Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಾಜಿಯಾಬಾದ್-ಅಲಿಗಢ್ ಎಕ್ಸ್‌ಪ್ರೆಸ್‌ವೇಯ 100 ಲೇನ್ ಕಿಲೋ ಮೀಟರ್ ದೂರದಲ್ಲಿ ಗಟ್ಟಿಮುಟ್ಟಾದ ಬಿಟುಮಿನಸ್ ಕಾಂಕ್ರೀಟ್ ಅಳವಡಿಕೆ; ಪ್ರಧಾನಿ ಪ್ರಸ್ತಾಪ


ಘಾಜಿಯಾಬಾದ್-ಅಲಿಗಢ ಎಕ್ಸ್‌ಪ್ರೆಸ್‌ವೇ ಮಾರ್ಗದ 100 ಕಿಲೋ ಮೀಟರ್ ದೂರದಲ್ಲಿ ಗಟ್ಟಿಮುಟ್ಟಾದ ಬಿಟುಮಿನಸ್ ಕಾಂಕ್ರೀಟ್ ಅಳವಡಿಸಲಾಗಿದೆ. ಇದು ಪ್ರಮುಖ ಹೆದ್ದಾರಿ ಮಾರ್ಗದಲ್ಲಿ ಮಾಡಿರುವ  ಗಮನಾರ್ಹ ಸಾಧನೆಯಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಶ್ರೀ ನಿತಿನ್ ಗಡ್ಕರಿ  ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ;

“ಅತ್ಯಂತ ಪ್ರಮುಖ ಹೆದ್ದಾರಿ ಮಾರ್ಗದಲ್ಲಿ ಗಮನಾರ್ಹ ಸಾಧನೆ ಮಾಡಲಾಗಿದೆ. ಉತ್ತಮ ಮೂಲಸೌಕರ್ಯಕ್ಕಾಗಿ ವೇಗ ಮತ್ತು ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಎರಡಕ್ಕೂ ನೀಡಿದ ಪ್ರಾಮುಖ್ಯತೆಯನ್ನು ಇದು ಬಿಂಬಿಸುತ್ತಿದೆ” ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ.

 

 

******