ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ವಸ್ತುಸಂಗ್ರಹಾಲಯವನ್ನು 2019 ರ ಜನವರಿ 23ರಂದು ಉದ್ಘಾಟಿಸುವರು. ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ನಾಮಫಲಕವನ್ನು ಅನಾವರಣ ಮಾಡುವರು. ಅವರು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವರು. ಪ್ರಧಾನಮಂತ್ರಿ ಅವರು ಯಾದ್-ಎ-ಜಲಿಯನ್ ವಸ್ತುಸಂಗ್ರಹಾಲಯ (ಜಲಿಯನ್ ವಾಲಾ ಬಾಗ್ ಮತ್ತು ಮೊದಲ ಮಹಾಯುದ್ದದ ವಸ್ತುಸಂಗ್ರಹಾಲಯ) ಕ್ಕೂ ಭೇಟಿ ನೀಡುವರು.
ಅವರು 1857 ರ ವಸ್ತುಸಂಗ್ರಹಾಲಯ –ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮತ್ತು ಹೊಸದಿಲ್ಲಿಯ ಕೆಂಪುಕೋಟೆಯಲ್ಲಿರುವ ಭಾರತೀಯ ಕಲೆಯನ್ನು ಕುರಿತ ದೃಶ್ಯಕಲಾ –ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡುವರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ವಸ್ತುಸಂಗ್ರಹಾಲಯಗಳು ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (ಐ.ಎನ್.ಎ.) ಕುರಿತು ವಿವರವಾದ ಮಾಹಿತಿಗಳನ್ನು ಒದಗಿಸುತ್ತವೆ. ಸುಭಾಷ್ ಚಂದ್ರ ಬೋಸ್ ಮತ್ತು ಐ.ಎನ್.ಎ. ಗೆ ಸಂಬಂಧಿಸಿದ ಅನೇಕ ಕಲಾ ಸಾಮಗ್ರಿಗಳು ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ನೇತಾಜಿಯವರು ಬಳಸುತ್ತಿದ್ದ ಮರದ ಕುರ್ಚಿ ಮತ್ತು ಖಡ್ಗ, ಪದಕಗಳು, ಬ್ಯಾಡ್ಜ್ ಗಳು, ಸಮವಸ್ತ್ರಗಳು, ಮತ್ತು ಐ.ಎನ್.ಎ.ಗೆ ಸಂಬಂಧಿಸಿದ ಸಾಮಗ್ರಿಗಳು ಇಲ್ಲಿವೆ. ಪ್ರಧಾನ ಮಂತ್ರಿ ಅವರು ತಾವು ಶಿಲಾನ್ಯಾಸ ಮಾಡಿದ ಪ್ರಮುಖ ಯೋಜನೆಗಳನ್ನು ತಾವೇ ಉದ್ಘಾಟಿಸುವ ಸಂಪ್ರದಾಯ ಇಲ್ಲಿಯೂ ಅನುಸರಣೆಯಾಗಿದೆ. 2018 ರ ಅಕ್ಟೋಬರ್ 21 ರಂದು ವಸ್ತುಸಂಗ್ರಹಾಲಯಕ್ಕೆ ಶಿಲಾನ್ಯಾಸ ಮಾಡಿದ್ದರು. ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಸರಕಾರದ 75 ನೇ ವರ್ಷಾಚರಣೆಯ ಸಂದರ್ಭವೂ ಆಗಿರುತ್ತದೆ. ಸ್ವಾತಂತ್ರ್ಯದ ಮೌಲ್ಯಗಳನ್ನು ಉನ್ನತ ಮಟ್ಟದಲ್ಲಿ ಎತ್ತಿಹಿಡಿಯುವಂತೆ ಪ್ರಧಾನ ಮಂತ್ರಿ ಅವರು ಈ ಸಂದರ್ಭದ ಸ್ಮರಣಾರ್ಥ ರಾಷ್ಟ್ರಧ್ವಜವನ್ನು ಅರಳಿಸಿದ್ದರು.
ವಿಕೋಪ ಪರಿಹಾರ, ಪ್ರತಿಕ್ರಿಯಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗಾಗಿ ಪ್ರಧಾನಮಂತ್ರಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನೂ ಘೋಷಿಸಿದ್ದರು. 2018 ರ ಅಕ್ಟೋಬರ್ 21ರ ಆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿತ್ತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಐ.ಎನ್.ಎ. ಯ ಮೌಲ್ಯಗಳು ಹಾಗು ಆದರ್ಶಗಳನ್ನು 2018 ರ ಡಿಸೆಂಬರ್ 30 ರಂದು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಪ್ರಧಾನಮಂತ್ರಿ ಅವರು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದರು. ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಭಾರತೀಯ ಮಣ್ಣಿನಲ್ಲಿ ತ್ರಿವರ್ಣ ದ್ವಜ ಅರಳಿದ್ದರ 75 ನೇ ವರ್ಷಾಚರಣೆ ಸ್ಮರಣಾರ್ಥ ಅಂಚೆ ಚೀಟಿ, ನಾಣ್ಯ, ಮತ್ತು ಮೊದಲ ದಿನದ ಕವರ್ ಅನ್ನು ಬಿಡುಗಡೆ ಮಾಡಿದ್ದರು. ನೇತಾಜಿಯವರ ಕರೆಯ ಅನ್ವಯ ಅಂಡಮಾನ್ ನ ಹಲವಾರು ಮಂದಿ ಯುವಕರು ಹೇಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು ಎಂಬುದನ್ನೂ ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡಿದ್ದರು. 150 ಅಡಿ ಎತ್ತರದ ಧ್ವಜ 1943 ರ ಆ ದಿನವನ್ನು , ನೇತಾಜಿಯವರು ತ್ರಿವರ್ಣ ದ್ವಜವನ್ನು ಅರಳಿಸಿದ್ದರ ಸ್ಮರಣೆಯನ್ನು ಕಾದಿಡುವ ಪ್ರಯತ್ನ ಎಂದೂ ಪ್ರಧಾನಮಂತ್ರಿ ಅವರು ಬಣ್ಣಿಸಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ರೋಸ್ ಲ್ಯಾಂಡ್ ದ್ವೀಪವನ್ನು ನೇತಾಜಿ ಸುಭಾಷ್ ಚಂದ್ರ ದ್ವೀಪ ಎಂದು ನಾಮಕರಣ ಮಾಡಲಾಗಿದೆ.
