ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರೀಯ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್.ಇ.ಗಳು) ಆಂತರಿಕ ಮತ್ತು ಸಿಪಿಎಸ್.ಇ.ಗಳ ನಡುವೆ ಹಾಗೂ ಇತರ ಸರ್ಕಾರಿ ಇಲಾಖೆ/ಸಂಸ್ಥೆಗಳ ನಡುವಿನ ವಾಣಿಜ್ಯ ವಿವಾದಗಳನ್ನು ಇತ್ಯರ್ಥಪಡಿಸಲು ವ್ಯವಸ್ಥೆಯನ್ನು ಬಲಪಡಿಸಲು ತನ್ನ ಅನುಮೋದನೆ ನೀಡಿದೆ. ಸಂಪುಟದ ಈ ನಿರ್ಧಾರವು ಕಾರ್ಯದರ್ಶಿಗಳ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ. ಈ ನಿರ್ಧಾರವು ಸಿಪಿಎಸ್ಇಗಳ ವಾಣಿಜ್ಯ ವಿವಾದಗಳನ್ನು ನ್ಯಾಯಾಲಯಗಳ ಕಾನೂನಿನ ಪ್ರಕ್ರಿಯೆಗೆ ಒಳಪಡಿಸದೆ, ತ್ವರಿತ ಪರಿಹಾರಕ್ಕಾಗಿ ಸರ್ಕಾರದಲ್ಲಿ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ.
ವಿವರಗಳು:
i. ಸಿಪಿಎಸ್ಇಗಳೊಳಗೆ ಮತ್ತು ಸಿಪಿಎಸ್ಇ ಮತ್ತು ಸರ್ಕಾರಿ ಇಲಾಖೆಗಳು/ಸಂಸ್ಥೆಗಳ ನಡುವಿನ ವಾಣಿಜ್ಯ ವಿವಾದಗಳನ್ನು (ರೈಲ್ವೆ, ಆದಾಯ ತೆರಿಗೆ, ಸೀಮಾಸುಂಕ ಮತ್ತು ಅಬಕಾರಿ ಇಲಾಖೆ ಹೊರತುಪಡಿಸಿ) ಹಾಲಿ ಇರುವ ಶಾಶ್ವತ ಸಂಧಾನ ವ್ಯವಸ್ಥೆ (ಪಿಎಂಎ)ಯ ಬದಲಾಗಿ ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಹೊಸ ಎರಡು ಹಂತದ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
ii. ಮೊದಲ ಹಂತದಲ್ಲಿ ಅಂಥ ವಾಣಿಜ್ಯ ವಿವಾದಗಳನ್ನು ವಿವಾದವಿರುವ ಸಿಪಿಎಸ್ಇಗಳು/ಪಕ್ಷಕಾರರು ಮತ್ತು ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳ ಒಳಗೊಂಡ ಆಡಳಿತ ಸಚಿವಾಲಯಗಳ/ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಗೆ ಕಳುಹಿಸಲಾಗುವುದು. ಎರಡೂ ಸಂಬಂಧಿತ ಸಚಿವಾಲಯ/ಇಲಾಖೆಗಳ ಆರ್ಥಿಕ ಸಲಹೆಗಾರರು (ಎಫ್.ಎ.ಗಳು) ಮೇಲಿನ ಸಮಿತಿಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿನಿಧಿಸುತ್ತಾರೆ.
iii. ಒಂದೊಮ್ಮೆ ತಗಾದೆ ತೆಗೆದ ಇಬ್ಬರೂ ಪಕ್ಷಕಾರರು ಒಂದೇ ಸಚಿವಾಲಯ/ಇಲಾಖೆಗೆ ಸಂಬಂಧಿಸಿದವರಾಗಿದ್ದರೆ, ಸಮಿತಿಯು ಸಂಬಂಧಿತ ಆಡಳಿತಾತ್ಮಕ ಸಚಿವಾಲಯ/ಇಲಾಖೆಯ ಕಾರ್ಯದರ್ಶಿಯವರು, ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿಗಳ ನಡುವೆ ಸಂಧಾನ ಮಾಡಬಹುದು. ಅಂಥ ಪ್ರಕರಣಗಳಲ್ಲಿ ವಿಷಯವನ್ನು ಎಫ್.ಎ. ಮತ್ತು ಒಬ್ಬರು ಜಂಟಿ ಕಾರ್ಯದರ್ಶಿಗಳ ಸಚಿವಾಲಯ/ಇಲಾಖೆಯ ಸಮಿತಿಯ ಮುಂದೆ ತರಬಹುದಾಗಿದೆ.
