ನನ್ನೆಲ್ಲಾ ಪ್ರೀತಿಯ ನಾಗರಿಕರಿಗೆ , ನನ್ನ ನಮಸ್ಕಾರಗಳು…
ಎರಡು ವರ್ಷಗಳ ಹಿಂದೆ ದೇಶ ನಮಗೆ ಹೊಸ ಜವಾಬ್ದಾರಿಯೊಂದನ್ನೂ ಸಂಪೂರ್ಣ ಬಹುಮತದೊಂದಿಗೆ ನೀಡಿತ್ತು. ಮತ್ತು ಪ್ರಜಾಪ್ರಭುತ್ವದ ಅನನ್ಯತೆ, ತಾವು ಆಯ್ಕೆ ಮಾಡುವ ಸರ್ಕಾರದ ಕಾರ್ಯದಕ್ಷತೆಯನ್ನು ಮೌಲ್ಯಮಾಪನ ಮಾಡುವ ಮತದಾರರ ಹಕ್ಕಿನ ಮೇಲೆ ನಿಂತಿರುತ್ತದೆ. ನಿಸ್ಸಂಶಯವಾಗಿ, ಒಂದು ಸರ್ಕಾರದ ಉತ್ತಮಕಾರ್ಯ ಹಾಗೂ ನೂನ್ಯತೆಗಳು ಬೆಳಕಿಗೆ ಬರುವ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ಷಮತೆ ಕಡ್ಡಾಯವಾಗಿ ವಿಮರ್ಶೆಗೊಳಗಾಗಬೇಕು..ಈ ಮಧ್ಯೆ ನಾವು ಕಳೆದ ಎರಡು ವರ್ಷಗಳ ಅಧಿಕಾರವಧಿಯನ್ನು ಸಿಂಹಾಲೋಕನ ಮಾಡಿದರೇ, ನಮ್ಮ ಗುರಿಸಾಧನೆಯ ಹಾದಿಯಲ್ಲಿ ಇಲ್ಲಿವೆರೆಗಿನ ನಮ್ಮ ಸಾಧನೆಯನ್ನು ಮನಗಾಣಬಹುದಾಗಿದೆ..
ಅಲ್ಲದೇ ಸಾಧನೆ ಹಾದಿಯಲ್ಲಿ ಸಾಗುತ್ತಿರುವ ಧಿಕ್ಕು ಸರಿಯಾ ಅಥವಾ ತಪ್ಪಾ..?ನಾವು ನಿಗದಿತ ಗುರಿಯನ್ನು ಸಾಧಿಸಬಲ್ಲೆವಾ? ಅಥವಾ ವಿಫಲವಾಗುತ್ತಿದ್ದೇವಾ ಅನ್ನೋದನ್ನ ಕಂಡುಕೊಳ್ಳಬಹುದು..ಈ ಮೌಲ್ಯಮಾಪನಗಳು ದೇಶದ ನಾಗರಿಕರಲ್ಲಿ ಹೊಸ ವಿಶ್ವಾಸವನ್ನು ಕೂಡ ಜೊತೆಯಲ್ಲಿಯೇ ಮೂಡಿಸುತ್ತದೆ..
ಕಳೆದ ಹದಿನೈದು ವರ್ಷಗಳಿಂದ ನೋಡುತ್ತಲೇ ಇದ್ದೇನೆ. ಭಾರತ ಸರ್ಕಾರ ದೇಶದ್ಯಾದಂತ ಹದ್ದಿನ ಕಣ್ಣುಗಳಿಂದ ಪರೀಕ್ಷೆಗೆ ಒಳಪಡುತ್ತಲೇ ಇದೆ. ಈ ಸರ್ಕಾರದ ಪ್ರತಿಯೊಂದು ವಿಚಾರಗಳು ವಿಮರ್ಶೆಗೊಳಪಡುತ್ತಲೇ ಬಂದಿದೆ. ಮತ್ತಿವತ್ತು ನಾನು ಕಾರ್ಯಸಾಧನೆಯ ಸಂತೃಪ್ತಿಯಿಂದ ನಿಂತಿದ್ದೇನೆ. ನಮ್ಮ ಸರ್ಕಾರದ ಕಾರ್ಯನೀರ್ವಹಣೆಯ ಗಂಭೀರ ಮೌಲ್ಯಮಾಪನದ ಹೊರತಾಗಿಯೂ ಈ ದೇಶದ ನಾಗರಿಕರ ವಿಶ್ವಾಸ ಹಾಗೂ ನಂಬಿಕೆಯನ್ನು ಗಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮತ್ತು ಜನತಾ ಜನಾರ್ಧನರ ಆಶೀರ್ವಾದ ದಿನದಿಂದ ದಿನಕ್ಕೆ ನಮ್ಮಮೇಲೆ ಹೆಚ್ಚಾಗುತ್ತಲೇ ಇದೆ. ಹಾಗೂ ಇದು ಹೊಸ ಸ್ಪೂರ್ತಿ ಹಾಗೂ ಹುರುಪಿನಿಂದ ನಮಗೆ ಕಾರ್ಯನಿರ್ವಹಿಸಲು ಮತ್ತಷ್ಟು ಉತ್ಸಾಹದಾಯಕವಾಗಿದೆ..ಆದರೆ, ರಾಜಕೀಯ ನಿರ್ಬಂಧಗಳಿಗಾಗಿ ಸರ್ಕಾರವನ್ನು ಟೀಕಿಸುವವರ ಬಗ್ಗೆ ಹೆಚ್ಚೆನು ಹೇಳೋದಕ್ಕೆ ಇಷ್ಟಪಡುವುದಿಲ್ಲ ..ಪ್ರಜಾಪ್ರಭುತ್ವದಲ್ಲಿ ಸರ್ಕಾರದ ವಿರುದ್ಧ ಬೆರಳು ತೋರಿಸುವುದು ಸಹಜ ಪ್ರಕ್ರಿಯೆ..ಆದರೂ ಕಳೆದ 15 ದಿನಗಳಿಂದ ದೇಶದಲ್ಲಿ ಸ್ಪಷ್ಟವಾಗಿ ಎರಡು ವಿಷಯಗಳು ಗಮನಸೆಳೆದಿವೆ..ಒಂದುಕಡೆ ವಿಕಾಸವಾದ ಹಾಗೂ ಇನ್ನೊಂದು ಕಡೆ ವಿರೋಧವಾದ ..ಇದ್ರಲ್ಲಿ ಯಾವುದು ವಾಸ್ತವ ಯಾವುದು ಸತ್ಯ ಅನ್ನೋದನ್ನು ಈ ದೇಶದ ನಾಗರಿಕರು ಕಂಡುಕೊಳ್ಳುತ್ತಾರೆ…
ಇವತ್ತು ನಾವು ಹಲವು ಅಂಶಗಳ ಬಗ್ಗೆ ವಿಸ್ತೃತ ಚರ್ಚೆಯನ್ನು ಮಾಡಿದ್ದೇವೆ ಈ ಬಗ್ಗೆ ಪುನಃ ನಾನು ಹೇಳುವದಕ್ಕೆ ಹೋಗುವುದಿಲ್ಲ..ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಕಾರ್ಯನಿರ್ವಹಣೆಯನ್ನು ವಿಚಾರ ಹಾಗೂ ಅದರ ನೈಜತೆಯ ಆಧಾರದ ಮೇಲೆ ವಿಮರ್ಶಿಸಲೇ ಬೇಕಾಗುತ್ತದೆ. ಆದರೆ, ಇಲ್ಲಿ ಸತ್ಯಕ್ಕೆ ದೂರವಾದ ನಿರಾಶವಾದದ ಸನ್ನಿವೇಶವನ್ನು ನಮ್ಮ ದೇಶದಲ್ಲಿ ಸೃಷ್ಟಿಸಬಾರದು ಅನ್ನೋದು ಗಮನಾರ್ಹವಾದ ವಿಚಾರ. ಇಂತಹ ಆಧಾರವಿಲ್ಲದ ಹತಾಶೆಯ ಸಂವೇಧನೆಗಳು ಕೆಲವೊಂದು ಕ್ಷೇತ್ರಗಳಲ್ಲಿ ಪರಿಣಾಮ ಬೀರುತ್ತದೆ. ಆದರೆ, ಯಾವಾಗ ಇವುಗಳು ಪ್ರಾಬಲ್ಯ ಪಡೆದುಕೊಳ್ಳುತ್ತವೆಯೋ ಆಗ ಅವುಗಳು ಗಂಭೀರ ಸಮಸ್ಯೆಗಳಾಗಿ ಭಾದಿಸುತ್ತವೆ..
