Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖ್ಯಾತ ಗಾಯಕ ಮೊಹಮ್ಮದ್ ರಫಿಯವರ 100ನೇ ಜನ್ಮ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಖ್ಯಾತ ಗಾಯಕರಾದ ಮೊಹಮ್ಮದ್ ರಫಿ ಸಾಹೇಬ್ ಅವರ 100ನೇ ಜನ್ಮ ಜಯಂತಿಯಂದು ಅವರನ್ನು ಸ್ಮರಿಸಿದ್ದಾರೆ. ಮೊಹಮ್ಮದ್ ರಫಿ ಸಾಹೇಬ್ ಅವರು ಸಂಗೀತ ಪ್ರತಿಭೆಯಾಗಿದ್ದು, ಅವರ ಸಾಂಸ್ಕೃತಿಕ ಪ್ರಭಾವ ಮತ್ತು ವರ್ಚಸ್ಸು ತಲೆ-ತಲೆಮಾರುಗಳವರೆಗೆ ಪ್ರಸಿದ್ದವಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. 

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

“ಮೊಹಮ್ಮದ್ ರಫಿ ಸಾಹೇಬ್ ಅವರ 100ನೇ ಜನ್ಮ ದಿನಾಚರಣೆಯಂದು ಅವರನ್ನು ಸ್ಮರಿಸುತ್ತೇನೆ. ಅವರು ಸಂಗೀತ ಪ್ರತಿಭೆಯಾಗಿದ್ದು, ಅವರ ಸಾಂಸ್ಕೃತಿಕ ಪ್ರಭಾವ ಮತ್ತು ವರ್ಚಸ್ಸು ತಲೆಮಾರುಗಳನ್ನು ಮೀರಿದೆ. ರಫಿ ಸಾಹೇಬ್ ಅವರ ಹಾಡುಗಳು ವಿಭಿನ್ನ ಭಾವನೆಗಳು ಮತ್ತು ಅನುಭವಗಳನ್ನು ಸೆರೆಹಿಡಿಯುವಲ್ಲಿ ಸಾಮರ್ಥವಾಗಿದ್ದು ಜನರ ಮೆಚ್ಚುಗೆ ಪಡೆದಿವೆ. ಅವರ ಬಹುಮುಖ ಪ್ರತಿಭೆಯು ವ್ಯಾಪಕವಾಗಿದ್ದು. ಅವರ ಸಂಗೀತವು ಜನ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸಲಿ” ಎಂದು ಟ್ವೀಟ್ ಮಾಡಿದ್ದಾರೆ.

 

 

*****