Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಾಯಕ ಮುಖೇಶ್‌ ಅವರ 100 ನೇ ಜನ್ಮದಿನಕ್ಕೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ


ಭಾರತೀಯ ಸಂಗೀತದಲ್ಲಿ ಗಾಯಕ ಮುಖೇಶ್‌ ಅವರ ಅಳಿಸಲಾಗದ ಗುರುತನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆನಪಿಸಿಕೊಂಡಿದ್ದಾರೆ. ಇಂದು ಮಾಧುರ್ಯ ಗುರುವಿನ 100 ನೇ ಜನ್ಮದಿನ.   

ಪ್ರಧಾನಮಂತ್ರಿಯವರು ತಮ್ಮ ಟ್ವೀಟ್‌ ನಲ್ಲಿ:  

“ಮುಖೇಶ್‌ ಅವರ 100 ನೇ ಜನ್ಮ ದಿನದಂದು ಮಾಧುರ್ಯ ಗುರುವನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಅವರ ಕಾಲಾತೀತ ಹಾಡುಗಳು ವ್ಯಾಪಕ ಭಾವನೆಗಳನ್ನು ಉಂಟು ಮಾಡಿವೆ ಮತ್ತು ಭಾರತೀಯ ಸಂಗೀತದಲ್ಲಿ ಅಚ್ಚಳಿಯದ ಛಾಪು ಮೂಡಿಸಿವೆ. ಅವರ ಚಿನ್ನದ ಧ್ವನಿ ಮತ್ತು ಆತ್ಮ ಕಲಕುವ ನಿರೂಪಣೆಯು ತಲೆ ಮಾರುಗಳನ್ನು ಮೋಡಿ ಮಾಡುವುದನ್ನು ಮುಂದುವರೆಸುತ್ತವೆ” ಎಂದು ಹೇಳಿದ್ದಾರೆ.

*****