ಘನತೆವೆತ್ತರೇ ತಮ್ಮ ಆತ್ಮೀಯ ಮಾತುಗಳಿಗೆ ಧನ್ಯವಾದಗಳು.
ನಾನು ನೈರೋಬಿಯಲ್ಲಿರಲು ಸಂತೋಷಿಸುತ್ತೇನೆ. ನನಗೆ ಮತ್ತು ನನ್ನ ನಿಯೋಗಕ್ಕೆ ಅಧ್ಯಕ್ಷ ಕೆನ್ಯಟ್ಟಾ ಅವರು ನೀಡಿದ ಆತಿಥ್ಯಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ಘನತೆವೆತ್ತ ಅಧ್ಯಕ್ಷರಿಗೆ ಹೇಳಿದೆ ನಿಮ್ಮ ಹೆಸರು “ಉಹ್ರು” ಅದರರ್ಥ “ಸ್ವಾತಂತ್ರ್ಯ”. ಒಂದುರೀತಿಯಲ್ಲಿ ನಿಮ್ಮ ಬದುಕಿನ ಪಯಣ ಸಹ ಸ್ವತಂತ್ರ ಕೆನ್ಯಾದಂತೆಯೇ ಇದೆ. ನಾನು ಇಂದು ನಿಮ್ಮೊಂದಿಗಿರುವುದು ನನಗೆ ಗೌರವದ ವಿಷಯವಾಗಿದೆ.
ಸ್ನೇಹಿತರೇ,
ಕೆನ್ಯಾ ಭಾರತದ ಮೌಲ್ಯಯುತ ಗೆಳೆಯ ಹಾಗೂ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ. ಈ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ದೀರ್ಘ ಕಾಲದ್ದು ಮತ್ತು ಶ್ರೀಮಂತವಾದ್ದು. ನಾವು ವಸಾಹತುಶಾಹಿಯ ವಿರುದ್ಧದ ಹೋರಾಟದ ಸಮಾನ ಶಕ್ತಿಯನ್ನು ಹಂಚಿಕೊಂಡಿದ್ದೇವೆ.
• ನಮ್ಮ ಐತಿಹಾಸಿಕ ಜನರಿಂದ ಜನರ ನಡುವಿನ ಬಾಂಧವ್ಯವು ನಮ್ಮ ವಿಸ್ತೃತ ಶ್ರೇಣಿಯ ಪಾಲುದಾರಿಕೆಗೆ ಬಲವಾದ ಬುನಾದಿಯಾಗಿದೆ, ಅದು ಈ ಕೆಳಗಿನವುಗಳನ್ನು ವಿಸ್ತರಿಸುತ್ತದೆ:
• ಕೃಷಿ ಮತ್ತು ಆರೋಗ್ಯದಿಂದ ಅಭಿವೃದ್ಧಿಯ ನೆರವಿನವರೆಗೆ;
• ವಾಣಿಜ್ಯ ಮತ್ತು ವ್ಯಾಪಾರದಿಂದ ಹೂಡಿಕೆಯವರೆಗೆ;
• ನಮ್ಮ ಜನತೆಯ ನಡುವಿನ ನಿಕಟ ಸಂಪರ್ಕದಿಂದ ಸಾಮರ್ಥ್ಯ ವರ್ಧನೆವರೆಗೆ; ಮತ್ತು
• ನಿಯಮಿತ ರಾಜಕೀಯ ಮಾತುಕೆಯಿಂದ ರಕ್ಷಣ ಮತ್ತು ಭದ್ರತೆ ಸಹಕಾರದವರೆಗೆ.
ಮತ್ತು, ಇಂದು, ಅಧ್ಯಕ್ಷರು ಮತ್ತು ನಾನು ನಮ್ಮ ಎಲ್ಲ ಶ್ರೇಣಿಯ ಬಾಂಧವ್ಯದ ಬಗ್ಗೆ ಪರಾಮರ್ಶಿಸಿದ್ದೇವೆ.
