ಘನತೆವೆತ್ತ ಅಧ್ಯಕ್ಷ ಉಹ್ರು ಕೆನ್ಯಟ್ಟಾ ಅವರೇ,
ಉಪ ರಾಷ್ಟ್ರಾಧ್ಯಕ್ಷ ವಿಲಿಯಂ ರುಟೋ ಅವರೇ,
ಸಂಪುಟದ ಸದಸ್ಯರೇ,
ಗೌರವಾನ್ವಿತ ಅತಿಥಿಗಳೇ,
ಜಂಬೋ ನಮಸ್ಕಾರ್,
ಈ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು.
ನಾನು 125 ಕೋಟಿ ಭಾರತೀಯರ ಶುಭ ಹಾರೈಕೆ ಮತ್ತು ಶುಭಾಶಯಗಳನ್ನು ತಂದಿದ್ದೇನೆ. ಸುಮಾರು ಎರೆಡು ಸಹಸ್ರಮಾನದ ಹಿಂದೆ, ಹಿಂದೂ ಮಹಾಸಾಗರದ ನೀರು ನಮ್ಮ ಎರಡು ರಾಷ್ಟ್ರಗಳ ಜನತೆಯನ್ನು ಪರಸ್ಪರ ಒಗ್ಗೂಡಿಸಲು ನೆರವಾಗಿದೆ. ನಾವು ಕರಾವಳಿಯ ನೆರೆ ರಾಷ್ಟ್ರಗಳಾಗಿದ್ದೇವೆ.
ಭಾರತದ ಪಶ್ಚಿಮ ತೀರದ, ಅದರಲ್ಲೂ ನನ್ನ ತವರು ರಾಜ್ಯ ಗುಜರಾತ್ ನಿಂದ ಮತ್ತು ಆಫ್ರಿಕಾದ ಪೂರ್ವ ಕರಾವಳಿಯಿಂದ ಬಂದ ಸಮುದಾಯಗಳು ಪರಸ್ಪರರ ನಾಡಿನಲ್ಲಿ ನೆಲೆಸಿವೆ. 19ನೇ ಶತಮಾನದ ಅಂತ್ಯಕ್ಕೆ, ವಸಾಹತು ಯುಗದ ಸಂದರ್ಭದಲ್ಲಿ ಭಾರತೀಯರು ಮೊಂಬಸಾ ಉಗಾಂಡಾ ರೈಲ್ವೆ ನಿರ್ಮಾಣಕ್ಕಾಗಿ ಕೆನ್ಯಾಗೆ ಬಂದರು. ಅವರಲ್ಲಿ ಹಲವರು ಇಲ್ಲಿಯೇ ನೆಲೆಸಿ ಮತ್ತು ಕೆನ್ಯಾದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಹಲವರು ಸ್ವಾತಂತ್ರ್ಯ ಸಂಗ್ರಾಮದಲ್ಲೂ ಕೈಜೋಡಿಸಿದ್ದರು. ಮತ್ತು ಕೆನ್ಯಾದ ಸ್ಥಾಪಕ ಅಧ್ಯಕ್ಷ ಎಂಜಿ ಜೊಮೋ ಕೆನ್ಯೆಟ್ಟಾ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರು, ಮಖನ್ ಸಿಂಗ್, ಪಿಯೋ ಗಮಾ ಪಿಂಟೋ, ಚಮನ್ ಲಾಲ್, ಎಂ.ಎ. ದೇಸಾಯಿ ಮತ್ತಿತರರನ್ನು ನಾವು ಎಣಿಸಬಹುದು. ನಮ್ಮ ಸಮಾಜಗಳ ನಡುವಿನ ಪುರಾತನವಾದ ಸಂಪರ್ಕಗಳು ಕೂಡ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಶ್ರೀಮಂತವಾದ ಸ್ವಹಿಲಿ ಭಾಷೆಯಲ್ಲಿ ಹಲವು ಹಿಂದಿ ಶಬ್ದಗಳೂ ಇವೆ. ಭಾರತೀಯ ಖಾದ್ಯಗಳು ಗ ಕೆನ್ಯಾ ಖಾತ್ಯಗಳ ಅವಿಭಾಜ್ಯ ಅಂಗವಾಗಿವೆ. ಘನತೆವೆತ್ತರೇ, ಕಳೆದ ಸಂಜೆ, ನಾನು ಮತ್ತು ನೀವು ಭಾರತೀಯ ಸಮುದಾಯ ಕೆನ್ಯಾದೊಂದಿಗೆ ಹೊಂದಿರುವ ಮಮಕಾರವನ್ನು ಪ್ರತ್ಯಕ್ಷ ನೋಡಿದೆವು. ಅವರು ನಮ್ಮ ಎರಡು ದೇಶಗಳ ನಡುವಿನ ಬಲವಾದ ಬಂಧವಾಗಿದ್ದಾರೆ. ಮತ್ತು ನಾವು ಈ ಜಂಟಿ ಪರಂಪರೆಯನ್ನು ಗೌರವಿಸುತ್ತೇವೆ. 