ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೈಗಾರಿಕಾ ಕಾರಿಡಾರ್ ನ ಸಮಗ್ರ ಅಭಿವೃದ್ಧಿಗಾಗಿ ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆ ಅನುಷ್ಠಾನ ಟ್ರಸ್ಟ್ ನಿಧಿ (ಡಿಎಂಐಸಿ-ಪಿಐಟಿಎಫ್) ವಿಸ್ತರಣೆಆದೇಶ ಮತ್ತು ಅದನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಟ್ರಸ್ಟ್ (ಎನ್.ಐ.ಸಿ.ಡಿ.ಐ.ಟಿ.) ಎಂದು ಮರು ಅಂಕಿತಗೊಳಿಸಲು ಹಾಗೂ ಈಗಾಗಲೇ ಮಂಜೂರಾಗಿರುವ ಮತ್ತು ಹೆಚ್ಚುವರಿಯಾಗಿ ಮಂಜೂರಾದ 1584 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು 2022ರ ಮಾರ್ಚ್ 31ರ ವಿಸ್ತರಿತ ಅವಧಿಯೊಳಗೆ ಬಳಕೆ ಮಾಡಿಕೊಳ್ಳಲು ತನ್ನ ಅನುಮೋದನೆ ನೀಡಿದೆ.
18500 ಕೋಟಿ ರೂಪಾಯಿಗಳ ವೆಚ್ಚಕ್ಕೆ ಹಾಲಿ ಅನುಮೋದನೆ ಇದೆ, ಈ ಪೈಕಿ ಖರ್ಚಾಗದ ಹಣದ ಬಾಕಿಯನ್ನು ಡಿಎಂಐಸಿ-ಪಿಐಟಿಎಫ್ ಗೆ ಇನ್ನೂ ಬಿಡುಗಡೆ ಮಾಡಬೇಕಾಗಿದ್ದು, ಇದನ್ನು ಎನ್.ಐ.ಸಿ.ಡಿ.ಐ.ಟಿ ಬಳಕೆ ಮಾಡಿಕೊಳ್ಳಲಿದೆ. ಇದರ ಜೊತೆಗೆ 1584 ಕೋಟಿ ರೂಪಾಯಿಗಳ ಹಣವನ್ನು ನಾಲ್ಕು ಹೆಚ್ಚುವರಿ ಕಾರಿಡಾರ್ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಹಾಗೂ 31.03.2022ರವರೆಗೆ ಎನ್.ಐ.ಸಿ.ಡಿ.ಐ.ಟಿಯ ಆಡಳಿತಾತ್ಮಕ ವೆಚ್ಚಕ್ಕಾಗಿ ಒದಗಿಸಲಾಗುತ್ತದೆ.
ಐದು ಕೈಗಾರಿಕಾ ಕಾರಿಡಾರ್ ಗಳು ಪ್ರಸ್ತುತ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಾಸ್ತಾನ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ವ್ಯಾಪ್ತಿಯನ್ನು ಹೊಂದಿವೆ. ಎನ್.ಐ.ಸಿ.ಡಿ.ಐ.ಟಿ. ಒಂದು ಉನ್ನತ ಸಂಸ್ಥೆಯಾಗಿದ್ದು, ದೇಶದ ಎಲ್ಲ ಕೈಗಾರಿಕಾ ಕಾರಿಡಾರ್ ಗಳ ಏಕೀಕೃತ ಅಭಿವೃದ್ಧಿ ಮತ್ತು ಸಹಯೋಗಕ್ಕೆ ಡಿಐಪಿಪಿಯ ಆಡಳಿತದ ನಿಯಂತ್ರಣದಲ್ಲಿರುತ್ತದೆ. ಕೈಗಾರಿಕೆ ಮತ್ತು ನಗರಾಭಿವೃದ್ಧಿಗೆ ಸೇರಿದಂತೆ ವಿಶಾಲ ರಾಷ್ಟ್ರೀಯ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಇದು ವಿವಿಧ ಕಾರಿಡಾರ್ ಗಳು ಸೂಕ್ತವಾದ ಯೋಜನೆ ಹೊಂದಿದೆಯೇ ಮತ್ತು ಜಾರಿಯಾಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ಭಾರತ ಸರ್ಕಾರದ ನಿಧಿ ಮತ್ತು ಸಾಂಸ್ಥಿಕ ನಿಧಿಗಳನ್ನು ವಿತರಿಸುತ್ತದೆ. ಮತ್ತು ಯೋಜನೆಯ ಮೌಲ್ಯೀಕರಣ, ಅನುಮೋದನೆ ಮತ್ತು ಮಜೂರಾತಿ ಸೇರಿದಂತೆ ಯೋಜನೆ ಅಭಿವೃದ್ಧಿ ಚಟುವಟಿಕೆಗಳಿಗೆ, ಬೆಂಬಲ ನೀಡುತ್ತದೆ. ಇದು ಕೈಗಾರಿಕಾ ಕಾರಿಡಾರ್ ಯೋಜನೆಗಳ ಅಭಿವೃದ್ಧಿಯ ಕೇಂದ್ರ ಸರ್ಕಾರದ ಎಲ್ಲ ಪ್ರಯತ್ನಗಳೊಂದಿಗೆ ಸಹಕರಿಸುತ್ತದೆ ಮತ್ತು ಅದರ ಜಾರಿಯ ಬಗ್ಗೆ ನಿಗಾ ವಹಿಸುತ್ತದೆ.
