Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಾಗದಲ್ಲಿ ವಿಡಿಯೋ ಸಂದೇಶ ನೀಡಿದ ಪ್ರಧಾನಮಂತ್ರಿ 

ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಾಗದಲ್ಲಿ ವಿಡಿಯೋ ಸಂದೇಶ ನೀಡಿದ ಪ್ರಧಾನಮಂತ್ರಿ 


ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಾಗದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶ ನೀಡಿದರು. ಮುಂಬರುವ ಚುನಾವಣೆಗಳ ಬೆಳಕಿನಲ್ಲಿ “ಅಶ್ವಮೇಧ ಯಾಗ”ವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬ ಕಾರಣದಿಂದ ಪ್ರಧಾನಮಂತ್ರಿಯವರು ಸಂದಿಗ್ದತೆಯಿಂದ ತಮ್ಮ ಮಾತು ಆರಂಭಿಸಿದರು.  ಅದಾಗ್ಯೂ ಅವರು “ಅಶ್ವಮೇಧ ಯಾಗವನ್ನು ನೋಡುತ್ತಿದ್ದರೆ ಆಚಾರ್ಯ ಶ್ರೀ ರಾಮ ಶರ್ಮಾ ಅವರ ಭಾವನೆಗಳನ್ನು ಎತ್ತಿ ಹಿಡಿದಂತಾಗಿದೆ ಮತ್ತು ಇದು ಹೊಸ ಅರ್ಥವನ್ನು ಒಳಗೊಂಡಿದ್ದು, ನನ್ನ ಸಂದೇಹಗಳು ಕರಗಿಹೋಗಿವೆ” ಎಂದರು. 

“ಗಾಯತ್ರಿ ಪರಿವಾರ ಆಯೋಜಿಸಿರುವ ಅಶ್ವಮೇಧ ಯಾಗ ಭವ್ಯವಾದ ಸಾಮಾಜಿಕ ಅಭಿಯಾನವಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದ್ದು, ಲಕ್ಷಾಂತರ ಜನರನ್ನು ವ್ಯಸನದಿಂದ ದೂರವಿಡಲು ಮತ್ತು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಡೆ ತನ್ನ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ. “ಯುವ ಸಮೂಹ ದೇಶದ ಭವಿಷ್ಯವಾಗಿದೆ” ಎಂದು ಒತ್ತಿ ಹೇಳಿದರು. ಭಾರತದ ಭವಿಷ್ಯ ರೂಪಿಸುವಲ್ಲಿ ಮತ್ತು ಅದರ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಯುವ ಸಮೂಹದ ಪ್ರಮುಖ ಪಾತ್ರವನ್ನು ಇದು ಗುರುತಿಸುತ್ತದೆ. ಈ ಉದಾತ್ತ ಪ್ರಯತ್ನದಲ್ಲಿ ಗಾಯತ್ರಿ ಪರಿವಾರದ ಬದ್ಧತೆಗಾಗಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.   

ಆಚಾರ್ಯ ಶ್ರೀ ರಾಮ ಶರ್ಮಾ ಮತ್ತು ಮಾತಾ ಭಗವತಿ ಅವರ ಬೋಧನೆಗಳ ಮೂಲಕ ವ್ಯಕ್ತಿಗಳನ್ನು ಪ್ರೇರೇಪಿಸುವ ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಗಾಯತ್ರಿ ಪರಿವಾರದ ಅನೇಕ ಸದಸ್ಯರೊಂದಿಗೆ ತಮ್ಮ ವೈಯಕ್ತಿಕ ಸಂಪರ್ಕವನ್ನು ಸ್ಮರಿಸಿಕೊಂಡರು.

