Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಿನ್ಯಾದ ಮಾಜಿ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ರೈಲಾ ಒಡಿಂಗಾ ಅವರಿಂದ ಪ್ರಧಾನ ಮಂತ್ರಿ ಭೇಟಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಕಿನ್ಯಾದ ಮಾಜಿ ಪ್ರಧಾನ ಮಂತ್ರಿ ಮತ್ತು ವಿಪಕ್ಷ ನಾಯಕ ಗೌರವಾನ್ವಿತ ರೈಲಾ ಒಡಿಂಗಾ ಅವರನ್ನು ಭೇಟಿಯಾದರು.

ದಶಕದ ಹಿಂದೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ತಾವು ಕಿನ್ಯಾಕ್ಕೆ ಭೇಟಿ ನೀಡಿದ ಸಂಧರ್ಭವನ್ನು ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಹಾರ್ದಿಕವಾಗಿ ಸ್ಮರಿಸಿಕೊಂಡರು. ಈ ಮೊದಲು 2009 ಮತ್ತು 2012ರಲ್ಲಿ ತಾವು ಭಾರತಕ್ಕೆ ಭೇಟಿ ನೀಡಿದ ಸಂಧರ್ಭಗಳನ್ನು ಶ್ರೀ ಒಡಿಂಗಾ ಅವರು ಸ್ಮರಿಸಿಕೊಂಡರು.

ಇತ್ತೀಚಿನ ವರ್ಷಗಳಲ್ಲಿ ಭಾರತ –ಕಿನ್ಯಾ ಬಾಂಧವ್ಯ ಬಲವರ್ಧನೆಗೊಳ್ಳುತ್ತಿರುವ ಹಾಗು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.