Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಶಿಯ ಡಾ. ಸಂಪೂರ್ಣಾನಂದ ಕ್ರೀಡಾಂಗಣದ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಮಂತ್ರಿ


ಕಿಸಾನ್ ಸಮ್ಮಾನ್ ನಿಧಿ, ಗಂಗಾ ಆರತಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವ ಕಾರ್ಯಕ್ರಮ ಸೇರಿದಂತೆ ಕಾಶಿಯಲ್ಲಿ ದಿನದ ಕಾರ್ಯಕ್ರಮಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಡಾ.ಸಂಪೂರ್ಣಾನಂದ ಕ್ರೀಡಾ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣವನ್ನು ನಿರ್ಮಿಸುವ ಕಾರ್ಯವನ್ನು ಪರಿಶೀಲಿಸಲು ಅನಿರೀಕ್ಷಿತ ಭೇಟಿ ನೀಡಿದರು.

ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

“ಕಾಶಿಯ ಡಾ.ಸಂಪೂರ್ಣಾನಂದ ಕ್ರೀಡಾ ಕ್ರೀಡಾಂಗಣದ ಪ್ರಗತಿಯನ್ನು ಪರಿಶೀಲಿಸಿದೆ. ಈ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣವು ಕಾಶಿಯ ಯುವಕರಿಗೆ ಹೆಚ್ಚಿನ ಸಹಾಯ ಮಾಡುತ್ತದೆ,’’ ಎಂದಿದ್ದಾರೆ.

 

 

*****