ಸಾಮಾನ್ಯವಾಗಿ ಪ್ರತಿಸರ್ಕಾರದ ಕಾರ್ಯನಿರ್ವಹಣೆಯ ಮೌಲ್ಯಮಾಪವನ್ನು ವಿಮರ್ಶೆಯನ್ನು ಹಿಂದಿನ ಸರ್ಕಾರಗಳ ಕಾರ್ಯನಿರ್ವಹಣೆಯೊಂದಿಗೆ ತುಲನೆ ಮಾಡಿ ಲೆಕ್ಕ ಹಾಕಲಾಗುತ್ತಿದೆ.. ಹಿಂದೇನಾಗಿತ್ತು..ಇವತ್ತೇನಾಗಿದೆ ಅನ್ನುವಂತಃ ತುಲನಾತ್ಮಕ ತೌಲೌನಿಕ ವಿಮರ್ಶೆಯಾಗಿರುತ್ತದೆ.. ಆದರೆ.. ಇಲ್ಲಿ ನಾವು ಹಿಂದಿನ ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಸಂಪೂರ್ಣವಾಗಿ ಕುರುಡಾಗಿದ್ದುಕೊಂಡು ಪ್ರಸ್ತುತ ಸರ್ಕಾರದ ಕಾರ್ಯವೈಖರಿಯನ್ನು ಅಳೆಯಲು ಪ್ರಾರಂಭಿಸಿದರೇ, ನಾವುಗಳು ಯಾವತ್ತಿಗೂ ಸರಿಯಾದ ಹಾಗೂ ಸೂಕ್ತವಾದ ಅಭಿಪ್ರಾಯವನ್ನು ಅಂದಾಜು ಮಾಡುವುದಕ್ಕೆ ಖಂಡಿತ ಸಾಧ್ಯವಾಗುವುದಿಲ್ಲ . ಇವತ್ತು ನನ್ನ ಸರ್ಕಾರ ಕಲ್ಲಿದ್ದಲು ಹಂಚಿಕೆ ವಿವಾದವನ್ನು ಬಗೆಹರಿಸಿದ ವಿಚಾರದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದೆ ಅಂತಾದರೇ, ಅದು ಹಿಂದಿನ ಸಂದರ್ಭ ಹಾಗೂ ಪರಿಸ್ಥಿತಿಯನ್ನು ಅವಲೋಕಿಸುವುದರಿಂದ ಮಾತ್ರವೇ ಅರ್ಥೈಸಬಹುದಾಗಿದೆ.. ಯಾವಾಗಾ ಸುಪ್ರೀಂಕೋರ್ಟ್ ಕಲ್ಲಿದ್ದಲು ಗಣಿಗಳ ಲೈಸೆನ್ಸ್ಗಗಳನ್ನು ರದ್ದುಮಾಡಿತೋ ಕಲ್ಲಿದ್ದಲು ವಿದ್ಯತ್ ಘಟಕಗಳಲ್ಲಿ ಕಲ್ಲಿದ್ದಲ್ಲು ಕೊರತೆಯು ತೀವ್ರವಾಯ್ತು.. ಅಲ್ಲದೇ ಈ ಸಂಕಷ್ಟ ಪರಿಸ್ಥಿತಿ ಹಿಂದಿನ ಸರ್ಕಾರವನ್ನು ಕಲ್ಲಿದ್ದಲು ಹಗರಣದ ಮೂಲಕ ಅವಮಾಕ್ಕೀಡು ಮಾಡಿತು..
ಎರಡು ವರ್ಷಗಳ ಹಿಂದೆ ಪ್ರತಿ ಸುದ್ದಿಪತ್ರಿಕೆ , ಪ್ರತಿ ಟಿವಿ ಚಾನೆಲ್ ಗಳಲ್ಲಿ ಒಂದೇ ವಿಚಾರ ಹೆಚ್ಚಾಗಿ ಸುದ್ದಿಯಾಗುತ್ತಿದ್ದವು. ಒಂದಲ್ಲ ಒಂದು ಹಗರಣಗಳು ಒಂದರ ನಂತರ ಮತ್ತೊಂದು ಹಗರಣಗಳು, ಪ್ರತಿನಿತ್ಯದ ಚರ್ಚೆಗಳಲ್ಲಿ ಹಾಗೂ ನಾಯಕರ ಮಾತುಗಳಲ್ಲಿ ವಿಷಯ ವಸ್ತುಗಳಾಗಿದ್ವು..ಆದರೆ ಇವತ್ತು ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರೀಯೆ ಸಂಪೂರ್ಣವಾಗಿ ಪಾರದರ್ಶಕತೆಯ ಮೂಲಕ ನಡೆಯುತ್ತಿವೆ..ಮತ್ತು ಈ ಸಂಬಂಧ ಯಾರೊಬ್ಬರು ಬೆರಳು ತೋರಿಸಲು ಸಾದ್ಯವೆ ಇಲ್ಲ ಅನ್ನೋದನ್ನ ವಿಶ್ವಾಸದಿಂದ ಹೇಳಲು ಬಯಸುತ್ತೇನೆ. ಲಕ್ಷ ಕೋಟಿ ರೂಪಾಯಿಗಳು ಈ ಪಾರದರ್ಶಕತೆಯ ನಿಲುವಿನಿಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಖಜಾನೆಯನ್ನು ಸೇರುತ್ತಿವೆ.. ಕೇವಲ ಇಷ್ಟೆ ಅಲ್ಲ .ಹೀಗೆ ಖಜಾನೆ ಸೇರುತ್ತಿರುವ ಅನುದಾನಗಳು ಶೀಘ್ರದಲ್ಲೇ ಕಲ್ಲಿದ್ದಲು ಗಣಿಗಳ ಪ್ರದೇಶಗಳಲ್ಲಿರುವ ಆಧಿವಾಸಿಗಳ ಪುನರುಜ್ಜೀವನಕ್ಕಾಗಿ ಬಳಕೆಯಾಗಲಿವೆ.. ಈ ಸತ್ಯಗಳ ಬಗ್ಗೆ ನಾನು ಮಾತು ಮುಂದುವರಿಸುತ್ತಲೇ ಹೋದರೇ ನೀವು ಹೇಳೇ ಹೇಳುತ್ತೀರಾ…ಮೋದಿಯರು ಇದನ್ನು ಸಾಧಿಸಿ ತೋರಿಸಿದ್ರು ಅಂತಾ..
ಏನೇ ಆಗಲಿ, ನೀವುಗಳು ವಿಚಾರಗಳ ಮಹತ್ವಗಳನ್ನು ನೋಡಿದರೇ, ನಮ್ಮ ಈ ಕಾರ್ಯಗಳ ಸಂಪೂರ್ಣ ಅರಿವು ಆಗುತ್ತದೆ ಹಾಗೂ ಮತ್ತು ನಿಮ್ಮಿಂದ ಅಭಿನಂದಿಸಲ್ಪಡುತ್ತದೆ. ಸುಪ್ರೀಂಕೋರ್ಟ್ ಏತಕ್ಕೆ ಕಲ್ಲಿದ್ದಲು ಗಣಿಗಾರಿಕೆಯ ಪರವಾನಿಗೆಯನ್ನು ರದ್ದು ಪಡಿಸಿತು ಅಂತಾ ನೀವು ಕೇಳಬೇಕು..ಏತಕ್ಕೆ ಕಲ್ಲಿದ್ದಲು ಕ್ಷೇತ್ರದಲ್ಲಿ ಅತಿದೊಡ್ಡ ಹಗರಣ ಕೇಳಿಬಂತು ಅನ್ನೋದನ್ನು ತಿಳಿದುಕೊಳ್ಳಬೇಕು..ಜೊತೆಯಲ್ಲಿ ಸರ್ಕಾರದ ಹಣವನ್ನು ಲೂಟಿಹೊಡೆಯುವ ನಿಟ್ಟಿನಲ್ಲಿ ಹಗರಣದ ನಡೆಸಿದವರ ತಂತ್ರಗಳು ಏನಾಗಿದ್ದವು ಅನ್ನೋದನ್ನು ಅರಿಯಬೇಕು ..ಆಗ ಮಾತ್ರ ದೇಶವನ್ನು ಹಲವು ಬಗೆಯ ಹಗರಣಗಳಿಂದ ದೇಶವನ್ನು ಮುಕ್ತಗೊಳಿಸಲು ಸಾಧ್ಯವಾದ ಅತಿದೊಡ್ಡ ಕಾರ್ಯದ ಪರಿಪೂರ್ಣ ಅರಿವವನ್ನು ನೀವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಹಿಂದಿನ ಕ್ರಮಗಳನ್ನು ಆಧರಿಸಿ ನಾವುಗಳು ಇಂದಿನ ನಿರ್ಧಾರಗಳನ್ನು ಪರೀಕ್ಷಿಸಿದಾಗ ಮಾತ್ರವೇ ನಾವು ಪ್ರಸ್ತುತ ಎಂತೆಂಥಾ ಬದಲಾವಣೆಗಳನ್ನು ಸಾಧಿಸಿದ್ದೇವೆ ಅನ್ನೋದನ್ನೂ ನೋಡಬಹುದಾಗಿದೆ.
ಈ ದೇಶದ ಅಂಚುಗಳನ್ನು ಭಷ್ಟ್ರಾಚಾರ ಎನ್ನುವ ಗೆದ್ದಲು ತಿನ್ನುತ್ತಿವೆ ಅನ್ನೋದನ್ನ ಯಾರೂ ಕೂಡ ಅಲ್ಲಗಳೆಯೋದಿಲ್ಲಅಂಥಾ ಭಾವಿಸುತ್ತೇನೆ. ಮತ್ತು ಗೆದ್ದಲು ಹುಳುವಿನ ಹಾಗೂ ಭ್ರಷ್ಟಾಚಾರ ಅನ್ನೋದು ಎಲ್ಲಾ ಕಡೆಯಿಂದಲೂ ದೇಶದ ಕನಸುಗಳನ್ನು ತಿಂದು ಹಾಕುತ್ತವೆ. ಹಾಗಾಗಿ ಭ್ರಷ್ಟಾಚಾರ ಅನ್ನುವ ಗೆದ್ದಲು ಹುಳುವನ್ನ ಅಳಿಸಿ ಹಾಕುವ ಅವಶ್ಯಕತೆ ಇದೆ.
ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ನಡೆಸುವ ಸಲುವಾಗಿ ನಾನು ಒಂದರ ನಂತರ ಮತ್ತೊಂದು ಹೆಜ್ಜೆಗಳನ್ನ ಸೂಕ್ಷ್ಮವಾಗಿ ಇಡುತ್ತಲೇ ಮುನ್ನುಗಿದೆ.. ಮತ್ತು ಈ ದೇಶದ ಸಾಮಾನ್ಯ ಜನರ ಪ್ರಜ್ಞೆಯನ್ನೇ ಅಲುಗಾಡಿಸುವಂತಃ ಭ್ರಷ್ಟಾಚಾರದ ಅತಿದೊಡ್ಡ ವಿಪತ್ತನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದೆ. ಒಂದು ವೇಳೆ ನೀವು ಭ್ರಷ್ಟಾಚಾರದ ವಿಷಯದ ಕುರಿತಾಗಿ ತನಿಖೆ ನಡೆಸಿದರೇ , ಸ್ವತಃ ಕಂಗಾಲಾಗುತ್ತೀರಾ..ನಮ್ಮ ದೇಶ ಯಾವ ಹಾದಿಯಲ್ಲಿ ಸಾಗುತ್ತಿದೆ ಅನ್ನೋದನ್ನು ಕಲ್ಪನೆ ಮಾಡಿಕೊಂಡು ದಿಗಿಲು ಬೀಳುತ್ತೀರಾ.. ಈ ದೇಶದಲ್ಲಿ ಈಗಷ್ಟೆ ಹುಟ್ಟಿದ ಹೆಣ್ಣು ಮಗುವೊಂದು ಹುಟ್ಟಿದ ತಕ್ಷಣ ಸರ್ಕಾರಿ ದಾಖಲೆಗಳಲ್ಲಿ ವಿಧವೆಯಾಗುತ್ತದೆ . ಮತ್ತು ಸುದೀರ್ಘ ಅವಧಿಗೆ ಪೆನ್ಶನ್ ಪಡೆದುಕೊಳ್ಳಲು ಪ್ರಾರಂಭಿಸುತ್ತದೆ.. ಮತ್ತಾಕೆ ಯಾವತ್ತಿಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ.. ಪ್ರಕರಣವೂ ಬೆಳಕಿಗೆ ಬರುವುದಿಲ್ಲ..ಎಂಥಾ ವಿಪರ್ಯಾಸ ನೋಡಿ.
ಯಾವಾಗ ನಾವು ನೇರ ಪ್ರತಿಫಲ ವರ್ಗಾವಣೆ ಯೋಜನೆಯಡಿಯಲ್ಲಿ ಎಲ್ ಪಿ ಜಿ ಸಬ್ಸಿಡಿಯನ್ನು ಆಧಾರ್ ಹಾಗೂ ಜನ್ ಧನ್ ಖಾತೆಯ ಜೊತೆಗೆ ಜೋಡಣೆ ಮಾಡುವ ಮೂಲಕ ನೇರವಾಗಿ ಫಲಾನುಭವಿಗೆ ವಿತರಣೆ ಮಾಡಲು ಸೋಚಿಸಿದೆವೋ ನಂಬಲು ಸಾಧ್ಯವಿಲ್ಲದಂತಃ ಫಲಿತಾಂಶ ಹೊರ ಮೂಡಿತ್ತು.. ನನ್ನ ದೇಶದ ನಾಗರಿಕರು ಎಲ್ ಪಿಜಿ ಸಬ್ಸಿಡಿಯನ್ನು ಪಡೆದುಕೊಳ್ಳುವ ಗ್ರಾಹಕರ ಪಟ್ಟಿಯಲ್ಲಿದ್ದ ಲೆಕ್ಕವಿಲ್ಲದಷ್ಟು ನಕಲಿ ಗ್ರಾಹಕರ ಹೆಸರುಗಳನ್ನು ನೋಡಿಯೇ ನಿಜಕ್ಕೂ ಅಚ್ಛರಿಗೊಂಡಿದ್ದರು.. ನಾವು ಈ ಸೋರಿಕೆಯನ್ನು ತಡೆ ಹಿಡಿಯುವ ಪ್ರಯತ್ನಕ್ಕೆ ಕೈ ಹಾಕಿದೆವೆ.. ಮತ್ತು ಈ ಮೂಲಕ 15 ಸಾವಿರ ಕೋಟಿ ರೂಪಾಯಿಯಷ್ಟು ಬಡವರ ಹಣವನ್ನ ಉಳಿತಾಯ ಮಾಡಿದ್ದೇವೆ ಅನ್ನೋದನ್ನ ಹೇಳೋದಕ್ಕೆ ಸಂತೋಷವಾಗುತ್ತದೆ.
ಇನ್ನೂ ಸುಮಾರು ಐವತ್ತೂ ಕೋಟಿಯಷ್ಟು ಹಣ ಯಾವುದೋ ದಾಳಿಯಲ್ಲಿ ಸಿಕ್ಕರೇ ಆ ಸುದ್ದಿ ನಮ್ಮ ದೇಶದ ಪತ್ರಿಕೆಗಳಲ್ಲಿ ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಅಪಾರ ಶ್ರಮ ಹಾಗೂ ನಿರಂತರ ಯೋಜನೆಗಳ ಮೂಲಕ 15 ಸಾವಿರ ಕೋಟಿ ರೂಪಾಯಿಯಷ್ಟು ಅಗಾಧ ಪ್ರಮಾಣದಷ್ಟು ಹಣವನ್ನು ಉಳಿಸಿದ್ದೇವೆ.. ಆದ್ದರಿಂದ ಮೋದಿಜಿ ನೀವು ಮಾಡಿದ್ದು ಸರಿಯಾಗಿಯೇ ಇದೆ..ಸರಿಯಾದುದ್ದನ್ನೇ ಮಾಡುತ್ತಿದ್ದೀರಾ ಅನ್ನೋ ಪ್ರತಿಕ್ರಿಯೆಯನ್ನ ನನ್ನ ಈ ಹಜ್ಜೆಗೆ ಪ್ರತಿಯಾಗಿ ನನ್ನ ದೇಶದ ಜನರಿಂದ ನಿರೀಕ್ಷಿಸುವುದು ತಪ್ಪಲ್ಲ ಅಂಥಾ ಭಾವಿಸುತ್ತೇನೆ.
ಇದಕ್ಕಿಂತ ಹೆಚ್ಚಾಗಿ ದೇಶದಲ್ಲಿ ಅಗ್ಗದ ದರದಲ್ಲಿ ವಿತರಿಸಲಾಗುವ ಆಹಾರ ಧಾನ್ಯಗಳು ಸೀಮೆಎಣ್ಣೆ ಮೇಲಿನ ಸಬ್ಸಿಡಿಯ ವಿತರಣೇ ಸದ್ಯದ ಸನ್ನಿವೇಶವನ್ನು ಗಮನಿಸಿದರೇ ನೀವುಗಳು ನಿಜಕ್ಕೂ ಅಚ್ಛರಿ ಪಡುತ್ತೀರಾ.. ಈ ಯೋಜನೆಯನ್ನು ಎಷ್ಟರಮಟ್ಟಿಗೆ ಸುಲಲಿತಗೊಂಡಿದೆ ಅನ್ನೋದನ್ನು ತಿಳಿದುಕೊಳ್ಳುವ ಸಲುವಾಗಿ ಸರ್ವೆಯೊಂದನ್ನೂ ನಡೆಸಿದೆವು.. ಇದ್ರಲ್ಲಿ ನಮಗೆ ಕಂಡುಬಂಧಿದ್ದೇನು ಗೊತ್ತಾ…ಈ ರೇಷನ್ ಕಾರ್ಡನ್ನು ಕೈಯಲ್ಲಿ ಹಿಡಿದುಕೊಂಡಿರುವ ಬಡವನೊಬ್ಬ ಪ್ರತಿ ಕೆಜಿ ಅಕ್ಕಿಗೆ 27 ರೂಪಾಯಿ ಸಬ್ಸಿಡಿಯನ್ನು ಈ ದೇಶದ ಖಜಾನೆಯಿಂದ ನೀಡಲಾಗುತ್ತಿದೆ ಅನ್ನೋದರ ಅರಿವೇ ಇಲ್ಲದೇ ಕೇವಲ ಒಂದು ಎರಡು ಮೂರು ರೂಪಾಯಿಗೆ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ಧಾನೆ. ಮತ್ತು ತನ್ನ ತಟ್ಟೆಯಲ್ಲಿ ಅನ್ನ ಕಾಣುತ್ತಿದ್ದಾನೆ. ಹೀಗಿದ್ರೂ , ಕಣ್ಣಿಗೆ ಕಾಣದಂತಾ ಹಲವು ವಿಷಯಗಳ ಮೇಲೆ ತನಿಖೆ ಮುಂದುವರಿದಿದೆ.. ಇಲ್ಲಿವೆರೆಗೂ , 1.62 ಕೋಟಿಯಷ್ಟು ನಕಲಿ ಪಡಿತರ ಚೀಟಿಯನ್ನು ಗುರುತಿಸಿದ್ದೇವೆ ಮತ್ತು ರದ್ದು ಪಡಿಸಿದ್ದೇವೆ. ಇದರ ಅರ್ಥ ಸರ್ಕಾರದ ಸಬ್ಸಿಡಿಗಳು ಯಾರದ್ದೋ ಜೇಬನ್ನ ಹೋಗಿ ತಲುಪುತ್ತಿತ್ತು.. ಇದರರ್ಥ ಭ್ರಷ್ಟಚಾರ ಹಲವು ವಿಧಗಳಲ್ಲಿ ಹಲವು ಹಂತಗಳಲ್ಲಿ ವ್ಯಾಪಿಸಿದ್ದು ಅದನ್ನು ನಿಯಂತ್ರಿಸುವ ಅಗತ್ಯವಿದೆ ..
