ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ನ ಮುಖ್ಯಮಂತ್ರಿ ಶ್ರೀ ನೆಫಿಯು ರಿಯೋ ಮತ್ತು ಅವರ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ
“ಶ್ರೀ ನೆಫಿಯು ರಿಯೋ ಮತ್ತು ಅವರ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದೆನು. ಯುವ ಮತ್ತು ಅನುಭವಿಗಳ ಮಿಶ್ರಣವಾಗಿರುವ ಈ ತಂಡ ನಾಗಾಲ್ಯಾಂಡ್ ನ ಉತ್ತಮ ಆಡಳಿತದ ಯಶೋಗಾಥೆಯನ್ನು ಮುಂದುವರಿಸುತ್ತದೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲಿದೆ ಎಂಬ ವಿಶ್ವಾಸ ನನಗಿದೆ. ಅವರಿಗೆ ನನ್ನ ಶುಭಾಶಯಗಳು’’ ಎಂದು ಹೇಳಿದ್ದಾರೆ.
***
Joined the oath taking ceremony of Shri @Neiphiu_Rio Ji and his Council of Ministers. I am confident that this team, which is a blend of youth and experience, will continue the good governance trajectory of Nagaland and fulfil people’s aspirations. My best wishes to them. pic.twitter.com/YdnIuKTYzl
— Narendra Modi (@narendramodi) March 7, 2023