2008ರಲ್ಲಿ ನಾನು ಮೊದಲ ಬಾರಿಗೆ ಭೇಟಿ ನೀಡಿದ್ದ ಈ ಸುಂದರ ರಾಷ್ಟ್ರಕ್ಕೆ ಮತ್ತೆ ಬಂದಿರುವುದಕ್ಕೆಸಂತೋಷ ಪಡುತ್ತೇನೆ. ಈ ಭೇಟಿ ಅತ್ಯಲ್ಪಕಾಲದ್ದೇ ಇರಬಹುದು ಆದರೆ, ಇದರ ಫಲಶ್ರುತಿ ಮಾತ್ರ ಗಣನೀಯವಾದುದಾಗಿದೆ. 2015ರ ಅಕ್ಟೋಬರ್ ನಲ್ಲಿ ದೆಹಲಿಯಲ್ಲಿ ಆರಂಭವಾದ ನಮ್ಮ ವೈಯಕ್ತಿಕ ಗೆಳೆತನವನ್ನು ಪುನರ್ಪ್ರಚೋದಿಸಿದ್ದೇನೆ. ಕಳೆದ ಕೆಲವು ಗಂಟೆಗಳಲ್ಲಿ, ನಮಗೆ ನಮ್ಮ ದೀರ್ಘ ಕಾಲೀನ ಬಾಂಧವ್ಯಕ್ಕೆ ಒಂದು ಹೊಸ ವ್ಯಾಪಕ ಮತ್ತು ಗತಿಯನ್ನು ತರಲು ಸಾಧ್ಯವಾಯಿತು. ನಮ್ಮ ರಾಜಕೀಯ ಒಪ್ಪಂದಗಳು ಮತ್ತು ಬದ್ಧತೆಗಳು ಆಳವಾಗಿವೆ.
ನಾವು ನಿಮ್ಮ ಅಭಿವೃದ್ಧಿಯ ಆದ್ಯತೆಗಳನ್ನು ಪೂರ್ಣಗೊಳಿಸಲು ಕೆನ್ಯಾದೊಂದಿಗೆ ಕೈಜೋಡಿಸಲು ಸಿದ್ಧರಾಗಿದ್ದೇವೆ:
• ನಿಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ; ಮತ್ತು
• ನೀವು ಇಚ್ಛಿಸುವ ವೇಗದಲ್ಲಿ; ಮತ್ತು ಅದು ಇರುವಲ್ಲಿ:
• ಕೃಷಿ ಮತ್ತು ಆರೋಗ್ಯ ರಕ್ಷಣೆ;
• ಶೈಕ್ಷಣಿಕ ಅಗತ್ಯಗಳು, ವೃತ್ತಿಪರ ಶಿಕ್ಷಣ ಅಥವಾ ತರಬೇತಿ;
• ಸಣ್ಣ ವ್ಯಾಪಾರದ ಅಭಿವೃದ್ಧಿ;
• ನವೀಕರಿಸಬಹುದಾದ ಇಂಧನ ಅಥವಾ ವಿದ್ಯುತ್ ಸರಬರಾಜು; ಮತ್ತು
• ಸಾಂಸ್ಥಿಕ ಶಕ್ತಿ ವರ್ಧನೆ.
ಹಿಂದಿನಂತೆಯೇ, ನಮ್ಮ ತಜ್ಞತೆ ಮತ್ತು ಅನುಭವಗಳು ಕೆನ್ಯಾದವರ ಲಾಭಕ್ಕೆ ಲಭ್ಯವಾಗಲಿವೆ.
ಘನತೆವೆತ್ತರೇ, ನಾವು ಅಭಿವೃದ್ಧಿಶೀಲ ಆರ್ಥಿಕತೆ ಮತ್ತು ವಾಣಿಜ್ಯ ಸಂಬಂಧ ಹೊಂದಿದ್ದೇವೆ. ಆದರೆ, ಇದು ತಾತ್ಕಾಲಿಕವಾದ್ದಲ್ಲ ಅಥವಾ ವ್ಯವಹರಣೆಯ ಸಂಬಂಧವಲ್ಲ. ಇದು ಕಾಲ ನಿರ್ಧರಿತವಾದ, ವಿನಿಮಯಿತ ಅನುಭವ ಮತ್ತು ಮೌಲ್ಯಗಳ ತಳಹದಿಯ ಮೇಲೆ ನಿರ್ಮಿಸಿದ ಬಂಧ.
