Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರಿಯ ಆರೋಗ್ಯ ಸೇವೆಗಳ ಉಪ ಶ್ರೇಣಿಯ ಸಾಮಾನ್ಯ ಸೇವೆಯ ವೈದ್ಯಾಧಿಕಾರಿಗಳ, ಬೋಧಕೇತರ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ನಿವೃತ್ತಿಯ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, (1) ಕೇಂದ್ರೀಯ ಆರೋಗ್ಯ ಸೇವೆಗಳ ಬೋಧಕೇತರ ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ನಿವೃತ್ತಿಯ ವಯಸ್ಸನ್ನು 62 ವರ್ಷಗಳಿಂದ 65 ವರ್ಷಗಳಿಗೆ ಮತ್ತು (2) ಕೇಂದ್ರೀಯ ಆರೋಗ್ಯ ಸೇವೆಗಳ ಉಪ ಶ್ರೇಣಿಯ (ಸಿಎಚ್.ಎಸ್.) ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿ ವೈದ್ಯರ (ಜಿಡಿಎಂ.ಓಗಳು) 65 ವರ್ಷಗಳಿಗೆ ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ. ಬೋಧಕೇತರ ಅಧಿಕಾರಿಗಳು, ಸಾರ್ವಜನಿಕ ಆರೋಗ್ಯ ಮತ್ತು ಸಿ.ಎಚ್.ಎಸ್.ನ ಉಪ ಶ್ರೇಣಿಯ ಜಿ.ಡಿ.ಎಂ.ಓ.ಗಳು ದೃಷ್ಟಿಯಲ್ಲಿರುವ ಗುಂಪುಗಳಾಗಿವೆ. ಈ ನಿರ್ಧಾರವು ಆರೋಗ್ಯ ಸೇವೆಗಳ ನೀಡಿಕೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ, ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ಶೈಕ್ಷಣಿಕ ಚಟುವಟಿಕೆ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ನೆರವಾಗಲಿದೆ. ರೋಗಿಗಳ ಸಮುದಾಯಕ್ಕೆ ಚಿಕಿತ್ಸೆಯ ಖಾತ್ರಿಗಾಗಿ ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ತುಂಬಬೇಕಾಗಿರುವುದರಿಂದ ಇದರಿಂದ ಯಾವುದೇ ಹಣಕಾಸಿನ ಪರಿಣಾಮ ಬೀರುವುದಿಲ್ಲ.

ಹಿನ್ನೆಲೆ:

• ಕೇಂದ್ರೀಯ ಆರೋಗ್ಯ ಸೇವೆಗಳ ಎಲ್ಲ ನಾಲ್ಕು ಉಪ ಶ್ರೇಣಿಗಳಲ್ಲಿ 2006ಕ್ಕೆ ಮುಂಚಿತವಾಗಿ ನಿವೃತ್ತಿಯ ವಯಸ್ಸು 60ವರ್ಷಗಳಾಗಿತ್ತು.

• ಮೂರು ತಜ್ಞ ಉಪ ಶ್ರೇಣಿಯ (ಬೋಧಕ, ಬೋಧಕೇತರ ಮತ್ತು ಸಾರ್ವಜನಿಕ ಆರೋಗ್ಯ), ಜಿಡಿಎಂಓ ಉಪ ಶ್ರೇಣಿ ಹೊರತುಪಡಿಸಿ ನಿವೃತ್ತಿಯ ವಯೋಮಿತಿಯನ್ನು 2.11.2006ರ ಸಂಪುಟ ಸಭೆಯ ಅನುಮೋದನೆ ಪಡೆದು 60ರಿಂದ 62 ವರ್ಷಕ್ಕೆ ಹೆಚ್ಚಿಸಲಾಗಿತ್ತು.

• ಬೋಧಕ ತ5ರ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಬೋಧಕ ಉಪ ಶ್ರೇಣಿಯ ನಿವೃತ್ತಿಯ ವಯಸ್ಸನ್ನು ತರುವಾಯ 05.06.2008ರಂದು ನಡೆದ ಕೇಂದ್ರ ಸಚಿವ ಸಂಪುಟದ ಅನುಮೋದನೆಯೊಂದಿಗೆ 62ರಿಂದ 65ಕ್ಕೆ ಏರಿಕೆ ಮಾಡಲಾಗಿತ್ತು. ಈ ಅನುಮೋದನೆಯು ಬೋಧಕ ಚಟುವಟಿಕೆಯಲ್ಲಿ ನಿರತವಾಗಿರುವ ಬೋಧಕ ಜತಜ್ಞರಿಗೆ ಮಾತ್ರವೇ ಸೀಮಿತವಾಗಿತ್ತು ಮತ್ತು ಇದು ಆಡಳಿತಾತ್ಮಕ ಹುದ್ದೆ ಅಲಂಕರಿಸುವವರಿಗೆ ಅನ್ವಯವಾಗಿರಲಿಲ್ಲ.