Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಲಂಬೊದಲ್ಲಿ ಐಪಿಕೆಎಫ್ ಸ್ಮಾರಕಕ್ಕೆ ಪ್ರಧಾನಮಂತ್ರಿ ಭೇಟಿ


ಕೊಲಂಬೊದಲ್ಲಿರುವ ಐಪಿಕೆಎಫ್ ಸ್ಮಾರಕಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಿ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಶ್ರೀಲಂಕಾದ ಶಾಂತಿ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯ ಸೇವೆಯಲ್ಲಿ ತಮ್ಮ ಪ್ರಾಣ ಅರ್ಪಿಸಿದ ಭಾರತೀಯ ಶಾಂತಿಪಾಲನಾ ಪಡೆಯ ವೀರ ಯೋಧರನ್ನು ಅವರು ಶ್ಲಾಘಿಸಿದರು.

ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:

“ಕೊಲಂಬೊದಲ್ಲಿರುವ ಐಪಿಕೆಎಫ್ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದೆ. ಶ್ರೀಲಂಕಾದ ಶಾಂತಿ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗಾಗಿ ಪ್ರಾಣ ತ್ಯಾಗ ಮಾಡಿದ ಭಾರತೀಯ ಶಾಂತಿ ಪಾಲನಾ ಪಡೆಯ ವೀರ ಸೈನಿಕರನ್ನು ನಾವು ಸ್ಮರಿಸುತ್ತೇವೆ. ಅವರ ಅಚಲ ಸ್ಥೈರ್ಯ ಮತ್ತು ಬದ್ಧತೆ ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ.”

“கொழும்பில் உள்ள இந்திய அமைதிப்படையினரின் நினைவுத் தூபியில் மலர்வளையம் வைத்து அஞ்சலி செலுத்தினேன். இலங்கையின் ஆட்புல ஒருமைப்பாடு, ஐக்கியம் மற்றும் சமாதானம் ஆகியவற்றுக்கான உயர்பணியில் தமது வாழ்வை தியாகம் செய்த இந்திய அமைதிகாக்கும் படையின் துணிச்சல் மிக்க வீரர்களை இச்சந்தர்ப்பத்தில் நாம் நினைவுகூர்கிறோம்.  அவர்களின் அசைக்க முடியாத தைரியமும், அர்ப்பணிப்பும் நம் அனைவரினதும்  உத்வேகத்தின் ஆதாரமாக நிலைத்திருக்கின்றன.”

 

 

*****