Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಮೊರೊಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರು ಸಭೆ ನಡೆಸಿದರು

ಕೊಮೊರೊಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರು ಸಭೆ ನಡೆಸಿದರು


ದೆಹಲಿಯಲ್ಲಿ 10 ಸೆಪ್ಟೆಂಬರ್ 2023 ರಂದು ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಕೊಮೊರೊಸ್ ಒಕ್ಕೂಟದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಅಜಲಿ ಅಸ್ಸೋಮಾನಿ ಅವರ ಜೊತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಭೆ ನಡೆಸಿದರು 

ಆಫ್ರಿಕನ್ ಯೂನಿಯನ್  ಅನ್ನು ಜಿ20 ನ ಖಾಯಂ ಸದಸ್ಯರನ್ನಾಗಿ ಮಾಡುವಲ್ಲಿ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಉಪಕ್ರಮ ಮತ್ತು ಪ್ರಯತ್ನಗಳಿಗಾಗಿ ಕೊಮೊರೊಸ್ ಒಕ್ಕೂಟದ ಅಧ್ಯಕ್ಷ ಶ್ರೀ ಅಸ್ಸೌಮಾನಿ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಭಾರತದ ಪಾತ್ರ ಮತ್ತು ಆಫ್ರಿಕಾದೊಂದಿಗಿನ ಸಂಪರ್ಕಗಳನ್ನು ಪರಿಗಣಿಸಿ ಇದು ಭಾರತದ ಜಿ20 ಅಧ್ಯಕ್ಷೀಯತೆಯ ಅವಧಿಯಲ್ಲಿ ಸಂಭವಿಸಿದೆ ಎಂದು ಅವರು ತಮ್ಮ ಸಂತೋಷವನ್ನು ಹಂಚಿಕೊಂಡರು. ಇದು ಭಾರತ – ಕೊಮೊರೊಸ್ ಸಂಬಂಧಗಳಿಗೆ ಉತ್ತೇಜನ ಬಹಳಷ್ಟು ನೀಡುತ್ತದೆ ಎಂದು ಅವರು ಹೇಳಿದರು. ಭಾರತದ ಜಿ20 ಅಧ್ಯಕ್ಷೀಯತೆಯ  ಯಶಸ್ಸಿಗೆ ಅವರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು

ಆಫ್ರಿಕನ್ ಯೂನಿಯನ್ ಮತ್ತು ಕೊಮೊರೊಸ್ ಅನ್ನು ಜಿ20 ತಂಡಕ್ಕೆ ಸೇರಿದ್ದಕ್ಕಾಗಿ ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು.  ಜಾಗತಿಕ ದಕ್ಷಿಣದ ಧ್ವನಿಯನ್ನು ವ್ಯಕ್ತಪಡಿಸಲು ಭಾರತದ ಪ್ರಯತ್ನಗಳನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು,  ಮತ್ತು 2023 ರ ಜನವರಿಯಲ್ಲಿ ಭಾರತವು ಆಯೋಜಿಸಿದ್ದ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯನ್ನು ಕೂಡಾ ಅವರು ನೆನಪಿಸಿಕೊಂಡರು.

ತಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಚರ್ಚಿಸಲು ಉಭಯ ನಾಯಕರು ಅವಕಾಶ ಮಾಡಿಕೊಂಡರು. ಸಮಕಾಲೀನವಾಗಿ ನಡೆಯುತ್ತಿರುವ ಹಲವಾರು ಉಪಕ್ರಮಗಳ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಕಡಲ ಭದ್ರತೆ, ಸಾಮರ್ಥ್ಯ ನಿರ್ಮಾಣ ಮತ್ತು ಅಭಿವೃದ್ಧಿ ಪಾಲುದಾರಿಕೆಯಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಅವಕಾಶಗಳನ್ನು ಚರ್ಚಿಸಿದರು. 

******