ಸ್ನೇಹಿತರೆ,
ಭಾರತ ಮತ್ತು ಕೆನ್ಯಾ ಎರಡರಲ್ಲೂ ಯುವ ಜನಸಂಖ್ಯೆ ಇದೆ. ಎರಡೂ ಮೌಲ್ಯಾಧಾರಿತ ಶಿಕ್ಷಣ ಸಂಸ್ಕೃತಿ ಹೊಂದಿವೆ. ಈಗ ಕೌಶಲ ಅಭಿವೃದ್ಧಿಯ ಕಾಲ ಬಂದಿದೆ. ಸ್ವಹಿಲಿ ಗಾದೆ ಹೇಳುವಂತೆ: “ಎಲಿಮುಬಿಲಾಮಲಿ, ಕಮಂತಬಿಲಾಸಲಿ” (ಅರ್ಥ: ಅಭ್ಯಾಸವಿಲ್ಲದ ಜ್ಞಾನವು ಜೇನಿಲ್ಲದ ಮೇಣದಂತೆ) ಭಾರತ ಮತ್ತು ಕೆನ್ಯಾ ಎರಡೂ ಸದಾ ವಿಶ್ವ ಶಾಂತಿಗಾಗಿ ಕೆಲಸ ಮಾಡಿವೆ. ನಾವು ಇತರ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ನಮ್ಮ ಪ್ರಯತ್ನವನ್ನು ಒಗ್ಗೂಡಿಸಬಹುದಾಗಿದೆ, ಕೇವಲ ಬಡವರು ಮತ್ತು ದುರ್ಬಲರ ಒಳಿತಿಗಾಗಿ ಮಾತ್ರ ಅಲ್ಲ. ನಮ್ಮ ಭೂ ಮಾತೆಯ ಸಂರಕ್ಷಣೆಗೆ ನೆರವಾಗಲು.
ನೈಸರ್ಗಿಕ ಆಸ್ತಿಯನ್ನು ಸಂರಕ್ಷಿಸುವ ಮಹತ್ವದ ವಲಯದಲ್ಲಿ ನಾವು ಪರಸ್ಪರ ಕಲಿಯಬಹುದಾಗಿದೆ. ಎಂಜೀ ಜೊಮೊ ಕೆನ್ಯೆಟ್ಟಾ ಅವರು ಹೇಳಿರುವಂತೆ “ನಮ್ಮ ಮಕ್ಕಳು ಹಿಂದಿನ ನಾಯಕರ ಬಗ್ಗೆ ಕಲಿಯಬಹುದು. ನಮ್ಮ ಗುರಿ ನಮ್ಮನ್ನು ನಾವು ಭವಿಷ್ಯದ ಶಿಲ್ಪಿಗಳನ್ನಾಗಿ ಮಾಡಿಕೊಳ್ಳುವುದಾಗಿದೆ.”.
ಅಧ್ಯಕ್ಷ ಉಹ್ರು ಕೆನ್ಯಟ್ಟಾ ಅವರೇ, ಗೌರವಾನ್ವಿತ ಅತಿಥಿಗಳೇ, ನಾನೀಗ ಒಂದು ತುತ್ತು ಸೇವಿಸುತ್ತೇನೆ.
ಕೆನ್ಯಾದ ಅಧ್ಯಕ್ಷ ಘನತೆವೆತ್ತ ಉಹ್ರು ಕೆನ್ಯಟ್ಟಾ ಅವರ ಆರೋಗ್ಯ ಮತ್ತು ಒಳಿತಿಗಾಗಿ;
ಕೆನ್ಯಾದ ಜನತೆಯ ಪ್ರಗತಿ ಮತ್ತು ಸಮೃದ್ಧಿಗಾಗಿ, ನಮ್ಮ ಹಿಂದೂ ಮಹಾಸಾಗರದ ನೆರೆಯವರಿಗಾಗಿ,
ಭಾರತ ಮತ್ತು ಕೆನ್ಯಾದ ಜನತೆಯ ಶಾಶ್ವತ ಬಾಂಧವ್ಯಕ್ಕಾಗಿ…