ಇತ್ತಿಚೆಗೆ ಹರಿಯಾಣ ಸರ್ಕಾರ ಆಧಾರ್ ಯೋಜನೆ, ಜನ್ ಧನ್ ಯೋಜನೆ ಹಾಗೂ ಮೊಬೈಲ್ ಸಂಪರ್ಕದಡಿಯಲ್ಲಿ ಪ್ರಮುಖ ಕ್ರಮವೊಂದನ್ನೂ ಕೈಗೊಂಡಿತ್ತು.. ಆ ವೇಳೇ ನನಗೆ ಗೊತ್ತಾಯ್ತು, ಕೇವಲ ಹರಿಯಾಣದಂತಃ ಸಣ್ಣ ರಾಜ್ಯದಲ್ಲಿ ಸುಮಾರು ಆರು ಲಕ್ಷದಷ್ಟು ನಕಲಿ ಗ್ರಾಹಕರು ಸೀಮೆಎಣ್ಣೆಯನ್ನು ಪಡೆದುಕೊಳ್ಳುತ್ತಿದ್ದಾರೆ ಅನ್ನೋದು.. ಊಹಿಸಿಕೊಳ್ಳಿ..ಇಷ್ಟೊಂದು ಪ್ರಮಾಣದ ಸೀಮೆಎಣ್ಣೆ ಹೋಗುತ್ತಿರೋದಾದ್ರೂ ಎಲ್ಲಿಗೆ.. ಅನುಮಾನವೇ ಇಲ್ಲ..ದೇಶದ ಬಡವರಿಗೆ ಸಬ್ಸಿಡಿಯ ದರದಲ್ಲಿ ವಿತರಣೆಯಾಗಬೇಕಾಗಿದ್ದ ಸೀಮೆಎಣ್ಣೇಯನ್ನು ಒಂದೋ ಡಿಸೇಲ್ ಹಾಗೂ ಪೆಟ್ರೋಲ್ನ ಜೊತೆಗೆ ಮಿಕ್ಸ್ ಮಾಡಿ ಪರಿಸರವನ್ನು ಹಾಳುಮಾಡುವುದಕ್ಕೆ ಬಳಸಲಾಗುತ್ತಿದೆ. ಇಲ್ಲವಾ ಕೆಮಿಕಲ್ ಕಾರ್ಖಾನೆಗಳಲ್ಲಿ ಕಚ್ಚಾ ಸಾಮಗ್ರಿಗಳಾಗಿ ಬಳಕೆಯಾಗುತ್ತಿದೆ. ..ಹಾಗೆ ಸುಮ್ಮನೇ ಯೋಚಿಸಿ ನೋಡಿ 1.62 ಕೋಟಿ ನಕಲಿ ಪಡಿತರ ಕಾರ್ಡ್ಗಳು.. ಆರು ಲಕ್ಷ ನಕಲಿ ಸೀಮೆಎಣ್ಣೆ ಗ್ರಾಹಕರು..!?
ಇತ್ತೀಚೆಗೆ ನಾವು ರಾಜ್ಯದಲ್ಲಿ ಸುಮಾರು 540 ಕೋಟಿ ರೂಪಾಯಿ ಹಣವನ್ನು ಉಳಿಸಿದ್ದೇವೆ..ಯಾವ ಕಾರಣಕ್ಕೆ ಇಷ್ಟೊಂದು ದೊಡ್ಡಮೊತ್ತದ ಹಣ ವಿತರಣೆಯಾಗುತ್ತಿತ್ತು..? ಇಷ್ಟೊಂದು ದೊಡ್ಡಮೊತ್ತದ ಹಣ ನಕಲಿ ಶಿಕ್ಷಕರಿಗೆ ವಿತರಣೆಯಾಗುತ್ತಿತ್ತು. ಅವರ ಸಂಬಳ, ಅವರ ಶಾಲೆಯ ಮಧ್ಯಾಹ್ನದ ಊಟ ಹಾಗೂ ಸಮವಸ್ತ್ರಗಳಿಗಾಗಿ ವಿತರಣೆ ಮಾಡಲಾಗುತ್ತಿತ್ತು. ಶಿಕ್ಷಕರೆ ನಕಲಿಯಾಗಿದ್ದ ಮೇಲೆ ಸಹಜವಾಗಿಯೇ ಆ ಶಾಲೆ ಕೂಡ ನಕಲಿಯಾಗಿರುತ್ತದೆ. ಇದ್ರಲ್ಲಿ ಅನುಮಾನವೇ ಇಲ್ಲ.. ಇಂತಾ ಅನೇಕ ಭಯಾನಕ ಮಾಹಿತಿಗಳು ಹಾಲಿ ಜಾರಿಯಲ್ಲಿರುವ ತನಿಖೆಯಿಂದ ಹೊರಬೀಳುತ್ತಿದೆ..ಹಾಗಾದ್ರೆ ಈ ತನಿಖೆಯ ಪರಿಣಾಮ ಏನು..ಪಲಿತಾಂಶ ಏನು ..ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ನಮ್ಮ ಅಭಿಯಾನದ ಮೂಲಕ ನಾವುಗಳು 36 ಸಾವಿರ ಕೋಟಿ ರೂಪಾಯಿಯಷ್ಟು ಸೋರಿಕೆಯನ್ನು ತಡೆಯುವಲ್ಲಿ ಸಂಪೂರ್ಣವಾಗಿ ಸಫಲರಾಗಿದ್ದೇವೆ.. ಅಷ್ಟೆಅಲ್ಲಾ ಈ ಉಳಿತಾಯ ಯಾವುದೋ ಒಂದು ವರ್ಷದ ಉಳಿತಾಯವಲ್ಲ..ಪ್ರತಿವರ್ಷದ ಉಳಿತಾಯವಾಗಿದೆ. ನನ್ನ ದೇಶದ ನಾಗರಿಕರೆ ಇದಿನ್ನೂ ಆರಂಭ..ಮೊದಲ ಹಜ್ಜೆ.
ಕೆಲವರು ಯಾವಾಗಲೂ ನನ್ನ ಕೇಳುತ್ತಿರುತ್ತಾರೆ.. ಮೋದಿಯವರೇ,, ನೀವು ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದೀರಿ..ಹಾಗಿದ್ಮೇಲೆ ಕೆ ನೀವು ಯಾವಾಗಲೂ ಟೀಕೆಗೆ ಒಳಗಾಗುತ್ತೀರಾ..? ವಿರೋಧ ಪಕ್ಷಗಳು ಪ್ರತಿನಿತ್ಯ ನಿಮ್ಮ ವಿರುದ್ಧಉಗ್ರ ಟೀಕೆಗಳನ್ನುಏತಕ್ಕೆ ಮಾಡುತ್ತವೆ.. ಏಕೆ, ನೀವು ನಿಮ್ಮ ರಕ್ಷಣೆಗಾಗಿ ಟೀಕೆಗಳಿಗೆ ಪ್ರತಿಯಾಗಿ ರಕ್ಷಣಾತ್ಮಕ ತಂತ್ರಗಾರಿಯನ್ನು ಪರಿಣಾಮಕಾರಿಯಾಗಿ ರೂಪಿಸಿಕೊಂಡಿಲ್ಲ..ಕೆ ನೀವು ಈ ಎಲ್ಲಾ ವಿಚಾರಗಳನ್ನು ಮಾಧ್ಯಮಗಳ ಜೊತೆಯಲ್ಲಿ ಚರ್ಚೆ ನಡೆಸುವಂತಃ ಪ್ರಯತ್ನವನ್ನು ಮಾಡಿಲ್ಲ. ಹೀಗೆ ಹಲವು ಪ್ರಶ್ನೆಗಳನ್ನು ಕೆಲವರು ಕೇಳುತ್ತಿರುತ್ತಾರೆ.. ಅವರಿಗೆ ಹೇಗೆ ನಾನು ಮನವರಿಕೆ ಮಾಡಿಕೊಡಲಿ. ಚಾಡಿ ಹಾಗೂ ನಿಂಧನೆಗಳ ಹೊರತಾಗಿ ಅವರುಗಳು ಮತ್ಯಾವ ರೀತಿಯಲ್ಲಿ ನನ್ನ ವಿರುದ್ಧ ಆರೋಪಿಸಲು ಸಾಧ್ಯ ಅನ್ನೋದನ್ನ..? ಮೋದಿ ಅವರ ಜೇಬಿಗಿಳಿಯುತ್ತಿದ್ದ ಮೂವತ್ತಾರು ಸಾವಿರ ಕೋಟಿ ರೂಪಾಯಿಯನ್ನು ತಡೆದಿದ್ದಾನೆ..ಯಾರು ದೇಶವನ್ನು ಲೂಟಿ ಹೊಡೆಯುತ್ತಿದ್ದರೋ ಅವರೀಗ ತೊಂದರೆ ಹಾಗೂ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದು ನಮಗೆ ಚೆನ್ನಾಗಿ ಅರ್ಥವಾಗುತ್ತದೆ..ಸಧ್ಯ ಸ್ಪಷ್ಟ ಫಲಿತಾಂಶವನ್ನು ಹೊಂದಿರುವ ಸೂಕ್ತ ಯೋಜನೆ ಅಡಿಯಲ್ಲಿ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಇಂತಹ ಹಲವು ವಿಷಯಗಳನ್ನು ಗುರುತಿಸಿ ನಿಮ್ಮ ಮುಂದಿಡುತ್ತೇನೆ