ಸ್ನೇಹಿತರೇ,
ಭಾರತವು ಜಾಗತಿಕ ಆರ್ಥಿಕತೆಯಲ್ಲಿ ಒಂದು ದೊಡ್ಡ ಬಿಂದುವಾಗಿದೆ. ಮತ್ತು ಕೆನ್ಯಾ ಬಲವಾದ ಅವಕಾಶಗಳ ತಾಣವಾಗಿದೆ. ಭಾರತವು ಕೆನ್ಯಾದ ಅತಿ ದೊಡ್ಡ ವಾಣಿಜ್ಯ ಪಾಲುದಾರ ರಾಷ್ಟ್ರವಾಗಿದೆ ಮತ್ತು ಎರಡನೇ ದೊಡ್ಡ ಹೂಡಿಕೆದಾರನೂ ಆಗಿದೆ. ಆದರೆ, ಇನ್ನೂ ಹೆಚ್ಚಿನ ಸಾಧನೆಯ ಸಾಮರ್ಥ್ಯ ಇಲ್ಲಿದೆ.
ನಾನು ಮತ್ತು ಅಧ್ಯಕ್ಷರು ನಮ್ಮ ಆರ್ಥಿಕತೆ ಇದರಿಂದ ಹೆಚ್ಚಿನ ಲಾಭ ಪಡೆಯಬೇಕು ಎಂಬುದನ್ನು ಒಪ್ಪಿದ್ದೇವೆ. :
• ನಾವು ಹೆಚ್ಚಿನ ವಾಣಿಜ್ಯ ಸಂಪರ್ಕಗಳನ್ನು ತೀವ್ರಗೊಳಿಸಿದರೆ;
• ಹೆಚ್ಚು ವೈವಿಧ್ಯಪೂರ್ಣವಾದ ವಾಣಿಜ್ಯಕ್ಕೆ ಕ್ರಮ ಕೈಗೊಂಡರೆ; ಮತ್ತು
• ನಮ್ಮ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸಿದರೆ
ಇದು ನಮ್ಮ ಪ್ರಾದೇಶಿಕ ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ. ಮತ್ತು ಇದರಿಂದ ಸರ್ಕಾರಗಳು ತಮ್ಮ ಪಾತ್ರ ನಿರ್ವಹಿಸಬಹುದಾಗಿದೆ, ಇದು ನಮ್ಮ ವಾಣಿಜ್ಯಪಾಲುದಾರಿಕೆಯನ್ನು ಮುಂದೆ ಸಾಗಿಸುವ ಜವಾಬ್ದಾರಿ ಮತ್ತು ಪ್ರಮುಖ ಪಾತ್ರ ವಹಿಸಿರುವ ನಮ್ಮ ಎರಡು ರಾಷ್ಟ್ರಗಳ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ, ನಾನು ಇಂದು ಸಂಜೆ ನಡೆಯಲಿರುವ ಭಾರತ ಮತ್ತು ಕೆನ್ಯಾ ವಾಣಿಜ್ಯ ವೇದಿಕೆಯ ಸಭೆಯನ್ನು ಸ್ವಾಗತಿಸುತ್ತೇನೆ. ಭಾರತ ಮತ್ತು ಕೆನ್ಯಾ ಎರಡೂ ಅಭಿವೃದ್ಧಿಶೀಲ ರಾಷ್ಟ್ರಗಳಾಗಿವೆ. ನಾವಿಬ್ಬರೂ ಎರಡು ನಾವಿನ್ಯ ಸಮಾಜವಾಗಿದ್ದೇವೆ. ಮತ್ತು ಅದರಲ್ಲೂ ಮಹತ್ವದ ಸಂಗತಿ ಎಂದರೆ, ಇದು ಪ್ರಕ್ರಿಯೆಯೇ, ಉತ್ಪನ್ನವೇ ಅಥವಾ ತಂತ್ರಜ್ಞಾನವೇ, ನಮ್ಮ ನಾವಿನ್ಯತೆಗಳು ಕೇವಲ ನಮ್ಮ ಸಮಾಜಕ್ಕೆ ಸೂಕ್ತವಾದವುಗಳಷ್ಟೇ ಅಲ್ಲ. ಅವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಜನರ ಬದುಕಿನ ಸುಧಾರಣೆಗೂ ಸಹಾಯ ಮಾಡುತ್ತವೆ. ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಸಬಲೀಕರಿಸಿದ ಎಂ-ಪೆಸಾದ ಯಶಸ್ಸು ಇಂಥ ನಾವಿನ್ಯತೆಯಲ್ಲಿ ಒಂದಾಗಿದೆ. ಎರಡೂ ಕಡೆಯವರು ನಾವಿನ್ಯ ತಂತ್ರಜ್ಞಾನವನ್ನು ವಾಣಿಜ್ಯೀಕರಿಸಲು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ.ಇವುಗಳಲ್ಲಿ ಕೆಲವು ಇಂದು ಸಂಜೆ ನಡೆಯಲಿರುವ ವಾಣಿಜ್ಯ ವೇದಿಕೆಯಲ್ಲಿ ನಿಚ್ಚಳವಾಗಿ ಕಾಣಿಸಲಿವೆ.
