Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಶಿ ಮತ್ತು ತಮಿಳುನಾಡಿನ ನಡುವಿನ ಕಾಲಾತೀತ ನಾಗರಿಕ ಸಂಬಂಧಗಳ ಆಚರಣೆಯಾದ ಕಾಶಿ-ತಮಿಳು ಸಂಗಮವು ಪ್ರಾರಂಭವಾಗುತ್ತಿದೆ. ಈ ವೇದಿಕೆಯು ಶತಮಾನಗಳಿಂದ ಪ್ರವರ್ಧಮಾನಕ್ಕೆ ಬಂದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕಗಳ ಸಂಗಮವಾಗಿದೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಕಾಶಿ ತಮಿಳು ಸಂಗಮ 2025ರಲ್ಲಿ ಭಾಗವಹಿಸುವಂತೆ ಪ್ರತಿಯೊಬ್ಬರಲ್ಲೂ ಮನವಿ ಮಾಡಿದ್ದಾರೆ. ಕಾಶಿ-ತಮಿಳು ಸಂಗಮಂ ಪ್ರಾರಂಭವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಕಾಶಿ ಮತ್ತು ತಮಿಳುನಾಡಿನ ನಡುವಿನ ಕಾಲಾತೀತ ನಾಗರಿಕ ಬಾಂಧವ್ಯದ ಆಚರಣೆಯಾದ ಈ ವೇದಿಕೆಯು ಶತಮಾನಗಳಿಂದ ಪ್ರವರ್ಧಮಾನಕ್ಕೆ ಬಂದಿರುವ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕಗಳ ಸಂಗಮವಾದಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ. 

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;

“ಕಾಶಿ-ತಮಿಳು ಸಂಗಮ ಪ್ರಾರಂಭವಾಗುತ್ತಿದೆ…

ಕಾಶಿ ಮತ್ತು ತಮಿಳುನಾಡಿನ ನಡುವಿನ ಕಾಲಾತೀತ ನಾಗರಿಕ ಬಂಧಗಳ ಆಚರಣೆಯಾದ ಈ ವೇದಿಕೆಯು ಶತಮಾನಗಳಿಂದ ಪ್ರವರ್ಧಮಾನಕ್ಕೆ ಬಂದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕಗಳನ್ನು ಒಟ್ಟುಗೂಡಿಸುತ್ತದೆ. ಇದು ‘ಒಂದೇ ಭಾರತ, ಶ್ರೇಷ್ಠ ಭಾರತದ’ ಸ್ಫೂರ್ತಿಯನ್ನು ಎತ್ತಿ ತೋರಿಸುತ್ತದೆ.

ಕಾಶಿ ತಮಿಳು ಸಂಗಮ 2025ರ ಭಾಗವಾಗಲು ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ! ಎಂದು ಹೇಳಿದ್ದಾರೆ.

@KTSangamam”

 

 

*****