Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಲ್ಹಾಪುರ ರಾಜಮನೆತನದ ಶ್ರೇಷ್ಠತೆಯ ಬಗ್ಗೆ ಶ್ರೀ ಜ್ಞಾನೇಶ್ವರ ಮುಲಾಯ್ ಅವರು ಉತ್ತಮವಾದ ಲೇಖನ ಬರೆದಿದ್ದಾರೆ: ಪ್ರಧಾನ ಮಂತ್ರಿ 


ಕೊಲ್ಲಾಪುರ ರಾಜಮನೆತನ, ದಾರ್ಶನಿಕ ಮಹಾರಾಜರು ಮತ್ತು ಮಹಾರಾಣಿ ತಾರಾಬಾಯಿ ಅವರ ಹಿರಿಮೆಯನ್ನು ಶ್ರೀ ಜ್ಞಾನೇಶ್ವರ ಮುಲಾಯ್ ಯವರು ಕೃತಿಗಳಲ್ಲಿ ಬಹಳ ಉತ್ತಮವಾಗಿ ಮೂಡಿಬಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಅವರ ಅದ್ವಿತೀಯ ಸಹಾನುಭೂತಿಯ ಗುಣ ಮುಂಬರುವ ಪೀಳಿಗೆಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ. 

ಶ್ರೀ ಡಾ. ಜ್ಞಾನೇಶ್ವರ ಮುಲಾಯ್ ಅವರು ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿಗಳಾಗಿದ್ದು, ಕೊಲ್ಹಾಪುರದವರು. ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಅವರು ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ನಗರಕ್ಕೂ ಪೋಲೆಂಡ್ ದೇಶಕ್ಕೂ ಇರುವ ವಿಶಿಷ್ಠ ಸಂಬಂಧದ ಬಗ್ಗೆ ಲೇಖನವೊಂದನ್ನು ಬರೆದಿದ್ದರು. 

ಶ್ರೀ ಜ್ಞಾನೇಶ್ವರ ಮುಲಾಯ್ ಅವರು ಬರೆದ ಲೇಖನಕ್ಕೆ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಗಳು,

“ಕೊಲ್ಹಾಪುರ ರಾಜಮನೆತನ, ದಾರ್ಶನಿಕ ಮಹಾರಾಜರು ಮತ್ತು ಮಹಾರಾಣಿ ತಾರಾಬಾಯಿ ಅವರ ಶ್ರೇಷ್ಠತೆಯ ಕುರಿತು ಶ್ರೀ ಜ್ಞಾನೇಶ್ವರ ಮುಲಾಯ್ ಯವರ ಒಂದು ಉತ್ತಮ ಬರಹ ಇದು. ಅವರ ವಿಶಿಷ್ಠ ಸಹಾನುಭೂತಿಯು ಮುಂಬರುವ ಪೀಳಿಗೆಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ.’ ಎಂದು ಪ್ರಶಂಸಿಸಿದ್ದಾರೆ.

@navnirmiti”

*****