ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕುವೈತ್‌ನಲ್ಲಿರುವ ಶೇಖ್ ಸಾದ್ ಅಲ್-ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದ ‘ಹಾಲಾ ಮೋದಿ’ ವಿಶೇಷ ಕಾರ್ಯಕ್ರಮದಲ್ಲಿ ಅಲ್ಲಿನ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕುವೈತ್‌ನ ಸಮುದಾಯದ ಹೆಚ್ಚಿನ ಭಾಗವನ್ನು ಪ್ರತಿನಿಧಿಸುವ ಭಾರತೀಯ ಪ್ರಜೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿ ಅವರನ್ನು ನೆರೆದ ಸಮುದಾಯವು ಅತ್ಯಂತ ಪ್ರೀತಿ ಮತ್ತು ಉತ್ಸಾಹದಿಂದ ಸ್ವಾಗತಿಸಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತ-ಕುವೈತ್ ಬಾಂಧವ್ಯವನ್ನು ಭಾರತೀಯ ಸಮುದಾಯ ಗಣನೀಯ ಪ್ರಮಾಣದಲ್ಲಿ ಶ್ರೀಮಂತಗೊಳಿಸಿದೆ, ಇದು ಉಭಯ ರಾಷ್ಟ್ರಗಳ ಮಧ್ಯೆ ಬಾಂಧವ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕುವೈತ್ ನ ಅಮೀರ್ ಅವರ ಪ್ರೇಮಪೂರ್ಣ ಆಹ್ವಾನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ ಪ್ರಧಾನಮಂತ್ರಿಯವರು, ಹಳೆಯ ಸ್ನೇಹವನ್ನು ಗಟ್ಟಿಗೊಳಿಸಲು ಹಾಗು ಮತ್ತಷ್ಟು ಬಲ ತುಂಬಲು 43 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಕುವೈತ್ ಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಕುವೈತ್‌ನ ಅಭಿವೃದ್ಧಿಗೆ ಈ ಸಮುದಾಯದ ಶ್ರಮ, ಸಾಧನೆ ಮತ್ತು ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಇದನ್ನು ಸ್ಥಳೀಯ ಸರ್ಕಾರ ಮತ್ತು ಸಮಾಜವು ಸಮರ್ಪಕವಾಗಿ ಗುರುತಿಸಿದೆ ಎಂದು ಹೇಳಿದರು. ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ಕುವೈತ್‌ನ ನಾಯಕತ್ರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಕುವೈತ್ ಮತ್ತು ಗಲ್ಫ್‌ನಲ್ಲಿನ ಭಾರತೀಯ ಕಾರ್ಮಿಕರನ್ನು ಬೆಂಬಲಿಸಲು ಭಾರತದ ಬಲವಾದ ಬದ್ಧತೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸರ್ಕಾರ ಕೈಗೊಂಡ ಇ-ಮೈಗ್ರೇಟ್ ಪೋರ್ಟಲ್‌ನಂತಹ ತಂತ್ರಜ್ಞಾನ ಆಧಾರಿತ ಉಪಕ್ರಮಗಳ ಕುರಿತು ಮಾತನಾಡಿದರು.
ಪ್ರಧಾನಮಂತ್ರಿಯವರು ಭಾರತದ ನಿಲುವನ್ನು ವಿಶ್ವಕ್ಕೆ ಸ್ನೇಹಿತ “ವಿಶ್ವಬಂಧು” ಎಂದು ವಿವರಿಸಿದರು, ಅವರು ಭಾರತದ ಕ್ಷಿಪ್ರ ಪ್ರಗತಿ ಮತ್ತು ಪರಿವರ್ತನೆಯನ್ನುಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸುಸ್ಥಿರತೆಯ ಕ್ಷೇತ್ರಗಳಲ್ಲಿನ ಪ್ರಗತಿ ಮತ್ತು ಪರಿವರ್ತನೆಯ ಬಗ್ಗೆ ವಿವರಿಸಿದರು. ಜಾಗತಿಕವಾಗಿ ೫ ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತವು ಫಿನ್‌ಟೆಕ್‌ನಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಪ್ರಸ್ತಾಪಿಸಿದರು. ಅಲ್ಲದೆ ಸ್ಟಾರ್ಟ್-ಅಪ್ ಕ್ಷೇತ್ರದಲ್ಲಿ ಮೂರನೇ ಅತಿದೊಡ್ಡ ಜಾಗತಿಕ ಸ್ಪರ್ಧಾದಾರ ರಾಷ್ಟ್ರವಾಗಿದ್ದು ವಿಶ್ವದಲ್ಲೆ ಹೆಚ್ಚು ಡಿಜಿಟಲ್ ಸಂಪರ್ಕ ಹೊಂದಿದ ಸಮಾಜಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು. ಆರ್ಥಿಕ ಸೇರ್ಪಡೆ, ಮಹಿಳೆಯರ ಮುಂದಾಳತ್ವದಲ್ಲಿ ಅಭಿವೃದ್ಧಿ ಮತ್ತು ಒಟ್ಟಾರೆ ಬೆಳವಣಿಗೆಯಂತಹ ಸಾಧನೆಗಳನ್ನು ಎತ್ತಿ ತೋರಿಸಿದರು. ಉಭಯ ರಾಷ್ಟ್ರಗಳ ಅಂದರೆ ವಿಕಸಿತ ಭಾರತ ಮತ್ತು ನವ ಕುವೈತ್ ನ ಆಕಾಂಕ್ಷೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಭಾರತ ಮತ್ತು ಕುವೈತ್ ಒಗ್ಗೂಡಿ ಕೆಲಸ ಮಾಡಲು ಬೃಹತ್ ಪ್ರಮಾಣದ ಅವಕಾಶಗಳಿವೆ ಎಂದು ಹೇಳಿದರು. ಭಾರತದ ಕೌಶಲ್ಯ ಸಾಮರ್ಥ್ಯ ಮತ್ತು ಆವಿಷ್ಕಾರಗಳು ಉಭಯ ರಾಷ್ಟ್ರಗಳ ಮಧ್ಯೆ ಹೊಸ ಪಾಲುದಾರಿಕೆಗೆ ನಾಂದಿ ಹಾಡಬಹುದು ಎಂದು ಹೇಳಿದರು.