ಸ್ನೇಹಿತರೆ,
ಬಹುಮುಖಿಯಾದ ಅಭಿವೃದ್ಧಿಯ ಪಾಲುದಾರಿಕೆಯು ನಮ್ಮ ದ್ವಿಪಕ್ಷೀಯ ಬಾಂದವ್ಯದ ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮ ಅಭಿವೃದ್ಧಿ ಆದ್ಯತೆಗಳು ಹೆಚ್ಚೂ ಕಡಿಮೆ ಸಂಪರ್ಕಿತವಾಗಿವೆ. ನೈಜ ಮತ್ತು ವಿಶ್ವಾಸಪೂರ್ಣ ಪಾಲುದಾರರಾಗಿ, ಭಾರತವು ರಿಯಾಯಿತಿಯ ಸಾಲ ಹಾಗೂ ಕೆನ್ಯಾದ ಅಭಿವೃದ್ಧಿ ಉದ್ದೇಶಗಳಿಗೆ ನೆರವಾಗಲು ತನ್ನ ಅಭಿವೃದ್ಧಿಯ ತಜ್ಞತೆಯನ್ನು ಹಂಚಿಕೊಳ್ಳಲು ಸಿದ್ಧವಿದೆ. ಕೃಷಿ ಯಾಂತ್ರೀಕರಣ, ಜವಳಿ ಮತ್ತು ಸಣ್ಣ ಮತ್ತು ಮಧ್ಯಮ ವಲಯದ ಅಭಿವೃದ್ಧಿ ಯೋಜನೆಗಳ ಲೈನ್ಸ್ ಆಫ್ ಕ್ರೆಡಿಟ್ ಅನ್ನು ಆದಷ್ಟು ಬೇಗ ಜಾರಿ ಮಾಡಲು ನಾವು ಎದಿರು ನೋಡುತ್ತಿದ್ದೇವೆ. ಭಾರತದ 60 ದಶಲಕ್ಷ ಡಾಲರ್ ಸಾಲದ ನೆರವಿನ ವಿದ್ಯುತ್ ಪೂರೈಕೆ ಯೋಜನೆಯ ಪ್ರಗತಿಯಿಂದ ನಾವು ಉತ್ತೇಜಿತರಾಗಿದ್ದೇವೆ. ಕೆನ್ಯಾದ ಅತಿ ಹೆಚ್ಚು ಯಶಸ್ಸಿನ ಜಿಯೋ ಥರ್ಮಲ್ ವಲಯ ಮತ್ತು ಇಂಧನ ದಕ್ಷತೆಯ ಯೋಜನೆ ಅಂದರೆ ಎಲ್.ಇ.ಡಿ. ಆಧಾರಿತ ಸ್ಮಾರ್ಟ್ ರಸ್ತೆ ದೀಪ ಅಳವಡಿಕೆ ನಮ್ಮ ಒಪ್ಪಂದವನ್ನು ವೃದ್ಧಿಗೊಳಿಸಬಲ್ಲ ಕೆಲವು ಕ್ಷೇತ್ರಗಳಲ್ಲಿ ಸೇರಿವೆ. ಅಧ್ಯಕ್ಷ ಉಹ್ರು ಅವರ ಪ್ರಮುಖ ಆದ್ಯತೆಯಲ್ಲಿ ಆರೋಗ್ಯವೂ ಸೇರಿದೆ ಎಂಬುದನ್ನು ನಾನು ಅರಿತಿದ್ದೇನೆ. ಭಾರತದ ಬಲ ಅದರಲ್ಲೂ ಔಷಧ ವಲಯ ನಿಮ್ಮ ಆದ್ಯತೆಯಲ್ಲಿ ಮುಖ್ಯವಾಗಿ ಕೆನ್ಯಾದಲ್ಲಿ ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ಕೈಜೋಡಿಸಬಹುದಾಗಿದೆ. ಇದು ನಿಮ್ಮ ಸಮಾಜದ ಅಗತ್ಯಗಳನ್ನು ಪೂರೈಸುವ ಬಗ್ಗೆ ಮಾತ್ರವೇ ಅಲ್ಲ. ಇದು ಕೆನ್ಯಾವನ್ನು ಪ್ರಾದೇಶಿಕ ವೈದ್ಯ ತಾಣವಾಗಿಯೂ ಪರಿವರ್ತಿಸಲು ನೆರವಾಗಲಿದೆ. ಈ ನಿಟ್ಟಿನಲ್ಲಿ, ಪ್ರತಿಷ್ಠಿತ ಕೆನ್ಯಟ್ಟಾ ರಾಷ್ಟ್ರೀಯ ಆಸ್ಪತ್ರೆ ಭಾರತ ನಿರ್ಮಿಸಿದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸಾ ಯಂತ್ರ-ಭಭಟ್ರಾನ್ ಅಳವಡಿಸಿಕೊಳ್ಳಲಿದೆ ಎಂಬುದು ಸಂತಸದ ವಿಷಯವಾಗಿದೆ. ಅಲ್ಲದೆ ನಾವು ಏಡ್ಸ್ ಚಿಕಿತ್ಸೆಯೂ ಸೇರಿದಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಾಗಿ ಹಲವು ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಕೀನ್ಯಾಗೆ ದಾನವಾಗಿ ಕೊಡುತ್ತಿದ್ದೇವೆ.
ಸ್ನೇಹಿತರೇ,
ನಮ್ಮ ಯುವಕರಿಗೆ ಯಶಸ್ಸು ಸಾಧಿಸಲು ಅವಕಾಶ ನೀಡದಿದ್ದರೆ, ನಮ್ಮ ಸಮಾಜ ಬೆಳೆಯುವುದಿಲ್ಲ ಎಂಬುದನ್ನು ನಾವು ಗುರುತಿಸಿದ್ದೇವೆ. ಇದಕ್ಕಾಗಿ ನಾವು ಕೆನ್ಯಾದೊಂದಿಗೆ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯಲ್ಲಿ ಪಾಲುದಾರಿಕೆಗೆ ಸಿದ್ಧರಾಗಿದ್ದೇವೆ.