ಇದಕ್ಕೆ ಮೊದಲು 2015 ರ ಅಕ್ಟೋಬರ್ ತಿಂಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಸದಸ್ಯರು ಪ್ರಧಾನಮಂತ್ರಿ ಅವರನ್ನು ಭೇಟಿಯಾಗಿದ್ದರು ಮತ್ತು ಭಾರತ ಸರಕಾರದ ಬಳಿಯಲ್ಲಿರುವ ನೇತಾಜಿ ಅವರಿಗೆ ಸಂಬಂಧಿಸಿದ ಕಡತಗಳನ್ನು ವರ್ಗೀಕರಣದಿಂದ ಮುಕ್ತಮಾಡುವಂತೆ ಕೋರಿದ್ದರು. 2018 ರ ಜನವರಿಯಲ್ಲಿ ನೇತಾಜಿಯವರಿಗೆ ಸಂಬಂಧಿಸಿದ 100 ಕಡತಗಳ ಡಿಜಿಟಲ್ ಪ್ರತಿಗಳನ್ನು ಪ್ರಧಾನಮಂತ್ರಿ ಅವರು ಭಾರತೀಯ ರಾಷ್ಟ್ರೀಯ ಪುರಾತತ್ವದ ಸಾರ್ವಜನಿಕ ಡೊಮೈನ್ ನಲ್ಲಿ ಬಿಡುಗಡೆ ಮಾಡಿದ್ದರು.
ಯಾದ್-ಇ-ಜಲಿಯನ್ ವಸ್ತುಸಂಗ್ರಹಾಲಯ 1919ರ ಏಪ್ರಿಲ್ 13 ರಂದು ಜರಗಿದ ಜಲಿಯನ್ ವಾಲಾ ಬಾಗ್ ನರಮೇಧದ ಬಗ್ಗೆ ಅಧಿಕೃತ ಮಾಹಿತಿಯನ್ನು ಒದಗಿಸುತ್ತದೆ. ಈ ವಸ್ತುಸಂಗ್ರಹಾಲಯ ಮೊದಲ ಮಾಹಾಯುದ್ದದಲ್ಲಿ ಭಾರತೀಯ ಸೈನಿಕರು ತೋರಿದ ನಾಯಕತ್ವ, ಶೌರ್ಯ ಮತ್ತು ಮಾಡಿದ ತ್ಯಾಗವನ್ನೂ ಪ್ರದರ್ಶಿಸುತ್ತದೆ.
1857 ರ ವಸ್ತುಸಂಗ್ರಹಾಲಯ –ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಕುರಿತಾಗಿದ್ದು, 1857 ರ ಚಾರಿತ್ರಿಕ ಸಂದರ್ಭದ ವಿವರಗಳನ್ನು ಒದಗಿಸುತ್ತದೆ. ಅದು ಭಾರತೀಯರು ಆ ಅವಧಿಯಲ್ಲಿ ಮಾಡಿದ ತ್ಯಾಗ, ತೋರಿದ ಶೌರ್ಯಕ್ಕೆ ಕನ್ನಡಿ ಹಿಡಿಯುತ್ತದೆ.
ದೃಶ್ಯಕಲಾ –ಭಾರತೀಯ ಕಲೆಯನ್ನು ಕುರಿತ ಪ್ರದರ್ಶನವಾಗಿದೆ. ಇದು 16 ನೇ ಶತಮಾನದಿಂದ ಆರಂಭಗೊಂಡು ಭಾರತ ಸ್ವತಂತ್ರವಾಗುವವರೆಗಿನ ಅವಧಿಯ ಭಾರತೀಯ ಚಿತ್ರಕಲಾ ಸಾಮಗ್ರಿಗಳನ್ನು ಒಳಗೊಂಡಿದೆ.
ಪ್ರಜಾಪ್ರಭುತ್ವ ದಿನ ಹತ್ತಿರದಲ್ಲಿಯೇ ಇದ್ದು, ಪ್ರಧಾನ ಮಂತ್ರಿ ಅವರು ಈ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿರುವುದು ದೇಶಕ್ಕಾಗಿ ಶೌರ್ಯ ತೋರಿ, ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸಿದ್ದರ ದ್ಯೋತಕವಾಗಿದೆ.
Tomorrow, Prime Minister @narendramodi will inaugurate the Museum on Netaji Subhas Chandra Bose and Indian National Army. He will also visit the museum.
— PMO India (@PMOIndia) January 22, 2019
Prime Minister will also visit the Yaad-e-Jallian museum (Museum on Jallianwala Bagh and World War 1), Museum on 1857- India’s First War of Independence and Drishyakala- Museum on Indian Art at Red Fort, New Delhi.
— PMO India (@PMOIndia) January 22, 2019