Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಮೀಸಲು ಪೊಲೀಸ್ ಪಡೆಯ ‘ಎ’ ಗುಂಪಿನ ಅಧಿಕಾರಿಗಳ ಕಾಡರ್ ಪರಾಮರ್ಶೆಗೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಉಪ ಕಮಾಂಡೆಂಟ್ ನಿಂದ ವಿಶೇಷ ಡಿ.ಜಿ.ವರೆಗೆ ವಿವಿಧ ಶ್ರೇಣಿಗಳಲ್ಲಿ ನಿವ್ವಳ 90 ಹುದ್ದೆಗಳನ್ನು ಸೃಷ್ಟಿಸಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್.)ಯ ‘ಎ’ ಗುಂಪಿನ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಾಡರ್ ಪರಾಮರ್ಶೆಗೆ ತನ್ನ ಅನುಮೋದನೆಯನ್ನು ನೀಡಿದೆ. ಸಿ.ಆರ್.ಪಿ.ಎಫ್.ನಲ್ಲಿ ಈ ಹುದ್ದೆಗಳನ್ನು ಸೃಷ್ಟಿಸಿದ ತರುವಾಯ, ಆಡಳಿತಾತ್ಮಕ ಸಾಮರ್ಥ್ಯ ಹೆಚ್ಚಳವೂ ಸೇರಿದಂತೆ ಪಡೆಗಳ ಕಾರ್ಯನಿರ್ವಹಣೆಯ ಸಾಮರ್ಥ್ಯ ವರ್ಧನೆ ಮತ್ತು ದಕ್ಷತೆ ಹೆಚ್ಚಲಿದೆ.

ಕಾಡರ್ ಪರಾಮರ್ಶೆಯಡಿ, ಹಾಲಿ ರಚನೆಯ ಗುಂಪು ಎ ಹುದ್ದೆಗಳು 4210ರಿಂದ 4300ಕ್ಕೆ ಹೆಚ್ಚಳವಾಗಲಿದ್ದು, ಈ ಕೆಳಗಿನಂತಿವೆ:-

1. ವಿಶೇಷ ಡಿ.ಜಿ. ಅವರ ಒಂದು ಹುದ್ದೆ ಹೆಚ್ಚಳ (ಎಚ್.ಎ.ಜಿ. + ಸಮನಾದ).

2. ಇನ್ಸ್ ಪೆಕ್ಟರ್ ಜನರಲ್ ಹುದ್ದೆಗಳಲ್ಲಿ ನಿವ್ವಳ 11 ಹೆಚ್ಚಳ (ಎಸ್.ಎ.ಜಿ. ಸಮನಾದ).

3. ಡಿಐಜಿ/ಕಮಾಂಡೆಂಟ್/2-l/ಸಿ ನಿವ್ವಳ 277 ಹುದ್ದೆಯ ಹೆಚ್ಚಳ (ಜಿ.ಎ.ಜಿ. ಸಮನಾದ).

4. ಉಪ ಕಮಾಂಡೆಂಟ್ ಗಳ ನಿವ್ವಳ 199 ಹುದ್ದೆಯ ಕಡಿತ (ಎಸ್.ಟಿ.ಎಸ್. ಸಮನಾದ).

ಹಿನ್ನೆಲೆ:

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್.) ಒಂದು ಕೇಂದ್ರಿಯ ಸಶಸ್ತ್ರ ಪೊಲೀಸ್ ಪಡೆಯಾಗಿದೆ. ಇದನ್ನು 1939ರಲ್ಲಿ ಸ್ಥಾಪಿಸಲಾಯಿತು. ಈ ಸೇವೆಯ ಪ್ರಥಮ ಕಾಡರ್ ಪರಾಮರ್ಶೆ 1983ರಲ್ಲಿ ನಡೆದಿತ್ತು ಮತ್ತು ಎರಡನೇ ಮತ್ತು ಕೊನೆಯ ಕಾಡರ್ ಪರಾಮರ್ಶೆ 1991ರಲ್ಲಿ ಆಗಿತ್ತು. 1991ರ ಬಳಿಕ ಯಾವುದೇ ಔಪಚಾರಿಕ ಕಾಡರ್ ಪರಾಮರ್ಸೆ ನಡೆದಿಲ್ಲವಾದ್ದರಿಂದ, ಪ್ರಮುಖ ವೃದ್ಧಿ-ಸಹಿತ-ಮರುಸ್ಥಾಪನೆಯನ್ನು 2004 ಮತ್ತು 2009ರಲ್ಲಿ ಮಾಡಲಾಗಿತ್ತು. ಈ ವೃದ್ಧಿಯ ಸಮಯದಲ್ಲಿ ಹೆಚ್ಚುವರಿ ತುಕಡಿಗಳನ್ನು ಅದಕ್ಕೆ ಸಮಾನವಾದ ಮೇಲ್ವಿಚಾರಣೆ ಮತ್ತು ಬೆಂಬಲ ಸಿಬ್ಬಂದಿ ಇಲ್ಲದೆಯೇ ಹೆಚ್ಚಿಸಲಾಗಿತ್ತು.

****

AKT/VBA/NT