ಹಾಲಿ ಇರುವ ಡಿಎಂಐಸಿ ಕಾರ್ಯದ ಜೊತೆಗೆ ಎಲ್ಲ ಕೈಗಾರಿಕಾ ಕಾರಿಡಾರ್ ಗಳಿಗೆ ಸಂಬಂಧಿಸಿದಂತೆ ಡಿಎಂಐಸಿಡಿಸಿ, ಎನೇಐಸಿಡಿಐಟಿಯ ಜ್ಞಾನ ಪಾಲುದಾರನಂತೆ ಕಾರ್ಯ ನಿರ್ವಹಿಸುತ್ತದೆ.
ಎನ್ಐಸಿಡಿಐಟಿಯ ಚಟುವಟಿಕೆಗಳು ಮತ್ತು ಯೋಜನೆಯ ಪ್ರಗತಿಯನ್ನು ನಿಯಮಿತವಾಗಿ ಪರಾಮರ್ಶಿಸುವ ಸಲುವಾಗಿ ಹಣಕಾಸು ಸಚಿವರ ಅಧ್ಯಕ್ಷತೆಯ ಈ ಸರ್ವೋನ್ನತ ನಿಗಾ ಪ್ರಾಧಿಕಾರವನ್ನು ಸ್ಥಾಪಿಸಲಾಗುತ್ತಿದೆ.ಇದರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ಉಸ್ತುವಾರಿ ಸಚಿವರು, ರೈಲ್ವೆ ಸಚಿವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಹಡಗು ಸಚಿವರು, ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಸಂಬಂಧಿತ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುತ್ತಾರೆ.
ಎನ್ಐಸಿಡಿಐಟಿಯ ಟ್ರಸ್ಟಿಗಳ ಮಂಡಳಿಯು (i) ಅಧ್ಯಕ್ಷ- ಕಾರ್ಯದರ್ಶಿ ಡಿಐಪಿಪಿ, (II) ಕಾರ್ಯದರ್ಶಿ ಹಣಕಾಸು ವೆಚ್ಚ ಇಲಾಖೆ, (III) ಕಾರ್ಯದರ್ಶಿ ಆರ್ಥಿಕ ವ್ಯವಹಾರಗಳ ಇಲಾಖೆ (iv) ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, (v) ಕಾರ್ಯದರ್ಶಿ ಬಂದರು ಮತ್ತು (vi) ಅಧ್ಯಕ್ಷರು, ರೈಲ್ವೆ ಮಂಡಳಿ (VII) ಸಿಇಒ, ನೀತಿ ಆಯೋಗ, ಮತ್ತು (VIII) ಎನ್ಐಸಿಡಿಐಟಿಯ ಪೂರ್ಣ ಕಾಲಿಕ ಸಿಇಓ ಗಿ ಕಾರ್ಯ ನಿರ್ವಹಿಸುವಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ. ಸಿಇಓ, ಡಿಎಂಐಸಿಡಿಸಿ ಸಹ ಸದಸ್ಯ ಕಾರ್ಯದರ್ಶಿಯಾಗಿ/ನಿಐಸಿಡಿಐಟಿ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಾರೆ.