2025ರ ಜನವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಮತ್ತು ಮಹಾ ಕುಂಭದಲ್ಲಿ ಭಾಗವಹಿಸಲು ಪ್ರಧಾನಮಂತ್ರಿಗಳು ಅನಿವಾಸಿ ಭಾರತೀಯರಿಗೆ ಆಹ್ವಾನ ನೀಡಿದರು.
*****
The warmth and affection of the Indian diaspora in Kuwait is extraordinary. Addressing a community programme. https://t.co/XzQDP6seLL
— Narendra Modi (@narendramodi) December 21, 2024
After 43 years, an Indian Prime Minister is visiting Kuwait: PM @narendramodi at community programme pic.twitter.com/W7MwSoitFH
— PMO India (@PMOIndia) December 21, 2024
The relationship between India and Kuwait is one of civilizations, seas and commerce. pic.twitter.com/ra89zZyCKH
— PMO India (@PMOIndia) December 21, 2024
India and Kuwait have consistently stood by each other. pic.twitter.com/TI5JoRieUH
— PMO India (@PMOIndia) December 21, 2024
India is well-equipped to meet the world's demand for skilled talent. pic.twitter.com/Aalq0yuKJp
— PMO India (@PMOIndia) December 21, 2024
In India, smart digital systems are no longer a luxury, but have become an integral part of the everyday life of the common man. pic.twitter.com/VxaROsgJ7Z
— PMO India (@PMOIndia) December 21, 2024
The India of the future will be the hub of global development... the growth engine of the world. pic.twitter.com/NAuSmaJh0B
— PMO India (@PMOIndia) December 21, 2024
India, as a Vishwa Mitra, is moving forward with a vision for the greater good of the world. pic.twitter.com/dgBhpd6nYn
— PMO India (@PMOIndia) December 21, 2024
यह बेहद खुशी की बात है कि कुवैत में रहने वाले भारतवंशियों ने यहां के कैनवास पर भारतीय हुनर का रंग भरा है। pic.twitter.com/FK4GSsVx4p
— Narendra Modi (@narendramodi) December 21, 2024
भारत और कुवैत को व्यापार और कारोबार ने ही नहीं, बल्कि दिलों ने भी आपस में जोड़ा है। pic.twitter.com/WKdQvBcGfu
— Narendra Modi (@narendramodi) December 21, 2024
हर सुख-दुख में साथ रहने की हमारी परंपरा भारत और कुवैत के आपसी भरोसे की बुनियाद है। pic.twitter.com/0DvCasky2e
— Narendra Modi (@narendramodi) December 21, 2024
भविष्य का भारत दुनिया के विकास का बहुत बड़ा हब बनेगा और अपने Innovations से विश्व को राह दिखाएगा। pic.twitter.com/9xB6UFRLv7
— Narendra Modi (@narendramodi) December 21, 2024
भारत के टैलेंट से दुनिया की तरक्की हो, इसलिए विदेशों में काम करने वाले भारतीयों के वेलफेयर और सुविधाओं के लिए हम कोई कोर-कसर नहीं छोड़ रहे हैं। pic.twitter.com/0RNDF16bjk
— Narendra Modi (@narendramodi) December 21, 2024
भारत आज इसलिए ग्लोबल कनेक्टिविटी की अहम कड़ी बन रहा है… pic.twitter.com/d3j7FZJM71
— Narendra Modi (@narendramodi) December 21, 2024