ಜಾರ್ಖಂಡ್ ಲೋಕಸಭಾ ಕ್ಷೇತ್ರ ಖುಂತಿ ವ್ಯಾಪ್ತಿಯ ಗುಮ್ಲಾದಲ್ಲಿ ಮಹಿಳಾ ವಿಕಾಸ ಮಂಡಲದ ವಾರ್ಷಿಕ ಮಹಾಸಮ್ಮೇಳನದಲ್ಲಿ ಸುಮಾರು 15,000 ಮಹಿಳೆಯರು ಭಾಗವಹಿಸಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ, ಖುಂತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಾಲ್ಕೋಟ್(ಗುಮ್ಲಾ)ನಲ್ಲಿ ಆಯೋಜಿಸಿದ್ದ ಮಹಿಳಾ ವಿಕಾಸ ಮಂಡಲದ ವಾರ್ಷಿಕ ಮಹಾಸಮ್ಮೇಳನದಲ್ಲಿ ಸುಮಾರು 15,000 ಮಹಿಳೆಯರು ಭಾಗವಹಿಸಿದ್ದರು. ಅಲ್ಲದೆ, ಈ ಸಮಾವೇಶದಲ್ಲಿ 944 ಮಹಿಳಾ ಮಂಡಲಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಸಚಿವರು ತಿಳಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
“ಇದು ತುಂಬಾ ಶ್ಲಾಘನೀಯ ಪ್ರಯತ್ನ. ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಅವರ ಸಬಲೀಕರಣ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ” ಎಂದಿದ್ದಾರೆ.
*******
बहुत प्रशंसनीय प्रयास। महिलाओं की बढ़ती भागीदारी उनके सशक्तिकरण और विकास का द्योतक है। https://t.co/BuBC5PLMO2
— Narendra Modi (@narendramodi) February 26, 2023