Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖ್ಯಾತ ಅಸ್ಸಾಮಿ ಲೇಖಕ ಶ್ರೀ ಅತುಲಾನಂದ ಗೋಸ್ವಾಮಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಖ್ಯಾತ ಅಸ್ಸಾಮಿ ಲೇಖಕ ಶ್ರೀ ಅತುಲಾನಂದ ಗೋಸ್ವಾಮಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

“ಖ್ಯಾತ ಲೇಖಕ ಶ್ರೀ ಅತುಲಾನಂದ ಗೋಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕೃತಿಗಳು ಜಮಾನಸದಲ್ಲಿ ಹೆಚ್ಚಿನ ಮೆಚ್ಚುಗೆ ಪಡೆದಿವೆ. ಅವರ ಕೃತಿಗಳಲ್ಲಿರುವ ವೈವಿಧ್ಯ ಮತ್ತು ಸೂಕ್ಷ್ಮತೆಯಿಂದಾಗಿ ಅವು ಅಪಾರ ಜನಪ್ರಿಯತೆ ಪಡೆದಿವೆ. ಅವರು ಅಸ್ಸಾಮಿ ಸಾಹಿತ್ಯವನ್ನು ಇಂಗ್ಲಿಷ್‌ನಲ್ಲಿ ಜನಪ್ರಿಯಗೊಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿದ್ದರು. ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ಸಂತಾಪ ಸಲ್ಲಿಸುತ್ತೇವೆ. ಓಂ ಶಾಂತಿ”

“বিশিষ্ট লেখক শ্ৰী অতুলানন্দ গোস্বামীদেৱৰ বিয়োগত মৰ্মাহত হৈছো। তেওঁৰ কৰ্মৰাজিয়ে বিপুল সমাদৰ লাভ কৰিছিল আৰু ইয়াৰ বিবিধতা আৰু সংবেদনশীলতাৰ বাবে প্ৰশংসিত হৈছিল। তেওঁ ইংৰাজীত অসমীয়া সাহিত্যক জনপ্ৰিয়কৰণৰ অৰ্থে বিশেষ প্ৰচেষ্টা গ্ৰহণ কৰিছিল। তেওঁৰ পৰিয়ালবৰ্গ আৰু অনুৰাগীসকললৈ সমবেদনা জ্ঞাপন কৰিছো। ঔম শান্তি।”

“ಖ್ಯಾತ ಸಾಹಿತಿ ಶ್ರೀ ಅತುಲಾನಂದ ಗೋಸ್ವಾಮಿ ಅವರ ಅಗಲಿಕೆಗೆ ದುಃಖವಾಗಿದೆ. ಅವರ ಸಾಹಿತ್ಯ ಕೃಷಿ ವ್ಯಾಪಕ ಪ್ರಶಂಸೆಗೆ ಒಳಗಾದಿದೆ. ಅವರ ಬಹುಮುಖ ಪ್ರತಿಭೆ ಮತ್ತು ಸೂಕ್ಷ್ಮತೆ ಸಾಹಿತ್ಯಾಸಕ್ತರ ಪ್ರಶಂಸೆಗೆ ಪಾತ್ರವಾಗಿದೆ. ಅಸ್ಸಾಮಿ ಸಾಹಿತ್ಯವನ್ನು ಇಂಗ್ಲೀಷ್ ನಲ್ಲಿ ಜನಪ್ರಿಯಗೊಳಿಸಲು ಅವರು ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ.. ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ”

 

***********