ಸ್ನೇಹಿತರೆ,
ನಾವು ನಮ್ಮ ಅಭಿವೃದ್ಧಿಯ ಸವಾಲುಗಳ ಬಗ್ಗೆ ಜಾಗೃತರಾಗಿದ್ದು, ನಾನು ಮತ್ತು ಅಧ್ಯಕ್ಷರು ಸುರಕ್ಷತೆ ಮತ್ತು ಸ್ಥಿರತೆಯ ಬಗ್ಗೆಯೂ ನಮ್ಮ ಕಾಳಜಿ ಹಂಚಿಕೊಂಡೆವು. ಭಾರತ ಮತ್ತು ಕೆನ್ಯಾ ಹಿಂದೂ ಮಹಾ ಸಾಗರದಿಂದ ಸಂಪರ್ಕ ಹೊಂದಿವೆ. ನಮ್ಮಿಬ್ಬರಿಗೂ ಬಲವಾದ ಕರಾವಳಿ ಸಂಪ್ರದಾಯವಿದೆ. ಹೀಗಾಗಿ ನಮ್ಮ ಕರಾವಳಿ ಭದ್ರತೆಯ ಕ್ಷೇತ್ರದ ಸಹಕಾರ ನಮ್ಮ ಒಟ್ಟಾರೆ ರಕ್ಷಣೆ ಮತ್ತು ಭದ್ರತೆಯ ಒಪ್ಪಂದಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ರಕ್ಷಣಾ ಕ್ಷೇತ್ರದ ಸಹಕಾರಕ್ಕಾಗಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ ನಮ್ಮ ರಕ್ಷಣಾ ಸ್ಥಾಪನೆಗಳ ನಡುವೆ ಸಾಂಸ್ಥಿಕ ಸಹಕಾರವನ್ನು ವೃದ್ಧಿಸಲಿದೆ. ಇದು ಹೆಚ್ಚಿನ ಪ್ರಮಾಣದ ಸಿಬ್ಬಂದಿಯ ವಿನಿಮಯ, ಅನುಭವ ಮತ್ತು ತಜ್ಞತೆಯ ವಿನಿಮಯ, ತರಬೇತಿ ಮತ್ತು ಸಂಸ್ಥೆಗಳ ನಿರ್ಮಾಣ,ಹೈಡ್ರೋಗ್ರಫಿಯಲ್ಲಿಸಹಕಾರ ಮತ್ತು ಸಾಧನಗಳ ಪೂರೈಕೆಯನ್ನೂ ಒಳಗೊಂಡಿದೆ. ಅಧ್ಯಕ್ಷರು ಮತ್ತು ನಾನು ಭಯೋತ್ಪಾದನೆ ಮತ್ತು ತ್ವರಿತವಾಗಿ ಹಬ್ಬುತ್ತಿರುವ ಮೂಲಭೂತವಾದದ ಸಿದ್ಧಾಂತಗಳು ನಮ್ಮ ಜನತೆಗೆ,ನಮ್ಮ ದೇಶಕ್ಕೆ, ನಮ್ಮ ವಲಯಕ್ಕೆ ಮತ್ತು ಇಡೀ ವಿಶ್ವಕ್ಕೆ ಸಮಾನವಾದ ಸವಾಲಾಗಿದೆ ಎಂಬುದನ್ನು ಗುರುತಿಸಿದ್ದೇವೆ. ಹೀಗಾಗಿ ನಾವು ನಮ್ಮ ಸೈಬರ್ ಭದ್ರತೆ, ಮಾದಕದ್ರವ್ಯ ಹಾಗೂ ನಶೀಲಿ ವಸ್ತುಗಳ ಕಳ್ಳಸಾಗಾಣಿಕೆ ತಡೆ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆಯೂ ಸೇರಿದಂತೆ ಭದ್ರತೆಯ ಪಾಲುದಾರಿಕೆಯನ್ನು ಆಳಗೊಳಿಸಲು ಸಮ್ಮತಿಸಿದ್ದೇವೆ.