ಅಲ್ಲದೆ, ಸಿಪಿಎಸ್ಇ ಮತ್ತು ರಾಜ್ಯ ಸರ್ಕಾರಗಳ ಇಲಾಖೆ/ಸಂಸ್ಥೆಗಳ ನಡುವೆ ವಿವಾದವಿದ್ದಲ್ಲಿ, ಸಮಿತಿಯು ಕೇಂದ್ರ ಸರ್ಕಾರದ ಸಿಪಿಎಸ್ಇ ಸೇರಿದ ಸಚಿವಾಲಯ/ಇಲಾಖೆಯ ಕಾರ್ಯದರ್ಶಿ ಮತ್ತು ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಹಾಗೂ ಸಂಬಂಧಿತ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ನಾಮಾಂಕನಗೊಳಿಸುವ ಹಿರಿಯ ಅಧಿಕಾರಿಗಳ ನಡುವೆ ಸಂಧಾನ ಮಾಡಿಸಬಹುದು. ಇಂಥ ಪ್ರಕರಣಗಳನ್ನು ಸಂಬಂಧಿತ ರಾಜ್ಯ ಸರ್ಕಾರದ ಇಲಾಖೆ/ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಸಮಿತಿಯ ಮುಂದೆ ತರಬಹುದು.
iii. ಎರಡನೇ ಹಂತದಲ್ಲಿ, ಮೇಲಿನ ಸಮಿತಿಯಯ ಪರಿಗಣನೆಯ ಬಳಿಕವೂ ಇನ್ನೂ ಪ್ರಕರಣ ಇತ್ಯರ್ಥವಾಗದೆ ಬಾಕಿ ಇದ್ದಲ್ಲಿ, ಆ ಪ್ರಕರಣವನ್ನು ಸಂಪುಟ ಕಾರ್ಯದರ್ಶಿಗಳಿಗೆ ಕಳುಹಿಸಬಹುದಾಗಿದ್ದು, ಅವರ ತೀರ್ಮಾನವೇ ಅಂತಿಮವಾಗಿರುತ್ತದೆ ಮತ್ತು ಎಲ್ಲ ಸಂಬಂಧಿತರೂ ಇದಕ್ಕೆ ಬದ್ದರಾಗಿರಬೇಕಾಗುತ್ತದೆ.
iv. ವಿವಾದಗಳ ಪ್ರಾಮಾಣಿಕ ಇತ್ಯರ್ಥಕ್ಕಾಗಿ, ಪ್ರಥಮ ಹಂತದಲ್ಲಿ 3 ತಿಂಗಳ ಕಾಲಾವಕಾಶವನ್ನು ನಿಗದಿ ಮಾಡಲಾಗಿದೆ.
ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆ (ಡಿಪಿಇ) ಎಲ್ಲ ಸಿಪಿಎಸ್ಇಗಳಿಗೆ ತಮ್ಮ ಆಡಳಿತಾತ್ಮಕ ಸಚಿವಾಲಯ/ಇಲಾಖೆ ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅನುಸರಣೆಗಾಗಿ ತತ್ ಕ್ಷಣವೇ ಮಾರ್ಗಸೂಚಿಗಳನ್ನು ಹೊರಡಿಸಲಿದೆ.
ಹೊಸ ವ್ಯವಸ್ಥೆಯು ವಾಣಿಜ್ಯ ವಿವಾದಗಳನ್ನು ಪರಿಹರಿಸಲು ಪರಸ್ಪರ / ಸಾಮೂಹಿಕ ಪ್ರಯತ್ನಗಳನ್ನು ಉತ್ತೇಜಿಸುತ್ತದೆ, ಇದರಿಂದಾಗಿ ವಾಣಿಜ್ಯ ನ್ಯಾಯಾಲಯದಲ್ಲಿ ಕಾನೂನು ವಿವಾದಗಳ ಬಗ್ಗೆ ವಿಚಾರಣೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಾರ್ವಜನಿಕರ ಹಣ ವ್ಯರ್ಥ ಆಗುವುದನ್ನು ತಪ್ಪಿಸುತ್ತದೆ.
***