ಯುವ ಸಮೂಹವನ್ನು ವ್ಯಸನದ ಹಿಡಿತದಿಂದ ರಕ್ಷಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈಗಾಗಲೇ ತೊಂದರೆಗೀಡಾಗಿರುವವರ ರಕ್ಷಣೆಗೆ ಬೆಂಬಲ ನೀಡುವ ಅಗತ್ಯವಿದೆ. “ವ್ಯಸನ ವ್ಯಕ್ತಿಗಳು ಸಮಾಜದ ಮೇಲೆ ವಿನಾಶ ಉಂಟು ಮಾಡುತ್ತಾರೆ. ಇದರಿಂದ ಅಪಾರ ಹಾನಿಗೆ ಕಾರಣವಾಗುತ್ತದೆ. ಮೂರು – ನಾಲ್ಕು ವರ್ಷಗಳ ಹಿಂದೆ ವ್ಯಸನಮುಕ್ತ ಭಾರತ ನಿರ್ಮಾಣಕ್ಕಾಗಿ 11 ಕೋಟಿಗೂ ಅಧಿಕ ಜನರನ್ನು ತೊಡಗಿಸಿಕೊಂಡಿತ್ತು. ರಾಷ್ಟ್ರವ್ಯಾಪಿ ನಡೆದ ಈ ಉಪಕ್ರಮ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು. 
ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಜೊತೆಗೂಡಿ ದೇಶವ್ಯಾಪಿ ಬೈಕ್‌ ರಾಲಿ, ಪ್ರತಿಜ್ಞೆ ಸ್ವೀಕಾರ ಸಮಾರಂಭ ಮತ್ತು ಬೀದಿ ನಾಟಕಗಳ ಮೂಲಕ ವ್ಯಾಪಕ ಪ್ರಚಾರಾಂದೋಲನ ಹಮ್ಮಿಕೊಳ್ಳಲಾಗಿತ್ತು. ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲೂ ವ್ಯಸನ ನಿಯಂತ್ರಣ ಕುರಿತು ಮಾತನಾಡಿದ್ದನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. 

“ನಾವು ನಮ್ಮ ಯುವ ಸಮೂಹವನ್ನು ದೊಡ್ಡ ರಾಷ್ಟ್ರೀಯ ಮತ್ತು ಜಾಗತಿಕ ಉಪಕ್ರಮಗಳೊಂದಿಗೆ ಸಂಯೋಜಿಸಿದಾಗ ಅವರು ಸಣ್ಣ ತಪ್ಪುಗಳಿಂದ ದೂರ ಉಳಿಯುತ್ತಾರೆ” ಎಂದು ಪ್ರಧಾನಮಂತ್ರಿವರು ಹೇಳಿದರು. ವಿಕಸಿತ ಭಾರತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವಲ್ಲಿ ಯುವ ಸಮೂಹದ ಪಾತ್ರದ ಬಗ್ಗೆ ಒತ್ತಿ ಹೇಳಿದರು. “ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಧ್ಯೇಯವಾಕ್ಯ ʼಒಂದು ರಾಷ್ಟ್ರ, ಒಂದು ಕುಟುಂಬ, ಒಂದು ಭವಿಷ್ಯʼ  ಎಂಬುದಾಗಿದೆ. ನಮ್ಮ ಹಂಚಿಕೆಯ ಮಾನವೀಯ ಮೌಲ್ಯಗಳು ಮತ್ತು ಆಕಾಂಕ್ಷೆಗಳಿಗೆ ಇದು ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

“ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್‌ ಮತ್ತು ಒಂದು ಜಗತ್ತು, ಒಂದು ಆರೋಗ್ಯ” ಮುಂತಾದ ಉಪಕ್ರಮಗಳಲ್ಲಿ ಸಾಮೂಹಿಕ ಪ್ರಯತ್ನಗಳ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. “ಇಂತಹ ರಾಷ್ಟ್ರೀಯ ಮತ್ತು ಜಾಗತಿಕ ಅಭಿಯಾನದಲ್ಲಿ ನಮ್ಮ ಯುವ ಸಮೂಹ ಹೆಚ್ಚಾಗಿ ತೊಡಗಿಕೊಂಡರೆ ಹೆಚ್ಚಿನ ಪ್ರಮಾಣದಲ್ಲಿ ತಪ್ಪು ಹಾದಿಯಲ್ಲಿ ಸಾಗುವುದು ತಪ್ಪುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. 

ಕ್ರೀಡೆ ಮತ್ತು ವಿಜ್ಞಾನ ಕುರಿತ ಸರ್ಕಾರದ ಆದ್ಯತೆ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ಚಂದ್ರಯಾನ ಯಶಸ್ಸಿನ ನಂತರ ಯುವ ಸಮೂಹ ಹೊಸ ತಂತ್ರಜ್ಞಾನದ ಬಗ್ಗೆ ಆಸಕ್ತವಾಗಿದೆ” ಎಂದು ಹೇಳಿದರು. ಯುವ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಇಂತಹ ಉಪಕ್ರಮಗಳಿಂದ ಪರಿವರ್ತನೆಯ ಪರಿಣಾಮಗಳಾಗುತ್ತವೆ ಎಂದು ಒತ್ತಿ ಹೇಳಿದರು. ಫಿಟ್‌ ಇಂಡಿಯಾ ಮತ್ತು ಖೇಲೋ ಇಂಡಿಯಾ ಉಪಕ್ರಮಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, “ಪ್ರೇರಣಗೊಂಡ ಯುವ ಜನಾಂಗ ಮಾದಕ ವ್ಯಸನದ ಕಡೆಗೆ ಆಸಕ್ತರಾಗಲು ಸಾಧ್ಯವಿಲ್ಲ” ಎಂದರು. 

