ಮಾನ್ಯ ಅಧ್ಯಕ್ಷರೆ,
ಘನತೆವೆತ್ತರೆ,
ಈ ವರ್ಚ್ಯುವಲ್ ಸಮಾವೇಶ ಆಯೋಜಿಸಿರುವುದಕ್ಕಾಗಿ ಘನತೆವೆತ್ತ ಅಧ್ಯಕ್ಷ ಇಲ್ಹಾಮ್ ಅಲಿಯೇವ್ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಮೊದಲಿಗೆ ನಾನು ವಿಶ್ವಾದಾದ್ಯಂತ ಕೋವಿಡ್ -19 ನಿಂತ ತಮ್ಮ ಅಪ್ತೇಷ್ಟರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ.
ಇಂದು, ಮಾನವಕುಲ ತನ್ನ ಹಲವು ದಶಕಗಳಲ್ಲೇ ಅತ್ಯಂತ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ. ಈ ಸಂದರ್ಭದಲ್ಲಿ, ಅಲಿಪ್ತ ಚಳವಳಿ ಜಾಗತಿಕ ಏಕಮತ್ಯ ಉತ್ತೇಜಿಸಲು ನೆರವಾಗುತ್ತಿದೆ. ನಾಮ್ ಆಗಾಗ್ಗೆ ವಿಶ್ವದ ನೈತಿಕ ಧ್ವನಿಯಾಗಿ ಹೊರಹೊಮ್ಮಿದೆ. ಈ ಪಾತ್ರವನ್ನು ಉಳಿಸಿಕೊಳ್ಳಲು, ನಾಮ್ ಎಲ್ಲರನ್ನೂ ಒಳಗೊಳ್ಳಬೇಕು.
ಘನತೆವೆತ್ತರೆ,
ಭಾರತ ಇಡೀ ಮಾನವ ಕುಲದ ಆರನೇ ಒಂದು ಭಾಗ ಹೊಂದಿದೆ. ನಮ್ಮದು ಅಭಿವೃದ್ಧಿಶೀಲ ರಾಷ್ಟ್ರ ಮತ್ತು ಮುಕ್ತ ಸಮಾಜ. ಈ ಸಂಕಷ್ಟದ ಕಾಲದಲ್ಲಿ, ನಾವು ಹೇಗೆ ಪ್ರಜಾಪ್ರಭುತ್ವ, ಶಿಸ್ತು ಮತ್ತು ದೃಢ ಸಂಕಲ್ಪ ಒಗ್ಗೂಡಿ ಹೇಗೆ ನೈಜ ಜನಾಂದೋಲನ ಸೃಷ್ಟಿಸುತ್ತದೆ ಎಂಬುದನ್ನು ತೋರಿದೆ.
ಭಾರತದ ನಾಗರಿಕತೆ ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದು ಭಾವಿಸಿದೆ. ನಾವು ನಮ್ಮ ಪ್ರಜೆಗಳ ಬಗ್ಗೆ ಕಾಳಜಿ ವಹಿಸುವಂತೆ, ಇತರ ರಾಷ್ಟ್ರಗಳಿಗೂ ನೆರವಿನ ಹಸ್ತ ಚಾಚಿದ್ದೇವೆ. ಕೋವಿಡ್ 19 ನಿಗ್ರಹಕ್ಕಾಗಿ ನಾವು ನೆರೆ ರಾಷ್ಟ್ರಗಳಿಗೆ ತಕ್ಷಣ ಸಹಯೋಗವನ್ನು ಉತ್ತೇಜಿಸಿದ್ದೇವೆ ಮತ್ತು ಹಲವು ಇತರ ರಾಷ್ಟ್ರಗಳೊಂದಿಗೆ ಆನ್ ಲೈನ್ ಮೂಲಕ ನಮ್ಮ ವೈದ್ಯಕೀಯ ತಜ್ಞತೆಯನ್ನು ಹಂಚಿಕೊಂಡಿದ್ದೇವೆ. ಭಾರತ ವಿಶ್ವದ ಅದರಲ್ಲೂ ಕೈಗೆಟಕುವ ದರದ ಔಷದಾಲಯವೆಂದು ಪರಿಗಣಿತವಾಗಿದೆ.
