Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಲೋಕಸೇವಾ ಆಯೋಗ ಮತ್ತು ಭೂತಾನ್ ರಾಯಲ್ ನಾಗರಿಕ ಸೇವಾ ಆಯೋಗದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಮತ್ತು ಭೂತಾನ್ ರಾಯಲ್ ನಾಗರಿಕ ಸೇವಾ ಆಯೋಗ(ಆರ್.ಸಿ.ಎಸ್.ಸಿ.)ದ ನಡುವೆ ತಿಳಿವಳಿಕೆ ಒಪ್ಪಂದ(ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಆರ್.ಸಿ.ಎಸ್.ಸಿ. ಮತ್ತು ಯು.ಪಿ.ಎಸ್.ಸಿ. ನಡುವಿನ ಹಾಲಿ ಬಾಂಧವ್ಯವನ್ನು ಬಲಪಡಿಸಲಿದೆ. ನೇಮಕಾತಿಯ ಪ್ರದೇಶದಲ್ಲಿ ಎರಡೂ ಪಕ್ಷಗಳಿಗೆ ತಮ್ಮ ಅನುಭವ ಮತ್ತು ತಜ್ಞತೆಯನ್ನು ವಿನಿಮಯ ಮಾಡಿಕೊಳ್ಳಲು ಇದು ಅವಕಾಶ ನೀಡಲಿದೆ.

ಸಾಮಾನ್ಯ ಆದರ್ಶಗಳನ್ನು ಹಂಚಿಕೊಂಡಿರುವ ಎರಡೂ ದೇಶಗಳ ನಾಗರಿಕ ಸೇವಾ ಆಯೋಗಗಳ ನಡುವೆ ಸಾಂಸ್ಥೀಕರಣ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಭೂತಾನ್ ನ ಆರ್.ಸಿ.ಎಸ್.ಸಿ. ಮತ್ತು ಯು.ಪಿ.ಎಸ್.ಸಿ.ನಡುವೆ ತಿಳಿವಳಿಕೆ ಒಪ್ಪಂದದ ಕರಡಿಗೆ ಅಂಕಿತ ಹಾಕಲಾಗುವುದು. ಸಹಕಾರದ ಪ್ರದೇಶಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

a) ನಾಗರಿಕ ಸೇವಾ ವಿಷಯಗಳಲ್ಲಿ ಅಂದರೆ ನೇಮಕಾತಿ ಮತ್ತು ಆಯ್ಕೆಯಲ್ಲಿ ಅನುಭವ ಮತ್ತು ತಜ್ಞತೆಯ ವಿನಿಮಯ. ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಮತ್ತು ತರಬೇತಿ ಕಾರ್ಯಕ್ರಮ ಮತ್ತು ಸಂಪರ್ಕದ ಮೂಲಕ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವೃತ್ತಿ ಕೌಶಲ ಅಭಿವೃದ್ಧಿ.

b) ಪರೀಕ್ಷಾ ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯ ಪರಿಣತಿಯ ವಿನಿಮಯ, ಕಂಪ್ಯೂಟರ್ ಆಧಾರಿತ ನೇಮಕಾತಿ ಟೆಸ್ಟ್ ಮತ್ತು ಪರೀಕ್ಷೆಗಳು, ತ್ವರಿತ ಪರಿಶೀಲನೆ ಮತ್ತು ಶೀಘ್ರ ಪ್ರಕರಣಗಳ ವಿಲೇವಾರಿ, ಅರ್ಹತೆ ಆಧಾರಿತ ಸಿಬ್ಬಂದಿ ವ್ಯವಸ್ಥೆ ಇತ್ಯಾದಿಗಳಿಗಾಗಿ ಏಕ ಗವಾಕ್ಷಿ ವ್ಯವಸ್ಥೆ.

c) ಪ್ರಾತಿನಿಧಿಕ ಅಧಿಕಾರದ ಅಡಿಯಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಅನುಸರಿಸುವ ವಿಧಾನಗಳು ಮತ್ತು ಆಡಿಟ್ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡ ವಿಧಾನಗಳ ಅನುಭವದ ವಿನಿಮಯ.

d) ದಾಖಲೆಗಳ ಡಿಜಿಟಲೀಕರಣ, ಐತಿಹಾಸಿಕ ದಾಖಲೆಗಳ ಸಂಗ್ರಹ ಮತ್ತು ಪ್ರದರ್ಶನ.

ಹಿನ್ನೆಲೆ:

ಈ ಹಿಂದೆ, ಯು.ಪಿ.ಎಸ್.ಸಿ. ಕೆನಡಾ ಮತ್ತು ಭೂತಾನ್ ಲೋಕಸೇವಾ ಆಯೋಗದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿತ್ತು.


***

AKT/VBA/SH/SK