Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇದಾರನಾಥಕ್ಕೆ ಪ್ರಧಾನಿ ಭೇಟಿ, ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ

ಕೇದಾರನಾಥಕ್ಕೆ ಪ್ರಧಾನಿ ಭೇಟಿ, ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ

ಕೇದಾರನಾಥಕ್ಕೆ ಪ್ರಧಾನಿ ಭೇಟಿ, ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ

ಕೇದಾರನಾಥಕ್ಕೆ ಪ್ರಧಾನಿ ಭೇಟಿ, ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೇದಾರನಾಥಕ್ಕೆ ಭೇಟಿ ನೀಡಿದರು. ಕೇದಾರನಾಥ ದೇವಾಲಯದಲ್ಲಿ ಅವರು ಪೂಜೆ ಸಲ್ಲಿಸಿದರು, ಮತ್ತು ಐದು ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಮಂದಾಕಿನಿ ನದಿಯ ತಡೆಗೋಡೆ ಮತ್ತು ಘಾಟ್ ನಿರ್ಮಾಣ; ಸರಸ್ವತಿ ನದಿಯ ಹಾಲಿ ತಡೆಗೋಡೆ ಅಭಿವೃದ್ಧಿ ಮತ್ತು ಘಾಟ್ ನಿರ್ಮಾಣ; ಕೇದಾರನಾಥ ದೇವಾಲಯಕ್ಕೆ ಸಂಪರ್ಕದಾರಿ; ಶಂಕರಾಚಾರ್ಯ ಕುಟೀರ ಮತ್ತು ಶಂಕರಾಚಾರ್ಯ ವಸ್ತುಸಂಗ್ರಹಾಲಯ; ಮತ್ತು ಕೇದಾರನಾಥ ಅರ್ಚಕರ ವಸತಿ ಅಭಿವೃದ್ಧಿಯೂ ಸೇರಿದೆ. ಪ್ರಧಾನಮಂತ್ರಿಯವರು ಕೇದಾರಪುರಿ ಪುನರ್ ನಿರ್ಮಾಣದ ಬಗ್ಗೆಯೂ ವಿವರಿಸಿದರು

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ತಾವು ದೀಪಾವಳಿಯ ದಿನ ಕೇದಾರನಾಥದಲ್ಲಿ ಇರುವುದಕ್ಕೆ ಸಂತೋಷ ಪಡುವುದಾಗಿ ಹೇಳಿದರು. ಗುಜರಾತ್ ನಲ್ಲಿ ಇಂದು ಹೊಸ ವರ್ಷವನ್ನು ಆಚರಿಸಲಾಗುತ್ತಿದೆ, ನಾನು ವಿಶ್ವಾದ್ಯಂತ ಹೊಸ ವರ್ಷ ಆಚರಿಸುತ್ತಿರುವವರಿಗೆ ಶುಭಾಶಯ ಸಲ್ಲಿಸುತ್ತೇನೆ ಎಂದರು.

ಜನ ಸೇವೆಯೇ ಜನಾರ್ದನ ಸೇವೆ ಎಂದು ಹೇಳಿದ ಪ್ರಧಾನಿ, 2022ರಲ್ಲಿ 75ನೇ ಸ್ವಾತಂತ್ಯೋತ್ಸವದ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಕನಸು ನನಸು ಮಾಡಲು ತಾವು ತಮ್ಮನ್ನು ಸಮರ್ಪಿಸಿಕೊಂಡಿರುವುದಾಗಿ ಹೇಳಿದರು. 2013ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವನ್ನು ಸ್ಮರಿಸಿದ ಪ್ರಧಾನಿ, ಆಗ ಗುಜರಾತ್ ಮುಖ್ಯಮಂತ್ರಿಯಾಗಿ ಸಂತ್ರಸ್ತರಿಗೆ ನೆರವಾಗಲು ಮತ್ತು ಪುನರ್ನಿಮಾಣ ಕಾರ್ಯದಲ್ಲಿ ಗುಜರಾತ್ ಸರ್ಕಾರದ ನೆರವು ನೀಡಲು ತಾವು ಮುಂದೆ ಬಂದಿದ್ದಾಗಿ ತಿಳಿಸಿದರು.

ಈಗ ಕೇದಾರನಾಥದಲ್ಲಿ ಆಗುತ್ತಿರುವ ಕಾರ್ಯ, ಒಂದು ಮಾದರಿ ಯಾತ್ರಾಸ್ಥಳವಾಗಿ ಪರಿವರ್ತಿಸಲಿದೆ, ಇಲ್ಲಿ ಯಾತ್ರಿಕರಿಗೆ ಮತ್ತು ಅರ್ಚಕರಿಗೆ ಸೂಕ್ತ ಸೌಲಭ್ಯ ಒದಗಿಸಲಾಗುವುದು ಎಂದರು. ಕೇದಾರನಾಥದಲ್ಲಿ ಮಾಡುತ್ತಿರುವ ಮೂಲಸೌಕರ್ಯ ಉತ್ತಮ ಗುಣಮಟ್ಟದ್ದಾಗಿರುತ್ತದೆ, ಇದು ಆಧುನಿಕವೂ ಆಗಿರುತ್ತದೆ, ಆದರೆ ಅದರ ಆತ್ಮ ಸಾಂಪ್ರದಾಯಿಕವಾಗಿರುತ್ತದೆ ಎಂದರು. ಹಾಗೂ ಅಭಿವೃದ್ಧಿಗಾಗಿ ಪರಿಸರವನ್ನು ನಾಶ ಮಾಡುವುದಿಲ್ಲ ಎಂಬ ಭರವಸೆ ನೀಡಿದರು.

ಹಿಮಾಲಯ ಆಧ್ಯಾತ್ಮಿಕತೆಗೆ, ಸಾಹಸಕ್ಕೆ ಮತ್ತು ಪ್ರವಾಸೋದ್ಯಮಕ್ಕೆ ಮತ್ತು ಪ್ರಕೃತಿ ಪ್ರಿಯರಿಗೆ ವಿಫುಲ ಅವಕಾಶ ನೀಡುತ್ತವೆ ಎಂದು ಪ್ರಧಾನಿ ಹೇಳಿದರು. ಪ್ರತಿಯೊಬ್ಬರೂ ಬಂದು ಹಿಮಾಲಯ ಶೋಧಿಸಿ ಎಂದು ಆಹ್ವಾನ ನೀಡಿದರು.

ಉತ್ತರಾಖಂಡದ ರಾಜ್ಯಪಾಲ ಡಾ. ಕೆ.ಕೆ. ಪಾಲ್, ಮತ್ತು ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ತ್ರಿವೇಂದ್ರ ಸಿಂಗ್ ರಾವತ್ ಈ ಸಂದರ್ಭದಲ್ಲಿ ಹಾಜರಿದ್ದರು.

***

AKT/NT