ನೀವುಗಳು ನೋಡಿರಬಹುದು,, 200 250 300 ರೂಪಾಯಿಯಷ್ಟಿದ್ದ ಎಲ್ಇಡಿ ಬಲ್ಬ್ಗಳ ದರ 60, 7-, 80 ರೂಪಾಯಿಗಳಿಗೆ ಕುಸಿದಿದ್ದನ್ನ ನೀವು ಗಮನಿಸಿರಬಹುದು.. ಇವತ್ತು ನಾನೇನಾದ್ರೂ ಸುಮಾರು ಎರಡು ಲಕ್ಷ ಕೋಡಿ ರೂಪಾಯಿ ವೆಚ್ಚದ ವಿದ್ಯುತ್ ಘಟಕ ಸ್ಥಾಪನೆಯ ಬಗ್ಗೆ ಘೋಷಣೆ ಮಾಡುತ್ತೇನೆ ಅಂದಿಟ್ಟುಕೊಳ್ಳಿ.. ಇದು ಸಹಜವಾಗಿಯೇ ಮಾಧ್ಯಮಗಳ ಗಮನವನ್ನು ಸೆಳೆಯುತ್ತದೆ.. ವಾಣಿಜ್ಯ ಪ್ರತಿಕ್ರೆಗಳು ಮೋದಿ 1 ರಿಂದ 2 ಲಕ್ಷ ಕೋಟಿ ವೆಚ್ಚದಲ್ಲಿ ಮೋದಿ ವಿದ್ಯುತ್ ಕ್ಷೇತದ್ರಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕೈ ಹಾಕಿದ್ದಾರೆ ಅನ್ನುವಂಥ ಮುಖ್ಯಾಂಶಗಳನ್ನು ಕಾಣಬಹುದು…ಬೇರೇ ಪತ್ರಿಕೆಗಳಲ್ಲಿ ಬಜ್ಜೆಟ್ನ ಅರಿವಿಲ್ಲದ ಮೋದಿ ಅತಿದೊಡ್ಡ ಕಲ್ಪನೆ ಅನ್ನೋ ಹೆಡ್ ಲೈನ್ ಕಾಣಬಹದು..ಅಷ್ಟೆಅಲ್ಲದೇ ,, ಪತ್ರಿಕೆಗಳು ಎಲ್ಲಾ ಮೋದಿ ಇಷ್ಟೊಂದು ದೊಡ್ಡಮೊತ್ತದ ಹಣವನ್ನು ಎಲ್ಲಿಂದ ತರುತ್ತಾರೆ ಅಂತಾ ಹುಡುಕಲು ಆರಂಭಿಸುತ್ತಾರೆ. ಆದ್ರೆ ಒಂದು ವಿಷಯವನ್ನು ಚರ್ಚೆ ಮಾಡೋದಕ್ಕೆ ಹೋಗೋದಿಲ್ಲ..ಅದೇನಂದ್ರೆ ಮೋದಿ ಒಂದುವೇಳೆ ಐನೂರು ನಿಗಧಿತ ನಗರಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಅಳವಡಿಸುವ ಗುರಿಸಾಧನೆಯಲ್ಲಿ ಯಶಸ್ಸು ಸಾಧಿಸಿದಿದ್ರೆ, 20 ಸಾವಿರ ಮೆಗಾವ್ಯಾಟ್ ನಷ್ಟು ವಿದ್ಯುತ್ ಉಳಿತಾಯವಾಗುತ್ತದೆ.. ಮತ್ತಿದು ಪವರ್ ಪ್ಲಾಂಟ್ವೊಂದನ್ನೂ ಸ್ಥಾಪಿಸಲು ಅಗತ್ಯವಿರುವ 1 ಲಕ್ಷ ಕೋಟಿ ರೂಪಾಯಿಗಳಿಗೆ ಸಮವಾಗುತ್ತದೆ… ಆದ್ರೆ ಎಲ್ ಇಡಿ ಬಲ್ಬ್ ಬೆಲೆ 60-70 ರೂಪಾಯಿಗಳಿಗೆ ಇಳಿದಿದ್ದು ಮಾತ್ರ ಯಾವತ್ತಿಗೂ ಸುದ್ದಿಯಾಗುವುದಿಲ್ಲ..ಅದ್ರಲ್ಲಿ ಅಂತಃ ವಿಶೇಷತೆ ಎನಿರುತ್ತೆ ಅಲ್ವಾ.ಒಂದರ ನಂತ್ರ ಮತ್ತೊಂದರಂತೆ ನಿರಂತರವಾಗಿ ಜಾರಿಗೊಳಿಸಲಾಗುತ್ತಿರುವ ಸರಣಿ ಸಂಯೋಜಿತ ಯೋಜನೆಗಳ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ..
ಹಿಂದಿನ ಚುನಾವಣೆಯ ದಿನಗಳನ್ನು ನೆನಪಿಸಿಕೊಳ್ಳಿ. ಕೇಂಧ್ರದ ಮಹಾನ್ ನಾಯಕರೆಲ್ಲರೂ ಚುನಾವಣೇಯನ್ನು ಗಮನದಲ್ಲಿಟ್ಟುಕೊಂಡು ಎಲ್ ಪಿಜಿ ಸಬ್ಸಿಡಿಯನ್ನು ವಾರ್ಷಿಕ 9 ರಿಂದ 12 ಸಿಲಿಂಡರ್ಗೆ ಏರಿಸುವುದ್ರಲ್ಲಿದ್ರು.. 25 ಎಲ್ಪಿಜಿ ಗ್ಯಾಸ್ ಕೂಪನ್ ಗಳನ್ನು ಉಚಿತವಾಗಿ ಬೇರೆಯವರಿಗೆ ನೀಡಲು ಸಂಸದರೊಬ್ಬರು ಬಳಕೆಯಾಗುತ್ತಿದ್ರು.. ಆ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ .
ನನಗೆ ಈಗಲೂ ನೆನಪಿದೆ.., ಒಬ್ಬ ಏರ್ ಪೋರ್ಟ್ ಅಧಿಕಾರಿ ,, ಅಹಮದಾಬಾದ್ ನವರು.. ಆ ವಿಮಾನ ನಿಲ್ದಾಣದಲ್ಲಿ ಹೋಗುತ್ತಿದ್ದ ಬರುತ್ತಿದ್ದ ಪ್ರತಿಯೊಬ್ಬ ಸಂಸದರ ಬಳಿಯಲ್ಲೂ ತಮ್ಮ ಮಗನಿಗಾಗಿ ಉಚಿತ ಎಲ್ಪಿಜಿ ಕೂಪನ ಕೊಡಿಸಿ ಅಂತಾ ಮನವಿ ಮಾಡಿಕೊಳ್ತಿದ್ರು…ಆದ್ರೆ ಒಂದು ವರ್ಷದ ಬಳಿಕವೂ ಯಾವೊಬ್ಬ ಎಂಪಿಯಿಂದಲೂ ಒಂದು ಎಲ್ ಪಿಜಿ ಕೂಪನ್ ಅವರಿಂದ ಪಡೆದುಕೊಳ್ಳೋಕೆ ಸಾಧ್ಯವಾಗಲಿಲ್ಲ.. ಕೇವಲ ಒಂದೇ ಒಂದು ಎಲ್ ಪಿಜಿ ಕನೆಕ್ಷನ್ ಗಾಗಿ ಜನರು ಪರಿತಪಿಸುತ್ತಿದ್ದ ಕಾಲವನ್ನು ನಾವು ಮರೆಯಬಾರದು..ಇದೆಲ್ಲಾ ನಡೆದು ಹೆಚ್ಚುವರ್ಷಗಳಾಗಿಲ್ಲ..ಇವತ್ತಿಗೆ ಐದು ಹತ್ತು ವರ್ಷಗಳ ಹಿಂದಷ್ಟೆ ನಡೆದಿರುವುಂತದ್ದು ಇವೆಲ್ಲಾ
ಈಗ ಇದನ್ನ ಗಮನಿಸಿ , ಪ್ರಧಾನಿಯೊಬ್ಬ ದೇಶದ ಆರ್ಥಿಕವಾಗಿ ಸಬಲರಾಗಿರುವ ಪ್ರಜೆಗಳಿಗೆ ಸಾಮಾನ್ಯವಾದ ರೀತಿಯಲ್ಲಿ ಆತ್ಮಿಯವಾಗಿ ಎಲ್ ಪಿಜಿ ಸಬ್ಸಿಡಿಯನ್ನೂ ಬಿಟ್ಟುಬಿಡಿ ಅಂತಾ ಮನವಿ ಮಾಡಿಕೊಳ್ಳುತ್ತಾನೆ.. 1.13 ಕೋಟಿಯಷ್ಟು ಈ ದೇಶದ ನಾಗರಿಕರು ಮುಂದೆ ಬಂದರು.. ಮತ್ತು ಸಬ್ಸಿಡಿಯನ್ನು ತ್ಯಜಿಸಿದ್ರು..ಅವರ ಸಬ್ಸಿಡಿಯಿಂದು ದೇಶದ ಮೂಲೆ ಮೂಲೆಗಳಲ್ಲಿ ಸೀಮೆಣ್ಣೆ ಉರುವಲು ಬಳಸಿ ಅಡುಗೆ ಮಾಡುತ್ತಾ ಸಂಕಷ್ಟ ಪಡುತ್ತಿರುವ ಲಕ್ಷಾಂತರ ತಾಯಿಂದಿರಿಗೆ ಹಾಗೂ ಸಹೋದರಿಗೆ ಸಿಗುತ್ತಿದೆ. ನಾನು ಸಬ್ಸಿಡಿಯನ್ನು ತ್ಯಜಿಸಿದ 1.3 ಕೋಟಿ ನಾಗರಿಕರಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ.. ಹೇಳಿ ಇದು ಬದಲಾವಣೆಯಲ್ವೇ..ನನ್ನ ದೇಶದ ನಾಗರಿಕರ ಮನೋಭಾವನೆಯಲ್ಲಾದ ಬದಲಾವಣೆ ಇದಲ್ವಾ.. ನನ್ನ ಭಾರತದಲ್ಲಿ ಆಗುತ್ತಿರುವ ಬದಲಾವಣೆ ಇದಲ್ವಾ..ದೇಶದ ಅಭಿವೃದ್ಧಿಯಲ್ಲಿ ಜನರು ಪಾಲ್ಗೊಳ್ಳುತ್ತಿರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆಗಳು ಬೇಕಿದ್ಯಾ..