ಯುವ ಸಮೂಹ ʼಮೇರಾ ಯುವ ಭಾರತ್‌ [ಎಂವೈ ಭಾರತ್]‌ ಕಾರ್ಯಕ್ರಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈಗಾಗಲೇ ರಾಷ್ಟ್ರ ನಿರ್ಮಾಣದ ನೈಜ ಉದ್ದೇಶಕ್ಕಾಗಿ ಪೋರ್ಟಲ್‌ ನಲ್ಲಿ 1.5 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ ಎಂದರು. 
ಪ್ರಧಾನಮಂತ್ರಿ ಮೋದಿಯವರು ಮಾದಕ ವ್ಯವಸದ ವಿನಾಶಕಾರಿ ಪರಿಣಾಮವನ್ನು ಒಪ್ಪಿಕೊಂಡರು ಮತ್ತು ತಳಮಟ್ಟದಿಂದ ಮಾದಕ ವ್ಯವಸನವನ್ನು ನಿರ್ಮೂಲನೆ ಮಾಡುವ ಸರ್ಕಾರದ ಬದ್ಧತೆಯ ಬಗ್ಗೆ ಒತ್ತಿ ಹೇಳಿದರು. ಮಾದಕ ವ್ಯಸನದಿಂದ ಪರಿಣಾಮಕಾರಿಯಾಗಿ ದೂರವಿರಲು ಕುಟುಂಬ ವ್ಯವಸ್ಥೆಯ ಬಲಿಷ್ಠ ಬೆಂಬಲದ ಅಗತ್ಯವಿದೆ. “ಮಾದಕ ವಸ್ತು ಮುಕ್ತ ಭಾರತ ನಿರ್ಮಿಸಲು ಕುಟುಂಬಗಳು ಸಂಸ್ಥೆಗಳಾಗಿ ಬಲಿಷ್ಠವಾಗುವುದು ಕಡ್ಡಾಯವಾಗಿದೆ” ಎಂದು ಪ್ರಧಾನಮಂತ್ರಿಯವರು ದೃಢಪಡಿಸಿದರು. 

“ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಭಾರತದ ಸಹಸ್ರಾರು ವರ್ಷಗಳ ಹೊಸ ಯಾನ ಇದೀಗ ಆರಂಭವಾಗಿದೆ” ಎಂದು ಹೇಳಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿಕೊಂಡರು. ಭವ್ಯ ಭವಿಷ್ಯದತ್ತ ಸಾಗಲು ದೇಶದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. “ಈ ಅಮೃತ ಕಾಲದಲ್ಲಿ ನಾವು ಹೊಸ ಯುಗಕ್ಕೆ ಸಾಕ್ಷಿಯಾಗುತ್ತಿದ್ದೇವೆ” ಎಂದು ಪ್ರಧಾನಮಂತ್ರಿ ಮೋದಿ ಅವರು ಹೇಳಿದರು. ಭಾರತದ ಪಯಣದಲ್ಲಿ ಆಶಾವಾದ ವ್ಯಕ್ತಪಡಿಸಿದ ಪ್ರಧಾನಮಂತ್ರಿಯರು, ವೈಯಕ್ತಿಕ ಅಭಿವೃದ್ಧಿ ಪ್ರಯತ್ನಗಳ ಮೂಲಕ ರಾಷ್ಟ್ರೀಯ ಅಭಿವೃದ್ಧಿಯಾಗುತ್ತದೆ. ತನ್ಮೂಲಕ ಜಾಗತಿಕ ನಾಯಕನಾಗುವ ಕಡೆಗೆ ದೇಶ ಸಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. 

Sharing my remarks at the Ashwamedha Yagya organised by World Gayatri Pariwar. https://t.co/jmmCzUsuHT

— Narendra Modi (@narendramodi) February 25, 2024

 

***