ಹ್ಯಾಂಬರ್ಗ್ ನಲ್ಲಿ ಜಿ 20 ಶೃಂಗಸಭೆಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ಕೊರಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ. ಮೂನ್ ಜೇ ಇನ್ ಅವರನ್ನು ಭೇಟಿ ಮಾಡಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದಕ್ಕಾಗಿ ಅವರಿಗೆ ಖುದ್ದಾಗಿ ಪ್ರಧಾನಿ ತಮ್ಮ ಅಭಿನಂದನೆ ಸಲ್ಲಿಸಿದರು. ಅಭಿನಂದಿಸಲು ಪ್ರಧಾನಿಯವರು ಮಾಡಿದ್ದ ದೂರವಾಣಿ ಕರೆ ಮತ್ತು ಕೊರಿಯನ್ ಭಾಷೆಯಲ್ಲೇ ಟ್ವೀಟ್ ಮಾಡಿದ್ದನ್ನು ಸ್ಮರಿಸಿದ ಅಧ್ಯಕ್ಷರು, ಈ ಟ್ವೀಟ್ ಅನ್ನು ದಕ್ಷಿಣ ಕೊರಿಯಾದ ಜನತೆ ಆತ್ಮೀಯವಾಗಿ ಸ್ವೀಕರಿಸಿದ್ದರು. ಇಬ್ಬರೂ ನಾಯಕರು ಭಾರತ ಮತ್ತು ದಕ್ಷಿಮ ಕೊರಿಯಾ ನಡುವೆ ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯನ್ನು ಅದರಲ್ಲೂ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ತ್ಯಾದಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಅಭಿವೃದ್ಧಿ ಪಡಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಅಧ್ಯಕ್ಷ ಮೂನ್ ಅವರಿಗೆ ಶೀಘ್ರ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಆಹ್ವಾನಿಸಿದರು. ಈ ಆಹ್ವಾನವನ್ನು ಅವರು ಅಂಗೀಕರಿಸಿದರು.
ಪ್ರಧಾನಮಂತ್ರಿ ಮೋದಿ ಅವರು ಇಟಲಿಯ ಪ್ರಧಾನಮಂತ್ರಿ ಘನತೆವೆತ್ತ ಶ್ರೀ. ಪಾವೊಲೊ ಗೆಂಟಿಲೋನಿ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯದ ಅದರಲ್ಲೂ ವಾಣಿಜ್ಯ ಮತ್ತು ಹೂಡಿಕೆ ಹಾಗೂ ಜನರೊಂದಿಗಿನ ಬಾಂಧವ್ಯ ಉತ್ತೇಜನ ಕುರಿತು ಚರ್ಚಿಸಿದರು. ಪ್ರಧಾನಿ ಮೋದಿ ಅವರು ಬರುವ ನವೆಂಬರ್ ನಲ್ಲಿ ನಡೆಯಲಿರುವ ವಿಶ್ವ ಆಹಾರ ಭಾರತ – ಆಹಾರ ಸಂಸ್ಕರಣೆ ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಇಟಲಿಗೆ ಆಹ್ವಾನಿಸಿದರು. ಇಬ್ಬರೂ ನಾಯಕರು, ದ್ವಿಪಕ್ಷೀಯ ಆರ್ಥಿಕ ಸಹಕಾರ ಬಲಪಡಿಸಲು ಮಧ್ಯಮ ಉದ್ದಿಮೆಗಳ ನಡುವಿನ ಸಂವಹನದ ಉತ್ತೇಜನದ ಮಹತ್ವವನ್ನು ಒತ್ತಿ ಹೇಳಿದರು. ಇಟಲಿಯ ಪ್ರಧಾನಮಂತ್ರಿಯವರು ತಮ್ಮ ದೇಶದಲ್ಲಿ ಕೈಗಾರಿಕಾ ವಲಯ ಸೇರಿದಂತೆ ಭಾರತೀಯ ಹೂಡಿಕೆಯನ್ನು ಪ್ರಶಂಸಿಸಿದರು. ಇಬ್ಬರೂ ನಾಯಕರು, ಹವಾಮಾನ ಬದಲಾವಣೆ ಮತ್ತು ಆಫ್ರಿಕಾದಲ್ಲಿ ಅಭಿವೃದ್ಧಿ ಉತ್ತೇಜಿಸಲು ಸುಸ್ಥಿರ ಪರಿಹಾರ ಒದಗಿಸಲು ಒಗ್ಗೂಡಿ ಶ್ರಮಿಸಲು ಮಾರ್ಗೋಪಾಯಗಳ ಕುರಿತು ಚರ್ಚಿಸಿದರು.
ಪ್ರಧಾನಮಂತ್ರಿ ಮತ್ತು ನಾರ್ವೆಯ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಎರ್ನಾ ಸೊಲ್ಬರ್ಗ್ ಅವರು ದ್ವಿಪಕ್ಷೀಯ ವಿಷಯಗಳ ಅದರಲ್ಲೂ ಆರ್ಥಿಕ ಬಾಂಧವ್ಯ ಬಲಪಡಿಸುವ ಕುರಿತು ಚರ್ಚಿಸಿದರು. ಪ್ರಧಾನಮಂತ್ರಿ ಮೋದಿ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ನಾರ್ವೆಯ ಪಿಂಚಣಿ ನಿಧಿಯ ಪಾಲ್ಗೊಳ್ಳುವಿಕೆಗೆ ಸ್ವಾಗತ ನೀಡಿದರು. ನಾರ್ವೆಯ ಪ್ರಧಾನಮಂತ್ರಿಯವರು ಯು.ಎನ್.ಜಿ.ಎ. ವೇಳೆ ಸಾಗರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಭಾರತಕ್ಕೆ ಆಹ್ವಾನ ನೀಡಿದರು. ಸಭೆಯ ಕೊನೆಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯ ಸಹಕಾರ(ಎಸ್.ಡಿ.ಜಿ)ದ ಸಂಕೇತವಾಗಿ ಪ್ರಧಾನಮಂತ್ರಿ ಸೋಲ್ಬರ್ಗ್ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ, ಎಸ್.ಡಿ.ಜಿ. ಎಂದು ಬರೆಯಲಾದ ಕಾಲ್ಜೆಂಡನ್ನು ನೀಡಿದರು.
*****
AKT/AK