ಮತ್ತಿಗ ನಾವು ದೇಶದ ಜನರು ತ್ಯಜಿಸಿರುವ ಎಲ್ ಪಿಜಿ ಸಬ್ಸಿಡಿಯನ್ನು ಬಡ ತಾಯಿಯಂದಿರಿಗೆ ಹಾಗೂ ಸಹೋದರಿಯರಿಗೆ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ.. ಕಟ್ಟಿಗೆಗಳನ್ನು ಬಳಸಿಕೊಂಡು ಅಡುಗೆ ಮಾಡುತ್ತಿರುವ ಅವರುಗಳು ಪ್ರತಿನಿತ್ಯ ಅದ್ರಿಂದ ತೊಂದೆರೆಗೊಳಗಾಗುತ್ತಿದ್ದಾರೆ.. ನಿಮಗೆ ಗೊತ್ತಿರಲಿ.. ಅಡುಗೆ ಮನೆಗಳಲ್ಲಿ ಉರಿಸುವ ಕಟ್ಟಿಗೆಗಳ ಹೊಗೆ ನಾನೂರು ಸಿಗರೇಟ್ಗಳಿಗೆ ಸಮವಾಗಿರುತ್ತದೆ.. ಇದುವರೆಗೂ ಯಾರು ದೇಶದ ಬಡ ತಾಯಂದಿರು ಹಾಗೂ ಸಹೋದರಿಯರು ನಿತ್ಯ ಅನುಭವಿಸುವ ಇಂತಹ ಯಾತನೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ ಹೇಳಿ ನೋಡೋಣ.. ಕೇವಲ ಒಂದು ವರ್ಷದಲ್ಲಿ ಮೂರು ಕೋಟಿ ಬಡ ತಾಯಂದಿರು ಹಾಗೂ ಸಹೋದರಿಯರಿಗೆ ಉಚಿತ ಎಲ್ ಪಿಜಿ ಸಂಪರ್ಕವನ್ನು ವಿತರರಿಸಲಾಗಿದೆ. ಇತಿಹಾಸದಲ್ಲೇ ಇಷ್ಟು ಕಿರು ಅವಧಿಯಲ್ಲಿ ಪೂರ್ಣಗೊಳಿಸಲಾಗದ ಇನ್ನೊಂದು ಅತಿದೊಡ್ಡ ಕಾರ್ಯ ನಡೆದಿಲ್ಲ..ಮತ್ತು ಪ್ರಸ್ತುತ ನಾವು ನಿರ್ಧಾರ ಮಾಡಿದ್ದೇವೆ..ಮುಂದಿನ ಮೂರು ವರ್ಷಗಳ ಒಳಗಾಗಿ ಐದು ಕೋಟಿ ತಾಯಂದಿರಿಗೆ ಉಚಿತ ಎಲ್ ಪಿಜಿ ಸಂಪರ್ಕ ವಿತರಿಸುವ ಗುರಿ ಹೊಂದಿದ್ದೇವೆ.
ಯಾವಾಗ ಈ ವಿದ್ಯಾಮಾನಗಳನ್ನು ರಾಜಕೀಯ ದೃಷ್ಟಿಯಿಂದ ಯೋಚಿಸಲು ಪ್ರಾರಂಭಿಸುತ್ತೀರೋ ದೇಶದಲ್ಲಿ ಬದಲಾವಣೆ ಮೂಡುತ್ತಿದೆ ಅಂತಲೇ ಅರ್ಥ..ಮತದಾರರನ್ನೂ ಸೆಳೆಯಲು ಸಬ್ಸಿಡಿ ಸಿಲಿಂಡರ್ ಗಳನ್ನು ಒಂಬತ್ತಿರಿಂದ 12 ಕ್ಕೆ ಹೆಚ್ಚುಸುತ್ತೇವೆ ಅನ್ನವ ಸನ್ನಿವೇಶಕ್ಕೂ..ಹಿಂದಿನ ಸರ್ಕಾರದ ಸಂಸದರು 25 ಕೂಪನ್ ಗಳಲ್ಲಿ ಒಂದನ್ನು ನೀಡುವುದೇ ಗೌರವ ಅಂದುಕೊಳ್ತಿದ್ದಂತ ಸನ್ನಿವೇಶಕ್ಕೂ ಇವತ್ತಿನ ಸನ್ನಿವೇಶಕ್ಕೂ ಹೋಲಿಕೆ ಮಾಡಿ ನೋಡಿ..ಐದು ಕೋಟಿ ತಾಯಂದಿರು ಹಾಗೂ ಸಹೋದರಿಯರು ಉಚಿತ ಎಲ್ ಪಿಜಿ ಸಂಪರ್ಕಗಳನ್ನು ಪಡೆದುಕೊಳ್ಳಲಿದ್ದಾರೆ..ಇದು ಅಮೂಲಾಘ್ರ ಬದಲಾವಣೆ ಅಂದರೇ ಅಲ್ವಾ ನಮ್ಮ ಯೋಜನೆಯ ಮಾಪನ, ಪರಿಣಾಮ, ವೇಗ ಹಾಗೂ ಗುರಿಗಳನ್ನು ನೀವು ಗಮನಿಸಿದ್ರೆ ನಿಮಗೆ ಅರಿವೆಗೆ ಬರುತ್ತದೆ. ಈ ಎಲ್ಲಾ ಯೋಜನೆಗಳು ಕೇವಲ ಬಡವರ ಅಭ್ಯುದ್ಯಯಕ್ಕಾಗಿ ಮಾಡಲಾಗ್ತಿವೆ ಅನ್ನೋದನ್ನು ನಿಮ್ಮ ಮನಸ್ಸಿಗೆ ಬರುತ್ತದೆ
ದೇಶದ ಬಡ ರೈತನ ಬೆಳೆ ನಾಶವಾದ್ರೆ, ತಕ್ಷಣ ನಾವೂ ಅದಕ್ಕೆ ಕಳಪೆ ಬೀಜ ಅಥವಾ ಮಾನ್ಸೂನ್ ವೈಪರಿತ್ಯವನ್ನು ಹೊಣೆ ಮಾಡುತ್ತೇವೆ..ಬದಲಾಗಿ ನಾವು ಯಾವಾಗ್ಲೂ ಅರಿತುಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ. ನಾವು ಭೂಮಿತಾಯಿಯನ್ನು ನಿರ್ಧಯವಾಗಿ ಶೋಷಣೆ ಮಾಡುತ್ತಿದ್ದೇವೆ ಅನ್ನೋದನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ.. ಅಂಥಾ ಭೂಮಿ ತಾಯಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಮಣ್ಣು ಆರೋಗ್ಯ ಕಾರ್ಡ್, ಮಿಷನ್ ನನ್ನು ಬೃಹತ್ ಮಟ್ಟದಲ್ಲಿ ಪ್ರಾರಂಭಿಸಿದ್ದೇವೆ..ಭೂಮಿಯ ಸಂಪೂರ್ಣ ಗುಣಮಟ್ಟದ ಅರಿವನ್ನು ಹೊಂದಿರುವವರು. ಮಣ್ಣಿನ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನೂ ಅರಿತಿರುವವರು..ಯಾವ ಬೆಳೆ, ಯಾವ ಗೊಬ್ಬರ ಭೂಮಿಗೆ ತಕ್ಕುದಾದದು ಅನ್ನೋದನ್ನು ಅರಿತಿರುವವರ ಮೂಲಕ ಈ ಯೋಜನೆ ಆರಂಭಿಸಲಾಗಿದೆ.. ಮನುಷ್ಯನ ರಕ್ತ ಹಾಗೂ ಮೂತ್ರವನ್ನು ಪರೀಕ್ಷ ಮಾಡುವ ಮೂಲಕ ಡಯಾಬೆಟಿಕ್ ಪರೀಕ್ಷೆಯನ್ನು ಮಾಡಲಾಗುತ್ತದೆಯೋ ಅದೇರೀತಿಯಲ್ಲಿ ನಮ್ಮ ಸರ್ಕಾರ ಮಣ್ಣು ಪರೀಕ್ಷೆ ಮಾಡುವ ಯೋಜನೆಯನ್ನು ವಿಸ್ತೃತವಾಗಿ ಕೈಗೊಂಡಿದೆ. ಈ ನಿಟ್ಟಿನಲ್ಲಿ ನಾವು ಈ ದೇಶದಲ್ಲಿ ಬೃಹತ್ ಮಟ್ಟದಲ್ಲಿ ಹಾಗೂ ಬೃಹತ್ ಸಂಖ್ಯೆಯಲ್ಲಿ ಜಾಗೃತಿಯನ್ನು ಮಣ್ಣು ಆರೋಗ್ಯ ಕಾರ್ಡ್ನ ಸಹಾಯದಿಂದ ಮೂಡಿಸಿದ್ದೇವೆ. ಮತ್ತಿದರ ಮೂಲಕ ಬೆಳೆಯ ರೀತಿಯನ್ನ ಬದಲಾಯಿಸುವ ನಿಟ್ಟಿನಲ್ಲಿ ಸಧ್ಯ ವಿಶೇಷ ಗಮನ ಹರಿಸಲಾಗುತ್ತಿದೆ.
ನಾನೂ ಏನನ್ನ ಹೇಳಲು ಬಯುಸುತ್ತಿದ್ದೇನೆಂದ್ರೆ .ನಾವು ದೇಶದ ಸಾಮಾನ್ಯ ನಾಗರಿಕನ ಜೀವನದಲ್ಲಿ ಬದಲಾವಣೆಯನ್ನು ತರಬೇಕಾದರೇ ವಿಶಾಲ ವ್ಯಾಪ್ತಿಯ ಕಾರ್ಯಸಾಧನೆಯನ್ನ ಮಾಡುವ ಕಾರ್ಯನಿರ್ವಹಿಸಬೇಕಾಗುತ್ತದೆ. ನನ್ನ ದೃಷ್ಠಿಯಲ್ಲಿ ಅತಿದೊಡ್ಡ ಬಂಡಾವಾಳ ಹಾಗೂ ಪ್ರಜಾಪ್ರಭುತ್ವದ ಮೊದಲನೇ ನಿಯಮ ಅಂದ್ರೆ ಯಾವುದೇ ಸೆರ್ಕಾರ ಜನರ ನಂಬಿಕೆ ಗಳಿಸೋದು. ಇಲ್ಲಿವರೆಗೆ ನಾವು ಸರ್ಕಾರಗಳನ್ನ ಗಹನವಾದಂತಃ ಅಪನಂಬಿಕೆಗಳ ಅಂಗಳದಲ್ಲಿ ಮುನ್ನೆಡೆಸುತ್ತಿದ್ದೇವು.. ತೆರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ನಾನು ಒಮ್ಮೆ ಪ್ರಶ್ನೆ ಮಾಡಿದೆ.. ಯಾಕೆ ನೀವು ವ್ಯಾಪಾರಸ್ತರು ಕಳ್ಳರು ಎಂದು ಭಾವಿಸುತ್ತೀರಾ ಅಂತಾ ? ಇದು ದೇಶವನ್ನು ಮುನ್ನಡೆಸುವ ಪರಿಯಾ ಅಂತಾ ಪ್ರಶ್ನಿಸಿದೆ. ಈ ಎಲ್ಲಾ ಪ್ರಕ್ರಿಯೆ ಮತ್ತು ನಾವುಗಳು ಯೋಚಿಸುವ ದಾರಿಗಳು ತಪ್ಪಾಗಿವೆ.. ಮತ್ತು ನಾವು ನಮ್ಮ ಗೃಹಿಕೆಗಳನ್ನು ಬದಲಾಸಿಕೊಳ್ಳೋದಕ್ಕೆ ಪ್ರಾರಂಭಿಸಿದೆವು.