ಎನ್ಐಸಿಡಿಐಟಿ ರಚನೆಯು ಸಮಗ್ರ ಯೋಜನೆ ಮತ್ತು ಅಭಿವೃದ್ಧಿ ತರುವ ವಿಧಾನ ಕೈಗಾರಿಕಾ ಕಾರಿಡಾರ್ ಗಳ ಅಭಿವೃದ್ಧಿಯಿಂದ ಕಲಿತ ಅನುಭವದ ವಿನಿಮಯ, ಯೋಜನೆಯ ವಲಯದಲ್ಲಿ ನಾವಿನ್ಯತೆಗೆ ಅವಕಾಶ, ಇಂಥ ಯೋಜನೆಗಳಿಗೆ ವಿನ್ಯಾಸ, ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆ ಮೂಲಕ ದೇಶದಾದ್ಯಂತ ಕೈಗಾರಿಕಾ ಕಾರಿಡಾರ್ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿಗೆ ಅವಕಾಶ ನೀಡುತ್ತದೆ. ಇದು ದೇಶದಲ್ಲಿ ಉತ್ಪಾದನೆಯ ಪಾಲನ್ನು ಹೆಚ್ಚಿಸಲು ನೆರವಾಗುತ್ತದೆ, ಉತ್ಪಾದನೆ ಮತ್ತು ಸೇವಾ ಕೈಗಾರಿಕಾ ವಲಯದಲ್ಲಿ ಬಂಡವಾಳ ಆಕರ್ಷಿಸುತ್ತದೆ, ಇದು ಕಾರ್ಯಪಡೆಯ ಕೌಶಲ ಅಭಿವೃದ್ಧಿಯ ಮತ್ತು ಮೇಲ್ದರ್ಜೆಗೇರಿಸುವ ಪ್ರಯತ್ನಗಳ ಮೇಲೆ ವೇಗವರ್ದಕ ಪರಿಣಾಮ ಬೀರುತ್ತದೆ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿಗೂ ನೆರವಾಗುತ್ತದೆ.
ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳ ವಿವರ ಮತ್ತು ಪ್ರಗತಿ:
(i) ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್ (ಡಿಎಂಐಸಿ)ಇಂದು ಅಂಥ ಮೊದಲ ಕೈಗಾರಿಕಾ ಕಾರಿಡಾರ್ ಆಗಿದ್ದು, 2011ರಲ್ಲಿ ಕೇಂದ್ರ ಸಚಿವ ಸಂಪುಟ ಯೋಜನೆಯ ಮೊದಲ ಹಂತದಲ್ಲಿ ಏಳು ಕೈಗಾರಿಕಾ ನಗರಗಳಿಗೆ ಐದು ವರ್ಷದ ಅವಧಿಯಲ್ಲಿ 17500 ಕೋಟಿ ರೂಪಾಯಿಗಳ ಯೋಜನಾ ಅನುಷ್ಠಾನ ನಿಧಿ ಮತ್ತು ಹೆಚ್ಚುವರಿ ಕಾಪು ನಿಧಿಯಾಗಿ 1000 ಕೋಟಿ ರೂಪಾಯಿಗಳನ್ನು ಯೋಜನಾ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಮಂಜೂರು ಮಾಡಿತ್ತು. ಜಪಾನ್ ಸರ್ಕಾರ ಡಿಎಂಐಸಿ ಮೊದಲ ಹಂತದ ಯೋಜನೆಯಲ್ಲಿ 4.5 ಶಥಕೋಟಿ ಅಮೆರಿಕನ್ ಡಾಲರ್ ಹೂಡಿಕೆಯ ಬದ್ಧತೆಯನ್ನು ನೀಡಿತ್ತು.
