Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖ್ಯಾತ ಕಾನೂನು ತಜ್ನರಾದ ಪ್ರೊಫೆಸರ್ ವೇದ ಪ್ರಕಾಶ್ ನಂದಾರವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಖ್ಯಾತ ಕಾನೂನು ವಿದ್ವಾಂಸರಾದ ಪ್ರೊಫೆಸರ್ ವೇದ ಪ್ರಕಾಶ್ ನಂದಾ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರೊಫೆಸರ್ ವೇದ ಪ್ರಕಾಶ್ ನಂದಾ ಅವರ ಕೆಲಸವು ಕಾನೂನು ಶಿಕ್ಷಣದ ಬಗ್ಗೆ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;

“ಪ್ರಖ್ಯಾತ ಶಿಕ್ಷಣ ತಜ್ಞ ಪ್ರೊಫೆಸರ್ ವೇದ ಪ್ರಕಾಶ್ ನಂದಾರವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಕಾನೂನು ಕ್ಷೇತ್ರಕ್ಕೆ ನೀಡಿದ ಅವರ ಕೊಡುಗೆಗಳು ಅತ್ಯಮೂಲ್ಯವಾಗಿವೆ. ಅವರ ಕೆಲಸವು ಕಾನೂನು ಶಿಕ್ಷಣ ಕ್ಷೇತ್ರದ ಬಗ್ಗೆ ಅವರಿಗಿದ್ದ ಒಲವು ಮತ್ತು ಬದ್ಧತೆಯನ್ನು ಸೂಚಿಸುತ್ತದೆ. ಅವರು ಅಮೇರಿಕಾ ಭಾರತೀಯ ವಲಸೆಗಾರರ ಪ್ರಮುಖ ಸದಸ್ಯರಾಗಿದ್ದು, ಭಾರತ-ಯುಎಸ್ಎಯ ಬಲವಾದ ಸಂಬಂಧಗಳ ಬಗ್ಗೆ ಉತ್ಸುಕರಾಗಿದ್ದರು. ಭಗವಂತ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಅವರ ಅಗಲುವಿಕಯನ್ನು ಸಹಿಸುವ ಶಕ್ತಿ ನೀಡಲಿ, ನನ್ನ ಸಂತಾಪಗಳು. ಓಂ ಶಾಂತಿ” ಎಂದು ಹೇಳಿದ್ದಾರೆ̤

 

*********