ಈ ಮೊದಲು , ಯಾವುದಕ್ಕಾದ್ರೂ ಅರ್ಜಿ ಸಲ್ಲಿಸುವ ಸಲುವಾಗಿ ಈ ದೇಶದ ಪದವಿದರನೊಬ್ಬ ಕಾರ್ಪೋರೇಟರ್ , ಎಂಎಲ್ಎ ಎಂಪಿ ಹಾಗೂ ಗಜೇಟೆಡ್ ಅಧಿಕಾರಿಗಳ ಮನೆ ಎದುರು ಸರತಿ ಸಾಲಿನಲ್ಲಿ ನೀಲ್ಲಬೇಕಿತ್ತು. ಕಾರಣ ಇಷ್ಟೆ ದಾಖಲೆಗಳ ನಕಲು ಪ್ರತಿಗಳಿಗೆ ಸರ್ಟಿಫೈಡ್ ಮಾಡೋದಕ್ಕಾಗಿ..ಇಂತ ಸಂದರ್ಭಗಳಲ್ಲಿ ನಾಯಕರು ಅಥವಾ ಅಧಿಕಾರಿಗಳು ಯಾವುದೇ ಪರಿಶೀಲನೆ ಇಲ್ಲದೇ ಹಾಗೂ ಆ ಪಧವಿದರ ಮುಖವನ್ನು ಕೂಡ ನೋಡದೇ ದಾಖಲೆ ಮೇಲೆ ಸ್ಟಾಂಪ್ ಹೊಡೆಯುತ್ತಿದ್ದರು.ಈ ಪದ್ದತಿಯನ್ನ ನಾವು ತೆಗೆದುಹಾಕಿದ್ದೇವೆ. ಹಾಗೂ ಸ್ವಯಂ ದೃಡೀಕರಣ ಪದ್ದತಿಯನ್ನು ಜಾರಿಗೆ ತಂದಿದ್ದೇವೆ. ಮೂಲ ದಾಖಲೆಗಳ ಜೊತೆ ಪರೀಶೀಲಿಸಿದ ಪ್ರತಿಗಳುನ್ನು ಹೊಂದಿದ ಸ್ವಯಂ ದೃಡೀಕರಣ ಪ್ರತಿ ಇದಾಗಿರುತ್ತದೆ.
ಪ್ರತಿಯೊಬ್ಬ ನಾಗರಿಕನು ದೇಶಕ್ಕೆ ಹಕ್ಕುದಾರನಾಗಿರುವಂತೆ ಸರ್ಕಾರ ತನ್ನ ಪ್ರತಿಯೊಬ್ಬ ನಾಗರಿಕನ ಮೇಲೆ ಭರವಸೆ ವಿಶ್ವಾಸವನ್ನು ಹೊಂದಿರಬೇಕು. ಒಂದು ಸಲ ನಾವು ನಂಬಿಕೆಯನ್ನು ಇಟ್ಟು ಕಾರ್ಯ ನಿರ್ವಹಿಸಿದರೇ ಖಂಡಿತವಾಗಿಯೂ ನಾವುಗಳು ಬದಲಾವಣೆ ಆಗುತ್ತಿರುವುದನ್ನೂ ಗಮನಿಸಬಹುದಾಗಿದೆ. ನಾನು ಈ ನಿಟ್ಟಿನಲ್ಲಿ ಇತ್ತಿಚೆಗೆ ರೈಲ್ವೆ ಸಚಿವ ಸುರೇಶ್ ಪ್ರಭುರವರಿಗೆ ಒಂದು ಸಲಹೆಯನ್ನು ಕೊಟ್ಟಿದ್ದೇವೆ..ಅದೇನಂದ್ರೆ ನಿಗದಿತ ಮಾರ್ಗ ಹಾಗೂ ನಿಗದಿತ ದಿನದಂದೂ ನಿಗದಿತ ರೈಲಲ್ಲಿ ಯಾರೊಬ್ಬರು ಟಿಸಿ ಇರಲಾರರು ಅಂಥಾ ಘೋಷಿಸಿ ಎಂದಿದ್ದೇನೆ. ಪರಸ್ಪರ ನಂಬಿಕೆಗಳಿಂದ ನಾವು ಸ್ಪಷ್ಟ ಕ್ರಮಗಳನ್ನು ನಿರಂತರವಾಗಿ ಜಾರಿಗೆ ತರುವ ಮೂಲಕ ಕೆಂಪು ಟೇಪ್ ಗಳನ್ನು ಕತ್ತರಿಸುವ ವ್ಯವಸ್ಥೆಯನ್ನು ಕಡಿಮೆ ಮಾಡಬಹುದಾಗಿದೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರು ಬಹುಮುಖ್ಯ ಪಾತ್ರ ವಹಿಸುತ್ತಾರೆ.. ಹೀಗಾಗಿ ಜನರನ್ನು ಬಲವರ್ಧನೆ ಗೊಳಿಸಲು ಗಮನಾರ್ಹ ನಿರ್ಧಾರಗಳನ್ನ ಕೈಗೊಳ್ಳಬೇಕಾಗುತ್ತದೆ..
ಇತ್ತೀಚೆಗೆ ನಮ್ಮದೇಶ ಯುವ ನಾಗರಿಕರಿಗಾಗಿ ಮೈಲುಗಲ್ಲಾಗುವಂತ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.. ನಿರುದ್ಯೋಗ ಈ ದೇಶದಲ್ಲಿ ಭ್ರಷ್ಟಾಚಾರದಿಂದ ನಲುಗತ್ತಿರುವ ಅತಿದೊಡ್ಡ ಕ್ಷೇತ್ರವಾಗಿದೆ. ಒಬ್ಬ ಅಭ್ಯರ್ಥಿ ತಲೆಬಿಸಿಯಿಲ್ಲದೇ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಬರೆಯುತ್ತಾನೆ. ಪಾಸೂ ಆಗುತ್ತಾನೆ..ಸಂದರ್ಶನಕ್ಕೂ ಕರೆ ಬರುತ್ತದೆ.. ಅಂತಾ ವ್ಯಕ್ತಿ ಕೆಲಸವನ್ನು ಪಡೆದೇ ತೀರುವ ಆತ್ಮವಿಶ್ವಾಸವನ್ನು ಹೊಂದಿ ಬರುವ ಆ ವ್ಯಕ್ತಿ ಸಂದರ್ಶನದ ರೀತಿ ಹಾಗೂ ಅಲ್ಲಿ ಕೇಳುವ ಪ್ರಶ್ನೆಗಳ ಬಗ್ಗೆ ತಲೆ ಕೆಡಿಸಿಕೊಂಡಿರುವುದಿಲ್ಲ. ಬದಲಾಗಿ ಶಿಪಾರಸ್ಸಿಗಾಗಿ ಯಾರನ್ನೂ ಹುಡುಕಾಡುವುದು ಅನ್ನೋದರ ಬಗ್ಗೆ ಚಿಂತಿತನಾಗಿರುತ್ತಾನೆ. ಮತ್ತು ಅಂತಿಮ ಆಯ್ಕೆಗಾಗಿ ಹಣವನ್ನು ಎಲ್ಲಿಂದ ಒಟ್ಟುಗೂಡಿಸುವುದು ಅನ್ನೋದನ್ನು ಯೋಚಿಸುತ್ತಿರುತ್ತಾನೆ . ಅಂತಾ ಸಂದರ್ಶನಗಳು ಭ್ರಷ್ಟಾಚಾರದೊಂದಿಗೆ ನಂಟು ಹೊಂದಿರುತ್ತದೆ.. ಇದನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ನಾವುಗಳು ಕ್ಲಾಸ್ 3 ಹಾಗೂ ಕ್ಲಾಸ್ 4 ಕ್ಯಾಟಗರಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂದರ್ಶನಗಳನ್ನೇ ಕ್ಯಾನ್ಸಲ್ ಮಾಡಿದ್ದೇವೆ.. ಹೀಗಾಗಿ ಪ್ರಸ್ತುತ ಅಭ್ಯರ್ಥಿಗಳು ಕ್ಯಂಪೂಟರ್ ಜನರೇಟರ್ ಸಿಸ್ಟಮ್ ಮೂಲಕ ಮೆರಿಟ್ ಲೀಸ್ಟ್ನ ಆಧರಿಸಿ ಆಯ್ಕೆಯಾಗುತ್ತಾರೆ.. ಇದ್ರಲ್ಲಿ ಕೆಲ ನಿರ್ಧಾರಗಳು ತಪ್ಪಾಗಿರಬಹುದು..ಆದರೇ ನನಗೆ ವಿಶ್ವಾಸವಿದೆ.. ಇವುಗಳು ಭ್ರಷ್ಟಾಚಾರದ ಗೆದ್ದಲು ಹುಳುಗಳನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗಬಲ್ಲವು.
