Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕುಸ್ತಿಪಟು ಪೂಜಾ ಗೆಹ್ಲೋಟ್ ಗೆ ಮುಂದೆ ಉತ್ತಮ ಭವಿಷ್ಯವಿದೆ ಎಂದು ಉತ್ತೇಜಿಸಿದ ಪ್ರಧಾನಿ


ಕುಸ್ತಿಪಟು ಪೂಜಾ ಗೆಹ್ಲೋಟ್ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಾವನಾತ್ಮಕ ಪೋಸ್ಟ್ ಅನ್ನು ಎಎನ್‌ಐ ಹಂಚಿಕೊಂಡ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ, ಪೂಜಾ ಗೆಹ್ಲೋಟ್ ಅವರಿಗೆ ಮುಂದೆ ಉಜ್ವಲ ಭವಿಷ್ಯವಿದೆ ಎಂದು ಉತ್ತೇಜಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಪೂಜಾ, ನಿಮ್ಮ ಪದಕಕ್ಕೆ ಸಂಭ್ರಮಾಚರಣೆ ಅಗತ್ಯವಿದೆ, ಕ್ಷಮೆಯಲ್ಲ. ನಿಮ್ಮ ಜೀವನ ಪಯಣವು ನಮಗೆ ಉತ್ತೇಜನ ನೀಡುತ್ತದೆ, ನಿಮ್ಮ ಯಶಸ್ಸು ನಮ್ಮನ್ನು ಸಂತೋಷಪಡಿಸುತ್ತದೆ. ನೀವು ಮುಂದೆ ಮಹತ್ವದ ಗುರಿಗಳನ್ನು ಸಾಧಿಸುತ್ತೀರಿ- ಸದಾ ಪ್ರಕಾಶಿಸುತ್ತಿರಿ..!’.”

*****