ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:
“ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಭಾರತೀಯ ಶಾಸ್ತ್ರೀಯ ಸಂಗೀತ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಿದ ನಿಜವಾದ ಪ್ರತಿಭೆಯಾಗಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಅವರು ತಬಲಾವನ್ನು ಜಾಗತಿಕ ವೇದಿಕೆಗೆ ತಂದರು, ತಮ್ಮ ಸಾಟಿಯಿಲ್ಲದ ಲಯದಿಂದ ಲಕ್ಷಾಂತರ ಜನರನ್ನು ಆಕರ್ಷಿಸಿದರು. ಈ ಮೂಲಕ, ಅವರು ಭಾರತೀಯ ಶಾಸ್ತ್ರೀಯ ಸಂಪ್ರದಾಯಗಳನ್ನು ಜಾಗತಿಕ ಸಂಗೀತದೊಂದಿಗೆ ತಡೆರಹಿತವಾಗಿ ಬೆರೆಸಿದರು, ಇದರಿಂದಾಗಿ ಸಾಂಸ್ಕೃತಿಕ ಏಕತೆಯ ದಿಗ್ಗಜ ಆದರು.
ಅವರ ಅಪ್ರತಿಮ ಪ್ರದರ್ಶನಗಳು ಮತ್ತು ಭಾವಪೂರ್ಣ ಸಂಯೋಜನೆಗಳು ತಲೆಮಾರುಗಳ ಸಂಗೀತಗಾರರು ಮತ್ತು ಸಂಗೀತ ಪ್ರೇಮಿಗಳನ್ನು ಪ್ರೇರೇಪಿಸಲು ಕೊಡುಗೆ ನೀಡುತ್ತವೆ. ಅವರ ಕುಟುಂಬ, ಸ್ನೇಹಿತರು ಮತ್ತು ಜಾಗತಿಕ ಸಂಗೀತ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು.’’
*****
Deeply saddened by the passing of the legendary tabla maestro, Ustad Zakir Hussain Ji. He will be remembered as a true genius who revolutionized the world of Indian classical music. He also brought the tabla to the global stage, captivating millions with his unparalleled rhythm.…
— Narendra Modi (@narendramodi) December 16, 2024