದ್ದಾರೆ. ಇಂದು ಗುಜರಾತ್‌ನಲ್ಲಿ 20 ಸಾವಿರ ಶಾಲೆಗಳು ಶಿಕ್ಷಣದ 5ಜಿ ತಂತ್ರಜ್ಞಾನ ಯುಗವನ್ನು ಪ್ರವೇಶಿಸಲಿವೆ ಎಂದರು.
ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಅಡಿ ಒಳಗೊಂಡಿರುವ ಯೋಜನೆಗಳ ಬಗ್ಗೆ ಗಮನ ಸೆಳೆದ ಪ್ರಧಾನಿ, ಈ ಶಾಲೆಗಳಲ್ಲಿ 50 ಸಾವಿರ ಹೊಸ ತರಗತಿ ಕೊಠಡಿಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ತರಗತಿಗಳನ್ನು ನಿರ್ಮಿಸಲಾಗುವುದು. ಈ ಶಾಲೆಗಳು ಕೇವಲ ಆಧುನಿಕ, ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳನ್ನು ಮಾತ್ರ ಹೊಂದಿರದೆ, ಇದು ಮಕ್ಕಳ ಜೀವನದಲ್ಲಿ ಮತ್ತು ಅವರ ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ತರುವ ಅಭಿಯಾನವಾಗಿದೆ. ಇಲ್ಲಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಲು ಪ್ರತಿಯೊಂದು ವಿಷಯದಲ್ಲೂ ಕೆಲಸ ಮಾಡಲಾಗುವುದು” ಎಂದು ಪ್ರಧಾನಿ ಹೇಳಿದರು.
5ಜಿ ತಂತ್ರಜ್ಞಾನ ಆಗಮನದಿಂದ ಈ ಎಲ್ಲಾ ಕ್ರಮಗಳು ಹೆಚ್ಚು ಪ್ರಯೋಜನ ಪಡೆಯಲಿವೆ. ದೂರದ ಪ್ರದೇಶಗಳು ಸೇರಿದಂತೆ ಎಲ್ಲರಿಗೂ ಅತ್ಯುತ್ತಮ ವಿಷಯ, ಶಿಕ್ಷಣಶಾಸ್ತ್ರ ಮತ್ತು ಶಿಕ್ಷಕರನ್ನು ಲಭ್ಯವಾಗುವಂತೆ ಮಾಡಲು ಇದು ಸಹಾಯ ಮಾಡುತ್ತದೆ. “ಶೈಕ್ಷಣಿಕ ಆಯ್ಕೆಗಳ ವೈವಿಧ್ಯತೆ ಮತ್ತು ನಮ್ಯತೆಯು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೆಲ ಮಟ್ಟಕ್ಕೆ ತರುತ್ತದೆ” ಎಂದು ಅವರು ಹೇಳಿದರು. ಮುಂಬರುವ ಹದಿನಾಲ್ಕುವರೆ ಸಾವಿರ ಪಿಎಂ-ಶ್ರೀ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಮಾದರಿ ಶಾಲೆಗಳಾಗಲಿವೆ. ಈ ಮಹತ್ವಾಕಾಂಕ್ಷಿ ಯೋಜನೆಗೆ 27 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಪ್ರಧಾನಿ ತಿಳಿಸಿದರು.
“ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶವನ್ನು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸಲು ಮತ್ತು ಪ್ರತಿಭೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಪ್ರಯತ್ನವಾಗಿದೆ”. ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬುದ್ಧಿವಂತಿಕೆಯ ಅಳತೆಗೋಲಾಗಿ ಪರಿಗಣಿಸಲಾಗಿದೆ. ಆದರೆ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ. ಆದರೆ ಹಲವು ದಶಕಗಳಿಂದ ಹಳ್ಳಿಗಳ ಮತ್ತು ಬಡ ಕುಟುಂಬಗಳ ನೈಜ ಪ್ರತಿಭಾನ್ವಿತರನ್ನು ಭಾಷೆಯ ಕಾರಣಕ್ಕಾಗಿ ದೇಶಕ್ಕೆ ಪ್ರಯೋಜನ ಪಡೆಯಲಾಗದಷ್ಟು ಅಡ್ಡಿಯಾಗಿತ್ತು. “ಈಗ ಈ ಪರಿಸ್ಥಿತಿಯನ್ನು ಬದಲಾಯಿಸಲಾಗುತ್ತಿದೆ. ಈಗ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯವನ್ನು ಭಾರತೀಯ ಭಾಷೆಗಳಲ್ಲಿಯೂ ಕಲಿಯುವ ಆಯ್ಕೆ ಪಡೆಯಲು ಆರಂಭಿಸಿದ್ದಾರೆ. ಗುಜರಾತಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಕೋರ್ಸ್‌ಗಳನ್ನು ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಇದು ‘ಸಬ್ಕಾ ಪ್ರಾರ್ಥನೆ’ಯ ಸಮಯವಾದ್ದರಿಂದ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನಗಳಿಂದ ಯಾರನ್ನೂ ಹೊರಗೆ ಉಳಿಯಲು ಬಿಡುವುದಿಲ್ಲ’ ಎಂಬ ಮನೋಭಾವವನ್ನು ಪ್ರಧಾನಿ ಪುನರುಚ್ಚರಿಸಿದರು.
ವಿಜ್ಞಾನ ಮತ್ತು ಜ್ಞಾನ ಕ್ಷೇತ್ರದಲ್ಲಿ ಭಾರತದ ಪೂರ್ವಜರ ಅದ್ಭುತ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ, “ಶಿಕ್ಷಣವು ಪ್ರಾಚೀನ ಕಾಲದಿಂದಲೂ ಭಾರತದ ಅಭಿವೃದ್ಧಿಯ ಕೇಂದ್ರಬಿಂದುವಾಗಿದೆ”. ಭಾರತವು ಸ್ವಭಾವತಃ ಜ್ಞಾನಾಧರಿತ ಗಟ್ಟಿನೆಲವಾಗಿದ್ದು, ನೂರಾರು ವರ್ಷಗಳ ಹಿಂದೆಯೇ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳನ್ನು ನಿರ್ಮಿಸಿ ದೊಡ್ಡ ಗ್ರಂಥಾಲಯಗಳನ್ನು ಸ್ಥಾಪಿಸಿದವರು ನಮ್ಮ ಪೂರ್ವಜರು ಎಂದು ವಿವರಿಸಿದರು. ಭಾರತದ ಮೇಲೆ ಆಕ್ರಮಣ ನಡೆದಾಗ ಮತ್ತು ಭಾರತದ ಈ ಸಂಪತ್ತನ್ನು ನಾಶಪಡಿಸುವ ಕಾಲಘಟ್ಟ ಬಗ್ಗೆ ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. “ಶಿಕ್ಷಣದ ಮೇಲಿನ ನಮ್ಮ ಬಲವಾದ ಒತ್ತಾಯವನ್ನು ನಾವು ಕೈಬಿಟ್ಟಿಲ್ಲ.” ಇಂದಿಗೂ ಜ್ಞಾನ ಮತ್ತು ವಿಜ್ಞಾನ ಜಗತ್ತಿನಲ್ಲಿ ಭಾರತವು ಹೊಸತನದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ಇದು ಕಾರಣವಾಗಿದೆ. “ಆಜಾದಿ ಕಾ ಅಮೃತ ಕಾಲದಲ್ಲಿ, ಅದರ ಪ್ರಾಚೀನ ಪ್ರತಿಷ್ಠೆ ಮತ್ತು ವೈಭವವನ್ನು ಮರಳಿ ಪಡೆಯಲು ಅವಕಾಶವಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವದಲ್ಲಿ ಶ್ರೇಷ್ಠ ಜ್ಞಾನಾಧರಿತ ಆರ್ಥಿಕತೆಯಾಗಲು ಭಾರತದ ಅಪಾರ ಸಾಮರ್ಥ್ಯ ಹೊಂದಿದೆ. “21 ನೇ ಶತಮಾನದಲ್ಲಿ, ವಿಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿನ ಆವಿಷ್ಕಾರಗಳು, ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿನ ಆವಿಷ್ಕಾರಗಳು ಭಾರತದಲ್ಲೇ ನಡೆಯಲಿವೆ ಎಂದು ಹೇಳಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದರು. ಈ ವಿಷಯದಲ್ಲಿ ಗುಜರಾತ್‌ಗೆ ಉತ್ತಮ ಅವಕಾಶವಿದೆ. ಇಲ್ಲಿಯವರೆಗೆ ಗುಜರಾತ್ ಉತ್ಪಾದನೆ, ವ್ಯಾಪಾರ ಮತ್ತು ವ್ಯವಹಾರಗಳಿಂದ ಗುರುತಿಸಲ್ಪಟ್ಟಿದೆ. ಆದರೆ 21ನೇ ಶತಮಾನದಲ್ಲಿ ಗುಜರಾತ್ ದೇಶದ ಜ್ಞಾನ ಕೇಂದ್ರವಾಗಿ, ನಾವೀನ್ಯತೆಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಈ ಚೈತನ್ಯವನ್ನು ಉತ್ತುಂಗಕ್ಕೇರಿಸುತ್ತದೆ ಎಂದು ನನಗೆ ಖಾತ್ರಿಯಿದೆ.” ಎಂದು ಪ್ರಧಾನಮಂತ್ರಿ ಭಾಷಣ ಮುಗಿಸಿದರು.
