ಕುವೈತ್ ನ ದೊರೆ (ಅಮೀರ್) ಘನತೆವೆತ್ತ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ನಲ್ಲಿ ನಡೆದ 26ನೇ ಅರೇಬಿಯನ್ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದಲ್ಲಿ ‘ಗೌರವ ಅತಿಥಿ’ಯಾಗಿ ಭಾಗವಹಿಸಿದರು. ಘನತೆವೆತ್ತ ಕುವೈತ್ ದೊರೆ (ಅಮೀರ್), ಘನತೆವೆತ್ತ ಕುವೈತ್ ಯುವರಾಜ, ಮತ್ತು ಘನತೆವೆತ್ತ ಕುವೈತ್ ಪ್ರಧಾನಮಂತ್ರಿಯವರೊಂದಿಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರು, ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡರು. ಕುವೈತ್ ನ ಉನ್ನತ ನಾಯಕತ್ವದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅನೌಪಚಾರಿಕ ಸಂವಾದಕ್ಕೆ ಕೂಡಾ ಈ ಕಾರ್ಯಕ್ರಮವು ಅವಕಾಶವನ್ನು ಒದಗಿಸಿಕೊಟ್ಟಿತು.
ಜಿಸಿಸಿ ರಾಷ್ಟ್ರಗಳು, ಇರಾಕ್ ಮತ್ತು ಯೆಮೆನ್ ಸೇರಿದಂತೆ ಎಂಟು ಗಲ್ಫ್ ದೇಶಗಳ ಭಾಗವಹಿಸುವಿಕೆಯೊಂದಿಗೆ ಕುವೈತ್ ದ್ವೈವಾರ್ಷಿಕ ಅರೇಬಿಯನ್ ಗಲ್ಫ್ ಕಪ್ ಕ್ರೀಡಾ ಕೂಟವನ್ನು ಅನ್ನು ಆಯೋಜಿಸಲಾಗುತ್ತದೆ. ಈ ಫುಟ್ಬಾಲ್ ಪಂದ್ಯಾವಳಿಯು ಈ ಪ್ರದೇಶದ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಭಾಗವಹಿಸಿದ ದೇಶಗಳಲ್ಲಿ ಕುವೈತ್ ಗರಿಷ್ಠ ಬಾರಿ ಪಂದ್ಯಾವಳಿಯನ್ನು ಗೆದ್ದಿದೆ. ಭಾಗವಹಿಸಿದ ಎಲ್ಲಾ ದೇಶಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.
*****
Attended the opening ceremony of the Arabian Gulf Cup. This grand sporting event celebrates the spirit of football in the region. I thank His Highness Sheikh Meshal Al-Ahmad Al-Jaber Al-Sabah, the Amir of Kuwait, for inviting me to witness this event. pic.twitter.com/irYOi3SEvh
— Narendra Modi (@narendramodi) December 21, 2024
Glad to have met His Highness the Amir of Kuwait, Sheikh Meshal Al-Ahmad Al-Jaber Al Sabah during the opening ceremony of the Arabian Gulf Cup. pic.twitter.com/DaoPLKYhFy
— Narendra Modi (@narendramodi) December 21, 2024
سعدت بلقاء صاحب السمو أمير دولة الكويت الشيخ مشعل الأحمد الجابر الصباح خلال حفل افتتاح بطولة كأس الخليج العربي. pic.twitter.com/Cxb8wOS3gf
— Narendra Modi (@narendramodi) December 21, 2024
PM @narendramodi attended the opening ceremony of the Arabian Gulf Cup in Kuwait. pic.twitter.com/GZuxBXoQFu
— PMO India (@PMOIndia) December 21, 2024