ನಮ್ಮ ಸ್ವಂತ ಅಗತ್ಯದ ಜೊತೆಗೆ ನಾವು 59 ನಾಮ್ ಸದಸ್ಯ ರಾಷ್ಟ್ರಗಳು ಸೇರಿದಂತೆ ಇತರ 123 ಸಹಯೋಗಿ ರಾಷ್ಟ್ರಗಳಿಗೆ ವೈದ್ಯಕೀಯ ಪೂರೈಕೆಯ ಖಾತ್ರಿ ಪಡಿಸಿದ್ದೇವೆ.
ಪರಿಹಾರಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಜಾಗತಿಕ ಪ್ರಯತ್ನಗಳಲ್ಲಿ ನಾವು ಸಕ್ರಿಯರಾಗಿದ್ದೇವೆ. ಭಾರತವು ವಿಶ್ವದ ಅತ್ಯಂತ ಹಳೆಯ ಗಿಡಮೂಲಿಕೆ ಆಧಾರಿತ ಸಾಂಪ್ರದಾಯಿಕ ಔಷಧ ವ್ಯವಸ್ಥೆಯನ್ನು ಹೊಂದಿದೆ. ಜನರು ತಮ್ಮ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲು ನಾವು ಸರಳ ಆಯುರ್ವೇದ, ಮನೆ-ಪರಿಹಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದೇವೆ.
ಘನತೆವೆತ್ತರೆ,
ವಿಶ್ವ ಕೋವಿಡ್ 19 ವಿರುದ್ಧ ಹೋರಾಡುತ್ತಿರುವಾಗ, ಕೆಲವು ಜನರು ಇತರ ಮಾರಕ ವೈರಾಣುಗಳು ಅಂದರೆ ಭಯೋತ್ಪಾದನೆ ಹಬ್ಬಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಮತ್ತು ತಿರುಚಿದ ವಿಡಿಯೋಗಳನ್ನು ಬಳಸಿ ದೇಶವನ್ನು ಮತ್ತು ಸಮುದಾಯವನ್ನು ಒಡೆಯಲು ಯತ್ನಿಸುತ್ತಿವೆ. ಆದರೆ ಇಂದು, ನಾನು ಕೇವಲ ಧನಾತ್ಮಕ ವಿಚಾರಗಳ ಬಗ್ಗೆ ಮಾತ್ರವೇ ಗಮನ ಹರಿಸಲು ಇಚ್ಛಿಸುತ್ತೇನೆ.
ಈ ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಜಗತ್ತಿಗೆ ಸಹಾಯ ಮಾಡಲು ನಾವು ಚಳವಳಿಯಾಗಿ ಒಟ್ಟಾಗಿ ಏನು ಮಾಡಬಹುದು.
ಘನತೆವೆತ್ತರೇ,
ಕೋವಿಡ್ -19 ಪ್ರಸಕ್ತ ಅಂತಾರಾಷ್ಟ್ರೀಯ ವ್ಯವಸ್ಥೆಯ ಇತಿಮಿತಿಯನ್ನು ತೋರಿಸಿದೆ. ಕೋವಿಡ್ ನಂತರದ ವಿಶ್ವದಲ್ಲಿ, ನಮಗೆ ನ್ಯಾಯ, ಸಮಾನತೆ, ಮಾನವತೆಯ ಮೇಲೆ ಜಾಗತಿಕ ಹೊಸ ಟೆಂಪ್ಲೆಟ್ ನ ಅಗತ್ಯವಿದೆ.
ನಮಗೆ ಇಂದಿನ ವಿಶ್ವದ ಪ್ರತಿನಿಧಿಯಾದಂಥ ಅಂತಾರಾಷ್ಟ್ರೀಯ ಸಂಸ್ಥೆಗಳ ಅಗತ್ಯವಿದೆ. ನಾವು ಮಾನವ ಕಲ್ಯಾಣವನ್ನು ಉತ್ತೇಜಿಸುವ ಅಗತ್ಯವಿದೆ ಮತ್ತು ಕೇವಲ ಆರ್ಥಿಕ ವೃದ್ಧಿಯೊಂದರ ಬಗ್ಗೆ ಮಾತ್ರವೇ ಅಲ್ಲ. ಭಾರತವು ದೀರ್ಘ ಕಾಲದ ಇಂಥ ಉಪಕ್ರಮ ಹೊಂದಿದೆ.
