Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಮೊರೊಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಅಜಲಿ ಅಸ್ಸೌಮಾನಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೊಮೊರೊಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಅಝಲಿ ಅಸ್ಸೌಮಾನಿ ಅವರನ್ನು ಅಭಿನಂದಿಸಿದರು.

ಭಾರತ ಮತ್ತು ಕೊಮೊರೊಸ್ ಪಾಲುದಾರಿಕೆ, ಭಾರತ ಆಫ್ರಿಕಾ ಪಾಲುದಾರಿಕೆ ಮತ್ತು ‘ವಿಷನ್ ಸಾಗರ್’ ಅನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ತಾಣದಲ್ಲಿ  ಹೀಗೆ ಹೇಳಿದ್ದಾರೆ :

@PR_AZALI “ನೀವು ಕೊಮೊರೊಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ-ಕೊಮೊರೊಸ್ ಪಾಲುದಾರಿಕೆ, ಭಾರತ-ಆಫ್ರಿಕಾ ಪಾಲುದಾರಿಕೆ ಮತ್ತು ‘ವಿಷನ್ ಸಾಗರ್’ ಅನ್ನು ಇನ್ನಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಎದುರುನೋಡುತ್ತಿದ್ದೇವೆ.

***