ಗುಜರಾತಿನ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಮತ್ತು ಗುಜರಾತ್ ಸರ್ಕಾರದ ಸಚಿವರಾದ ಶ್ರೀ ಜಿತುಭಾಯಿ ವಘಾನಿ, ಶ್ರೀ ಕುಬೇರಭಾಯ್ ದಿಂಡೋರ್ ಮತ್ತು ಶ್ರೀ ಕಿರಿತ್ಸಿಂಗ್ ವಘೇಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
Mission Schools of Excellence will help scale up education infrastructure in Gujarat. https://t.co/lHhlzttZwo
— Narendra Modi (@narendramodi) October 19, 2022
आज गुजरात अमृतकाल की अमृत पीढ़ी के निर्माण की तरफ बहुत बड़ा कदम उठा रहा है। pic.twitter.com/1Oiy3p5Axj
— PMO India (@PMOIndia) October 19, 2022
5G will usher in a transformation across India. pic.twitter.com/yODnTBS728
— PMO India (@PMOIndia) October 19, 2022
5G will revolutionize the education sector. pic.twitter.com/LO61tOusw7
— PMO India (@PMOIndia) October 19, 2022
PM @narendramodi recounts the various measures undertaken in Gujarat for improving the education sector. pic.twitter.com/7BoCCAWylZ
— PMO India (@PMOIndia) October 19, 2022
गुजरात में शिक्षा के क्षेत्र में, हमेशा ही कुछ नया, कुछ Unique और बड़े प्रयोग किए गए हैं। pic.twitter.com/oMz5IznOcO
— PMO India (@PMOIndia) October 19, 2022
PM-SHRI schools will be model schools for implementation of the National Education Policy. pic.twitter.com/ZGBW9BWiUL
— PMO India (@PMOIndia) October 19, 2022
In Azadi Ka Amrit Kaal, India has pledged to free itself from colonial mindset. The new National Education Policy is a step in that direction. pic.twitter.com/L3z3PJsx4F
— PMO India (@PMOIndia) October 19, 2022
शिक्षा, पुरातन काल से ही भारत के विकास की धुरी रही है। pic.twitter.com/BGaHIOHHc3
— PMO India (@PMOIndia) October 19, 2022
बीते दो दशकों में गुजरात में शिक्षा के क्षेत्र में जो परिवर्तन आया है, वो अभूतपूर्व है। इस दौरान राज्य के लोगों ने शिक्षा-व्यवस्था का कायाकल्प करके दिखाया है। pic.twitter.com/CSJdo0TVF8
— Narendra Modi (@narendramodi) October 19, 2022
मुझे विश्वास है कि 21वीं सदी में Science and Technology से जुड़े अधिकांश Innovation और Invention भारत में ही होंगे। इसमें भी गुजरात के पास बहुत बड़ा अवसर है। pic.twitter.com/AHO9GcaGSy
— Narendra Modi (@narendramodi) October 19, 2022