ಅಂತಾರಾಷ್ಟ್ರೀಯ ಯೋಗ ದಿನವು ದೈಹಿಕ, ಮಾನಸಿಕ ಮತ್ತು ಮಾನವಕುಲದ ಉತ್ತಮಿಕೆ ಸುಧಾರಿಸುತ್ತದೆ. ಅಂತಾರಾಷ್ಟ್ರೀಯ ಸೌರ ಸಹಯೋಗ ನಮ್ಮ ಭೂಗ್ರಹಕ್ಕೆ ಹವಾಮಾನ ಬದಲಾವಣೆಯ ಕಾಯಿಲೆಯಿಂದ ಗುಣಮುಖವಾಗಲು ನೆರವಾಗುತ್ತಿದೆ. ವಿಪತ್ತು ತಾಳಿಕೊಳ್ಳುವ ಮೂಲ ಸೌಕರ್ಯ ಒಗ್ಗೂಡುವಿಕೆ, ಹವಾಮಾನ ಮತ್ತು ವಿಪತ್ತು ಅಪಾಯಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನೆರವಾಗುತ್ತಿದೆ.
ಹಲವು ದೇಶಗಳು ಸೇನಾ ಕವಾಯತು ಆಯೋಜಿಸಿದ್ದರೆ, ಭಾರತ ವಲದಲ್ಲಿ ಮತ್ತು ಅದರಾಚೆ ವಿಪತ್ತು ನಿರ್ವಹಣಾ ಕಸರತ್ತು ಆಯೋಜಿಸಿದೆ.
ಘನತೆವೆತ್ತರೆ,
ಅಂತಾರಾಷ್ಟ್ರೀಯ ಸಮುದಾಯಕ್ಕೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಆರೋಗ್ಯ ಸಾಮರ್ಥ್ಯ ವರ್ಧನೆಗೆ ಗಮನ ಹರಿಸುವಂತೆ ನಾಮ್ ಕರೆ ನೀಡಬೇಕು. ನಾವೆಲ್ಲರೂ ಸಮಾನ, ಕೈಗೆಟಕುವ ಮತ್ತು ಸಕಾಲದಲ್ಲಿ ಆರೋಗ್ಯ ಉತ್ಪನ್ನ ಮತ್ತು ತಂತ್ರಜ್ಞಾನ ಎಲ್ಲರಿಗೂ ದೊರಕುವಂತೆ ಖಾತ್ರಿ ಪಡಿಸಬೇಕಾಗಿದೆ.
ನಮ್ಮ ಅನುಭವಗಳು, ಉತ್ತಮ ರೂಢಿಗಳು, ಬಿಕ್ಕಟ್ಟು-ನಿರ್ವಹಣಾ ಶಿಷ್ಟಾಚಾರಗಳು, ಸಂಶೋಧನೆ ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸಲು ನಾವು ಎಲ್ಲಾ ನಾಮ್ ದೇಶಗಳಿಗೆ ಒಂದು ವೇದಿಕೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಘನತೆವೆತ್ತರೆ,
ನಮ್ಮ ಚಳವಳಿಯ ಸಂಸ್ಥಾಪನಾ ಸ್ಫೂರ್ತಿಯಲ್ಲಿ, ನಾವು ಪ್ರತ್ಯೇಕವಾಗಿರುವುದರ ಬದಲು, ಇಂದು ಒಟ್ಟಾಗಿ ಬರುವ ಗುರಿ ಇಡೋಣ. ನಾವೆಲ್ಲರೂ ಇದ್ದರೆ ಮಾತ್ರ ನಮ್ಮಲ್ಲಿ ಪ್ರತಿಯೊಬ್ಬರೂ ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಲು ಸಾಧ್ಯ. ಅಂತರ್ಗತ ಮತ್ತು ಸಹಕಾರಿ ಜಾಗತಿಕ ಪ್ರತಿಕ್ರಿಯೆಯ ಕಡೆಗೆ ನಾವು ಪಾಲುದಾರರಾಗಿ ಕೆಲಸ ಮಾಡೋಣ.
ಧನ್ಯವಾದಗಳು
ಧನ್ಯವಾದಗಳು ಘನತೆವೆತ್ತರೆ.
Spoke at the NAM Summit, held via video conferencing. https://t.co/yRaIbCtpkq
— Narendra Modi (@narendramodi) May 4, 2020