ಸ್ನೇಹಿತರೇ,
ನಿನ್ನೆ ಅಧ್ಯಕ್ಷರು ಮತ್ತು ನಾನು ಕೆನ್ಯಾದಲ್ಲಿ ಭಾರತೀಯ ಸಮುದಾಯದೊಂದಿಗೆ ಎಂದೆಂದಿಗೂ ಮರೆಯಲಾಗದ ರೀತಿಯಲ್ಲಿ ಸಂವಾದ ನಡೆಸಿದ್ದೇವೆ. ಕೆನ್ಯಾದ ಜನರು ತಮ್ಮ ಭಾರತೀಯ ಮೂಲವನ್ನು ಹುಡುಕಲು ಹೆಮ್ಮೆಪಡುತ್ತಾರೆ ಎಂದು ಅಧ್ಯಕ್ಷ ಉಹ್ರು ಅವರು ಹೇಳಿದರು. ನಾವು ನಮ್ಮ ಆರ್ಥಿಕ ಮತ್ತು ಸಾಮಾಜಿಕ ಒಪ್ಪಂದಗಳನ್ನು ಆಳವಾಗಿ ರೂಪಿಸುತ್ತಿರುವಾಗ, ಅವು ವಿಶ್ವಾಸಾರ್ಹ ಮತ್ತು ಬಲವಾದ ಸೇತುವೆಯನ್ನು ನಿರ್ಮಿಸುತ್ತವೆ. ಕ್ರಿಯಾತ್ಮಕವಾದ ಭಾರತೀಯ ಸಂಸ್ಕೃತಿ, ಈಗಾಗಲೇ ಕೆನ್ಯಾದ ಶ್ರೀಮಂತ ಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಲು ನಾನು ಸಂತೋಷಿಸುತ್ತೇನೆ. ಇದು ಈ ವರ್ಷವೇ ಕೆನ್ಯಾದಲ್ಲಿ ನಡೆಯಲಿರುವ ಭಾರತ ಉತ್ಸವದಲ್ಲಿ ಪ್ರದರ್ಶಿತವಾಗಲಿದೆ.
ಘನತೆವೆತ್ತ ಅಧ್ಯಕ್ಷ ಉಹ್ರು ಅವರೇ,
ಕೊನೆಯಲ್ಲಿ ನಾನು ನಾನು ಪಡೆದ ಆತ್ಮೀಯ ಸ್ವಾಗತಕ್ಕೆ ಮತ್ತೊಮ್ಮೆ ಕೆನ್ಯಾದ ಸರ್ಕಾರಕ್ಕೆ ಮತ್ತು ಅದರ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ.
ಮತ್ತು, ನಾನು ಮತ್ತು ಭಾರತದ ಜನತೆ ನಿಮ್ಮನ್ನು ಬರತಕ್ಕೆ ಬರಮಾಡಿಕೊಳ್ಳಲು ಕಾತರಿಸುತ್ತಿದ್ದಾರೆ ಎಂದು ತಿಳಿಸುತ್ತೇನೆ.
ಧನ್ಯವಾದಗಳು.
ಥ್ಯಾಂಕ್ಯೂ ವೆರೆಮಚ್.
Kenya is a valued friend and trusted partner of India. The bonds between the two countries are long-standing and rich: PM @narendramodi
— PMO India (@PMOIndia) July 11, 2016
Strong and deep-rooted India-Kenya friendship. pic.twitter.com/X7XUNsIF5a
— PMO India (@PMOIndia) July 11, 2016
India is Kenya's largest trading partner and the second largest investor here. But, there is potential to achieve much more: PM
— PMO India (@PMOIndia) July 11, 2016
The multifaceted development partnership is a key pillar of our bilateral relationship: PM @narendramodi
— PMO India (@PMOIndia) July 11, 2016
Kenya's geothermal sector & energy efficiency projects- LED based smart street lighting are areas where we could build our engagement: PM
— PMO India (@PMOIndia) July 11, 2016
India's strength especially in pharmaceuticals can join hands with your priorities to shape affordable & efficient healthcare system: PM
— PMO India (@PMOIndia) July 11, 2016
Another aspect of India-Kenya cooperation. pic.twitter.com/hneVk6KiLX
— PMO India (@PMOIndia) July 11, 2016
We have agreed to deepen our security partnership including in fields of cyber security, combating drugs & narcotics & human trafficking: PM
— PMO India (@PMOIndia) July 11, 2016
The Prime Minister hands over a model of Bhabhatron to President @UKenyatta. pic.twitter.com/nLYbSgu2YK
— PMO India (@PMOIndia) July 11, 2016
Witnessed the signing of crucial agreements & addressed the press on India-Kenya ties. https://t.co/8Mm7micZvD
— Narendra Modi (@narendramodi) July 11, 2016