ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ಷಯರೋಗ ನಿರ್ಮೂಲನೆ ಮಾಡುವ ಭಾರತದ ಮಹತ್ವಾಕಾಂಕ್ಷೆಯ ಅಭಿಯಾನಕ್ಕೆ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯಕರ ಮತ್ತು ಕ್ಷಯ ಮುಕ್ತ ಭಾರತಕ್ಕೆ ದಾರಿ ಮಾಡಿಕೊಡುವ ತಳಮಟ್ಟದ ಪ್ರಯತ್ನಗಳಲ್ಲಿ ಹೆಚ್ಚುತ್ತಿರುವ ವೇಗವನ್ನು ಅವರು ಒತ್ತಿ ಹೇಳಿದರು.
ಕೇಂದ್ರ ಸಚಿವ ಶ್ರೀ ಜೆ.ಪಿ.ನಡ್ಡಾ ಅವರು ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಅವರು ಹೀಗೆ ಬರೆದಿದ್ದಾರೆ:
“ಕ್ಷಯರೋಗದ ವಿರುದ್ಧದ ಹೋರಾಟವನ್ನು ಬಲಪಡಿಸುತ್ತಿರುವ ಮತ್ತು #TBMuktBharat ಕೊಡುಗೆ ನೀಡುತ್ತಿರುವ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಪ್ರಯತ್ನವು ತಳಮಟ್ಟದಲ್ಲಿ ಹೇಗೆ ವೇಗವನ್ನು ಪಡೆಯುತ್ತಿದೆ ಎಂಬುದು ಗಮನಾರ್ಹವಾಗಿದೆ, ಈ ಪ್ರಕಾರವಾಗಿ ಆರೋಗ್ಯಕರ ಭಾರತವನ್ನು ಖಚಿತಪಡಿಸುತ್ತದೆ.’’
*****
I compliment all those who are strengthening the fight against TB and contributing to a #TBMuktBharat. It is noteworthy how this effort is gaining momentum at the grassroots level, thus ensuring a healthier India. https://t.co/geWc0AwcsY
— Narendra Modi (@narendramodi) March 26, 2025