ನಾಲ್ಕು ಕೈಗಾರಿಕಾ ನಗರಗಳಲ್ಲಿ/ಪಟ್ಟಣಗಳಲ್ಲಿ ಅಂದರೆ ಗುಜರಾತ್ ನ ಅಹಮದಾಬಾದ್ ಬಳಿಯ ದೊಲೇರಾ ವಿಶೇಷ ಹೂಡಿಕೆ ವಲಯ (ಡಿಎಸ್ಐಆರ್), ಮಹಾರಾಷ್ಟ್ರದ ಔರಂಗಾಬಾದ್ ಬಳಿಯ ಶಂದ್ರಾ –ಬಿದ್ಕಿನ್ ಕೈಗಾರಿಕಾ ಪಾರ್ಕ್, ಉತ್ತರ ಪ್ರದೇಶದ ಬೃಹತ್ ನೋಯಿಡಾದ ಸಮಗ್ರ ಕೈಗಾರಿಕಾ ಪಟ್ಟಣ ಯೋಜನೆ ಮತ್ತು ಮಧ್ಯಪ್ರದೇಶದ ಉಜ್ಜಯಿನಿ ಬಳಿಯ ವಿಲಾ ಅಮ್ –ಉದ್ಯೋಗಪುರಿಯ ಸಮಗ್ರ ಕೈಗಾರಿಕಾ ಪಟ್ಟಣಗಳಲ್ಲಿ ನಿರ್ಮಾಣ ಕಾಮಗಾರಿ. ಡಿಎಂಐಸಿ ಅಡಿಯಲ್ಲಿ ಇತರ ಯೋಜನೆಗಳು ಯೋಜನೆಯ ಅಭಿವೃದ್ಧಿ ಮತ್ತು ಯೋಜನೆಯ ವಿವಿಧ ಹಂತದಲ್ಲಿವೆ.
(ii)ಚೆನ್ನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ):ಆರಂಭಿಕ ಮಾಸ್ಟರ್ ಯೋಜನೆಯಂತೆ ಮೂರು ಸ್ಥಳಗಳು ಅಂದರೆ ತುಮಕೂರು (ಕರ್ನಾಟ), ಕೃಷ್ಣಪಟ್ಟಂ (ಆಂಧ್ರಪ್ರದೇಶ) ಮತ್ತು ಪೊನ್ನೇರಿ (ತಮಿಳುನಾಡು)ಗಳನ್ನು ಅಭಿವೃದ್ಧಿಗೆ ಗುರುತಿಸಲಾಗಿದೆ.
(iii)ಬೆಂಗಳೂರು – ಮುಂಬೈ ಆರ್ಥಿಕ ಕಾರಿಡಾರ್ (ಬಿಎಂಇಸಿ):ಕರ್ನಾಟಕ ಸರ್ಕಾರವು ಧಾರವಾಡವನ್ನು ಅಭಿವೃದ್ಧಿಗೆ ಗುರುತಿಸಿದೆ. ಮಹಾರಾಷ್ಟ್ರ ಸರ್ಕಾರ ಸಾಂಗ್ಲಿ ಅಥವಾ ಸೋಲಾಪರ ಜಿಲ್ಲೆಗೆ ಪ್ರಾಥಮಿಕ ಅನುಮೋದನೆ ನೀಡಿದೆ.
(iv)ಅಮೃತಸರ –ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ (ಎಕೆಐಸಿ):ಇದು ರೈಲ್ವೆಯ ಪೂರ್ವ ನಿರ್ಧಿಷ್ಟ ಸರಕು ಕಾರಿಡಾರ್ ಅನ್ನು ಬೆನ್ನೆಲುಬಾಗಿ ಮತ್ತು ಈ ಮಾರ್ಗದಲ್ಲಿರುವ ಹೆದ್ದಾರಿ ವ್ಯವಸ್ಥೆಯನ್ನು ಬಳಸಿಕೊಳ್ಳಲಿದೆ. ಏಳು ರಾಜ್ಯಗಳ ಅಂದರೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಸಮಗ್ರ ಉತ್ಪಾದನೆ ಘಟಕಗಳು (ಐಎಸಿಗಳು) ಇರುವಂತೆ ಯೋಜನೆ ರೂಪಿಸಲಾಗಿದೆ.
ಬಿಎಂಇಸಿ ಮತ್ತು ಎಕೆಐಸಿ ಯೋಜನೆಗಳು ಯೋಜನಾ ಅಭಿವೃದ್ಧಿಯ ಆರಂಭಿಕ ಹಂತದಲ್ಲಿವೆ.
