Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕುಸ್ತಿಯ 97ಕೆ.ಜಿ. ಫ್ರೀ ಸ್ಟೈಲ್ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ದೀಪಕ್ ಗೆ ನೇಹ್ರಾ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿಡಬ್ಲೂಜಿ 2022 ಕ್ರೀಡಾಕೂಟದ ಕುಸ್ತಿಯ 97 ಕೆ.ಜಿ. ವಿಭಾಗ ಪುರುಷರ ಫೀಸ್ಟೈಲ್ ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದಕ್ಕಾಗಿ ಕುಸ್ತಿಪಟು ದೀಪಕ್ ನೇಹ್ರಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಇನ್ನೊಬ್ಬ ಕುಸ್ತಿಪಟು, ಭಾರತಕ್ಕೆ ಮತ್ತೊಂದು ಪ್ರಶಸ್ತಿ ತಂದಿದ್ದಾರೆ…! ಸಿಡಬ್ಲೂಜಿ 22 ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ದೀಪಕ್ ನೆಹ್ರಾ ಕಂಚಿನ ಪದಕ ಗೆದ್ದಿರುವುದಕ್ಕೆ ಸಂತೋಷವಾಗಿದೆ. ದೀಪಕ್ ಗಮನಾರ್ಹವಾದ ಶ್ರದ್ಧೆ ಮತ್ತು ಬದ್ಧತೆ ಪ್ರದರ್ಶಿಸಿದ್ದಾರೆ. ಅವರ ಮುಂಬರುವ ಪ್ರಯತ್ನಗಳಿಗೆ ನನ್ನ ಶುಭಾಶಯಗಳು. #Cheer4India’’

******