ನನ್ನ ಸರ್ಕಾರ ಮೇಲ್ಕಂಡ ಹಲವು ಸಾಮೂಹಿಕ ಬದಲಾವಣೆ ತಂದಿದೆ..ತರುತ್ತಿದೆ..ಹಾಗೂ ನನಗೆ ಈ ಬದಲಾವಣೆಗಳು ಜನರ ಹೃದಯದಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತದೆ.. ಹೊಸ ಪರಿಹಾರ ಹಾಗೂ ನಿರ್ಣಯಗಳೊಂದಿಗೆ ಮುಂದಕ್ಕೆ ಸಾಗುವಂತೆ ಮಾಡುತ್ತದೆ. ಹಾಗೂ ಹೊಸ ಭರವಸೆಯೊಂದಿಗೆ ಬದಲು ಅಗತ್ಯ ಪರಿಶ್ರಮಗಳನ್ನು ಒದಗಿಸುತ್ತದೆ. ಮತ್ತು ಸಾರ್ವಜನಿಕರ ನಿರೀಕ್ಷೆಗಳನ್ನು ಬಿಂಬಿಸುತ್ತದೆ.
ನಾನು ನಮ್ಮ ಸರ್ಕಾರದ ಕಳೆದೆರಡು ಸಾಧನೆಗಳನ್ನು ಪಟ್ಟಿ ಮಾಡುತ್ತಾ ಹೋದರೇ ದೂರದರ್ಶನ ವಾಹಿನಿ ವಾರವಿಡಿ ನನ್ನ ಭಾಷಣವನ್ನು ಪ್ರಸಾರ ಮಾಡಬೇಕಾಗಿ ಬರಬಹುದು.. ಆದ್ರೆ ನಾನಿಲ್ಲಿ ನಮ್ಮ ಸರ್ಕಾರಗಳ ಸಾಧನೆಯನ್ನಷ್ಟೆ ಚರ್ಚೆ ಮಾಡೋದಕ್ಕೆ ಬಂದಿಲ್ಲ..ಅದ್ರ ಜೊತೆಯಲ್ಲಿ ಎರಡು ವರ್ಷಗಳ ಹಿಂದೆ ಈ ದೇಶದ ಮತದಾರರು ನಮಗೆ ಹಸ್ತಾಂತರಿಸಿದ ನಿರೀಕ್ಷೆಗಳನ್ನು ಹುಸಿಗೊಳಿಸದೇ ಅವರ ಆಕಾಂಕ್ಷೆಗಳಿಗೆ ಪೂರಕವಾಗಿ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತೇವೆ ಅನ್ನೋದನ್ನೂ ವಿಶ್ವಾಸದ ಮೂಲಕ ಹೇಳುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ.. ಇಡೀ ದೇಶವೇ ಸಾಕ್ಷಿ..ನಾವು ಯಾವುದೇ ನಿರ್ಣಯಗಳನ್ನು ಯಾವುದೇ ದುರುದ್ದೇಶದಿಂದ ಕೈಗೊಂಡಿಲ್ಲ ಅನ್ನೋದಕ್ಕೆ..ಮೇಲಾಗಿ ನಮ್ಮ ಕಠಿಣ ಶ್ರಮದ ಮೂಲಕ ಯಾವುದೇ ಕಲ್ಲುಗಳನ್ನ ತಿರುಗಿಸಿಲ್ಲ.. ಬದಲಾಗಿ ನಾವು ನಮ್ಮಲ್ಲಿ ವಿಶ್ವಾಸವನ್ನು ಹೊಂದಿದ್ದು ಹಾಗೂ ಸಾರ್ವಜನಿಕ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನೂ ನಮ್ಮೊಳಗೆ ಉನ್ನತ ಸ್ಥಾನದಲ್ಲಿರಿಸಿಕೊಂಡಿದ್ದೇವೆ.. ಮತ್ತದಕ್ಕೆ ಕಟಿಬದ್ಧರಾಗಿದ್ದೇವೆ
ಟೀಂ ಇಂಡಿಯಾ ವಿಶನ್ನೊಂದಿಗೆ ಅಭಿವೃದ್ಧಿಯ ಪಯಣವನ್ನು ಆರಂಭಿಸಿದ್ದೇವೆ..ದೇಶದ ಎಲ್ಲಾ ರಾಜ್ಯಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನೆಡೆಯುತ್ತಿದ್ದೇವೆ…ಇದೆಲ್ಲೇ ಏನೇ ಇರಲಿ… ಒಂದಂತು ಸತ್ಯ.. ಈ ದೇಶದ ಸಂಪತ್ತು ಹಾಗೂ ಬಡವರ ಪಾಲ್ನೂ ನುಂಗಿದವರು ಖಂಡಿತ ಸಂಕಷ್ಟ ಹಾಗೂ ನೋವನ್ನು ಅನುಭವಿಸುತ್ತಾರೆ.. ಯಾರು ಹಣವನ್ನೂ ಕಬಳಿಸಿದ್ದಾರೋ ಆ ಹಣ ಈ ದೇಶದ ಬಡಜನರಿಗೆ ಸೇರಿದ್ದು..ಮತ್ತು ಅದನ್ನು ನಾವು ಯಾವತ್ತಿಗೂ ತಪ್ಪಾದ ಕೈಗಳಿಗೆ ಹೋಗೋದಕ್ಕೆ ಬಿಡೋದಿಲ್ಲ.. ಇದು ನನಗೆ ಸಂಬಂಧಿಸಿದ ವಿಷಯವಲ್ಲ.. ಆದ್ರೆ ಇದೀಗ ನಾನೂ ಕೂಡ ಈ ಟಾಸ್ಕ್ ನಲ್ಲಿ ಸೇರಿಕೊಂಡಿದ್ದೇನೆ..ಯಾರೂ ತಪ್ಪಿತಸ್ಥರೋ ಅವರು ನಮಗೆ ತೊಂದರೆ ತಂದೊಡ್ಡಬಲ್ಲರು..ಆದ್ರೆ, ನಾವು ಹಿಂಜರಿಯೋದಿಲ್ಲ..ದೇಶದ ಹಿತಾಸಕ್ತಿಗಾಗಿ , ಈ ದೇಶದ ನಾಗರಿಕರ ಆಶೀರ್ವಾದ ಹಾಗೂ ಹಾರೈಕೆಯೊಂದಿಗೆ ನಮ್ಮ ಕೆಲಸವನ್ನು ನಾವು ಮುಂದುವರಿಸುತ್ತೇವೆ.. ಮತ್ತೊಮ್ಮೆ ಹೇಳುತ್ತೇನೆ.. ನನಗೆ ಈ ಅವಕಾಶವನ್ನು ಒದಿಗಿಸಿಕೊಟ್ಟಿದ್ದಕ್ಕೆ, ನಿಮ್ಮೊಳಗೇ ಒಬ್ಬನಾಗಿ ನನ್ನ ಅನಿಸಿಕೆಗಳನ್ನ ಹೇಳಿಕೊಳ್ಳಲು ಅವಕಾಶ ಒದಗಿಸಿಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು..
ಧನ್ಯವಾದಗಳು…!
Over the last 15 days, the work of the Government of India is being very carefully analysed and all aspects are being seen closely: PM
— PMO India (@PMOIndia) May 28, 2016
In the process we have got renewed faith and enthusiasm. The blessings of the people are also increasing: PM @narendramodi
— PMO India (@PMOIndia) May 28, 2016
We saw two things over the last few days: on one side there is Vikasvad and other side is Virodhvad: PM @narendramodi
— PMO India (@PMOIndia) May 28, 2016
In a democracy it is vital to analyse everyone's work. But we can't make a mistake of creating a false atmosphere of despondency: PM
— PMO India (@PMOIndia) May 28, 2016
The Prime Minister is highlighting the unprecedented steps taken by the NDA government to combat corruption.
— PMO India (@PMOIndia) May 28, 2016
Those who were earlier looting the nation are not enthused by this Government: PM @narendramodi during 'Ek Nayi Subah' programme
— PMO India (@PMOIndia) May 28, 2016
Important to trust our citizens: PM @narendramodi
— PMO India (@PMOIndia) May 28, 2016
The people of India have placed their faith in us. We have left no stone unturned in our hardwork. We dream of Team India: PM @narendramodi
— PMO India (@PMOIndia) May 28, 2016
Yes what we know is money belongs to the poor and the poor must get the fruits of development: PM
— PMO India (@PMOIndia) May 28, 2016
Fulfilling people's dreams and aspirations for #TransformingIndia. pic.twitter.com/eXXWlEzCAg
— PMO India (@PMOIndia) May 30, 2016
Furthering transparency and eliminating corruption. #TransformingIndia pic.twitter.com/BUksaxY71J
— PMO India (@PMOIndia) May 30, 2016
An unbreakable bond of trust with the 125 crore people of India. #TransformingIndia pic.twitter.com/n5LCR6LssP
— PMO India (@PMOIndia) May 30, 2016
Government's belief is in 'Vikasvad.' Politics of development will transform the nation. #TransformingIndia pic.twitter.com/JmQkk5XUuq
— PMO India (@PMOIndia) May 30, 2016
#GiveItUp movement, Jan Bhagidari and a commitment to provide LPG gas connections to citizens. #TransformingIndia pic.twitter.com/pw9aWJwj45
— PMO India (@PMOIndia) May 30, 2016
Spoke on the 2 years gone by & how Centre’s transformative efforts are bringing a positive change across the nation. https://t.co/UJTPjXVx2r
— Narendra Modi (@narendramodi) May 28, 2016
Particularly emphasised the need to trust citizens & how this trust can be a catalyst in #TransformingIndia, driven by citizen participation
— Narendra Modi (@narendramodi) May 28, 2016
Our Govt. believes in ‘Vikasvad’ & not ‘Virodhvad.’ Through politics of development we want to ensure that fruits of progress reach the poor
— Narendra Modi (@narendramodi) May 28, 2016
Highlighted our efforts to eliminate corruption. Enhanced transparency helps the poor the most & is a major means for #TransformingIndia.
— Narendra Modi (@narendramodi) May 28, 2016