(v)ವೈಜಾಗ್ –ಚೆನ್ನೈ ಕೈಗಾರಿಕಾ ಕಾರಿಡಾರ್ (ವಿಸಿಐಸಿ):- ಆಂಧ್ರಪ್ರದೇಶ ಪುನಾರಚನೆ ಕಾಯಿದೆ 2014ರಲ್ಲಿ ಕೇಂದ್ರ ಸರ್ಕಾರ ನೀಡಿದ ಬದ್ಧತೆಯ ಅನುಸರಣೆಗಾಗಿ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು, ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಪೂರ್ವ ಕರಾವಳಿ ಆರ್ಥಿಕ ಕಾರಿಡಾರ್ (ಇಸಿಇಸಿ) ಸಾಧ್ಯತೆಗೆ ಸಂಬಂಧಿಸಿದಂತೆ ಕೈಗೊಂಡ ಅಧ್ಯಯನದಂತೆ ವಿಸಿಐಸಿಯ ಅಧ್ಯಯವನ್ನೂ ಇಸಿಇಸಿಯ ಮೊದಲ ಹಂತದಂತೆ ಕೈಗೊಳ್ಳಬೇಕು ಎಂದು ನಿರ್ಧರಿಸಿದೆ. ಎಡಿಬಿ ತಂಡವು ಕಲ್ಪನಾತ್ಮಕ ಅಭಿವೃದ್ಧಿ ಯೋಜನೆ ವಿಸಿಐಸಿಯ (ಸಿಡಿಪಿ) ಬಗ್ಗೆ ಅಂತಿಮ ವರದಿ ಸಲ್ಲಿಸಿರುವುದರಿಂದ, ಮಾಸ್ಟರ್ ಯೋಜನೆಯ ಪ್ರಕ್ರಿಯೆಯ ನಾಲ್ಕು ಬಿಂದುಗಳಾದ ಆಂಧ್ರಪ್ರದೇಶದ ವಿಶಾಖಪಟ್ಟಣಂ, ಮಚಲಿಪಟ್ಟಣಂ, ದೋನಕೊಂಡ ಮತ್ತು ಶ್ರೀಕಾಳಹಸ್ತಿ –ಯರ್ಪೇಡುಗಳನ್ನು ಎಡಿಬಿ 2016ರ ಮಾರ್ಚ್ ನಲ್ಲಿ ಆರಂಭವಾಗಿರುವ ತನ್ನ ಸಿಡಿಪಿಯಲ್ಲಿ ಗುರುತಿಸಿದೆ ಮತ್ತು ಇದು 2017ರ ಮಾರ್ಚ್ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಹಿನ್ನೆಲೆ
ಉತ್ಪಾದನೆಯ ವೇಗವನ್ನು ಹೆಚ್ಚಿಸಲು ಮತ್ತು ವೈಜ್ಞಾನಿಕವಾಗಿ ಯೋಜಿಸಲಾದ ನಗರೀಕರಣವನ್ನು ಖಾತ್ರಿಪಡಿಸಲು ಭಾರತ ಸರ್ಕಾರವು ಉತ್ಪಾದನೆಯ ಮೇಲೆ ಗಮನವಿಟ್ಟು ಸಮಗ್ರ ಕೈಗಾರಿಕಾ ಕಾರಿಡಾರ್ ಗಳನ್ನು ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಐದು ಕಾರಿಡಾರ್ ಗಳಾದ ದೆಹಲಿ ಮುಂಬೈ ಕೈಗಾರಿಕಾ ಕಾರಿಡಾರ್ (ಡಿಎಂಐಸಿ), ಚೆನ್ನೈ – ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ), ಅಮೃತಸರ – ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ (ಎಕೆಐಜಿ), ಬೆಂಗಳೂರು – ಮುಂಬೈ ಆರ್ಥಿಕ ಕಾರಿಡಾರ್ (ಬಿಎಂಇಸಿ) ಮತ್ತು ವೈಜಾಗ್- ಚೆನ್ನೈ ಕೈಗಾರಿಕಾ ಕಾರಿಡಾರ್ (ವಿಸಿಐಸಿ)ಗಳನ್ನು ಅಭಿವೃದ್ಧಿಗಾಗಿ ಭಾರತ ಸರ್ಕಾರ ಯೋಜನೆ ರೂಪಿಸಿದೆ.
akt/vba/sh 155056